For Quick Alerts
ALLOW NOTIFICATIONS  
For Daily Alerts

ಟೀ, ಕಾಫಿ ಪ್ರಿಯರೇ, ಇಲ್ಲಿದೆ ನಿಮಗೆ ಸಿಹಿ ಸುದ್ದಿ

|

ಪ್ರತಿಯೊಬ್ಬರ ದಿನದ ಮೊದಲ ಆಹಾರ ಎಂದರೆ ಅದು ಕಾಫಿ ಅಥವಾ ಚಹಾ. ಕೆಲವರಿಗಂತೂ ಈ ಅಭ್ಯಾಸವನ್ನು ಒಂದು ದಿನ ಕೈ ಬಿಟ್ಟರೆ ಜೀವನದಲ್ಲಿ ಏನೋ ಕಳೆದುಕೊಂಡಂತೆ ಭಾಸವಾಗುತ್ತದೆ. ಭಾರತೀಯರಾಗಿ ಅಥವಾ ಕರ್ನಾಟಕದವರಾಗಿ ನಮ್ಮಲ್ಲಿ ಹೆಚ್ಚು ಕಾಫಿ ಬೆಳೆ ಇರುವುದರಿಂದ ನಾವು ಮಾತ್ರ ಬೆಡ್ ಕಾಫಿ ಕುಡಿಯುವ ಅಭ್ಯಾಸ ಮಾಡಿಕೊಂಡಿದ್ದೇವೆ ಎಂದು ತಿಳಿದುಕೊಳ್ಳುವುದು ತಪ್ಪು.

ವಿಶ್ವದಾದ್ಯಂತ ಎಲ್ಲರಿಗೂ ಈ ಅಭ್ಯಾಸ ಮೈಗೂಡಿದೆ. ಆದರೆ ಬೇರೆ ದೇಶದವರು ನಮಗಿಂತ ವಿಭಿನ್ನವಾಗಿ ಬ್ಲಾಕ್ ಟೀ, ವೋವೆಲ್ ಟೀ ಎಂದು ಬೇರೆ ಬೇರೆ ರೂಪದಲ್ಲಿ ಸೇವನೆ ಮಾಡುತ್ತಾರೆ ಅಷ್ಟೇ. ಕಾಫಿ ಬೀಜಗಳಲ್ಲಿ ಅಥವಾ ಚಹಾದ ಎಲೆಗಳಲ್ಲಿ ಪ್ರಮುಖವಾಗಿ ಕಂಡು ಬರುವುದು ಕೆಫೀನ್ ಅಂಶ.

ಕೆಫಿನ್ ಅಂಶದಿಂದ ನಮಗೆ ಏನೆಲ್ಲಾ ಲಾಭ ಇದೆ ಗೊತ್ತಾ?

ಕೆಫಿನ್ ಅಂಶದಿಂದ ನಮಗೆ ಏನೆಲ್ಲಾ ಲಾಭ ಇದೆ ಗೊತ್ತಾ?

