For Quick Alerts
ALLOW NOTIFICATIONS  
For Daily Alerts

ದೇಹದೊಳಗಿನ ಕಶ್ಮಲ ಹೊರಹಾಕಿ ಆರೋಗ್ಯ, ಸೌಂದರ್ಯ ವೃದ್ಧಿಸುವ 4 ಪಾನೀಯಗಳಿವು

|

ನಾವು ನಮ್ಮ ನಾಲಗೆಗೆ ತುಂಬಾ ರುಚಿ ಅನಿಸುವ ಆಹಾರವನ್ನು ತಿನ್ನುತ್ತೇವೆ, ಆದರೆ ಅದರಿಂದ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಂದು ಚಿಂತಿಸುವುದು ಕಡಿಮೆ. ಅಷ್ಟು ಮಾತ್ರವಲ್ಲ ನಾವು ಆರೋಗ್ಯಕರವೆಂದು ತಿನ್ನುವ ಆಹಾರವೂ ಶೇ. 100ರಷ್ಟು ಆರೋಗ್ಯಕರ ಎಂದು ಹೇಳಲು ಸಾಧ್ಯವಿಲ್ಲ. ಹಣ್ಣು-ತರಕಾರಿ, ಸೊಪ್ಪು ಇವುಗಳಿಗೆಲ್ಲಾ ಕೀಟನಾಶಕ ಸಿಂಪಡಿಸುವುದರಿಂದ ಆ ಆಹಾರಗಳನ್ನು ಸೇವಿಸುವುದರಿಂದ ವಿಷ ದೇಹವನ್ನು ಸೇರುವುದು.

How to make detox drinks

ನಾವು ಹೊರಗಿನಿಂದ ದೇಹವನ್ನು ಶುದ್ಧಿ ಮಾಡುತ್ತೇವೆ, ಆದರೆ ದೇಹದ ಒಳಗಿನ ಕಶ್ಮಲಗಳನ್ನು ಹೋಗಲಾಡಿಸುವುದರ ಬಗ್ಗೆ ಚಿಂತಿಸುವುದು ಕಡಿಮೆ. ದೇಹದೊಳಗಿನ ಕಶ್ಮಲವನ್ನು ಹೊರ ಹಾಕುವುದರಿಂದ ನಮ್ಮ ಆರೋಗ್ಯ ಹಾಗೂ ಸೌಂದರ್ಯ ಎರಡೂ ವೃದ್ಧಿಯಾಗುವುದು.

ಅಲ್ಲದೆ ಕ್ಯಾನ್ಸರ್‌ನಂಥ ಮಾರಕ ರೋಗವನ್ನು ತಡೆಗಟ್ಟಬೇಕೆಂದರೆ ದೇಹದಲ್ಲಿರುವ ಕಶ್ಮಲವನ್ನು ಹೊರಹಾಕಬೇಕು. ನಾವಿಲ್ಲಿ ದೇಹದೊಳಗಿರುವ ಕಶ್ಮಲವನ್ನು ಹೊರ ಹಾಕುವ 3 ಪಾನೀಯಗಳು, ಅವುಗಳನ್ನು ತಯಾರಿಸುವುದು ಹೇಗೆ ಎಂದು ಹೇಳಿದ್ದೇವೆ ನೋಡಿ:

* ಪಾನೀಯ 1: ಹುರಿಗಡಲೆಯ ಹಿಟ್ಟು

* ಪಾನೀಯ 1: ಹುರಿಗಡಲೆಯ ಹಿಟ್ಟು

ಹುರಿಗಡಲೆಯನ್ನು ಬಡವರ ಪ್ರೋಟಿನ್‌ ಎಂದೇ ಕರೆಯಲಾಗುವುದು. ಇದನ್ನು ತಿನ್ನುವುದರಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ. ಇದರಲ್ಲಿ ಕಬ್ಬಿಣದಂಶ, ಮ್ಯಾಂಗನೀಸ್, ಮೆಗ್ನಿಷ್ಯಿಯಂ ಕಡಿಮೆ ಕಡಿಮೆ ಸೋಡಿಯಂ ಇದ್ದು ದೇಹದಲ್ಲಿ ಶಕ್ತಿಯನ್ನು ವೃದ್ಧಿಸುವುದು. ಇದು ಜೀರ್ಣಕ್ರಿಯೆಗೆ ತುಂಬಾನೇ ಸಹಕಾರಿ.

