For Quick Alerts
ALLOW NOTIFICATIONS  
For Daily Alerts

ಹಸಿ ಬೆಳ್ಳುಳ್ಳಿ ಜೇನುತುಪ್ಪದಿಂದ ಸುಲಭವಾಗಿ ತೂಕ ಇಳಿಸಿಕೊಳ್ಳಿ

|

ನಮ್ಮ ಅಡುಗೆ ಮನೆಯಲ್ಲಿರುವ ಕೆಲವು ಸಾಮಾಗ್ರಿಗಳಿಗೆ ಅಡುಗೆಯ ರುಚಿ ಹೆಚ್ಚಿಸುವುದಕ್ಕೂ ಹೆಚ್ಚಾಗಿ ಔಷಧೀಯ ಗುಣಗಳೇ ಇವೆ. ಲಿಂಬೆ, ಬೆಳ್ಳುಳ್ಳಿ, ಹಸಿಶುಂಠಿ, ಕಾಳು ಮೆಣಸು ಇತ್ಯಾದಿಗಳಿಗೆ ಹಲವು ಕಾಯಿಲೆಗಳನ್ನು ಗುಣಪಡಿಸುವ ಗುಣವಿದೆ. ಬೆಳ್ಳುಳ್ಳಿ ಸಹಾ ಹಲವು ಗುಣಗಳನ್ನು ಹೊಂದಿದ್ದು ನಿಯಮಿತವಾಗಿ ಸೇವಿಸುತ್ತಾ ಬರುವ ಮೂಲಕ ರೋಗ ನಿರೋಧಕ ಶಕ್ತಿ ವೃದ್ದಿಸುತ್ತದೆ. ವಿಶೇಷವಾಗಿ ಈ ಕೋವಿಡ್ ೧೯ ಸಾಂಕ್ರಾಮಿಕ ಸಮಯದಲ್ಲಿ ಬೆಳ್ಳುಳ್ಳಿಗೆ ಹೆಚ್ಚಿನ ಆದ್ಯತೆ ದೊರಕಿದೆ. ಇದು ನಿಮ್ಮ ರಕ್ತನಾಳಗಳನ್ನು ಸಡಿಲಗೊಳಿಸುತ್ತದೆ ಮತ್ತು ನಿಮ್ಮ ಅಪಧಮನಿಗಳ ಮೂಲಕ ರಕ್ತದ ಸುಗಮ ಹರಿವಿಗೆ ನೆರವಾಗುತ್ತದೆ.

ಇದು ನಿಮ್ಮ ಹೃದ್ರೋಗ ಎದುರಾಗುವ ಅಪಾಯದ ಸಾಧ್ಯತೆಯನ್ನೂ ಕಡಿಮೆ ಮಾಡುತ್ತದೆ. ಅಲ್ಲದೇ ಉರಿಯೂತದ ವಿರುದ್ಧ ಹೋರಾಡಲು ಸಹ ಇದು ನಿಮಗೆ ಸಹಾಯ ಮಾಡುತ್ತದೆ. ಆದರೆ ಶೀಘ್ರ ಸಮಯದಲ್ಲಿ ಬೆಳ್ಳುಳ್ಳಿ ನಿಮ್ಮ ತೂಕವನ್ನು ಕಡಿಮೆ ಮಾಡಲೂ ಸಹಾಯ ಮಾಡುತ್ತದೆ ಎಂದು ನಿಮಗೆ ತಿಳಿದಿತ್ತೇ? ಇದು ನಿಜ. ಬೆಳ್ಳುಳ್ಳಿ ಅದ್ಭುತ ತೂಕ ಇಳಿಸುವ ಗುಣಗಳನ್ನು ಹೊಂದಿದೆ. ಇದರಲ್ಲಿ ವಿಟಮಿನ್ ಬಿ 6 ಮತ್ತು ಸಿ, ಕರಗುವ ನಾರು, ಮ್ಯಾಂಗನೀಸ್, ಕ್ಯಾಲ್ಸಿಯಂನಂತಹ ಅನೇಕ ಪೋಷಕಾಂಶಗಳನ್ನು ಹೊಂದಿದೆ. ವಿಶೇಷವಾಗಿ ಸೊಂಟದ ಕೊಬ್ಬನ್ನು ಶೀಘ್ರವಾಗಿ ಕರಗಿಸುವ ಗುಣದ ಕಾರಣದಿಂದಾಗಿಯೇ ಇದಕ್ಕೆ ಸುಪರ್ ಫುಡ್ ಎಂಬ ವಿಶೇಷಣ ದೊರಕಿದೆ.

