For Quick Alerts
ALLOW NOTIFICATIONS  
For Daily Alerts

ಹಾಲಿನ ಜೊತೆ ಈ ಆಹಾರಗಳನ್ನು ಸೇವಿಸಲೇಬಾರದು

|

ನಿಮ್ಮ ಆರೋಗ್ಯ ನೀವು ತಿನ್ನುವ ಆಹಾರಶೈಲಿಯಂತೆ ಇರುತ್ತದೆ ಎಂಬ ಮಾತಿದೆ. ನೀವು ಆರೋಗ್ಯವಾಗಿದ್ದನ್ನು ತಿಂದರೆ ಆರೋಗ್ಯ ಹೆಚ್ಚುವುದು, ಅನಾರೋಗ್ಯಕರ ಆಹಾರ ತಿಂದರೆ ಕಾಯಿಲೆಗಳು ಒಂದೊಂದೇ ಶುರುವಾಗುವುದು.

Food Combinations You Must Avoid With Milk

ಇನ್ನು ಆರೋಗ್ಯಕರ ಆಹಾರಗಳನ್ನು ಕೂಡ ತಿನ್ನಲು ವಿಧಾನವಿದೆ. ಉದಾಹರಣೆಗೆ ಹಾಲು ಮತ್ತು ಮೊಸರು ಎರಡೂ ಆರೋಗ್ಯಕರ ಆಹಾರ ಆದರೆ ಜೊತೆಗೆ ಸೇವಿಸುವಂತಿಲ್ಲ. ಅದೇ ಹಣ್ಣುಗಳು ಆರೋಗ್ಯಕ್ಕೆ ಒಳ್ಳೆಯದು, ಆದರೆ ವಿಟಮಿನ್ ಸಿ ಇರುವ ಹಣ್ಣುಗಳನ್ನು ಹಾಲಿನ ಜೊತೆ ಸೇವಿಸುವುದು ಒಳ್ಳೆಯ ಆಯ್ಕೆ ಅಲ್ಲ. ಇಲ್ಲಿ ನಾವು ಹಾಲಿನ ಜೊತೆ ಯಾವ ಕಾಂಬಿನೇಷನ್ ಒಳ್ಳೆಯದಲ್ಲ ಎಂದು ಹೇಳಿದ್ದೇವೆ.

ಹಾಲು ಆರೋಗ್ಯಕ್ಕೆ ತುಂಬಾ ಒಳ್ಳೆಯದು, ದಿನಕ್ಕೆ ಒಂದು ಅಥವಾ ಎರಡು ಲೋಟ ಹಾಲು ಕುಡಿಯುವುದರಿಂದ ನಮ್ಮ ದೇಹಕ್ಕೆ ಪ್ರಯೋಜನಗಳು ದೊರೆಯುತ್ತವೆ. ಮಕ್ಕಳಿಗೆ ದಿನದಲ್ಲಿ ಎರಡು ಲೋಟ ಹಾಲು ಕೊಡುವುದರಿಂದ ಅವರ ದೇಹಕ್ಕೆ ಅವಶ್ಯಕವಾದ ಪ್ರೊಟೀನ್ ಹಾಗೂ ಕ್ಯಾಲ್ಸಿಯಂ ದೊರೆಯುತ್ತದೆ.

ಇನ್ನು ವಯಸ್ಸಾದಂತೆ ಕ್ಯಾಲ್ಸಿಯಂ ಕೊರತೆ ಉಂಟಾಗುತ್ತದೆ, ಇದರಿಂದ ಮೂಳೆ ಸವೆಯುವುದು, ಕೈ, ಕಾಲುಗಳಲ್ಲಿ ನೋವು ಮುಂತಾದ ಸಮಸ್ಯೆ ಕಂಡು ಬರುವುದು. ಆದ್ದರಿಂದ ವಯಸ್ಸು 50 ದಾಟಿದ ಬಳಿಕ ಕೂಡ ದಿನದಲ್ಲಿ ಎರಡು ಲೋಟ ಹಾಲು ತೆಗೆದುಕೊಳ್ಳುವುದು ಒಳ್ಳೆಯದು. ಆದರೆ ಹಾಲನ್ನು ತೆಗೆದುಕೊಳ್ಳುವಾಗ ಕೆಲವೊಂದು ಆಹಾರಗಳನ್ನು ಜೊತೆಗೆ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಇಲ್ಲಿ ಯಾವ ಆಹಾರಗಳನ್ನು ಹಾಲಿನ ಜೊತೆ ತೆಗೆದುಕೊಳ್ಳಬಾರದು ಎಂಬ ಮಾಹಿತಿ ನೀಡಿದ್ದೇವೆ ನೋಡಿ:

1. ಹಾಲು ಮತ್ತು ಮೊಸರು ಒಟ್ಟಿಗೆ ತೆಗೆದುಕೊಳ್ಳಬೇಡಿ

1. ಹಾಲು ಮತ್ತು ಮೊಸರು ಒಟ್ಟಿಗೆ ತೆಗೆದುಕೊಳ್ಳಬೇಡಿ

ಹಾಲಿನಿಂದಲೇ ಮೊಸರು ಮಾಡುವುದಾದರೂ ಹಾಲು ಹಾಗೂ ಮೊಸರನ್ನು ಜೊತೆಗೆ ತೆಗೆದುಕೊಳ್ಳಬೇಡಿ. ಹಾಲು ಮೊಸರು ಜೊತೆಗೆ ಸೇವಿಸಿದರೆ ಹೊಟ್ಟೆ ನೋವು, ಅಸಿಡಿಟಿ, ವಾಂತಿ ಮುಂತಾದ ಸಮಸ್ಯೆ ಕಂಡು ಬರಬಹುದು. ಆದ್ದರಿಂದ ಹಾಲು ಸೇವಿಸಿ ಕನಿಷ್ಠ ಎರಡು ಗಂಟೆಗಳಾದ ಬಳಿಕ ಮೊಸರನ್ನು ಸೇವಿಸಿ.

ಆಯುರ್ವೇದದ ತಜ್ಞರು ವಿವರಿಸಿರುವ ಪ್ರಕಾರ, ಮೊಸರು ಹುಳಿ, ಭಾರ ಮತ್ತು ದೇಹದಲ್ಲಿ ಇರುವಂತಹ ಗ್ರಂಥಿಗಳಲ್ಲಿ ಸ್ರವಿಸುವಿಕೆಯನ್ನು ಅದು ಹೆಚ್ಚು ಮಾಡುವುದು. ಮೊಸರಿನಲ್ಲಿ ಇರುವಂತಹ ಈ ಗುಣಗಳು ಹಾಲಿನಲ್ಲಿ ಇರುವಂತಹ ಗುಣಗಳಿಗೆ ತುಂಬಾ ತದ್ವಿರುದ್ಧ ಆಗಿರುವುದು. ಇದರಿಂದಾಗಿ ಎರಡನ್ನು ಜತೆಯಾಗಿ ಸೇವನೆ ಮಾಡಬಾರದು ಎಂದು ಆಯುರ್ವೇದವು ಹೇಳುತ್ತದೆ. ಹುದುಗು ಬರುವಂತಹ ಯಾವುದೇ ಆಹಾರವನ್ನು ಹಾಲಿನೊಂದಿಗೆ ಸೇವನೆ ಮಾಡಬಾರದು ಎಂದು ಅವರು ತಿಳಿಸಿದ್ದಾರೆ. ಯಾಕೆಂದರೆ ಇದರಿಂದ ಇದು ದೇಹದಲ್ಲಿ ಕೋಶಗಳನ್ನು ಬ್ಲಾಕ್ ಮಾಡುವ ಮೂಲಕವಾಗಿ ಸೋಂಕು, ಹೊಟ್ಟೆಯ ಸಮಸ್ಯೆ ಮತ್ತು ಅನಾರೋಗ್ಯಕ್ಕೆ ಕಾರಣವಾಗಬಹುದು.

2. ಹಾಲಿನ ಜೊತೆ ಮತ್ತೊಂದು ಪ್ರೊಟೀನ್ ಆಹಾರ ಬೆರೆಸಿ ಸೇವಿಸಬೇಡಿ

2. ಹಾಲಿನ ಜೊತೆ ಮತ್ತೊಂದು ಪ್ರೊಟೀನ್ ಆಹಾರ ಬೆರೆಸಿ ಸೇವಿಸಬೇಡಿ

ನಾವೆಲ್ಲಾ ಸಾಮಾನ್ಯವಾಗಿ ಹಾಲಿನ ಜೊತೆ ಇತರ ಪ್ರೊಟೀನ್ ಪುಡಿ ಬೆರೆಸಿ ಕುಡಿಯುವ ಅಭ್ಯಾಸ ರೂಢಿಸಿಕೊಂಡಿರುತ್ತೇವೆ. ಆದರೆ ನ್ಯೂಟ್ರಿಷಿಯನ್ ತಜ್ಞರು ಹಾಲಿನ ಜೊತೆ ಪ್ರೊಟೀನ್ ಪುಡಿ ಬೆರೆಸಿ ಕುಡಿಯುವುದು ಉತ್ತಮ ಆಯ್ಕೆ ಅಲ್ಲ ಎನ್ನುತ್ತಾರೆ.

ಆದರೆ ಯಾರು ಮೈ ತೂಕ ಹೆಚ್ಚಿಸಿಕೊಳ್ಳಬೇಕೆಂದು ಬಯಸುತ್ತಾರೋ ಅವರು ಹಾಲಿನ ಜೊತೆ ಪ್ರೊಟೀನ್ ಪುಡಿ ಬೆರೆಸಿ ಕುಡಿಯುವುದು ಒಳ್ಳೆಯದು.

