For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ವ್ಯಾಯಾಮ ಬಳಿಕ ಸೇವಿಸಬೇಕಾದ ಆಹಾರಗಳಿವು

|

ಚಳಿಗಾಲದಲ್ಲಿ ಜನರಿಗೆ ಸಾಮಾನ್ಯವಾಗಿ ಬೆಚ್ಚಗೆ ಕಂಬಳಿ ಹೊದ್ದುಕೊಂಡು ಹಾಸಿಗೆಯಲ್ಲೇ ಮಲಗೋದಂದ್ರೇನೇ ಹೆಚ್ಚು ಇಷ್ಟವಾಗೋದು. ಹಾಗಾಗಿಯೇ ಚಳಿಗಾಲದಲ್ಲಿ ಹೊಟ್ಟೆ ಭಾರವಾದ ಹಾಗೇ ಅಥವಾ ಹೊಟ್ಟೆ ಉಬ್ಬರಿಸಿಕೊಂಡಿರೋ ಹಾಗೇ ಅನ್ನಿಸೋದೂ ಸಾಮಾನ್ಯವೇ. ಆದರೆ ಹಾಗೇ ಮಲಗಿದರೆ ಮೈ ತೂಕ ಹೆಚ್ಚುವುದು, ನಂತರ ಬೊಜ್ಜಿನ ಕಾರಣದಿಂದಾಗಿ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುವುದು.

Foods To Eat After Finishing Your Workouts In Winter

ಆದ್ದರಿಂದ ದಿನಾ ಅರ್ಧ ಗಂಟೆ ವ್ಯಾಯಾಮ ಮಾಡಲೇಬೇಕು. ಈ ವ್ಯಾಯಾಮದ ನಂತರ ಆಗೋ ಮೈಕೈ ನೋವನ್ನ ಉಪಶಮನ ಮಾಡೋದಕ್ಕೆ ಮತ್ತೆ ಹಾಗೇನೇ ಆಯಾಸಗೊಂಡಿರೋ ಸ್ನಾಯುಗಳಿಗೆ ಚೈತನ್ಯ ತುಂಬೋದಕ್ಕೆ ಈ ಆಹಾರಗಳ ಸೇವನೆ ತುಂಬಾನೇ ಒಳ್ಳೆಯದು ನೋಡಿ:

ಸೂಪುಗಳು

ಸೂಪುಗಳು

ಕಡಿಮೆ ಕೊಬ್ಬಿನಾಂಶವಿರೋವಂತಹ ಹಾಗೂ ತಯಾರಿಸೋದಕ್ಕೂ ಬಹಳ ಸುಲಭವಾಗಿರೋವಂತಹ ಆಹಾರಪದಾರ್ಥಗಳು ಅಂತಾ ಯಾವುದಾದ್ರೂ ಇದ್ರೆ ಅವು ಈ ಸೂಪುಗಳೇ ಸರಿ. ಯಾಕಂದ್ರೇ ಈ ಸೂಪುಗಳನ್ನ ತಯಾರ್ಸೋಕೆ ಬಹಳ ಸಮಯ ಏನೂ ಬೇಕಾಗೋಲ್ಲ ಹಾಗೂ ಜೊತೆಗೆ, ಇವು "ಅಬ್ಬಬ್ಬಾ" ಎನಿಸೋವಂತಹ ಸ್ವಾದಗಳು ಹಾಗೂ ಪೋಷಕಾಂಶಗಳಿಂದ ಸಮೃದ್ಧವಾಗಿರುತ್ವೆ. ಅದರಲ್ಲೂ ವಿಶೇಷವಾಗಿ ಚಳಿಗಾಲದ ಸಮಯದಲ್ಲಿ ಹೆಚ್ಚು ಹೆಚ್ಚು ಸೂಪುಗಳ ಸೇವನೆ ಬಹಳ ಒಳ್ಳೆಯದು. ಕಾರಣ ಸೂಪುಗಳ ಸೇವನೆ ನಿಮ್ಮ ಹೊಟ್ಟೆಯನ್ನ ಭಾರವಾಗಿಸೋದನ್ನಾಗಲೀ ಅಥವಾ ಉಬ್ಬರಿಸಿಕೊಳ್ಳೋ ಹಾಗಾಗಲೀ ಮಾಡೋಲ್ಲ.

