For Quick Alerts
ALLOW NOTIFICATIONS  
For Daily Alerts

ಕ್ಯಾನ್ಸರ್‌ ರೋಗಿಗಳಿಗೆ ಮಜ್ಜಿಗೆ ನೀಡಿದರೆ ಇಷ್ಟೆಲ್ಲಾ ಗುಣಗಳಿವೆ

|

ಮನೆಗೆ ಬಿಸಿಲಿನಲ್ಲಿ ಯಾರಾದರೂ ದಣಿದು ಬಂದಾಗ ಒಂದು ಲೋಟ ಮಜ್ಜಿಗೆ ಕುಡಿಯಲು ನೀಡುವುದು ನಮ್ಮ ಸಂಪ್ರದಾಯ. ಒಂದು ಲೋಟ ಮಜ್ಜಿಗೆ ಬಾಯಾರಿಕೆ ನೀಗಿಸುವುದು ಮಾತ್ರವಲ್ಲ ದಣಿವು ಕೂಡ ನೀಗಿಸುವುದು. ಇನ್ನು ದಿನಾ ಒಂದು ಲೋಟ ಮಜ್ಜಿಗೆ ಕುಡಿದರೆ ದೇಹದ ಉಷ್ಣತೆ ಕಾಪಾಡಲು ತುಂಬಾನೇ ಸಹಕಾರಿ, ಜೀರ್ಣಕ್ರಿಯೆ ಕೂಡ ತುಂಬಾನೇ ಸಹಕಾರಿಯಾಗಿದೆ.

ಹಾಲಿನಿಂದ ಬೆಣ್ಣೆ ಮಾಡುವ ಮನೆಗಳಲ್ಲಿ ಮಜ್ಜಿಗೆಯನ್ನು ಮನೆಯಲ್ಲಿಯೇ ಮಾಡಲಾಗುವುದು, ಇನ್ನು ಮೊಸರಿಗೆ ಸ್ವಲ್ಪ ನೀರು ಹಾಕಿ ಕೊತ್ತಂಬರಿ, ಸ್ವಲ್ಪ ಹಸಿ ಮೆಣಸು, ಸ್ವಲ್ಪ ಉಪ್ಪು ಹಾಕಿ ಮಿಕ್ಸಿಯಲ್ಲಿ ಒಂದು ರೌಂಡ್‌ ತಿರುಗಿಸಿದರೆ ರುಚಿ-ರುಚಿಯಾದ ಮಜ್ಜಿಗೆ ರೆಡಿ.

ಮಜ್ಜಿಗೆ ಅತ್ಯುತ್ತಮವಾದ ಪ್ರೊಬಯೋ ಟಿಕ್ ಆಗಿದೆ. ಅನೇಕ ಆರೋಗ್ಯ ಸಮಸ್ಯೆಗಳಿಗೆ ಇದು ಅತ್ಯುತ್ತಮವಾದ ಮನೆಮದ್ದು ಕೂಡ ಆಗಿದೆ. ಇದು ಊತ, ನೋವು, ಅಜೀರ್ಣ, ಗ್ಯಾಸ್ಟ್ರಿಕ್ ಮುಂತಾದ ಸಮಸ್ಯೆಗಳಿಗೆ ಅತ್ಯುತ್ತಮವಾದ ಮನೆಮದ್ದಾಗಿದೆ.

ಮೊಸರಿನಲ್ಲಿರುವ ಪೋಷಕಾಂಶಗಳು

ಮೊಸರಿನಲ್ಲಿರುವ ಪೋಷಕಾಂಶಗಳು

ಪ್ರೊಟೀನ್ಸ್

ಕಾರ್ಬೋಹೈಡ್ರೇಟ್ಸ್

ಸ್ವಲ್ಪ ಲಿಪಿಡ್

ವಿಟಮಿನ್‌ಗಳು

ಅಗತ್ಯವಾದ ಎಂಜೈಮ್ಸ್

ಇದನ್ನು ಪ್ರತಿದಿನ ತೆಗೆದುಕೊಳ್ಳುವುದರಿಂದ ಹೊಟ್ಟೆ ಚೆನ್ನಾಗಿರುತ್ತದೆ ಹಾಗೂ ಇದರಲ್ಲಿ ಶೇ. 90ರಷ್ಟು ನೀರಿನಂಶ ಇರುವುದರಿಂದ ದೇಹದಲ್ಲಿ ನೀರಿನಂಶ ಕಾಪಾಡುತ್ತದೆ. ಈ ಮಜ್ಜಿಗೆ ಕ್ಯಾನ್ಸರ್‌ ರೋಗಿಗಳಿಗೆ ತುಂಬಾನೇ ಸಹಕಾರಿ ಹೇಗೆ ಎಂದು ನೋಡೋಣ ಬನ್ನಿ:

