For Quick Alerts
ALLOW NOTIFICATIONS  
For Daily Alerts

ರನ್ನಿಂಗ್ vs ಸೈಕ್ಲಿಂಗ್:ಬೇಗ ತೂಕ ಕಡಿಮೆಯಾಗಲು ಯಾವುದು ಒಳ್ಳೆಯದು?

|

ತೂಕ ಇಳಿಸಿಕೊಳ್ಳಲು ಪ್ರತಿದಿನ ನಾನಾ ಕಸರತ್ತುಗಳನ್ನು ಮಾಡುತ್ತಲೇ ಇರುತ್ತೇವೆ. ಅದರಲ್ಲಿ ಓಟ ಹಾಗೂ ಸೈಕ್ಲಿಂಗ್ ಕೂಡ ಸೇರಿದ್ದು, ಪ್ರಪಂಚದಾದ್ಯಂತ ಹೆಚ್ಚಿನ ಜನರು ಆನಂದಿಸುವ ವ್ಯಾಯಾಮಗಳಾಗಿವೆ.

Cycling vs. Running

ಆದರೆ, ವೇಗದ ತೂಕ ನಷ್ಟಕ್ಕೆ ಇವುಗಳಲ್ಲಿ ಯಾವುದು ಉತ್ತಮ ಎಂಬ ಗೊಂದಲ ಹಲವರಿಗಿದೆ. ಈ ಗೊಂದಲ ನಿವಾರಣೆಗೆ ಸಹಕಾರಿಯಾಗಲಿದೆ ಈ ಲೇಖನ. ಇಲ್ಲಿ ನಾವು ತೂಕ ಕಳೆದುಕೊಳ್ಳಲು ಓಟ ಹಾಗೂ ಸೈಕ್ಲಿಂಗ್‌ನಲ್ಲಿ ಯಾವುದು ಉತ್ತಮ ಎಂಬುದನ್ನು ವಿವರಿಸಿದ್ದೇವೆ.

ಓಟ ಹಾಗೂ ಸೈಕ್ಲಿಂಗ್‌ನಲ್ಲಿ ತೂಕ ಇಳಿಸಿಕೊಳ್ಳಲು ಯಾವುದು ಉತ್ತಮ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಕ್ಯಾಲೋರಿ ಬರ್ನ್:

ಕ್ಯಾಲೋರಿ ಬರ್ನ್:

ವ್ಯಾಯಾಮದಲ್ಲಿ ಸುಡುವ ಕ್ಯಾಲೊರಿಗಳ ಸಂಖ್ಯೆಯು ಅದನ್ನು ಮಾಡುವ ತೀವ್ರತೆ ಮತ್ತು ಸಮಯವನ್ನು ಅವಲಂಬಿಸಿರುತ್ತದೆ. ಓಟವು ಸೈಕ್ಲಿಂಗ್‌ಗಿಂತ ಗಂಟೆಗೆ ಸ್ವಲ್ಪ ಹೆಚ್ಚು ಕ್ಯಾಲೊರಿಗಳನ್ನು ಸುಡುತ್ತದೆ, ಆದ್ದರಿಂದ ನೀವೇನಾದರೂ ವೇಗವಾಗಿ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡಬಹುದು. ಸಾಮಾನ್ಯವಾಗಿ, ಓಟವು ಗಂಟೆಗೆ 566 ರಿಂದ 839 ಕ್ಯಾಲೊರಿಗಳನ್ನು ಸುಡುತ್ತದೆ, ಆದರೆ ತೀವ್ರವಾದ ವೇಗದಲ್ಲಿ ಸೈಕ್ಲಿಂಗ್ ಗಂಟೆಗೆ 498 ರಿಂದ 738 ಕ್ಯಾಲೊರಿಗಳನ್ನು ಸುಡುತ್ತದೆ ಎಂದು ಅಮೇರಿಕನ್ ಕಾಲೇಜ್ ಆಫ್ ಸ್ಪೋರ್ಟ್ಸ್ ಮೆಡಿಸಿನ್ ಅಂದಾಜು ಮಾಡಿದೆ. ನಿಮ್ಮ ವಯಸ್ಸು, ತೂಕ, ಲಿಂಗ ಮತ್ತು ಇತರ ಅಂಶಗಳು ನೀವು ಎಷ್ಟು ಕ್ಯಾಲೊರಿಗಳನ್ನು ಬರ್ನ್ ಮಾಡುತ್ತೀರಿ ಎಂಬುದನ್ನು ನಿರ್ಧರಿಸುತ್ತದೆ. ಆದರೆ, ಕ್ಯಾಲೋರಿ ಸುಡುವಿಕೆ ದೃಷ್ಟಿಕೋನದಲ್ಲಿ ನೋಡುವುದಾದರೆ, ಸೈಕ್ಲಿಂಗ್ ಗಿಂತ ಓಟವೇ ಹೆಚ್ಚು ಪರಿಣಾಮಕಾರಿ.