ಬೆಳಗ್ಗೆ ಎದ್ದ ತಕ್ಷಣ ಕಾಫಿ ಕುಡಿಯುವ ಅಭ್ಯಾಸ ಇರುವ ನಮಗೆ ಖಾಲಿ ಹೊಟ್ಟೆಯಲ್ಲಿ ಕೆಫಿನ್ ಅಂಶ ನಮ್ಮ ದೇಹ ಸೇರಿದರೆ ಏನಾಗಬಹುದು ಎಂಬ ಅರಿವಿರಬೇಕು. ಕೆಲವರ ಆರೋಗ್ಯಕ್ಕೆ ಕೆಫೀನ್ ಅಂಶ ಒಳ್ಳೆಯದನ್ನು ಮಾಡಿದರೆ ಇನ್ನು ಕೆಲವರಿಗೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರುತ್ತದೆ ಎಂದು ಹೇಳುತ್ತಾರೆ. ಆದರೆ ಇದೆಲ್ಲವೂ ಒಬ್ಬ ವ್ಯಕ್ತಿಯ ದೇಹದ ಪ್ರಸ್ತುತ ಆರೋಗ್ಯದ ಸ್ಥಿತಿ, ಅವನು ತೆಗೆದುಕೊಳ್ಳುತ್ತಿರುವ ಔಷಧಿಗಳು, ಒಂದು ದಿನಕ್ಕೆ ಅವನು ಕಾಫಿ ಕುಡಿಯುವ ಪ್ರಮಾಣ, ಕಾಫಿ ಅಥವಾ ಚಹಾ ತಯಾರು ಮಾಡುವಾಗ ಕಾಫಿ ಪುಡಿ ಅಥವಾ ಚಹಾ ಪುಡಿಯನ್ನು ಯಾವ ಪ್ರಮಾಣದಲ್ಲಿ ಬಳಕೆ ಮಾಡುತ್ತಾನೆ ಎಂಬ ಇತ್ಯಾದಿ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಅದೇನೇ ಇರಲಿ ಸಂಶೋಧನೆ ಹೇಳುವ ಪ್ರಕಾರ ಒಬ್ಬ ವ್ಯಕ್ತಿ ಆರೋಗ್ಯವಾಗಿರಬೇಕಾದರೆ ಒಂದು ದಿನಕ್ಕೆ 400 ಮಿಲಿ ಗ್ರಾಂ ಕೆಫೀನ್ ಅಂಶ ಸುರಕ್ಷಿತ ಎಂದು ತಿಳಿದು ಬಂದಿದೆ. ಹಾಗಾದರೆ ಪ್ರತಿ ದಿನ ನೀವು ಕುಡಿಯುವ ಒಂದು ಕಪ್ ಕಾಫಿಯಲ್ಲಿ ಎಷ್ಟು ಪ್ರಮಾಣದ ಕೆಫಿನ್ ಅಂಶ ಇರುತ್ತದೆ ಎಂದು ಕೇಳುವುದಾದರೆ ನಿಮ್ಮ ಕಾಫಿ ಕಪ್ 240 ಎಂ ಎಲ್ ನದ್ದಾಗಿದ್ದರೆ ಸುಮಾರು 95 ಮಿಲಿ ಗ್ರಾಂ ಕೆಫಿನ್ ಅಂಶ ಕಂಡು ಬರುತ್ತದೆ. ಒಂದು ವೇಳೆ ಬ್ಲಾಕ್ ಟೀ ಕುಡಿಯುವ ಅಭ್ಯಾಸ ನಿಮಗಿದ್ದರೆ ಸುಮಾರು 47 ಮಿಲಿ ಗ್ರಾಂ ಕೆಫೀನ್ ಅಂಶ ನೀವು ಪ್ರತಿ ಬಾರಿ ಕಾಫಿ ಅಥವಾ ಚಹಾ ಕುಡಿದಾಗ ನಿಮ್ಮ ದೇಹ ಸೇರುತ್ತದೆ.

ಕೆಫಿನ್ ಅಂಶದಿಂದ ನಮಗೆ ಏನೇನು ಒಳ್ಳೆಯದಾಗುತ್ತದೆ ?

ಕೆಫಿನ್ ಅಂಶದಿಂದ ನಮಗೆ ಏನೇನು ಒಳ್ಳೆಯದಾಗುತ್ತದೆ ?