ತೂಕ ಇಳಿಕೆಗೆ ಬೆಳ್ಳುಳ್ಳಿಯ ಬಳಕೆ

ತೂಕ ಇಳಿಕೆಗೆ ಬೆಳ್ಳುಳ್ಳಿಯ ಬಳಕೆ

ನೀವು ತೂಕ ಇಳಿಸುವ ಪ್ರಯತ್ನಗಳನ್ನು ನಡೆಸುತ್ತಿದ್ದರೆ, ಹೇಳಿದಷ್ಟು ಇದು ಸುಲಭವಾದ ಕಾರ್ಯವಲ್ಲ ಎಂದು ನಿಮಗೆ ಈಗಾಗಲೇ ಖಚಿತವಾಗಿರಬಹುದು. ಕೆಲವೊಮ್ಮೆ, ಶ್ರಮದಾಯಕ ವ್ಯಾಯಾಮದಿಂದ ಹಿಡಿದು ನಿಮ್ಮ ಆಹಾರ ಸೇವನೆಯನ್ನು ತೀವ್ರವಾಗಿ ಕಡಿಮೆ ಮಾಡುವವರೆಗೆ ಎಲ್ಲವನ್ನೂ ಪ್ರಯತ್ನಿಸಿದರೂ ಸಹ, ನಿಮಗೆ ಅಗತ್ಯವಾದ ತೂಕವನ್ನು ಕಳೆದುಕೊಳ್ಳಲು ಸಾಧ್ಯವಾಗದಿರಬಹುದು. ಆದರೆ ನಿಮಗೆ ಕೆಲವು ಸರಳ ರಹಸ್ಯಗಳು ತಿಳಿದಿದ್ದರೆ, ನೀವು ಈ ನಿಟ್ಟಿನಲ್ಲಿ ಹೆಚ್ಚು ಯಶಸ್ಸು ಪಡೆಯಬಹುದು. ಹಸಿ ಬೆಳ್ಳುಳ್ಳಿಯನ್ನು ಸೇವಿಸುವುದು ಈ ಬಗೆಯ ಒಂದು ಉತ್ತಮ ತೂಕ ಇಳಿಕೆಯ ರಹಸ್ಯವಾಗಿದೆ. ಬೆಳಿಗ್ಗೆ ಎದ್ದ ತಕ್ಶಣ ದಿನದ ಮೊದಲ ಆಹಾರವಾಗಿ ಬೆಚ್ಚಗಿನ ನೀರನ್ನು ಕುಡಿಯುವುದು, ನಿಂಬೆ ಮತ್ತು ಜೇನುತುಪ್ಪವನ್ನು ಸೇವಿಸುವುದು ಮುಂತಾದ ಇತರ ರಹಸ್ಯಗಳೂ ಇವೆ. ಆದರೆ ಇವುಗಳಲ್ಲಿ ಬೆಳ್ಳುಳ್ಳಿಗೆ ಹೆಚ್ಚಿನ ಮಹತ್ವವಿದೆ.