ಕ್ಯಾನ್ಸರ್‌ ರೋಗಿಗಳಿಗೆ ಪೌಷ್ಠಿಕಾಂಶದ ಆಹಾರ ಅಗ್ಯತ

ಕ್ಯಾನ್ಸರ್‌ ರೋಗಿಗಳಿಗೆ ಪೌಷ್ಠಿಕಾಂಶದ ಆಹಾರ ಅಗ್ಯತ

ಚಿಕಿತ್ಸೆ ಪಡೆಯುತ್ತಿರುವಾಗ ಹಾಗೂ ಚಿಕಿತ್ಸೆಯ ಬಳಿಕ ಕ್ಯಾನ್ಸರ್‌ ರೋಗಿಗಳಿಗೆ ಅತ್ಯುತ್ತಮವಾದ ಪೋಷಕಾಂಶಗಳಿರುವ ಆಹಾರ ನೀಡಬೇಕು. ಏಕೆಂದರೆ ಅವರ ದೇಹ ತುಂಬಾ ಬಳಲಿರುತ್ತದೆ. ದಿನನಿತ್ಯದ ಕೆಲಸ ಮಾಡಲೂ ಕಷ್ಟವಾಗಬಹುದು. ಪೋಷಕಾಂಶವಿರುವ ಆಹಾರಗಳು ಅವರ ದೇಹದಲ್ಲಿ ಶಕ್ತಿಯನ್ನು ತುಂಬುವುದರಿಂದ ಅವರ ದಿನನಿತ್ಯದ ಕಾರ್ಯಗಳನ್ನು ಮಾಡಿಕೊಳ್ಳಲು ಸಾಧ್ಯವಾಗುವುದು.

ಕ್ಯಾನ್ಸರ್‌ ರೋಗಿಗಳಿಗೆ ಮೊಸರು ಈ ರೀತಿ ಸಹಾಯ ಮಾಡುತ್ತದೆ:

ಬೇಧಿ ತಡೆಗಟ್ಟುತ್ತೆ

ಬೇಧಿ ತಡೆಗಟ್ಟುತ್ತೆ

ಕ್ಯಾನ್ಸರ್ ಚಿಕಿತ್ಸೆ ಬಳಿಕ ಬೇಧಿಯಾಗಬಹುದು. ಕೆಲವೊಮ್ಮೆ ಹಲವಾರು ಬಾರಿ ಬೇಧಿಯಾಗಬಹುದು. ಇದರಿಂದ ದೇಹದಲ್ಲಿರುವ ನೀರಿನಂಶ ಕಡಿಮೆಯಾಗುವುದು. ಹೊಟ್ಟೆ ಸರಿಯಿರಲ್ಲ. ಆಗ ಮೊಸರು ನೀಡಿದರೆ ದೇಹದಕ್ಕೆ ಅಗ್ಯತವಿರುವ ನೀರಿನಂಶ ಸಿಗುವುದು ಜೊತೆಗೆ ಬೇಧಿ ತಡೆಗಟ್ಟಲು ಸಹಕಾರಿ. ಇದರಲ್ಲಿರುವ ಒಳ್ಳೆಯ ಬ್ಯಾಕ್ಟಿರಿಯಾ ಜೀರ್ಣಕ್ರಿಯೆಗೆ ಸಹಕಾರಿ.

 ನಿರ್ಜಲೀಕರಣ ತಡೆಗಟ್ಟುತ್ತೆ

ನಿರ್ಜಲೀಕರಣ ತಡೆಗಟ್ಟುತ್ತೆ

ಕ್ಯಾನ್ಸರ್ ಚಿಕಿತ್ಸೆ ಪಡೆದವರಿಗೆ ನಿರ್ಜಲೀಕರಣ ಉಂಟಾಗುವುದು. ಕೀಮೋಥೆರಪಿ ಬಳಿಕ ದೇಹ ತುಂಬಾನೇ ಬಳಲಿರುತ್ತದೆ. ಕೀಮೋ ಮಾಡಿಸಿದವರಿಗೆ ಜ್ವರ, ವಾಂತಿ, ಬೇಧಿ, ಆಗಾಗ ಮೂತ್ರ ವಿಸರ್ಜನೆ ಮುಂತಾದ ಅಡ್ಡಪರಿಣಾಮಗಳು ಉಂಟಾಗುವುದು. ಆದ್ದರಿಂದ ಇಂಥವರಿಗೆ ಮಜ್ಜಿಗೆ ಕುಡಿಯಲು ನೀಡುವುದರಿಂದ ದೇಹಕ್ಕೆ ಅಗ್ಯತವಾಗಿರುವ ಪೋಷಕಾಂಶಗಳು ದೊರೆಯುವುದು, ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಬಹುದು ಹಾಗೂ ಅಡ್ಡಪರಿಣಾಮಗಳ ಪರಿಣಾಮವನ್ನು ತಗ್ಗಿಸಬಹುದು.

