For Quick Alerts
ALLOW NOTIFICATIONS  
For Daily Alerts

ಮೈ ತೂಕ ಹೆಚ್ಚಲು ಕಾರಣವಾಗುತ್ತಿದೆ ಸ್ಮಾರ್ಟ್‌ಫೋನ್!

|

ಮೈ ತೂಕ ಹೆಚ್ಚಾಗುತ್ತಿದೆಯೇ ಹಾಗಾದರೆ ನಿಮ್ಮ ಮೊಬೈಲ್‌ ಒಂದು ಕಾರಣವಾಗಿರಬಹುದು... ಮೊಬೈಲ್‌ ಅತಿಯಾಗಿ ಬಳಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಬರುತ್ತದೆ ಎಂಬುವುದು ಎಲ್ಲರಿಗೂ ಗೊತ್ತು. ಆದರೆ ಮೊಬೈಲ್ ಬಳಸಿದರೆ ತೂಕ ಹೆಚ್ಚಾಗುವುದು ಹೇಗೆ ಎಂದು ಅಚ್ಚರಿಯಾಗಬಹುದು. ಹೌದು ಹದಿಹರೆಯದವರಲ್ಲಿ ಮೈ ತೂಕ ಹೆಚ್ಚಾಗಲು ಮೊಬೈಲ್‌ ಕಾರಣವಾಗುತ್ತಿದೆ ಎಂದು ಅಧ್ಯಯನ ವರದಿ ಹೇಳಿದೆ.

ಮೊಬೈಲ್‌ ನೋಡುತ್ತಾ 18-20 ತಾಸು ಕಳೆಯುತ್ತಿದ್ದಾರೆ... ಅಲ್ಲದೆ ಹೀಗೆ ಮೊಬೈಲ್‌ ನೋಡುವಾಗ ಕುರುಕುಲು ತಿಂಡಿ ತಿನ್ನುವುದನ್ನು ಕೂಡ ಮಾಡುತ್ತಾರೆ, ದೈಹಿಕ ಚಟವಟಿಕೆಯಿಲ್ಲ, ಅನಾರೋಗ್ಯಕರ ಆಹಾರ ಸೇವನೆ, ಇದರಿಂದಾಗಿ ಮೈ ತೂಕ ಹೆಚ್ಚಾಗುತ್ತಿದೆ ಎಂಬುವುದನ್ನು ಅಧ್ಯಯನ ವರದಿ ಹೇಳಿದೆ... ಅಧ್ಯಯನ

ವರದಿಯಲ್ಲಿ ಏನು ಹೇಳಿದೆ

ವರದಿಯಲ್ಲಿ ಏನು ಹೇಳಿದೆ

* ಹೊಸ ಅಧ್ಯಯನ ವರದಿಯು ಯಾರು 2 ಗಂಟೆಗಳ ಕಾಲ ಮೊಬೈಲ್‌ ಬಳಕೆ ಮಾಡುತ್ತಾರೋ ಅವರು ಸಂಸ್ಕರಿಸಿದ ಆಹಾರವನ್ನು ಹಾಗೂ ಸ್ವಲ್ಪ ಹಣ್ಣು ಹಾಗೂ ತರಕಾರಿಗಳನ್ನು ಸೇವಿಸುತ್ತಾರೆ. ಇದರಿಂದ ಮೈ ತೂಕ ಹೆಚ್ಚಾಗುವುದು.

* 3 ಗಂಟೆಗಳಿಗಿಂತ ಅಧಿಕ ಸಮಯ ಮೊಬೈಲ್‌ನಲ್ಲಿ ಕಳೆಯುವುದಾದರೆ ಅತ್ಯಧಿಕ ಮೈ ತೂಕ ಹೊಂದುತ್ತಾರೆ.

* ಮೊಬೈಲ್‌ ನೋಡುವುದರಿಂದ ಅದು ನಮ್ಮ ಆಹಾರಕ್ರಮ ಹಾಗೂ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಎಂದು ಹೆಲ್ತ್‌ ಎಕ್ಸ್‌ಪರ್ಟ್ ಹೇಳುತ್ತಾರೆ.

ಕೊರಿಯಾ ಯೂತ್‌ ರಿಸ್ಕ್‌ ಬಿಹೇವರ್‌ ಎಂಬ ಅಧ್ಯಯನವು ಮೊಬೈಲ್ ಬಳಕೆ ಯುವಕ-ಯುವತಿಯರಲ್ಲಿ ಒಬೆಸಿಟಿಗೆ ಹೇಗೆ ಕಾರಣವಾಗಿದೆ ಎಂಬುವುದನ್ನು ವಿವರಿಸಿದೆ.