ಬೇಕಾಗುವ ಸಾಮಗ್ರಿ

100ಗ್ರಾಂ ಹುರಿಗಡಲೆ

1/4 ಚಮಚ ಜೀರಿಗೆ ಪುಡಿ

1 ಹಸಿ ಮೆಣಸಿನಕಾಯಿ

1/4 ಚಮಚ ಉಪ್ಪು

1/4ಲೀ ನೀರು

ಮಾಡುವುದು ಹೇಗೆ?

* ಹುರಿಗಡಲೆಯ ಹಿಟ್ಟಿಗೆ ಸ್ವಲ್ಪ ನಿರು ಹಾಕಿ ಕಲೆಸಿ, ಅದು ಗಂಟುಕಟ್ಟಬಾರದು, ಪೇಸ್ಟ್ ರೀತಿ ಆಗಲಿ.

* ಈಗ ನೀರು ಹಾಕಿ , ಉಪ್ಪು, ಜೀರಿಗೆ ಪುಡಿ, ಹಸಿ ಮೆಣಸಿನಕಾಯಿ ಕತ್ತರಿಸಿ ಹಾಕಿ ಮಿಕ್ಸ್ ಮಾಡಿ ಕುಡಿಯಿರಿ.

ಡಿಟಾಕ್ಸ್ ಡ್ರಿಂಕ್‌: ಸೇಬು, ಬೀಟ್‌ರೂಟ್‌, ಕ್ಯಾರೆಟ್

ಡಿಟಾಕ್ಸ್ ಡ್ರಿಂಕ್‌: ಸೇಬು, ಬೀಟ್‌ರೂಟ್‌, ಕ್ಯಾರೆಟ್

ಈ ಮೂರು ಅತ್ಯಂತ ಆರೋಗ್ಯಕರವಾದ ಆಹಾರವಸ್ತುವಾಗಿದೆ. ಈ ಮೂರನ್ನು ಮಿಕ್ಸ್ ಮಾಡಿ ಜ್ಯೂಸ್‌ ಮಾಡಿ ಕುಡಿದರೆ ದೇಹದೊಳಗಿನ ಕಶ್ಮ; ಹೊರಹಾಕುತ್ತದೆ, ಅಲ್ಲದೆ ತ್ವಚೆ ಕಾಂತಿಯೂ ಹೆಚ್ಚುವುದು.

ನೀವು ಈ ಜ್ಯೂಸ್‌ ಮಾಡುವಾಗ ಸ್ವಲ್ಪ ಶುಂಠಿ ಬೇಕಾದರೆ ಸೇರಿಸಬಹುದು.

ಸೂಚನೆ: ಜ್ಯೂಸ್‌ ಮಾಡುವಾಗ ಸಕ್ಕರೆ ಬಳಸಲೇಬೇಡಿ, ಬೇಕಿದ್ದರೆ ಸ್ವಲ್ಪ ಜೇನು ಹಾಕಬಹುದು.

ಡಿಟಾಕ್ಸ್ ಡ್ರಿಂಕ್ 3: ಪಾನಕ

ಡಿಟಾಕ್ಸ್ ಡ್ರಿಂಕ್ 3: ಪಾನಕ

ಬೆಲ್ಲ, ಶುಂಠಿ, ನಿಂಬೆರಸ, ಜಾಯಿಕಾಯಿ ಹಾಕಿ ಮಾಡುವ ಪಾನಕ ಬಾಯಿಗೆ ರುಚಿ ಮಾತ್ರವಲ್ಲ, ದೇಹಕ್ಕೂ ತುಂಬಾ ಒಳ್ಳೆಯದು.