ಹಾಟ್ ಚಾಕೊಲೇಟ್!

ಹಾಟ್ ಚಾಕೊಲೇಟ್!

ಸಿಹಿಯೆಂದರೆ ನಿಮಗೆ ಪಂಚಪ್ರಾಣವೇ ? ಹಾಗಾದ್ರೆ ಈ ವಿಚಾರದಲ್ಲಿ "ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ" ಅಂದ ಹಾಗಾಯ್ತು ಬಿಡಿ ನಿಮ್ಮ ಪರಿಸ್ಥಿತಿ! ನಾವು ಈ ಮಾತನ್ನ ಹೇಳೋಕೆ ಕಾರಣವೇನೆಂದರೆ, ವ್ಯಾಯಾಮ ಆದ್ಮೇಲೆ ಬಿಸಿಬಿಸಿಯಾದ ಚಾಕೊಲೇಟ್ ನಿಮ್ಮಂತಹವರಿಗೇ ಹೇಳಿಮಾಡಿಸಿರುವಂತಹದ್ದು!! ಈ ಚಾಕೊಲೇಟನ್ನ ನೀವು ಬಿಸಿಬಿಸಿಯಾದ ಹಾಲಿನೊಂದಿಗೆ ಬೆರೆಸಿ, ನಿಮ್ಮ ಕಠಿಣ ವ್ಯಾಯಾಮದ ಬಳಿಕ ಅದನ್ನ ಆರಾಮವಾಗಿ ಹೀರಬಹುದು. "ಕಾರ್ಬೋಹೈಡ್ರೇಟ್ನ ಅಧಿಕ ಸೇವನೆಯಷ್ಟೇ ಚಾಕೊಲೇಟ್ ನ ಸೇವನೆಯಿಂದ ನಮಗೆ ಬಂದ ಭಾಗ್ಯ" ಅಂತಾ ನೀವು ತಿಳಿದಿರೋದಾದ್ರೆ ಅದು ನಿಮ್ಮ ತಪ್ಪು ಕಲ್ಪನೆ. ಚಾಕೊಲೇಟ್ ಕಾರ್ಬೋಹೈಡ್ರೇಟ್ ಗಳ ಒಂದು ಉತ್ತಮ ಮೂಲವಷ್ಟೇ ಅಲ್ಲ, ಜೊತೆಗೆ ಅದು ನಿಮ್ಮ ದೇಹದ ಮತ್ತು ಮಾನಸಿಕ ಒತ್ತಡವನ್ನೂ ತಗ್ಗಿಸುತ್ತದೆ ಹಾಗೂ ನಿಮ್ಮ ದೇಹಕ್ಕೆ ಅತ್ಯಗತ್ಯವಾದ ಪ್ರೋಟೀನನ್ನೂ ಒದಗಿಸುತ್ತದೆ. ಚಾಕೋಲೇಟ್ ನ ವಿಷಯಕ್ಕೆ ಬಂದಾಗ ನಾವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಇನ್ನೊಂದು ಅಂಶವೇನೆಂದರೆ, ಕಾರ್ಬೋಹೈಡ್ರೇಟ್ ಗಳನ್ನ ನಮ್ಮ ಆಹಾರಪದ್ಧತಿಯಿಂದಲೇ ನಿವಾರಿಸಿಬಿಡುವಷ್ಟು ನಗಣ್ಯ ಪೋಷಕತತ್ತ್ವವೇನಲ್ಲ ಅನ್ನೋದು!!