ಮೊಬೈಲ್‌ನಲ್ಲಿ ಏನು ನೋಡುತ್ತಾರೆ ಎಂಬುವುದರ ಮೇಲೂ ತೂಕ ಹೆಚ್ಚುವುದು'

ಮೊಬೈಲ್‌ನಲ್ಲಿ ಏನು ನೋಡುತ್ತಾರೆ ಎಂಬುವುದರ ಮೇಲೂ ತೂಕ ಹೆಚ್ಚುವುದು'

* ಯಾರು ಮೊಬೈಲ್‌ನ್ನು 5 ಗಂಟೆಗೂ ಅಧಿಕ ಹೊತ್ತು ಬಳಸುತ್ತಾರೋ ಅವರು ಫಾಸ್ಟ್‌ ಫುಡ್ಸ್, ಚಿಪ್ಸ್, ಇನ್‌ಸ್ಟಾಂಟ್ ನೂಡಲ್ಸ್ ಇವುಗಳನ್ನು ಹೆಚ್ಚಾಗಿ ಬಳಸುತ್ತಾರೆ.

* ಅಲ್ಲದೆ ಮೊಬೈಲ್‌ ಅನ್ನು ಮಾಹಿತಿಗಾಗಿ ಬಳಸುವವರಿಗಿಂತ ಚಾಟ್‌ ಮಾಡುವವರು, ಮೆಸೇಂಜರ್‌ ಬಳಸುವವರು, ಗೇಮ್ ಆಡುವವರು, ಸಿನಿಮಾ ನೋಡುವುದು, ಯೂ ಟ್ಯೂಬ್‌ ನೋಡುವುದು, ತುಂಬಾ ಹೊತ್ತು ಸೋಷಿಯಲ್ ಮೀಡಿಯಾ ಬಳಸುವವರು ಕುರುಕುಲು ತಿಂಡಿ ತಿನ್ನುವುದು ಜಾಸ್ತಿ.

* ಒಂದು ಕಡೆ ತುಂಬಾ ಹೊತ್ತು ಕೂರುವುದು ಹಾಗೂ ಅನಾರೋಗ್ಯಕರ ಆಹಾರಶೈಲಿಯಿಂದಾಗಿ ಯುವಕ-ಯುವತಿಯರಲ್ಲಿ, ಹದಿ ವಯಸ್ಸಿನ ಮಕ್ಕಳಲ್ಲಿ ಮೈ ತೂಕ ಹೆಚ್ಚಾಗುತ್ತಿದೆ.

ಆನ್‌ಲೈನ್‌ ಸ್ಟಡಿ ಕೂಡ ಮೈ ತೂಕ ಹೆಚ್ಚಿಸುತ್ತಿದೆ

ಆನ್‌ಲೈನ್‌ ಸ್ಟಡಿ ಕೂಡ ಮೈ ತೂಕ ಹೆಚ್ಚಿಸುತ್ತಿದೆ

ಮೊದಲೆಲ್ಲಾ ಪೋಷಕರಿಗೆ ಮಕ್ಕಳಿಗೆ ಮೊಬೈಲ್ ಕೊಡಬೇಡಿ ಎಂದು ಶಿಕ್ಷಕರು ಹೇಳುತ್ತಿದ್ದರು, ಅಲ್ಲದೆ ಪೋಷಕರೂ ಮಕ್ಕಳಿಗೆ ಮೊಬೈಲ್ ಕೊಡಿಸುತ್ತಿರಲಿಲ್ಲ... ಪೋಷಕರ ಮೊಬೈಲ್ ನೋಡಿದರೂ ಓದುವುದು ಬಿಟ್ಟು ಮೊಬೈಲ್‌ ನೋಡುತ್ತಿದ್ದೆಯಲ್ಲಾ ಎಂದು ಗದರುತ್ತಿದ್ದರು. ಆದರೆ ಈಗ ಮಕ್ಕಳು ಮೊಬೈಲ್ ನೋಡುತ್ತಿದ್ದರೆ ಅವರು ಓದುತ್ತಿದ್ದಾರೆ ಎಂದು ಭಾವಿಸಬೇಕಾದ ಕಾಲ ಬಂದಿದೆ.

ಕೊರೊನಾದಿಂದಾಗಿ ಶಾಲೆಗಳು ಬಂದ್‌ ಆಗಿರುವುದರಿಂದ ಆನ್ಲೈನ್‌ನಲ್ಲಿಯೇ ಕ್ಲಾಸ್‌ಗಳು ನಡೆಯುತ್ತಿರುವುದರಿಂದ ಮಕ್ಕಳಿಗೇ ಮೊಬೈಲ್‌ ತೆಗೆದುಕೊಡಬೇಕಾಗಿದೆ. ಕ್ಲಾಸ್‌ ನೆಪದಲ್ಲಿ ಮಕ್ಕಳು ಮೊಬೈಲ್‌ನಲ್ಲಿ ತುಂಬಾ ಹೊತ್ತು ಕಳೆಯುತ್ತಿದ್ದಾರೆ. ಹದಿಹರೆಯದ ಪ್ರಾಯದವರಾದರೆ ಅವರು ಕ್ಲಾಸ್‌ ಕೇಳುತ್ತಿದ್ದಾರಾ ಅಥವಾ ಗೇಮ್‌ ಆಡುತ್ತಿದ್ದಾರಾ ಒಂದೂ ಗೊತ್ತಾಗಲ್ಲ.. ಒಟ್ಟಿನಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ, ಹೀಗಾಗಿ ಮೈ ತೂಕ ಹೆಚ್ಚುವುದು.