ಹಸಿ ಬೆಳ್ಳುಳ್ಳಿ ಮತ್ತು ಜೇನುತುಪ್ಪದ ಸೇವನೆಯ ಪ್ರಯೋಜನಗಳು

ಹಸಿ ಬೆಳ್ಳುಳ್ಳಿ ಮತ್ತು ಜೇನುತುಪ್ಪದ ಸೇವನೆಯ ಪ್ರಯೋಜನಗಳು

ನೀವು ಖಾಲಿ ಹೊಟ್ಟೆಯಲ್ಲಿ ಒಂದು ಅಥವಾ ಎರಡು ಹಸಿ ಬೆಳ್ಳುಳ್ಳಿಯ ಎಸಳುಗಳನ್ನು ಸೇವಿಸುತ್ತಾ ಬಂದರೆರೆ, ಅದು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ ಮತ್ತು ನಿಮ್ಮ ದೇಹವನ್ನು ನಿರ್ವಿಷಗೊಳಿಸುತ್ತದೆ. ಇದಲ್ಲದೆ, ನೀವು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟದಲ್ಲಿ ಸುಧಾರಣೆಯನ್ನು ಸಹ ಕಾಣಬಹುದು. ನೀವು ಉತ್ತಮ ರೋಗನಿರೋಧಕ ಶಕ್ತಿಯನ್ನು ಅನುಭವಿಸುವಿರಿ, ಕಡಿಮೆ ಶೀತ ಮತ್ತು ಜ್ವರವನ್ನು ಅನುಭವಿಸುವಿರಿ ಮತ್ತು ತೂಕವನ್ನು ಸಹ ಶೀಘ್ರವಾಗಿ ಕಳೆದುಕೊಳ್ಳುತ್ತೀರಿ. ಆದರೆ ನೀವು ಬೆಳ್ಳುಳ್ಳಿಯೊಂದಿಗೆ ಜೇನುತುಪ್ಪವನ್ನೂ ಜೊತೆಗೆ ಸೇವಿಸಿದಾಗ, ಅದು ನಿಮ್ಮನ್ನು ಸಂಪೂರ್ಣವಾಗಿ ನಿರ್ವಿಷಗೊಳಿಸುವ ಪ್ರಬಲ ಟಾನಿಕ್ ಆಗುತ್ತದೆ. ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುವ ಮೂಲಕ ಮತ್ತು ಜೀವರಾಸಾಯನಿಕ ಕ್ರಿಯೆಯನ್ನು ಹೆಚ್ಚಿಸುವ ಮೂಲಕ ಬೆಳ್ಳುಳ್ಳಿ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಜೀನು ಹಸಿವನ್ನು ನಿಗ್ರಹಿಸುವ ಮೂಲಕ ಅನಗತ್ಯ ಆಹಾರ ಸೇವನೆಯಿಂದ ತಡೆಯುತ್ತದೆ. ಈ ಜೋಡಿಯಲ್ಲಿ ಯಾವುದೇ ಕೊಬ್ಬು ಅಥವಾ ಕೊಲೆಸ್ಟ್ರಾಲ್ ಇಲ್ಲ ಹಾಗೂ ದಿನವಿಡೀ ನಿಮ್ಮನ್ನು ಚೈತನ್ಯದಲ್ಲಿ ಇರಿಸಲು ನೆರವಾಗುತ್ತದೆ.