ಕಾಮಕಸ್ತೂರಿ ಬೀಜಗಳು

ಕಾಮಕಸ್ತೂರಿ ಬೀಜಗಳು

ಸಿಕ್ಕಾಪಟ್ಟೆ ತಿಂದು ತಮ್ಮ ಹೊಟ್ಟೇನಾ ತುಂಬಿಸಿಕೊಳ್ಳೋಕೆ ಇಷ್ಟಪಡದವರೂ ಇದ್ದಾರೆ! ಅದರ ಬದಲಿಗೆ ಇಂತಹವರು ತುಂಬಾ ಲಘುವಾದ ಆದರೂ ಚೈತನ್ಯವನ್ನ ಕೊಡಬಲ್ಲದಂತಹದ್ದೇನನ್ನಾದರೂ ತಿನ್ನಬಯಸುತ್ತಾರೆ. ನೀವು ಇದೇ ಸಾಲಿಗೆ ಸೇರಿದವರಾಗಿದ್ದರೆ, ನಿಮ್ಮ ಆಹಾರಕ್ರಮಕ್ಕೆ ಕಾಮಕಸ್ತೂರಿ ಬೀಜಗಳನ್ನ ಸೇರಿಸಿಕೊಳ್ಳಿರಿ ಹಾಗೂ ನಿಮ್ಮ ಜೀವನವು ಅತ್ಯಂತ ಆರೋಗ್ಯಯುತವಾಗಿ ಬದಲಾವಣೆಗೊಳ್ಳೋದನ್ನ ನೀವೇ ಸ್ವತ: ಕಂಡುಕೊಳ್ಳಿರಿ. ಪ್ರೋಟೀನ್, ನಾರಿನಂಶ, ಮ್ಯಾಂಗನೀಸ್, ರಂಜಕ, ಹಾಗೂ ಕ್ಯಾಲ್ಸಿಯಂ ನಂತಹ ಸಕಲ ಸದ್ಗುಣಗಳಿಂದ ತುಂಬಿಕೊಂಡಿರೋ ಅತ್ಯದ್ಭುತ ಆಹಾರವಸ್ತುವೇ ಈ ಕಾಮಕಸ್ತೂರಿ ಬೀಜ. ಆರೋಗ್ಯ ವರದಿಗಳ ಪ್ರಕಾರ, ಕ್ರೀಡಾಪಟುಗಳ ನಿರ್ವಹಣೆಯ ಸುಧಾರಣೆಗೆ ಕಾಮಕಸ್ತೂರಿ ಬೀಜವು ಅತ್ಯಂತ ವಿಸ್ಮಯಕರ ಆಹಾರವಸ್ತುವೆಂದು ಸಾಬೀತುಗೊಂಡಿದೆ.