ಕ್ಯಾನ್ಸರ್‌ ರೋಗಿಗಳಿಗೆ ಯಾವ ಬಗೆಯ ಆಹಾರಗಳನ್ನು ನೀಡಬೇಕು

ಕ್ಯಾನ್ಸರ್‌ ರೋಗಿಗಳಿಗೆ ಯಾವ ಬಗೆಯ ಆಹಾರಗಳನ್ನು ನೀಡಬೇಕು

ತೆಳು ಮಾಂಸ, ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಕಡಿಮೆ ಕೊಬ್ಬಿನಂಶವಿರುವ ಹಾಲಿನ ಉತ್ಪನ್ನಗಳು ಇವೆಲ್ಲಾ ಅವರಿಗೆ ದಿನಿತ್ಯ ನೀಡುವುದರಿಂದ ಪೋಷಕಾಂಶದ ಕೊರತೆ ಉಂಟಾಗುವುದನ್ನು ತಡೆಗಟ್ಟಬಹುದು. ಅತ್ಯುತ್ತಮವಾದ ಆಹಾರಕ್ರಮದಿಂದ ಬೇಗನೆ ಚೇತರಿಸಿಕೊಳ್ಳಲು ಸಹಯವಾಗುವುದು.

FAQ's
  • ಕ್ಯಾನ್ಸರ್ ರೋಗಿಗಳಿಗೆ ಯಾವ ಆಹಾರ ಒಳ್ಳೆಯದು?

    * ತೆಳು ಮಾಂಸ, ಚಿಕನ್, ಮೀನು
    * ಮೊಟ್ಟೆ
    * ಬೀನ್ಸ್‌, ನಟ್ಸ್, ಬೀಜಗಳು
    * ಚೀಸ್, ಹಾಲು, ಮೊಸರು, ಮಜ್ಜಿಗೆ, ಯೋಗರ್ಟ್

  • ಕ್ಯಾನ್ಸರ್ ರೋಗಿಗಳಿಗೆ ಯಾವ ಬಗೆಯ ಆಹಾರಗಳನ್ನು ನೀಡಬಾರದು?

    * ಸಂಸ್ಕರಿಸಿದ ಮಾಂಸಾಹಾರ
    * ಕೆಂಪು ಮಾಂಸ
    * ಅತ್ಯಧಿಕ ಉಪ್ಪಿನಂಶವಿರುವ ಆಹಾರ, ಸಕ್ಕರೆ, ಸಿಹಿ ತಿಂಡಿಗಳು, ಎಣ್ಣೆ ಪದಾರ್ಥಗಳು
    * ಮದ್ಯ
    *ಸುಟ್ಟ ಮಾಂಸ
    * ಎಣ್ಣೆಯಲ್ಲಿ ಕರಿದ ಪದಾರ್ಥಗಳು
    * ಗ್ರಿಲ್ಡ್ ಆಹಾರ
    * ಉಪ್ಪಿನಕಾಯಿ

  • ಕ್ಯಾನ್ಸರ್ ರೋಗಿಗಳ ಬ್ರೇಕ್‌ ಫಾಸ್ಟ್ ಹೇಗಿರಬೇಕು?

    ಪ್ರತಿದಿನ ಅವರಿಗೆ ಅರ್ಧ ಕಪ್ ಬೇಯಿಸಿದ ತರಕಾರಿ ಹಾಗೂ ಹಣ್ಣುಗಳನ್ನು ನೀಡಬೇಕು. ಧಾನ್ಯಗಳು, ನವಣೆ, ಬಾರ್ಲಿ ಇವುಗಳಿಂದ ತಯಾರಿಸಿದ ಆಹಾರ ನೀಡಿ. ಬೆಳಗ್ಗೆ ಬ್ರೇಕ್‌ಫಾಸ್ಟ್‌ ಮೊಟ್ಟೆ ಅಥವಾ ತೆಳು ಮಾಂಸ ನೀಡಬಹುದು. ತುಂಬಾ ಪೋಷಕಾಂಶಗಳಿರುವ ಆಹಾರ ಅವರ ಆಹಾರಕ್ರಮದಲ್ಲಿದ್ದರೆ ಚೇತರಿಸಿಕೊಳ್ಳಲು ಬೇಗನೆ ಸಹಕಾರಿ.

English summary

How The Buttermilk Can Help Cancer Patients

How the buttermilk can help cancer patients, read on...
Story first published: Saturday, September 18, 2021, 12:55 [IST]
X
Desktop Bottom Promotion