ಗಾಯದ ಅಪಾಯ:

ಗಾಯದ ಅಪಾಯ:

ನೀವು ಅಧಿಕ ತೂಕ, ಹೃದಯಾಘಾತ, ಮೊಣಕಾಲು ನೋವು ಅಥವಾ ಅಧಿಕ ರಕ್ತದೊತ್ತಡದ ಇತಿಹಾಸವನ್ನು ಹೊಂದಿದ್ದರೆ, ಸೈಕ್ಲಿಂಗ್ ಅನ್ನು ಪ್ರಾರಂಭಿಸಲು ತಜ್ಞರು ಶಿಫಾರಸ್ಸು ಮಾಡುತ್ತಾರೆ. ಓಟವು ಹೆಚ್ಚಿನ ಪ್ರಭಾವದ ವ್ಯಾಯಾಮವಾಗಿರುವುದರಿಂದ, ಇದು ನಿಮ್ಮ ಕೀಲುಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ, ಆದ್ದರಿಂದ ಅತಿಯಾದ ಓಟದಿಂದ ಗಾಯದ ಅಪಾಯವು ಸೈಕ್ಲಿಂಗ್‌ಗಿಂತ ಹೆಚ್ಚಾಗಿರುತ್ತದೆ. ಸುಮಾರು 60% ಓಟಗಾರರು ಕೆಲವು ಹಂತದಲ್ಲಿ ಗಾಯವನ್ನು ಅನುಭವಿಸುತ್ತಾರೆ.

ಅದೇ ರೀತಿ ಸೈಕ್ಲಿಂಗ್‌ನೊಂದಿಗಿನ, ದೊಡ್ಡ ಅಪಾಯವೆಂದರೆ ಕಾರಿಗೆ ಹೊಡೆಯುವುದು ಅಥವಾ ಸೈಕಲ್‌ನಿಂದ ಬೀಳುವುದು. ಆದ್ದರಿಂದ ಹೊಸದಾಗಿ ಕಲಿಯುತ್ತಿದ್ದವರಾಗಿದ್ದರೆ, ಸುರಕ್ಷಿತವಾಗಿ ಸೈಕಲ್ ಓಡಿಸುವುದು ಹೇಗೆ ಎಂಬುದನ್ನು ಕಲಿಯುವುದು ಮುಖ್ಯವಾಗಿದೆ. ನೀವು ಮೊಣಕಾಲು ಅಥವಾ ಬೆನ್ನಿನ ಸಮಸ್ಯೆಗಳು, ಇತರ ಗಾಯಗಳು ಅಥವಾ ಯಾವುದೇ ದೀರ್ಘಕಾಲದ ಆರೋಗ್ಯ ಪರಿಸ್ಥಿತಿಗಳನ್ನು ಹೊಂದಿದ್ದರೆ, ನಿಮ್ಮ ವೈದ್ಯರಿಂದ ಅನುಮತಿ ಪಡೆಯದೇ ಸೈಕ್ಲಿಂಗ್ ಅಥವಾ ಓಟವನ್ನು ತೆಗೆದುಕೊಳ್ಳಲು ಶಿಫಾರಸು ಮಾಡುವುದಿಲ್ಲ.