 ತೂಕ ಇಳಿಕೆಯ ಕ್ಷಮತೆಯ ಈ ಟಾನಿಕ್ ತಯಾರಿಸುವುದು ಹೇಗೆ

ತೂಕ ಇಳಿಕೆಯ ಕ್ಷಮತೆಯ ಈ ಟಾನಿಕ್ ತಯಾರಿಸುವುದು ಹೇಗೆ

ಒಂದು ಗಾಜಿನ ಬಾಟಲಿಯಲ್ಲಿ ಅರ್ಧದಷ್ಟು ಸಾವಯವ ವಿಧಾನದ ಜೇನನ್ನು ತುಂಬಿಸಿ. ಕೆಲವು ಎಸಳು ಬೆಳ್ಳುಳ್ಳಿಗಳನ್ನು ಸುಲಿದು ಇಡಿಯ ಎಸಳುಗಳನ್ನೇ ಈ ಜೇನಿಗೆ ಹಾಕಿ. ಈ ಎಸಳುಗಳು ಜೇನಿನಲ್ಲಿ ಪೂರ್ಣವಾಗಿ ಮುಳುಗಬೇಕು. ಈ ಬಾಟಲಿಯನ್ನು ಭದ್ರವಾಗಿ ಮುಚ್ಚಳ ಹಾಕಿ ನೆರಳಿನಲ್ಲಿ ಒಂದು ತಿಂಗಳವರೆಗಾದರೂ ಹಾಗೇ ಇರಿಸಬೇಕು. ಈ ಅವಧಿಯಲ್ಲಿ ಜೇನು ಮತ್ತು ಬೆಳ್ಳುಳ್ಳಿಯ ಪೋಷಕಾಂಶಗಳು ಸಂಯೋಜನೆಗೊಳ್ಳಲು ಸಾಧ್ಯವಾಗುತ್ತದೆ.

ಸೇವಿಸುವ ವಿಧಾನ

ಸೇವಿಸುವ ವಿಧಾನ

ಇದನ್ನು ಸೇವಿಸಲು ಉತ್ತಮ ಸಮಯವೆಂದರೆ ಬೆಳಿಗ್ಗೆದ್ದ ಬಳಿಕ ಖಾಲಿ ಹೊಟ್ಟೆಯಲ್ಲಿ ದಿನದ ಮೊದಲ ಆಹಾರವಾಗಿ ಸೇವಿಸುವುದು. ಈ ಬಾಟಲಿಯಿಂದ ಒಂದೆರಡು ಎಸಳುಗಳನ್ನು ಹೊರತೆಗೆದು ಜಜ್ಜಿ ಸೇವಿಸಿ. ಇದನ್ನು ಪ್ರತಿದಿನವೂ ಬೆಳಿಗ್ಗೆ ಸೇವಿಸುತ್ತಾ ಬನ್ನಿ. ಒಂದೇ ತಿಂಗಳಲ್ಲಿ ಎದುರಾಗುವ ವ್ಯತ್ಯಾಸವನ್ನು ಗಮನಿಸಿ.

ಎಚ್ಚರಿಕೆಯ ಮಾತು

ಎಚ್ಚರಿಕೆಯ ಮಾತು

ಇದು ಯಾವುದೇ ವಯಸ್ಸಿನ ವ್ಯಕ್ತಿಗಳು ಸೇವಿಸಬಹುದಾದ ಆರೋಗ್ಯಕರ ಆಹಾರವಾಗಿದೆ. ಆದರೆ ನೀವು ಆಸ್ತಮಾದಿಂದ ಬಳಲುತ್ತಿದ್ದರೆ, ನೀವು ಇದನ್ನು ಸೇವಿಸಲು ಪ್ರಾರಂಭಿಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಆಸ್ತಮಾ ಜನರಿಗೆ ಬೆಳ್ಳುಳ್ಳಿ ಒಳ್ಳೆಯದಲ್ಲ. ಶಸ್ತ್ರಚಿಕಿತ್ಸೆಗೆ ಒಳಗಾಗುವವರಿದ್ದರೆ ಅಥವಾ ವೈದ್ಯಕೀಯ ಚಿಕಿತ್ಸೆಗಳಿಗೆ ಒಳಗಾಗುವ ಮೊದಲು ನೀವು ಇವುಗಳನ್ನು ಸೇವಿಸಬಾರದು. ದಿನವೊಂದರಲ್ಲಿ ಸೇವಿಸುವ ಪ್ರಮಾಣವೂ ಅತಿಯಾಗಬಾರದು. ದಿನಕ್ಕೆ ಕೇವಲ 2-3 ಎಸಳುಗಳನ್ನು ತಿಂದರೆ ಸಾಕಾಗಾಗುತ್ತದೆ.

English summary

How to Use Raw Garlic and honey for weight loss in Kannada

Here we are discussing about Garlic And Honey For Weight Loss. This makes it a super food that can help you get rid of excess fat, especially belly fat, in no time. Read more.
Story first published: Monday, August 31, 2020, 12:00 [IST]
X