ಪ್ರಮುಖವಾಗಿ ಹೇಳಬೇಕೆಂದರೆ, ಹೆಚ್ಚು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವವರು, ದೈಹಿಕವಾಗಿ ಹೆಚ್ಚು ಚುರುಕಾಗಿ ಕೆಲಸ ಮಾಡುವವರು, ಬುದ್ಧಿ ಖರ್ಚು ಮಾಡಿ ವೇಗವಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸುವವರಿಗೆ ಕೆಫಿನ್ ಅಂಶದಿಂದ ಸಾಕಷ್ಟು ಲಾಭವಿದೆ. ಮನುಷ್ಯರಲ್ಲಿ ಕಂಡುನ್ ಬರುವ ಕೆಲವೊಂದು ದೀರ್ಘ ಕಾಲದ ಕಾಯಿಲೆಗಳನ್ನು ಕೆಫೀನ್ ಅಂಶ ಕ್ರಮೇಣವಾಗಿ ರೋಗ - ಲಕ್ಷಣಗಳನ್ನು ಕಡಿಮೆ ಮಾಡುವ ಮೂಲಕ ನಿಯಂತ್ರಣಕ್ಕೆ ತರುತ್ತದೆ ಎಂದು ಹೇಳುತ್ತಾರೆ. ನಿಮ್ಮ ನರಮಂಡಲ ವ್ಯವಸ್ಥೆಯ ಮೇಲೆ ವಿಶೇಷವಾಗಿ ಪ್ರಭಾವ ಬೀರುವ ಕೆಫೀನ್ ಅಂಶ ನಿಮ್ಮ ಮಾನಸಿಕ ಆರೋಗ್ಯವನ್ನು ವೃದ್ಧಿಸುತ್ತದೆ. ತುಂಬಾ ಸರಳವಾದ ಕೆಲಸ ಕಾರ್ಯಗಳಿಂದ ಹಿಡಿದು ಹೆಚ್ಚು ಕಷ್ಟಕರವಾದ ಕೆಲಸಗಳನ್ನು ಅತ್ಯಂತ ಸುಲಭವಾಗಿ ನೀವು ನಿರ್ವಹಿಸಬಹುದು.

ಕಾಫಿಯಲ್ಲಿ ಆಂಟಿ - ಆಕ್ಸಿಡೆಂಟ್ ಅಂಶಗಳು ಹೆಚ್ಚಾಗಿವೆ : -

ಕಾಫಿಯಲ್ಲಿ ಆಂಟಿ - ಆಕ್ಸಿಡೆಂಟ್ ಅಂಶಗಳು ಹೆಚ್ಚಾಗಿವೆ : -

