Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಇಂತಹ ಕೆಟ್ಟ ಅಭ್ಯಾಸಗಳು ದೇಹದ ಶಕ್ತಿಯನ್ನು ಕುಗ್ಗಿಸಬಹುದು
ಇಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗುತ್ತಾ ಇದೆ. ಇದರಿಂದ ವ್ಯಾಯಾಮ, ಆರೋಗ್ಯಕರ ಆಹಾರದ ಕಡೆ ಗಮನ ನೀಡಲಾಗುತ್ತದೆ. ಕೆಲವರು ಆಹಾರ ಪಥ್ಯ ಮಾಡುವಾಗ ಕೆಲವೊಂದು ಅಭ್ಯಾಸಗಳನ್ನು ಮಾಡಿಕೊಳ್ಳುತ್ತಾರೆ. ಆದರೆ ಇದು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ತಾನು ಎಂಟೆದೆ ಬಂಟ ಅಂದುಕೊಂಡರೆ ಅದು 100% ಸುಳ್ಳು..!
ದೇಹದ ತೂಕ ಇಳಿಸಿಕೊಳ್ಳಲು ಮತ್ತು ಸುಂದರವಾಗಿ ಕಾಣಬೇಕೆಂಬ ದೃಷ್ಟಿಯಿಂದ ಆಹಾರ ಪಥ್ಯ ಮಾಡುವವರು ದೇಹಕ್ಕೆ ಶಕ್ತಿಯನ್ನು ನೀಡುವಂತಹ ಆಹಾರವನ್ನೇ ಕಡೆಗಣಿಸುತ್ತಾರೆ. ಇದರಿಂದ ದೇಹದಲ್ಲಿ ಶಕ್ತಿ ಕಡಿಮೆಯಾಗಿ ನಿತ್ರಾಣ ಉಂಟಾಗಬಹುದು. ಇದು ಅನಾರೋಗ್ಯಕ್ಕೆ ಕಾರಣವಾಗಿ ಇನ್ನಷ್ಟು ಸಮಸ್ಯೆಗಳನ್ನು ತಂದೊಡ್ಡಬಹುದು. ಯಾವ ಅಭ್ಯಾಸಗಳಿಂದಾಗಿ ನೀವು ಅಪಾಯಕ್ಕೆ ಸಿಲುಬಹುದು ಎಂದು ಈ ಲೇಖನದ ಮೂಲಕ ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ.....

ಕಾರ್ಬೋಹೈಡ್ರೆಟ್ ಕಡಿಮೆ ಮಾಡುವುದು
ಆಹಾರ ಪಥ್ಯದ ಮೂಲಕ ನೀವು ಕಾರ್ಬೋಹೈಡ್ರೇಟ್‌ಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಆದರೆ ಇದರಿಂದ ದೇಹದ ಸಮತೋಲನ ಬಿಗಡಾಯಿಸುವುದು ಮಾತ್ರವಲ್ಲದೆ ನಿಮ್ಮನ್ನು ಜಡವಾಗಿಸುವುದು. ಇದರಿಂದ ದೇಹದ ಶಕ್ತಿಯು ಕಡಿಮೆಯಾಗುವುದು. ಮೆದುಳಿನ ಚಟುವಟಿಕೆಗಳಿಗೆ ಕಾರ್ಬ್ ಅತ್ಯಗತ್ಯವಾಗಿದೆ. ಇಡೀ ಧಾನ್ಯದಂತಹ ಆರೋಗ್ಯಕಾರಿ ಕಾರ್ಬ್ ಸೇವಿಸಿ.

ನೀರು ಕುಡಿಯದೇ ಇರುವುದು
ನೀವು ಒಳ್ಳೆಯ ಆಹಾರವನ್ನು ತಿಂದು ನಿರ್ಜಲೀಕರಣದಿಂದ ಬಳಲಿದರೆ ಆಗ ಖಂಡಿತವಾಗಿಯೂ ನೀವು ನಿತ್ರಾಣವಾಗಬಹುದು. ನಿಮ್ಮ ದೇಹದಲ್ಲಿನ ಶಕ್ತಿಯ ಮಟ್ಟವನ್ನು ಸರಿಯಾಗಿ ಇಟ್ಟುಕೊಳ್ಳಲು ದಿನದಲ್ಲಿ ಎಂಟು ಲೋಟ ನೀರು ಕುಡಿಯುವುದನ್ನು ಮರೆಯಬೇಡಿ.

ಕೆಫಿನ್ ಅತಿಯಾಗಿ ಸೇವನೆ
ನೀವು ಅತಿಯಾಗಿ ಕೆಫಿನ್ ಸೇವನೆ ಮಾಡಿದರೆ ಅದರಿಂದ ನಿಮ್ಮ ದೇಹದ ಶಕ್ತಿಯು ಕುಂದುವುದರಲ್ಲಿ ಸಂಶಯವೇ ಇಲ್ಲ. ಕೆಫಿನ್ ದೇಹಕ್ಕೆ ತಕ್ಷಣ ಚೈತನ್ಯ ಒದಗಿಸುವುದು. ಆದರೆ ಅತಿಯಾದ ಸೇವನೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಬಹುದು. ಇದರಿಂದ ನಿಮಗೆ ನಿದ್ರಾಹೀನತೆ ಕಾಡಬಹುದು.

ಮೆಗ್ನೀಶಿಯಂಯುಕ್ತ ಆಹಾರ ಅತಿಯಾಗಿ ಸೇವನೆ
ಬಾಳೆಹಣ್ಣು, ಕುಂಬಳಕಾಯಿ ಬೀಜ, ಉಪ್ಪು ನೀರಿನ ಮೀನು ಮತ್ತು ಹಸಿರು ಬೀಜಗಳನ್ನು ತಿನ್ನುವುದು ದೇಹಕ್ಕೆ ಒಳ್ಳೆಯದು. ಇದರಲ್ಲಿ ಮೆಗ್ನಿಶಿಯಂ ಅಧಿಕವಾಗಿದೆ ಮತ್ತು ಮೆಗ್ನಿಶಿಯಂ ದೇಹಕ್ಕೆ ಶಕ್ತಿ ನೀಡುವುದು. ಆದರೆ ಅತಿಯಾಗಿ ಇದನ್ನು ಸೇವಿಸುವುದರಿಂದ ಸ್ನಾಯು ವಿರಾಮ ಪರಿಣಾಮ ಉಂಟಾಗಿ ಶಕ್ತಿ ಕುಂದಬಹುದು.

ವಿರಾಮವಿಲ್ಲದೆ ಕೆಲಸ ಮಾಡುವುದು
ಕೆಲಸ ಮಾಡುವುದು ಸರಿ. ಆದರೆ ಅತಿಯಾಗಿ ಕೆಲಸ ಮಾಡುವುದು ಸರಿಯಲ್ಲ. ಯಾಕೆಂದರೆ ಊಟ ತಿಂಡಿ ಸೇವಿಸದೆ ಯಾವಾಗಲೂ ಕೆಲಸದಲ್ಲೇ ತೊಡಗಿರುವುದು ಸರಿಯಲ್ಲ. ಅಧ್ಯಯನಗಳ ಪ್ರಕಾರ ಭೋಜನ ವಿರಾಮದ ವೇಳೆ ಸುಮಾರು 20 ನಿಮಿಷಗಳಾದರೂ ವಿಶ್ರಮಿಸಬೇಕು. ಇದರಿಂದ ನಿಮ್ಮ ದೇಹಕ್ಕೆಶಕ್ತಿ ಸಿಗುವುದು.



Click it and Unblock the Notifications
