For Quick Alerts
ALLOW NOTIFICATIONS  
For Daily Alerts

ಬೇಸಿಗೆಯಲ್ಲಿ ಆಯಾಸವಿಲ್ಲದೆ ತೂಕ ನಷ್ಟಕ್ಕೆ ಸಹಾಯ ಮಾಡುವುದು ಕಬ್ಬಿನ ಹಾಲು

|

ನಾವು ಎಷ್ಟೇ ವೈಜ್ಞಾನಿಕವಾಗಿ ಮುಂದುವರಿದಿದ್ದರೂ ನಮ್ಮ ಆರೋಗ್ಯ ಬಯಸುವುದು ಪೂರ್ವಿಕರ ಆಹಾರ ಪದ್ಧತಿಯನ್ನು. ತಂತ್ರಜ್ಞಾನ, ಆಧುನಿಕತೆ, ಫ್ಯಾಷನ್‍ಗಳ ನಡುವೆ ಜನರು ಮಾರುಹೋಗಿದ್ದಾರೆ. ಇವುಗಳ ನಡುವೆ ಫಾಸ್ಟ್ ಫುಡ್‍ಗಳ ಸೇವನೆಯು ಒಂದು ಬಗೆಯ ತೋರಿಕೆಯಾಗಿರುವುದು ಸುಳ್ಳಲ್ಲ. ಇಂತಹ ತೋರಿಕೆ ಹಾಗೂ ಆಡಂಬರದಿಂದಲೇ ಜೀವನ ಹಾಗೂ ಆರೋಗ್ಯವು ಹದಗೆಡುತ್ತಿದೆ ಎನ್ನುವುದನ್ನು ಇಂದು ಎಲ್ಲರೂ ತಿಳಿದುಕೊಳ್ಳಲೇ ಬೇಕಾದ ವಿಚಾರ.

ಪ್ರಕೃತಿ ನಾವು ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಲು ಹಾಗೂ ಅನಾರೋಗ್ಯದ ಸ್ಥಿತಿಯಲ್ಲಿ ಇರುವಾಗ ಆರೈಕೆ ಪಡೆಯಲು ಅನುಕೂಲವಾಗುವಂತಹ ಅನೇಕ ಬಗೆಯ ತರಕಾರಿ, ಹಣ್ಣು, ಗಡ್ಡೆ ಸೇರಿದಂತೆ ವಿವಿಧ ಬಗೆಯ ನೈಸರ್ಗಿಕ ಉತ್ಪನ್ನಗಳನ್ನು ಒದಗಿಸಿಕೊಟ್ಟಿದೆ. ಆದರೆ ಅದನ್ನು ನಾವು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುತ್ತಿಲ್ಲ ಅಷ್ಟೇ.

ಇಂದು ಮುಂದುವರಿದ ರಾಷ್ಟ್ರಗಳು ಸಹ ತಮ್ಮ ಪೂರ್ವಜರು ಅನುಸರಿಸುತ್ತಿದ್ದ ಆಹಾರ ಕ್ರಮ ಹಾಗೂ ಚಿಕಿತ್ಸಾ ಪದ್ಧತಿಗಳಿಗೆ ಮರಳುತ್ತಿದ್ದಾರೆ ಎನ್ನುವುದು ಸಹ ಆಶ್ಚರ್ಯಕರ ಸಂಗತಿಯೇ. ಆಯುರ್ವೇದ ಹಾಗೂ ಪುರಾತನ ಕಾಲದ ಅತ್ಯುತ್ತಮ ಚಿಕಿತ್ಸಾ ಪದ್ಧತಿಯಲ್ಲಿ ಭಾರತ ಶ್ರೇಷ್ಠ ಸ್ಥಾನವನ್ನು ಪಡೆದುಕೊಂಡಿದೆ. ಅಂತಹ ದೇಶದಲ್ಲಿಯೇ ಇರುವ ನಾವು ಹಿಂದಿನ ಕಾಲದ ಅತ್ಯುತ್ತಮ ಆರೋಗ್ಯ ಪದ್ಧತಿಯನ್ನು ಅನುಸರಿಸುವುದು ನಮ್ಮ ಜಾಣ್ಮೆ ಎನಿಸಿಕೊಳ್ಳುವುದು.

