For Quick Alerts
ALLOW NOTIFICATIONS  
For Daily Alerts

  ಓಡುವುದು ಆರೋಗ್ಯಕ್ಕೆ ಒಳ್ಳೆಯದೇ, ಆದರೆ ಇಂತಹ ತಪ್ಪುಗಳನ್ನು ಮಾಡದಿರಿ!

  By Arshad
  |

  ವ್ಯಾಯಾಮದಲ್ಲಿ ಪ್ರಮುಖವಾದ ಭಾಗವೆಂದರೆ ಓಟ. ಇದು ನಿಧಾನಗತಿಯ ಓಟವಾಗಿರಬಹುದು ಅಥವಾ ತೀವ್ರಗತಿಯ ಓಟವಾಗಿರಬಹುದು. ತೀವ್ರಗತಿಯ ಓಟದಲ್ಲಿ ದೇಹದ ಪ್ರತಿ ಮಾಂಸಖಂಡವೂ ಅತಿ ಹೆಚ್ಚಿನ ಬಳಕೆಯಾಗುತ್ತದೆ ಹಾಗೂ ಈ ಅಗತ್ಯತೆಯನ್ನೇ ದೇಹದಾರ್ಢತೆಯನ್ನು ಹೆಚ್ಚಿಸಲು ಬಳಸಲ್ಪಡುತ್ತದೆ. ದೇಹದಾರ್ಢ್ಯ ಪಟುಗಳು, ಕ್ರೀಡಾಪಟುಗಳು, ಸೈನಿಕರು, ಪೋಲೀಸ್ ಅಧಿಕಾರಿಗಳು ಇತ್ಯಾದಿ ವ್ಯಕ್ತಿಗಳಿಗೆ ತಮ್ಮ ದೇಹವನ್ನು ಸದಾ ಸುಸ್ಥಿತಿಯಲ್ಲಿಡುವುದು ಅನಿವಾರ್ಯವಾಗಿದ್ದು ನಿತ್ಯದ ಓಟವನ್ನೂ ದಿನದ ಚಟುವಟಿಕೆಯಲ್ಲಿ ಅಳವಡಿಸಿರಲಾಗುತ್ತದೆ. ತೂಕ ಇಳಿಸಬಯಸುವ ವ್ಯಕ್ತಿಗಳಿಗೂ ಓಟ ಉತ್ತಮವಾದ ವ್ಯಾಯಮವಾಗಿದೆ. 

  ಓಟದ ಸಮಯದಲ್ಲಿ ನಮ್ಮ ದೇಹದ ಎಲ್ಲಾ ಕ್ರಿಯೆಗಳಿಗೆ ಚುರುಕು ಲಭಿಸುವ ಕಾರಣ ಜೀವರಾಸಾಯನಿಕ ಕ್ರಿಯೆಯೂ ಹೆಚ್ಚುತ್ತದೆ ಹಾಗೂ ಇದಕ್ಕಾಗಿ ದೇಹದಲ್ಲಿ ಸಂಗ್ರಹಗೊಂಡಿದ್ದ ಕೊಬ್ಬು ಬಳಸಲ್ಪಡುತ್ತದೆ. ದೇಹ ಅಪಾರವಾಗಿ ಬೆವರುವ ಮೂಲಕ ದೇಹದಲ್ಲಿದ್ದ ಕಲ್ಮಶವೂ ಬೆವರಿನ ಮೂಲಕ ಹೊರಹೋಗುತ್ತದೆ. 

  ಆರೋಗ್ಯ ಟಿಪ್ಸ್: ದಿನನಿತ್ಯ ಓಟ, ಖಿನ್ನತೆ ದೂರ ಬಲುದೂರ!

