For Quick Alerts
ALLOW NOTIFICATIONS  
For Daily Alerts

ನೈಸರ್ಗಿಕವಾಗಿ ಮುಖದ ಆರೋಗ್ಯ ಕಾಪಾಡಲು 7 ಮುಖದ ಯೋಗಭಂಗಿಗಳು

By Sushma Charhra
|

ಮುಖದಲ್ಲಿ ಕೆಲವು ಯೋಗಗಳನ್ನು ಮಾಡಿದರೆ, ಬೇಗನೆ ಮತ್ತು ಸುಲಭವಾಗಿ ನೀವು ನಿಮ್ಮ ಮುಖದ ಸೌಂದರ್ಯ ಹೆಚ್ಚಿಸಿಕೊಂಡು , ವಯಸ್ಸಾದವರಂತೆ ಕಾಣುವುದರಿಂದ ಮುಕ್ತಿ ಪಡೆಯಬಹುದು. ನಿಮ್ಮ ಮುಖವು ಆರಾಮದಾಯಕವಾಗುತ್ತೆ ಮತ್ತು ಸುಂದರಗೊಳ್ಳುತ್ತೆ. ನೀವು ಕೂಡ ಇದನ್ನು ಪ್ರಯತ್ನಿಸುತ್ತಿರಬಹುದು.

ಯಾಕೆಂದರೆ ಇತ್ತೀಚೆಗೆ ತಾರಾಬಳವು ಫೇಶಿಯಲ್ ಯೋಗದ ಬಗ್ಗೆ ಹೆಚ್ಚು ಪ್ರಚಾರ ಕೈಗೊಳ್ಳುತ್ತಿದೆ ಮತ್ತು ಅದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಗಳು ನಡೆಯುತ್ತಿದೆ. ನೈಸರ್ಗಿಕವಾಗಿ ನಿಮ್ಮ ಮುಖಕ್ಕೆ ಆರೋಗ್ಯ ಬರಬೇಕು ಎಂದರೆ ಇಲ್ಲಿದೆ ನೋಡಿ ಏಳು ಫೇಶಿಯಲ್ ಯೋಗದ ಭಂಗಿಗಳು..

yoga

ನೀವು ಟ್ರೈ ಮಾಡಿ ನೋಡಿ..

1. V ಆಕಾರದ ಭಂಗಿ

ಇದು ತುಂಬಾ ಸುಲಭವಾದ ಯೋಗದ ಭಂಗಿ ಆಗಿದ್ದು, ನಿಮ್ಮ ಮುಖಕ್ಕೆ ಬಹಳ ಉಪಕಾರಿ. ನೀವೇನು ಮಾಡಬೇಕು ಎಂದರೆ ಎರಡು ಬೆರಳುಗಳಿಂದ "V" ಆಕಾರವನ್ನು ಮಾಡಿ ಮತ್ತು ಬೆರಳುಗಳನ್ನು ನಿಮ್ಮ ಹುಬ್ಬಿನ ಕೊನೆಗೆ ತಾಕುವಂತೆ ಇಟ್ಟುಕೊಳ್ಳಿ.
ಒತ್ತಡ ಹಾಕಿ ಮತ್ತು ಶಕ್ತಿಯನ್ನು ಅಧಿಕಗೊಳಿಸಿ. ಒಮ್ಮೆ ಮಾಡಿದ ನಂತರ ಬೆರಳುಗಳನ್ನು ನಿಧಾನಕ್ಕೆ ತೆಗೆಯಿರಿ ಮತ್ತು ನಿಮ್ಮ ಮುಖವನ್ನು ಆರಾಮದ ಭಂಗಿಗೆ ಮರಳಿಸಿ. ಇದನ್ನೇ 6 ಬಾರಿ ಪುನರಾವರ್ತಿಸಿ. ಹತ್ತು ಸೆಕೆಂಡ್ ಕಣ್ಣುಗಳನ್ನು ಮುಚ್ಚಿಕೊಂಡು ಹಿಸುಕಿ ಈ ಭಂಗಿಯನ್ನು ಅಂತ್ಯಗೊಳಿಸಿ... ಮತ್ತೆ ಪುನಃ ಆರಾಮಾಗಿ ಮತ್ತು ಆಳವಾದ ಉಸಿರಾಟ ನಡೆಸಿ