ವೆಚ್ಚ:

ವೆಚ್ಚ:

ಓಟವನ್ನು ಪ್ರಾರಂಭಿಸಲು, ಜನರಿಗೆ ಒಂದು ಜೋಡಿ ಶೂಗಳನ್ನು ಹೊರತುಪಡಿಸಿ ಯಾವುದೇ ಸಲಕರಣೆಗಳ ಅಗತ್ಯವಿಲ್ಲ, ಇದು ಸೈಕ್ಲಿಂಗ್‌ಗಿಂತ ಅಗ್ಗದ ಆಯ್ಕೆಯಾಗಿದೆ. ದೀರ್ಘಾವಧಿಯ ಓಟಕ್ಕಾಗಿ, ಜನರು ಓಡಲು ಅನುಕೂಲಕರವಾಗಿರುವ ಬಟ್ಟೆಗಳಲ್ಲಿ ಹೂಡಿಕೆ ಮಾಡಲು ಬಯಸಬಹುದು.

ಸೈಕ್ಲಿಂಗ್‌ಗೆ ಹೊಸಬರು ಹೂಡಿಕೆ ಮಾಡುವ ಮೊದಲು ಅದನ್ನು ಪ್ರಯತ್ನಿಸಲು ಮೊದಲು ಬಾಡಿಗೆ ಪಡೆಯಬಹುದು. ಸೆಕೆಂಡ್ ಹ್ಯಾಂಡ್ ಸೈಕಲ್ ಖರೀದಿಸಲು ಆನ್‌ಲೈನ್‌ನಲ್ಲಿ ಸಾಕಷ್ಟು ಆಯ್ಕೆಗಳಿವೆ. ನೀವು ರಸ್ತೆಗಳಲ್ಲಿ ಅಥವಾ ರಾತ್ರಿ ಸೈಕ್ಲಿಂಗ್ ಮಾಡಲು ಯೋಜಿಸಿದರೆ ಸುರಕ್ಷಿತ ಸೈಕ್ಲಿಂಗ್‌ಗಾಗಿ ಹೆಲ್ಮೆಟ್, ಲೈಟ್‌ಗಳು ಮತ್ತು ಪ್ರತಿಫಲಿತ ಗೇರ್‌ಗಳನ್ನು ಸಹ ಖರೀದಿಸಬೇಕಾಗುತ್ತದೆ.

ತೂಕ ಮಾಪಕ ಏನು ಹೇಳುತ್ತದೆ?:

ತೂಕ ಮಾಪಕ ಏನು ಹೇಳುತ್ತದೆ?:

ಓಟ ಅಥವಾ ಸೈಕ್ಲಿಂಗ್ ಮಾಡುವ ಮೂಲಕ ತೂಕವನ್ನು ಕಳೆದುಕೊಳ್ಳುವ ಸಾಮರ್ಥ್ಯವು ಹೇಗೆ ಅಭ್ಯಾಸ ಮಾಡುತ್ತೀರಿ ಮತ್ತು ಅದನ್ನು ಆರೋಗ್ಯಕರ ಆಹಾರ ಮತ್ತು ಅಭ್ಯಾಸಗಳೊಂದಿಗೆ ಹೇಗೆ ಸಂಯೋಜಿಸುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಓಟವು ಸರಾಸರಿಯಾಗಿ ಹೆಚ್ಚು ಕ್ಯಾಲೊರಿಗಳನ್ನು ಬರ್ನ್ ಮಾಡಿ, ಸೈಕ್ಲಿಂಗ್‌ಗಿಂತ ವೇಗವಾಗಿ ತೂಕ ನಷ್ಟವಾಗಲು ಸಹಾಯ ಮಾಡುತ್ತದೆ. ಮತ್ತೊಂದೆಡೆ, ಸೈಕ್ಲಿಂಗ್ ಕೀಲುಗಳಿಗೆ ಮೃದುವಾಗಿರುತ್ತದೆ. ಇದು ನಿಮಗೆ ಹೆಚ್ಚು ಸಮಯ ವ್ಯಾಯಾಮ ಮಾಡಲು ಮತ್ತು ಒಟ್ಟಾರೆ ಹೆಚ್ಚು ಕ್ಯಾಲೊರಿಗಳನ್ನು ಬರ್ನ್ ಮಾಡಲು ಅನುವು ಮಾಡಿಕೊಡುತ್ತದೆ.