ನಮ್ಮ ದೇಹಕ್ಕೆ ಆಂಟಿ - ಆಕ್ಸಿಡೆಂಟ್ ಅಂಶಗಳು ಏಕೆ ಬೇಕು? ನಾವು ಆಹಾರ ಸೇವನೆ ಮಾಡಿದ ಸಂದರ್ಭದಲ್ಲಿ ನಮ್ಮ ಆಹಾರದಲ್ಲಿ ಜೀರ್ಣ ಪ್ರಕ್ರಿಯೆಯ ಸಂದರ್ಭದಲ್ಲಿ ಪೌಷ್ಟಿಕಾಂಶಗಳನ್ನು ಹೊರತು ಪಡಿಸಿ ಉಳಿದ ಆಹಾರ ತ್ಯಾಜ್ಯದಲ್ಲಿ ವಿಷಕಾರಿ ಅಂಶಗಳು ಮತ್ತು ಫ್ರೀ - ರಾಡಿಕಲ್ ಅಂಶಗಳು ಕಂಡುಬರುತ್ತದೆ ಇವುಗಳು ನಮ್ಮ ದೇಹವನ್ನು ಯಾವುದಾದರೂ ಬಗೆಯಲ್ಲಿ ಹಾನಿ ಮಾಡಲು ಪ್ರಯತ್ನ ಪಡುತ್ತವೆ. ಕೆಲವು ದಿನಗಳ ನಂತರ ನಮಗೆ ಕಾಯಿಲೆಗಳನ್ನು ತಂದೊಡ್ಡುತ್ತವೆ. ಹಾಗಾಗಿ ನಾವು ಸಾಧ್ಯವಾದಷ್ಟು ನಮ್ಮ ದೇಹವನ್ನು ಇಂತಹ ಅಂಶಗಳಿಂದ ರಕ್ಷಣೆ ಮಾಡಿಕೊಳ್ಳಬೇಕು. ನಿಮಗೆಲ್ಲಾ ತಿಳಿದಿರುವ ಹಾಗೆ ಕಾಫಿ ಮತ್ತು ಚಹಾದಲ್ಲಿ ಆಂಟಿ - ಆಕ್ಸಿಡೆಂಟ್ ಅಂಶಗಳು ಹೆಚ್ಚಾಗಿವೆ. ಇವುಗಳ ಪ್ರಭಾವದಿಂದ ನಮ್ಮ ಆರೋಗ್ಯ ವೃದ್ಧಿಸುತ್ತದೆ. ನಮಗೆ ಯಾವುದೇ ಕ್ಷಣದಲ್ಲಿ ಎದುರಾಗಬಹುದಾದ ಕ್ಯಾನ್ಸರ್ ಸಮಸ್ಯೆಗಳನ್ನು ಕಾಫಿ ಮತ್ತು ಚಹಾ ದಲ್ಲಿ ಕಂಡು ಬರುವ ಆಂಟಿ - ಆಕ್ಸಿಡೆಂಟ್ ಅಂಶಗಳು ಕಡಿಮೆ ಮಾಡುತ್ತವೆ. ಇದರ ಜೊತೆಗೆ ಕೆಫೇನ್ ಅಂಶದಲ್ಲಿ ಆಂಟಿ - ಆಕ್ಸಿಡೆಂಟ್ ಅಂಶಗಳು ಎಂದು ಕರೆಸಿಕೊಳ್ಳುವ ಪಾಲಿಫಿನಾಲ್ ಅಂಶಗಳು ಇರುವ ಕಾರಣ ನಮ್ಮ ಹೃದಯದ ಕಾಯಿಲೆಯ ಪ್ರಮಾಣವನ್ನು ತಗ್ಗಿಸುತ್ತದೆ.