2. ಗೂಬೆಯಂತೆ ಮಾಡುವುದು

ನಿಮ್ಮ ಕೈಗಳಲ್ಲಿ ಎರಡು C ಆಕಾರವನ್ನುಮಾಡಿ ಮತ್ತು ಅದನ್ನು ನಿಮ್ಮ ಕಣ್ಣುಗಳ ಸುತ್ತ ಇಟ್ಟುಕೊಳ್ಳಿ. ನೀವು ಬೆರಳನ್ನು ಹಾಗೆ ಇಟ್ಟುಕೊಂಡಾಗ, ಹಣೆಯನ್ನು ರಿಲ್ಯಾಕ್ಸ್ ಮಾಡಿ ಮತ್ತು ಕಣ್ಣುಗಳನ್ನು ಆದಷ್ಟು ದೊಡ್ಡದಾಗಿ ತೆರೆಯಿರಿ. ಮೂರು ಬಾರಿ ಈ ವ್ಯಾಯಾಮವನ್ನು ಪುನರಾವರ್ತಿಸಿ ಮತ್ತು ಒಂದು ಭಂಗಿಯಲ್ಲಿ 10 ಸೆಕೆಂಡ್ ಇರಿ.

3. ಪಫರ್ ಮೀನಿನ ಯೋಗ

ಇದು ಇರುವುದರಲ್ಲೇ ತುಂಬಾ ಸುಲಭದ ಯೋಗ ಪೋಸ್ ಆಗಿದೆ. ಇದು ಕೆನ್ನೆಗಳಿಗಾಗಿ ಇರುವ ಉತ್ತಮ ಯೋಗವಾಗಿದೆ. ಒಂದು ವೇಳೆ ನೀವು ಆಕ್ನೆ ತೆಗೆಯುವ ಯಾವುದಾದರೂ ಫೇಸ್ ಮಾಸ್ಕ್ ಗಳನ್ನು ಧರಿಸಿದಾಗ ಇದನ್ನು ಮಾಡಿದರೆ ಬಹಳ ಚೆನ್ನಾಗಿರುತ್ತದೆ.
ಕೆನ್ನೆಗಳನ್ನು ಪಫ್ ಮಾಡಿ ಮತ್ತು ನಿಮ್ಮ ಬಾಯಿಯನ್ನು ಸಾಧ್ಯವಾದಷ್ಟು ಸಣ್ಣದಾಗಿ ಮಾಡಿ. 30 ಸೆಕೆಂಡ್ ನಿಮ್ಮ ಕೆನ್ನೆಗಳನ್ನು ನಿಧಾನವಾಗಿ ಬಡಿಯುತ್ತಿರಿ.

4. ಕಣ್ಣುಗಳನ್ನು ತಿರುಗಿಸುವಿಕೆ

ನಿಮ್ಮ ಎರಡು ತೋರು ಬೆರಳನ್ನು ಹುಬ್ಬಿನ ಮೂಲೆಯಲ್ಲಿ ಇಟ್ಟುಕೊಳ್ಳಿ. ಮತ್ತು ಹುಬ್ಬನ್ನು ನಿಧಾನವಾಗಿ ಒತ್ತುತ್ತಾ ಸಾಗಿ, ಕಣ್ಣುಗಳ ಸುತ್ತವೂ ಪ್ರೆಸ್ ಮಾಡಿ. ಇದರ ವಿರುದ್ಧ ದಿಕ್ಕಿನಲ್ಲೂ ಇದನ್ನು ಪುನರಾವರ್ತಿಸಿ. ಮೂಗು ಮತ್ತು ಕಣ್ಣುಗಳ ಕೆಳಗೂ ಮಾಡಿ.. 4 ಬಾರಿ ಇದನ್ನು ಪುನರಾವರ್ತಿಸಿ.