ಮಾರು ಕಟ್ಟೆಯಲ್ಲೂ ಕೈಗೆಟಕುವ ದರದಲ್ಲಿಯೇ ದೊರೆಯುವ ಕಬ್ಬಿನ ಹಾಲು ವಿವಿಧ ಬಗೆಯ ಆರೋಗ್ಯಕರ ಗುಣವನ್ನು ಪಡೆದುಕೊಂಡಿದೆ. ಇವುಗಳ ಬಳಕೆಯಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ಸಹ ನಿವಾರಿಸಬಹುದು. ಅತ್ಯುತ್ತಮ ನೈಸರ್ಗಿಕ ಪಾನೀಯಗಳಲ್ಲಿ ಸಿಹಿಯಾದ ಕಬ್ಬಿನ ಹಾಲು ಅತ್ಯುತ್ತಮವಾದದ್ದು. ಇದರ ಸೇವನೆಯಿಂದ ದೇಹದಲ್ಲಿ ಶಕ್ತಿ ಹಾಗೂ ಕಬ್ಬಿಣಾಂಶವು ಅಧಿಕವಾಗುವದು. ಕೆಲವು ತಜ್ಞರ ಪ್ರಕಾರ ಈ ಕಬ್ಬಿನ ಹಾಲಿನಿಂದ ದೇಹದ ತೂಕವನ್ನು ಸಹ ಇಳಿಸಬಹುದು ಎಂದು ಹೇಳಲಾಗುತ್ತದೆ. ಪ್ರಸಿದ್ಧ ಪೌಷ್ಟಿಕ ತಜ್ಞರಾದ ರುಜುತಾ ದಿವಾಕರ್ ಸಹ ಕಬ್ಬಿನ ಹಾಲು ದೇಹಕ್ಕೆ ಅತ್ಯುತ್ತಮವಾದದ್ದು ಎಂದು ಅಭಿಪ್ರಾಯಿಸಿದ್ದಾರೆ.

ಕಬ್ಬಿನ ಹಾಲು:

ಕಬ್ಬಿನ ಹಾಲು:

ಸರಳವಾದ ನೈಸರ್ಗಿಕ ಪಾನೀಯವಾದ ಕಬ್ಬಿನ ಹಾಲು ಅತ್ಯುತ್ತಮ ಪೋಷಕಾಂಶಗಳಿಂದ ಕೂಡಿದೆ. ಒಂದು ಗ್ಲಾಸ್ ಕಬ್ಬಿನ ಹಾಲಲ್ಲಿ 111 ಕ್ಯಾಲೋರಿಗಳು ಇರುತ್ತವೆ. ಇದರಲ್ಲಿ 27 ಗ್ರಾಂ. ಅಷ್ಟು ಆರೋಗ್ಯಕರ ಕಾರ್ಬೋಹೈಡ್ರೇಟ್‍ಗಳು, 0.27 ಗ್ರಾಂ ಪ್ರೋಟೀನ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಗಳು ಗಮನಾರ್ಹ ಪ್ರಮಾಣದಲ್ಲಿ ಒಳಗೊಂಡಿರುತ್ತವೆ. ಈ ಒಂದು ಆರೋಗ್ಯಕರ ಪಾನೀಯದಿಂದ ತೂಕವನ್ನು ಇಳಿಸಬಹುದು ಎಂದು ಹೇಳಲಾಗುವುದು.

ಕಬ್ಬಿನ ಹಾಲು ಕುಡಿಯುವಾಗ:

ಕಬ್ಬಿನ ಹಾಲು ಕುಡಿಯುವಾಗ:

ಕಬ್ಬಿನ ಹಾಲನ್ನು ತಾಜಾ ಇರುವಾಗಲೇ ಸೇವಿಸಬೇಕು. ಇದು ಹಾಗೆಯೇ ನೈಸರ್ಗಿಕ ಪರಿಮಳ ಹಾಗೂ ಸ್ವಾದದಲ್ಲಿಯೇ ಸೇವಿಸಬಹುದು. ಇಲ್ಲವೇ, ಸ್ವಲ್ಪ ನಿಂಬೆ ರಸ, ಕಪ್ಪು ಉಪ್ಪು, ಶುಂಠಿ, ಪುದೀನ ಸೇರಿದಂತೆ ಇನ್ನಿತರ ಸ್ವಾದಗಳನ್ನು ಸೇರಿಸಿ ಸಹ ಕುಡಿಯಬಹುದು. ಇದು ಆರೋಗ್ಯಕ್ಕೆ ಯಾವುದೇ ಬಗೆಯ ಹಾನಿಯುಂಟುಮಾಡದು. ವ್ಯಾಯಾಮ ಮಾಡಿದ ನಂತರ, ಬಿಸಿಲ ದಗೆಯಲ್ಲಿ ಹೆಚ್ಚು ಸಮಯ ಕಳೆದಾಗ ಅಥವಾ ಶಾಖದ ಪ್ರದೇಶದಲ್ಲಿ ಹೆಚ್ಚು ಸಮಯ ಕಳೆದಿರುವಾಗ ಇದನ್ನು ಕುಡಿಯಲು ಉತ್ತಮ ಸಮಯ ಎಂದು ಹೇಳಬಹುದು. ಇದು ದೇಹದಲ್ಲಿ ಕಳೆದುಕೊಂಡ ಲವಣಗಳನ್ನು ಪುನಃ ಉತ್ಪಾದಿಸಲು ಸಹಾಯ ಮಾಡುವುದು. ಇದನ್ನು ಮಿತಿ ಮೀರಿಯೂ ಸೇವಿಸಬಾರದು. ದಿನಕ್ಕೆ ಒಂದು ಗ್ಲಾಸ್ ಸೇವಿಸಿದರೆ ಸಾಕು.