ನವಣೆ ಅನ್ನ

ನವಣೆ ಅನ್ನ

ಬೆವರು ಕಿತ್ತುಬರೋ ಹಾಗೆ ವ್ಯಾಯಾಮವನ್ನ ಮಾಡಿದ ಮೇಲೆ, ಮತ್ತೆ ನಿಮ್ಮಲ್ಲಿ ನವಚೈತನ್ಯವನ್ನ ತುಂಬಬಲ್ಲ ಯಾವುದಾದರೂ ಆಹಾರವಸ್ತುವನ್ನ ನೀವು ಎದುರು ನೋಡುತ್ತಿದ್ದಲ್ಲಿ, ನವಣೆ ಅನ್ನದೊಂದಿಗೆ ನಿಮ್ಮ ಹುಡುಕಾಟ ಕೊನೆಗೊಳ್ಳುತ್ತದೆ. ಹೌದು ನವಣೆಯು ಗ್ಲುಟೆನ್ ನಿಂದ ಮುಕ್ತವಾಗಿದ್ದು, ಇದು ಪ್ರೋಟೀನ್ ನ ಅತ್ಯುತ್ತಮ ಆಗರ. ಮುಂಜಾನೆ ವ್ಯಾಯಾಮ ಮಾಡುವವರು ನವಣೆ ಅನ್ನವನ್ನೇ ಉಪಾಹಾರದ ರೂಪದಲ್ಲಿ ಸೇವಿಸಬಹುದು. ಉಪಾಹಾರದ ರೂಪದಲ್ಲಿ ನವಣೆ ಅನ್ನವನ್ನ ತಿನ್ನೋದ್ರಿಂದ ದೀರ್ಘಕಾಲದವರೆಗೆ ನಿಮ್ಮ ಹೊಟ್ಟೆ ತುಂಬಿದಂತೆ ಇರುವುದಷ್ಟೇ ಅಲ್ಲ, ಜೊತೆಗೆ ನಿಮ್ಮ ಶರೀರವು ಅತ್ಯಂತ ಲಘುವಾಗಿಯೂ ಚುರುಕಾಗಿಯೂ ಇರುವಂತೆ ನಿಮಗನಿಸುತ್ತದೆ. ರಕ್ತದ ಸಕ್ಕರೆಯ ಅಂಶಗಳು ನಿಮ್ಮನ್ನು ಕಾಡುತ್ತಿದ್ದರೆ, ನವಣೆ ಅನ್ನವು ಬಹಳ ಒಳ್ಳೆಯದು. ಏಕೆಂದರೆ, ಅದು ರಕ್ತದಲ್ಲಿನ ಸಕ್ಕರೆಯ ಪರಿಮಾಣವನ್ನ ಸ್ಥಿರಗೊಳಿಸಬಲ್ಲದು ಹಾಗೂ ಆ ಮೂಲಕ ನಿಮ್ಮ ಆರೋಗ್ಯಯುತರನ್ನಾಗಿ ಹಾಗೂ ಸದೃಢರನ್ನಾಗಿ ಇರಿಸಬಲ್ಲದು.

ಶುಂಠಿ

ಶುಂಠಿ

ಚಳಿಗಾಲದಲ್ಲಂತೂ ಶುಂಠಿಯ ಸೇವನೆ ಅತ್ಯಗತ್ಯ. ವಿವಿಧ ಆಹಾರಪದಾರ್ಥಗಳಿಗೆ ನೀವು ಈ ಅತ್ಯುತ್ತಮ ಆಹಾರವಸ್ತುವನ್ನ ಸೇರಿಸಿಕೊಳ್ಳಲೇಬೇಕು ಹಾಗೂ ಆ ಮೂಲಕ ಅದು ಕೊಡಮಾಡುವ ವಿಸ್ಮಯಕರ ಆರೋಗ್ಯ ಲಾಭಗಳನ್ನ ಖಂಡಿತಾ ನಿಮ್ಮದಾಗಿಸಿಕೊಳ್ಳಲೇಬೇಕು. ಬೆವರು ಕಿತ್ತು ಬರೋ ರೀತಿಯಲ್ಲಿ ಕಠಿಣ ವ್ಯಾಯಾಮಗಳನ್ನ ಮಾಡಿದ ಮೇಲೆ ಕೀಲು ಮತ್ತು ಮಾಂಸಖಂಡಗಳ ನೋವನ್ನ ನಿವಾರಿಸಿಕೊಳ್ಳಲು ಶುಂಠಿಯನ್ನ ಸೇವನೆ ಬಹಳ ಮುಖ್ಯ. ಚಹಾ ಅಥವಾ ಉಗುರು ಬೆಚ್ಚಗಿನ ನೀರಿನೊಂದಿಗೆ ಅಥವಾ ಸೂಪಿನೊಂದಿಗೇ ಆಗಲೀ ಒಂದು ಇಂಚಿನಷ್ಟು ಶುಂಠಿಯನ್ನ ಸೇರಿಸಿ ಹಾಗೂ ಆ ಮೂಲಕ ದಿನವಿಡೀ ಉಲ್ಲಾಸ ಹಾಗೂ ತಾಜಾತನದ ಅನುಭವ ಪಡೆದುಕೊಳ್ಳಿರಿ.

English summary

Foods To Eat After Finishing Your Workouts In Winter

Here are foods to eat after finishing your workouts in winter, have a look.
Story first published: Thursday, December 24, 2020, 14:15 [IST]
X
Desktop Bottom Promotion