ಈ ಪಾನಕವನ್ನು ದೇಹಲ್ಲಿ ನೀರಿನಂಶ ಕಾಪಾಡಲು ಬಳಸಲಾಗುವುದು. ಈ ಪಾನಕದಲ್ಲಿ ಎಲೆಕ್ಟ್ರೋಲೈಟ್ಸ್ ಮತ್ತು ಕಾರ್ಬೋಹೈಡ್ರೇಟ್ಸ್ ಇರುವುದರಿಂದ ಇದು ORSನಷ್ಟೇ ಇದು ಬಳಲಿದ ದೇಹಕ್ಕೆ ಚೇತರಿಕೆ ನೀಡುತ್ತದೆ.

ಪಾನಕ ಮಾಡಲು ಬೇಕಾಗುವ ಸಾಮಗ್ರಿ

75ಗ್ರಾಂ ಬೆಲ್ಲ

150ml ನೀರು

1/2 ಚಮಚ ಏಲಕ್ಕಿ ಪುಡಿ

3 ನಿಂಬೆರಸ

ಚಿಟಿಕೆಯಷ್ಟು ಉಪ್ಪು

ಸ್ವಲ್ಪ ಶುಂಠಿ ಪುಡಿ

1 ಚಮಚ ಜಾಯಿಕಾಯಿ ಪುಡಿ

ತಯಾರಿಸುವುದು ಹೇಗೆ?

* ಬೆಲ್ಲವನ್ನು ನೀರಿನಲ್ಲಿ ಕರಗಿಸಿ.

* ಈಗ ಆ ನೀರಿಗೆ ನಿಂಬೆರಸ ಸೇರಿಸಿ.

* ಅದಕ್ಕೆ ಜಾಯಿಕಾಯಿ ಪುಡಿ ಹಾಕಿ.

ಡಿಟಾಕ್ಸ್ ಡ್ರಿಂಕ್‌ 4: ಸೌತೆಕಾಯಿ ಡ್ರಿಂಕ್ಸ್

ಡಿಟಾಕ್ಸ್ ಡ್ರಿಂಕ್‌ 4: ಸೌತೆಕಾಯಿ ಡ್ರಿಂಕ್ಸ್

ಸೌತೆಕಾಯಿ ಪಾನೀಯ ಕೂಡ ದೇಹವನ್ನು ಶುದ್ಧೀಕರಿಸುವುದು ಮಾತ್ರವಲ್ಲ ಮೈ ತೂಕ ಕಡಿಮೆ ಮಾಡಲು ತುಂಬಾ ಸಹಕಾರಿ. ಈ ಡಿಟಾಕ್ಸ್ ಪಾನೀಯ ದೇಹಕ್ಕೆ ಚೇತರಿಕೆ ತುಂಬುವುದು.

ಬೇಕಾಗುವ ಸಾಮಗ್ರಿ

ಸೌತೆಕಾಯಿ

ಅರ್ಧ ನಿಂಬೆ ಹಣ್ಣು

1 ಲೀಟರ್ ನೀರು

2 ಪುದೀನಾ ಎಲೆ

ಮಾಡುವ ವಿಧಾನ

ಒಂದು ಅಥವಾ ಎರಡು ಲೀಟರ್‌ ನೀರಿಗೆ ಒಂದು ಸೌತೆಕಾಯಿಯನ್ನು ಚಿಕ್ಕದಾಗಿ ಕತ್ತರಿಸಿ ಹಾಕಿ, ನಿಂಬೆ ತುಂಡು ಹಾಕಿ, ಪದೀನಾ ಹಾಕಿ ಆ ನೀರನ್ನು ಕುಡಿಯಿರಿ.

ಇದು ದೇಹದಲ್ಲಿರುವ ಕಶ್ಮಲವನ್ನು ಹೊರಹಾಕಲು ತುಂಬಾನೇ ಸಹಕಾರಿ. ಈ ಡಿಟಾಕ್ಸ್ ಪಾನೀಯ ಮೈ ಸೌಂದರ್ಯ ಹೆಚ್ಚಿಸುವುದು.

English summary

Detox Drinks To Flush Out Toxins From Your Body

Here are detox drinks to flush out toxin from your body, have a look,
X
Desktop Bottom Promotion