2013 ರ ಅಧ್ಯಯನವು ಓಟವು ತೂಕ ನಷ್ಟಕ್ಕೆ ಸಂಬಂಧಿಸಿದೆ ಎಂದು ಕಂಡುಹಿಡಿದಿದೆ. ಅದೇ ರೀತಿ 2019 ರ ಸಂಶೋಧನಾ ವಿಮರ್ಶೆಯು ಒಳಾಂಗಣ ಸೈಕ್ಲಿಂಗ್ ನ್ನು ಆರೋಗ್ಯಕರ ಅಹಾರಾಭ್ಯಾಸಗಳೊಂದಿಗೆ ಸಂಯೋಜಿಸಿದಾಗ ಜನರು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡಲು ಶಿಫಾರಸು ಮಾಡಲಾಗಿದೆ ಎಂದು ಕಂಡುಹಿಡಿದಿದೆ.

ಹೇಗೆ ಆಯ್ಕೆ ಮಾಡುವುದು?:

ಹೇಗೆ ಆಯ್ಕೆ ಮಾಡುವುದು?:

ನೀವು ನಿಜವಾಗಿಯೂ ಆನಂದಿಸುವ ಮತ್ತು ನಿರಂತರವಾಗಿ ಮಾಡಬಹುದಾದ ಯಾವುದನ್ನಾದರೂ ಆಯ್ಕೆ ಮಾಡಬೇಕು. ಎರಡನ್ನೂ ಪ್ರಯತ್ನಿಸಿ, ನಿಮಗೆ ಯಾವುದು ಹೆಚ್ಚು ಸೂಕ್ತವಾಗಿದೆ ಎಂಬುದನ್ನು ನೋಡಲು ಶಿಫಾರಸು ಮಾಡಲಾಗಿದೆ. ಸೈಕ್ಲಿಂಗ್ ಮತ್ತು ಓಟ ಎರಡೂ ಫಿಟ್ ಮತ್ತು ಆರೋಗ್ಯಕರವಾಗಿರಲು ಉತ್ತಮ ಆಯ್ಕೆಯಾಗಿದೆ. ನಿಮ್ಮ ಆರೋಗ್ಯದ ಅಗತ್ಯತೆಗಳು ಮತ್ತು ಜೀವನಶೈಲಿಗೆ ಸೂಕ್ತವಾದ ಚಟುವಟಿಕೆಯನ್ನು ಆರಿಸಿಕೊಳ್ಳಿ ಅಥವಾ ವಿವಿಧ ವ್ಯಾಯಾಮದ ದಿನಚರಿಗಾಗಿ ನೀವು ಎರಡನ್ನೂ ಆಯ್ಕೆ ಮಾಡಿಕೊಳ್ಳಬಹುದು.

English summary

Cycling vs Running: Which One Is Better for Weight Loss in Kannada

Here we talking about Cycling vs Running: Which One Is Better for Weight Loss in Kannada, read on...
Story first published: Saturday, May 21, 2022, 8:58 [IST]
X
Desktop Bottom Promotion