ಅನಾರೋಗ್ಯಕರ ಅಭ್ಯಾಸ ಹೆಚ್ಚುತ್ತಿದೆ ಎಂದು ಗೊತ್ತೇ ಆಗುವುದಿಲ್ಲ

ಅನಾರೋಗ್ಯಕರ ಅಭ್ಯಾಸ ಹೆಚ್ಚುತ್ತಿದೆ ಎಂದು ಗೊತ್ತೇ ಆಗುವುದಿಲ್ಲ

ಮೊಬೈಲ್‌ನಲ್ಲಿ ಬ್ಯುಸಿಯಾಗಿದ್ದು ಚಿಪ್ಸ್, ಫಾಸ್ಟ್ ಫುಡ್ಸ್ ತಿನ್ನುತ್ತೇವೆ ಎಷ್ಟು ತಿಂದೆವು ಎಂದೇ ಗೊತ್ತಾಗುವುದಿಲ್ಲ. ಆದ್ದರಿಂದ ನಮ್ಮಲ್ಲಿ ಈ ರೀತಿಯ ಒಂದು ಕೆಟ್ಟ ಅಭ್ಯಾಸ ಬೆಳೆದಿದೆ ಎಂಬುವುದು ಮೊದಲಿಗೆ ಗೊತ್ತೇ ಆಗುವುದಿಲ್ಲ, ಮೈ ತೂಕ ಹೆಚ್ಚಾಗುತ್ತಿರುವಾಗಲೂ ಹೆಚ್ಚಿನವರು ತಲೆ ಕೆಡಿಸಿಕೊಳ್ಳುವುದಿಲ್ಲ. ಮೈ ತೂಕ ಹೆಚ್ಚಿ ಒಬೆಸಿಟಿ ಆದಾಗ ಅಯ್ಯೋ ತೂಕ ಹೆಚ್ಚಾಯ್ತು ಎಂದು ಹೇಳುವರೇ ಹೆಚ್ಚು.

ಆರೋಗ್ಯಕ್ಕಾಗಿ ನಿಮ್ಮ ಅಭ್ಯಾಸ ಬದಲಾಗಲಿ

ಆರೋಗ್ಯಕ್ಕಾಗಿ ನಿಮ್ಮ ಅಭ್ಯಾಸ ಬದಲಾಗಲಿ

* ನೀವು ಮೊಬೈಲ್ ನೋಡುವಾಗ ಆಹಾರವನ್ನು ತಿನ್ನಬೇಡಿ.

* ತಿನ್ನುವ ಆಹಾರಗಳು ಆರೋಗ್ಯಕರವಾಗಿರಲಿ.

* ಚಿಪ್ಸ್, ಕುರುಕುಲು ತಿಂಡಿ, ನೂಡಲ್ಸ್ ಇವುಗಳ ಬದಲಿಗೆ ನಟ್ಸ್, ಫ್ರೂಟ್ಸ್ ಸೇವಿಸಿ

* ಮೊಬೈಲ್‌ ನೋಡುವುದಕ್ಕೆ ಒಂದು ಸಮಯ ನಿಗದಿ ಪಡಿಸಿ.

* ನಿಮ್ಮ ಆಹಾರಕ್ರಮದ ಬಗ್ಗೆಯೂ ಪಟ್ಟಿಯಿರಲಿ

* ಮೊಬೈಲ್‌ನಲ್ಲಿ ಮಾತನಾಡುವಾಗ ಒಂದು ಕಡೆ ಕೂರುವ ಬದಲಿಗೆ ಅತ್ತಿತ್ತ ನಡೆದಾಡಿ.

* ತುಂಬಾ ಹೊತ್ತು ಮೊಬೈಲ್‌ ನೋಡಿ ನಿದ್ದೆಗೆ ಭಂಗ ತರಬೇಡಿ, ಸಮಯಕ್ಕೆ ಸರಿಯಾಗಿ ನಿದ್ದೆ ಮಾಡಿ... ಮಲಗಲು ಹೋಗುವಾಗ ಮೊಬೈಲ್‌ ಹಿಡಿದೇ ಬೆಡ್‌ಗೆ ಹೋಗಬೇಡೊ.

* ಮೊಬೈಲ್‌ ಅನ್ನು ನಿಮ್ಮ ಜ್ಞಾನ ಹಾಗೂ ಆರೋಗ್ಯ ಹೆಚ್ಚಿಸಲು ಬಳಸಿ.

English summary

How Smartphone Usage May Be Affecting Your Diet and Weight in Kannada

How smartphone usage may be affecting your diet and weight in Kannada, read on...
Story first published: Thursday, July 8, 2021, 16:47 [IST]
X
Desktop Bottom Promotion