ಒಂದು ಸಂಶೋಧನೆ ಹೇಳುವ ಪ್ರಕಾರ ಯಾರು ಒಂದು ದಿನಕ್ಕೆ ನಾಲ್ಕು ಕಪ್ ಕಾಫಿ ಅಥವಾ ಬ್ಲಾಕ್ ಟೀ ಕುಡಿಯುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಅವರಿಗೆ ಕಾಫಿ ಅಥವಾ ಚಹಾ ಸೇವನೆಯ ಅಭ್ಯಾಸ ಇಲ್ಲದವರಿಗೆ ಹೋಲಿಸಿದರೆ ಪಾರ್ಶ್ವವಾಯು ಅಥವಾ ಹೃದಯಾಘಾತ ಎದುರಾಗುವ ಸಮಸ್ಯೆ ಶೇಕಡ 21 % ರಷ್ಟು ಕಡಿಮೆ ಆಗಿರುತ್ತದೆ.

ನಿಮ್ಮ ದೈಹಿಕ ಶಕ್ತಿ ಹೆಚ್ಚಾಗುತ್ತದೆ : -

ನಿಮ್ಮ ದೈಹಿಕ ಶಕ್ತಿ ಹೆಚ್ಚಾಗುತ್ತದೆ : -

ನೀವು ಬೆಳಗಿನ ಸಮಯದಲ್ಲಿ ಕುಡಿಯುವ ಕಾಫಿ ಅಥವಾ ಚಹಾ ನಿಮ್ಮ ಮೆದುಳಿನ ಚುರುಕುತನವನ್ನು ಹೆಚ್ಚಿಸುತ್ತದೆ ನಿಜ. ಆದರೆ ಇದರ ಜೊತೆಗೆ ನಿಮ್ಮ ದೈಹಿಕ ಸದೃಢತೆ, ಶಕ್ತಿ ಸಾಮರ್ಥ್ಯ ಕೂಡ ಹೆಚ್ಚಾಗಲಿದೆ. ನಿಮ್ಮ ದೇಹದ ಆಯಾಸವನ್ನು ಕಡಿಮೆ ಮಾಡಿ, ಅಡ್ ಇನೋಸಿನೆ ಎಂಬ ಹಾರ್ಮೋನ್ ಅಂಶವನ್ನು ತಡೆಹಾಕಿ ನಿಮ್ಮ ದೇಹದಲ್ಲಿ ಡೋಪಮೈನ್ ಪ್ರಮಾಣವನ್ನು ಹೆಚ್ಚು ಮಾಡುತ್ತದೆ. ಇದರಿಂದ ನಿಮ್ಮ ಹೃದಯದ ಕಾರ್ಯಕ್ಷಮತೆ ಹೆಚ್ಚಾಗುತ್ತದೆ. ಹಾಗಾಗಿಯೇ ದಿನದ ಕೆಲಸ ಕಾರ್ಯಗಳ ಒತ್ತಡದ ನಡುವೆ ಸಾಕಷ್ಟು ಬಳಲಿರುವ ಜನರು ತಕ್ಷಣವೇ ಕಾಫಿ ಕುಡಿಯಬೇಕು ಎಂದುಕೊಳ್ಳುತ್ತಾರೆ. ಕಾಫಿ ಸೇವನೆಯಿಂದ ತಕ್ಷಣವೇ ತಮ್ಮ ದೇಹಕ್ಕೆ ಶಕ್ತಿ ಸಿಕ್ಕಂತಾಗಿ ಮತ್ತೊಮ್ಮೆ ತಮ್ಮ ಕೆಲಸ ಕಾರ್ಯಗಳಲ್ಲಿ ಮಗ್ನರಾಗಿ ಕೆಲಸ ಮಾಡಲು ಇದು ಸಹಾಯ ಮಾಡುತ್ತದೆ.

ದೇಹದ ತೂಕ ನಿರ್ವಹಣೆಯಾಗುತ್ತದೆ : -

ದೇಹದ ತೂಕ ನಿರ್ವಹಣೆಯಾಗುತ್ತದೆ : -

ತಮ್ಮ ದೇಹ ಸೌಂದರ್ಯದ ಬಗ್ಗೆ ಅತ್ಯಧಿಕ ಕಾಳಜಿ ಹೊಂದಿರುವವರು ಹೇಗಾದರೂ ಮಾಡಿ ತಮ್ಮ ದೇಹದಲ್ಲಿನ ಬೊಜ್ಜಿನ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಬೇಕು ಎನ್ನುವವರು ಪ್ರತಿ ದಿನ ಕಾಫಿ ಕುಡಿಯುವ ಅಭ್ಯಾಸದಿಂದ ತಮ್ಮ ದೇಹದಲ್ಲಿನ ಕ್ಯಾಲೊರಿ ಅಂಶಗಳನ್ನು ಕಡಿಮೆ ಮಾಡಿಕೊಳ್ಳುವ ಮೂಲಕ ಒಂದು ದಿನಕ್ಕೆ ಸುಮಾರು 100 ರಿಂದ 150 ಕ್ಯಾಲೋರಿಗಳ ಪ್ರಮಾಣವನ್ನು ತಗ್ಗಿಸಿಕೊಳ್ಳಬಹುದು. ಕಾಫಿ ಅಥವಾ ಚಹಾ ನಿಮ್ಮ ದೇಹದಲ್ಲಿ ಮೆಟಬಾಲಿಸಂ ಪ್ರಕ್ರಿಯೆಯನ್ನು ಚುರುಕುಗೊಳಿಸುವ ಮೂಲಕ ನಿಮ್ಮ ದೀರ್ಘ ಕಾಲದ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಿ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಕಾಫಿ ಮತ್ತು ಚಹಾ ನೀವು ಸರಿಯಾದ ಪ್ರಮಾಣದಲ್ಲಿ ಸೇವನೆ ಮಾಡಿದರೆ ನಿಮಗೆ ಆರೋಗ್ಯಕರ ಎಂದು ಹೇಳಬಹುದು.

English summary

Health Benefits Of Drinking Tea and Coffee in Kannada

Here are health benefits of drinking tea and coffee, read on...
X