ತೂಕನಷ್ಟಕ್ಕೆ ಬಂದಾಗ:

ತೂಕನಷ್ಟಕ್ಕೆ ಬಂದಾಗ:

ಕಬ್ಬಿನ ಹಾಲಿನಲ್ಲಿ ಇರುವ ಸಿಹಿಯು ದೇಹಕ್ಕೆ ಯಾವುದೇ ಹಾನಿಯನ್ನು ಉಂಟುಮಾಡದು. ಇದನ್ನು ನಿರುಪದ್ರವಿ ಎಂದು ಹೇಳಲಾಗುವುದು. ನಿತ್ಯವೂ ನಮ್ಮ ದೇಹದಲ್ಲಿ ಗ್ಲೂಕೋಸ್ ಮಟ್ಟವನ್ನು ಉಳಿಸಿಕೊಳ್ಳಲು ಕನಿಷ್ಠ ಪ್ರಮಾಣದ ಸಕ್ಕರೆಯು ಅಗತ್ಯವಿರುತ್ತದೆ. ಅಂತಹ ಅಗತ್ಯ ಸಕ್ಕರೆಯು ಆರೋಗ್ಯಕರವಾಗಿರಬೇಕೆ ಹೊರತು ಮಾರುಕಟ್ಟೆಯಲ್ಲಿ ದೊರೆಯುವ ಸಂಸ್ಕರಿಸಿರುವ ಸಕ್ಕರೆ ಆಗಿರಬಾರದು. ಹಾಗಾಗಿ ಕ್ಯಾಲೋರಿಗಳನ್ನು ಹೊಂದಿರದ ಕಬ್ಬಿನ ರಸ ಅಥವಾ ಕಬ್ಬಿನ ಹಾಲು ಅತ್ಯುತ್ತಮವಾದ ಆಯ್ಕೆಯಾಗಿರುತ್ತದೆ. ಕಬ್ಬಿನ ರಸವು ದೇಹದ ತೂಕ ಇಳಿಸಲು ನಾಲ್ಕು ರೀತಿಯಲ್ಲಿ ಸಹಾಯ ಮಾಡುತ್ತದೆ.

ಸಮೃದ್ಧವಾದ ನಾರಿನಂಶ:

ಸಮೃದ್ಧವಾದ ನಾರಿನಂಶ:

ಯಾವುದೇ ಬಗೆಯ ತೂಕ ಇಳಿಸುವ ಆಹಾರ ನಿಯಂತ್ರಣದ ವಿಧಾನದಲ್ಲಿ ನಾರಿನಂಶ ಪ್ರಮುಖವಾಗಿರುತ್ತದೆ. ಸೂಕ್ತ ಆಹಾರ ಅಥವಾ ನಾರಿನಂಶ ಇಲ್ಲದ ಆಹಾರ ಸೇವಿಸಿದರೆ ಮಲಬದ್ಧತೆ ಉಂಟಾಗುವುದು. ಹಾಗಾಗಿ ಸಾಕಷ್ಟು ಪ್ರಮಾಣದಲ್ಲಿ ತರಕಾರಿ ಹಾಗೂ ಹಣ್ಣುಗಳನ್ನು ಸೇವಿಸಬೇಕಾಗುವುದು. ಹಾಗಾಗಿ ಕಬ್ಬಿನ ಹಾಲು ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುವುದು. ಇದರಲ್ಲಿ ಅತ್ಯುತ್ತಮ ನಾರಿನಂಶ ಹಾಗೂ ಪೋಷಕಾಂಶಗಳಿವೆ. ಇವು ಬೇಸಿಗೆಯಲ್ಲಿ ಬಹುಬೇಗ ತೂಕನಷ್ಟ ಹೊಂದಲು ಸಹಾಯ ಮಾಡುವುದು.