5. ಆಕಾಶಕ್ಕೆ ಮುತ್ತಿಕ್ಕುವ ಭಂಗಿ

ನಿಮ್ಮ ತಲೆಯನ್ನು ಹಿಂದಕ್ಕೆ ಬಾಗಿಸಿ ಮತ್ತು ತುಟಿಯ ಮೂಲಕ ಮುತ್ತು ಕೊಡುವಂತೆ ಮಾಡಿ. ಆಕಾಶಕ್ಕೆ ಮುತ್ತಿಕ್ಕುವಂತ ಭಂಗಿ. ಒಮ್ಮೆ ಮಾಡಿದ ನಂತರ ಆರಾಮಾಗಿ ಮತ್ತು ಒಂದು ಉದ್ದನೆಯ ಉಸಿರಾಟ ನಡೆಸಿ. ಮತ್ತು ನಿಛ್ವಾಸ ಕ್ರಿಯೆ ಮಡುತ್ತಾ ನೀವು ನಿಮ್ಮ ಮುಂದೆ ಮುತ್ತಿಕ್ಕುವಂತೆ ಮಾಡಿ. ಪುನಃ ಆರಾಮಾಗಿ ಮತ್ತು ಎರಡು ಬಾರಿ ಈ ಭಂಗಿಯನ್ನು ಪುನರಾವರ್ತಿಸಿ.

6. ಕೆನ್ನೆಯ ಬಲೂನ್

ಉಸಿರಾಟ ನಡೆಸಿ ಮತ್ತು ನಿಮ್ಮ ಬಾಯಿಯನ್ನು ಮುಚ್ಚಿಕೊಳ್ಳಿ. ಬಲೂನ್ ನಂತೆ ನಿಮ್ಮ ಕೆನ್ನೆಗಳನ್ನು ಮಾಡಿ. ಇದನ್ನು 5 ಬಾರಿ ಪುನರಾವರ್ತಿಸಿ.. ಇದನ್ನು ನಿಮಗೆ ವಿಚಿತ್ರ ಅನ್ನಿಸಬಹುದು.ಆದರೆ, ಇದು ನಿಮ್ಮ ಕೆನ್ನೆಗಳನ್ನು ಆರೋಗ್ಯಯುತವಾಗಿ ಸರಿಯಾದ ಆಕಾರದಲ್ಲಿ ಇಡಲು ನೆರವಾಗುತ್ತೆ. ಕೆನ್ನೆಯ ಮಾಂಸಖಂಡಗಳ ಆರೋಗ್ಯಕ್ಕೂ ಇದು ನೆರವಾಗುತ್ತೆ. ಹಾಗಾಗಿ ಕೆನ್ನೆಗಳು ಸುಂದರವಾಗಿ ಕಾಣುತ್ತದೆ.

7. ಪಕರ್ ಅಪ್

ಈ ಯೋಗಗಳಲ್ಲಿ ಬಹಳ ಕುತೂಹಲಕಾರಿ ಯೋಗವೆಂದರೆ ಅದು ಪಕರ್ ಅಪ್ ಯೋಗದ ಭಂಗಿ ಆಗಿದೆ. ನಿಮ್ಮ ಗಲ್ಲಗಳನ್ನು ಸಿಕ್ಕಿಹಾಕಿಕೊಳ್ಳುವಂತೆ ಮಾಡುವುದು. ಮತ್ತು ಈಗ ಗಟ್ಟಿಯಾಗಿ ಹಾಗೆ ಇದ್ದು, ನಿಧಾನವಾಗಿ ವಿರುದ್ಧವಾಗಿ ನಗುವುದಕ್ಕೆ ಪ್ರಯತ್ನಿಸಿ. ಇದು ನಿಮಗೆ ತುಟಿ ಮತ್ತು ಮೂಗು, ಬಾಯಿಯ ಭಾಗದಲ್ಲಿ ಯಾವುದೇ ಗೆರೆಗಳು ಏಳದಂತೆ ನೋಡಿಕೊಂಡು ಯೌವನಾವಸ್ಥೆಯನ್ನು ಹೆಚ್ಚು ದಿನ ಕಾಪಾಡಿಕೊಳ್ಳಲು ನೆರವು ನೀಡುತ್ತೆ.

English summary

7 Ways To Get Natural Facelift With Simple Yoga Poses

Doing facial yoga is the quickest and easiest way to get a facelift and to reduce the apparent signs of ageing. It lets your face relax and get toned. You might want to try it out, because facial yoga is all the rage these days with celebrities trying and promoting it as well. So, if you want a natural facelift with some simple yoga poses, here are seven ways to get it:
X
Desktop Bottom Promotion