ಅಜೀರ್ಣ ಸಮಸ್ಯೆಯೂ ಕಾಡಬಹುದು

ಕೆಲವರಿಗೆ ಹಾಲಿನ ಜೊತೆ ಪ್ರೊಟೀನ್ ಪುಡಿ ಬೆರೆಸಿ ಕುಡಿದರೆ ಅಜೀರ್ಣ ಸಮಸ್ಯೆ ಕಾಡಬಹುದು, ಅಂಥವರು ಪ್ರೊಟೀನ್ ಪುಡಿಯನ್ನು ನೀರಿನಲ್ಲಿ ಕಲೆಸಿ ಕುಡಿಯಿರಿ, ಹಾಲು ಹಾಗೂ ಪ್ರೊಟೀನ್‌ ಆಹಾರ ತೆಗೆದುಕೊಳ್ಳುವಾಗ ಕನಿಷ್ಠ ಎರಡು ಗಂಟೆ ಅಂತರವಿರಲಿ.

3. ಮೀನು ತಿಂದ ಮೇಲೆ ಹಾಲು ಕುಡಿಯಬೇಡಿ

3. ಮೀನು ತಿಂದ ಮೇಲೆ ಹಾಲು ಕುಡಿಯಬೇಡಿ

ಮೀನು ತಿಂದ ಮೇಲೆ ಹಾಲು ಕುಡಿಯದೇ ಇದ್ದರೆ ಒಳ್ಳೆಯದು. ಕುಡಿಯುವುದಾದರೂ ತುಂಬಾ ಹೊತ್ತು ಕಳೆದ ಮೇಲೆ ಕುಡಿಯಿರಿ, ಇಲ್ಲದಿದ್ದರೆ ಅಜೀರ್ಣ ಸಮಸ್ಯೆ ಉಂಟಾಗಿ ವಾಂತೊ, ಬೇಧಿ ಮುಂತಾದ ಸಮಸ್ಯೆ ಉಂಟಾಗಬಹುದು. ಮೀನು ಮತ್ತು ಮೊಸರು ಸೇವಿಸಬಹುದು.

4. ಹಾಲು ಕುಡಿದ ಬಳಿಕ ಸಿಟ್ರಸ್ ಹಣ್ಣುಗಳನ್ನು ಸೇವಿಸಬೇಡಿ

4. ಹಾಲು ಕುಡಿದ ಬಳಿಕ ಸಿಟ್ರಸ್ ಹಣ್ಣುಗಳನ್ನು ಸೇವಿಸಬೇಡಿ

ಹಾಲು ಕುಡಿದ ಸಿಟ್ರಸ್‌ ಹಣ್ಣುಗಳನ್ನು ತಿನ್ನಬೇಡಿ. ಹಾಲು ತಿಂದ ತಕ್ಷಣ ಸಿಟ್ರಸ್ ಹಣ್ಣುಗಳಾದ ಕಿತ್ತಳೆ, ನಿಂಬೆ ಪಾನಕ ಮುಂತಾದವುಗಳನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿ ಹಾಲು ಒಡೆದು ಹುಳಿಯಾಗಿ ಅಸಿಡಿಟಿ ಸಮಸ್ಯೆ ಉಂಟಾಗುವುದು.

ಆಯುರ್ವೇದ ಕೂಡ ಹಾಲು ಹಾಗೂ ಹಣ್ಣುಗಳನ್ನು ಪ್ರತ್ಯೇಕವಾಗಿ ಸೇವಿಸಲು ಸಲಹೆ ನೀಡುತ್ತದೆ. ಆದರೆ ಕೆಲವೊಂದು ಸಿಹಿ ಹಣ್ಣುಗಳಾದ ಮಾವಿನಹಣ್ಣು, ಬೆನ್ಣೆಹಣ್ಣು, ಅಂಜೂರ, ಖರ್ಜೂರ ಈ ರೀತಿಯ ಹಣ್ಣುಗಳನ್ನು ಹಾಲಿನ ಜೊತೆ ಸೇವಿಸಬಹುದು.

ಇನ್ನು ಹಾಲು ಜೊತೆಗೆ ಅದಕ್ಕೆ ಹೊಂದದ ಆಹಾರ ವಸ್ತುಗಳನ್ನು ಸೇವಿಸುವುದರಿಂದ ಶೀತ, ಕೆಮ್ಮು, ತುರಿಕೆ, ಅಲರ್ಜಿ ಮುಂತಾದ ಸಮಸ್ಯೆ ಕೂಡ ಉಂಟಾಗಬಹುದು.

ಆದ್ದರಿಂದ ಹಾಲಿನ ಜೊತೆ ಇತರ ಪ್ರೊಟೀನ್ ಹಾಗೂ ಹುಳಿ , ಮೀನಿನ ಆಹಾರವನ್ನು ಸೇವಿಸಬೇಡಿ.

Read more about: ಹಾಲು ಆಹಾರ milk foods
English summary

Food Combinations You Must Avoid With Milk

Your health condition depend on what you eat, If you eat helthy you will be healthy. Here we have are telling what are the foods combination you should avoid with milk, have a look.
X
Desktop Bottom Promotion