ಚಯಾಪಚಯ ಕ್ರಿಯೆಗೆ ಉತ್ತೇಜನ:

ಚಯಾಪಚಯ ಕ್ರಿಯೆಗೆ ಉತ್ತೇಜನ:

ವೈಜ್ಞಾನಿಕವಾಗಿ ಚಯಾಪಚಯ ಕ್ರಿಯೆ ಎನ್ನುವುದು ಸಾಮಾನ್ಯವಾದದ್ದು. ಈ ಕ್ರಿಯೆಯಿಂದ ಶಕ್ತಿಯ ಮಟ್ಟ ಹೆಚ್ಚುವುದು. ಅಧಿಕ ಕ್ಯಾಲೋರಿಗಳನ್ನು ತಗ್ಗಿಸುವುದು. ಚಯಾಪಚಯ ಕ್ರಿಯೆಯನ್ನು ಉತ್ತಮಪಡಿಸುವಲ್ಲಿ ಸಹಾಯ ಮಾಡುತ್ತದೆ. ನಿಮ್ಮ ಚಟುವಟಿಕೆಯ ಮಟ್ಟವನ್ನು ಹೆಚ್ಚಿಸುವುದರ ಮೂಲಕ ನೈಸರ್ಗಿಕವಾಗಿ ತೂಕನಷ್ಟವನ್ನು ಮಾಡುತ್ತದೆ.

ಉತ್ತಮ ಜೀರ್ಣಕಾರಿಯಾಗಿ ಕೆಲಸ ನಿರ್ವಹಿಸುವುದು:

ಉತ್ತಮ ಜೀರ್ಣಕಾರಿಯಾಗಿ ಕೆಲಸ ನಿರ್ವಹಿಸುವುದು:

ಆರೋಗ್ಯಕರ ದೇಹಕ್ಕೆ ಅಥವಾ ಸ್ಥಿತಿಯನ್ನು ಹೊಂದಬೇಕು ಎಂದರೆ ಉತ್ತಮ ಗುಣಮಟ್ಟದಲ್ಲಿ ಜೀರ್ಣಕ್ರಿಯೆ ನಡೆಯಬೇಕು. ಜೊತೆಗೆ ವಿಸರ್ಜನೆಯ ವಿಧಾನವು ಅವಶ್ಯಕವಾಗಿರುತ್ತದೆ. ಉತ್ತಮ ನಾರಿನಂಶ ಹಾಗೂ ಪೋಷಕಾಂಶಗಳನ್ನು ಒಳಗೊಂಡಿರುವ ಕಬ್ಬಿನ ಹಾಲು ಜೀರ್ಣಕ್ರಿಯೆಗೆ ಉತ್ತೇಜನ ನೀಡುವುದರ ಜೊತೆಗೆ ದೇಹವು ಶಕ್ತಿಯುತವಾಗಿರುವಂತೆ ಮಾಡುವುದು.

ಕೊಬ್ಬು ರಹಿತವಾಗಿರುವುದು:

ಕೊಬ್ಬು ರಹಿತವಾಗಿರುವುದು:

ಕಬ್ಬಿನ ಹಾಲಿನಲ್ಲಿ ಸಾಕಷ್ಟು ಸಕ್ಕರೆ ಪ್ರಮಾಣ ಅಥವಾ ಸಿಹಿಯನ್ನು ಹೊಂದಿರುತ್ತವೆ. ಆದರೆ ಕೊಬ್ಬಿನಂಶವು ಶೂನ್ಯವಾಗಿರುವುದು. ಕಬ್ಬಿನಹಾಲು ಫಾಸ್ಟ್ ಫುಟ್ ಅಥವಾ ಎಣ್ಣೆ ಭರಿತ ಆಹಾರ ಪದಾರ್ಥಗಳಂತೆ ಕ್ಯಾಲೋರಿ ಹೆಚ್ಚಿಸುವುದು ಅಥವಾ ಕೊಬ್ಬನ್ನು ದ್ವಿಗುಣಗೊಳಿಸದು. ಆರೋಗ್ಯಕರ ಕ್ಯಾಲೋರಿಯೊಂದಿಗೆ ಕೊಬ್ಬಿನಂಶ ಇಲ್ಲದೆ ಇರುವುದರಿಂದ ತೂಕನಷ್ಟ ವಿಧಾನಕ್ಕೆ ಕಬ್ಬಿನ ಹಾಲು ಉತ್ತಮ ಆಯ್ಕೆ. ಹಾಗಾಗಿ ನಿತ್ಯವೂ ಒಂದು ಗ್ಲಾಸ್ ಕಬ್ಬಿನ ಹಾಲನ್ನು ಸೇವಿಸುವುದರಿಂದ ಯಾವುದೇ ಹಾನಿ ಉಂಟಾಗದು.

English summary

sugarcane-juice-the-best-for-weight-loss-in summer

sugarcane-juice-the-best-for-weight-loss-in summer
X
Desktop Bottom Promotion