  ಓಟದ ಸಮಯದಲ್ಲಿ ತೀವ್ರಗೊಳ್ಳುವ ರಕ್ತಸಂಚಾರದ ಕಾರಣ ಮೆದುಳಿಗೂ ಹೆಚ್ಚಿನ ರಕ್ತ ಲಭಿಸುತ್ತದೆ ಹಾಗೂ ಮಾನಸಿಕ ಒತ್ತಡದಿಂದಲೂ ಬಿಡುಗಡೆ ದೊರಕುತ್ತದೆ. ನಿತ್ಯದ ಓಟ ದೇಹವನ್ನು ಸುದೃಢ ಹಾಗೂ ಚಟುವಟಿಕೆಯಿಂದಿರಿಸಲು ನೆರವಾಗುತ್ತದೆ. ಆದರೆ ಓಟ ಎಲ್ಲರಿಗೂ ಸಲ್ಲದು. ಓಟಕ್ಕೆ ನೀವು ಅರ್ಹರು ಎಂದು ವೈದ್ಯರು ಪ್ರಮಾಣಿಸಿದರೆ ಮಾತ್ರವೇ ನೀವು ಓಟವನ್ನು ವ್ಯಾಯಾಮದ ರೂಪದಲ್ಲಿ ಅನುಸರಿಸಬಹುದು. ಹೃದ್ರೋಗಿಗಳು, ಸಂಧಿವಾತ, ಅಧಿಕ ರಕ್ತದೊತ್ತಡ ಮೊದಲಾದ ತೊಂದರೆ ಇರುವ ವ್ಯಕ್ತಿಗಳಿಗೆ ಓಟ ಸಲ್ಲದು. ವಾಸ್ತವವಾಗಿ ಮಾನವ ಶರೀರ ಓಟಕ್ಕೆಂದು ನಿರ್ಮಿಸಿಲ್ಲ. ಬದಲಿಗೆ ಅಲ್ಪದೂರದ ಓಟಕ್ಕಾಗಿ ಮಾತ್ರವೇ ನಿರ್ಮಿಸಲ್ಪಟ್ಟಿದೆ. ಆದ್ದರಿಂದ ನಾವು ಮೈಲುಗಟ್ಟಲೇ, ಇಡಿಯ ದಿನ ನಡೆಯಬಲ್ಲೆವೇ ಹೊರತು ಸತತವಾಗಿ ಓಡಲು ಸಾಧ್ಯವಿಲ್ಲ.

  ಹಾಗಾಗಿ ಒಲಿಂಪಿಕ್ ಪದಕ ಪಡೆಯುವ ಇರಾದೆಯ ಹೊರತಾಗಿ ಇಡಿಯ ದಿನ ಓಡುತ್ತಲೇ ಇರುವುದು ಆರೋಗ್ಯಕ್ಕೆ ಮಾರಕ! ಅಲ್ಲದೇ ಈಗಾಗಲೇ ಹೃದಯದ ತೊಂದರೆಯ ಇತಿಹಾಸವಿರುವ ವ್ಯಕ್ತಿಗಳಿಗೆ ವೈದ್ಯರು ಹೇಳಿದ ಹೊರತು ನಿಧಾನಗತಿಯ ಓಟವೂ ಸೂಕ್ತವಲ್ಲ! ಇದು ಇನ್ನೊಂದು ಹೃದಯಾಘಾತಕ್ಕೆ ಕಾರಣವಾಗಬಹುದು. ಸಾಮಾನ್ಯ ವ್ಯಕ್ತಿಗಳಿಗೆ ನಿಧಾನಗತಿಯ ಓಟವನ್ನು ಕೊಂಚ ಹೆಚ್ಚು ದೂರ ಓಡುವುದೇ ಆರೋಗ್ಯಕರ ಎಂದು ವೈದ್ಯರು ಹಾಗೂ ವ್ಯಾಯಾಮ ತರಬೇತುದಾರರು ಅಭಿಪ್ರಾಯಪಡುತ್ತಾರೆ.

  ನಿಧಾನವಾದ ಓಟ, ಮೆದುಳಿಗೆ ಊಟ, ಇದು ನಿತ್ಯದ ಪಾಠ!

  ಒಟ್ಟಾರೆ ದೇಹವನ್ನು ದಂಡಿಸಿ ಹೃದಯಬಡಿತವನ್ನು ಹೆಚ್ಚಿಸುವ ಮೂಲಕ ಓಟದ ಉದ್ದೇಶವನ್ನು ನೆರವೇರಿಸಿದರೆ ಸರಿ. ಓಟದ ಬಳಿಕ ಸ್ವಾಭಾವಿಕವಾಗಿಯೇ ನಾವೆಲ್ಲರೂ ದಣಿಯುತ್ತೇವೆ ಹಾಗೂ ವಿಶ್ರಾಂತಿ ಪಡೆಯಬಯಸುತ್ತೇವೆ. ಆದರೆ ಅರಿವಿಲ್ಲದೇ ಕೆಲವು ಪ್ರಮಾದಗಳನ್ನು ಮಾಡಿಬಿಡುತ್ತೇವೆ. ಇದು ಆರೋಗ್ಯಕ್ಕೆ ಪರೋಕ್ಷ ಪರಿಣಾಮ ಬೀರಬಹುದು. ಬನ್ನಿ, ಇವು ಯಾವುದು ಎಂದು ನೋಡೋಣ.... 

  ಹೆಚ್ಚು ಹೊತ್ತು ಕುಳಿತುಕೊಳ್ಳುವುದು

  ಹೆಚ್ಚು ಹೊತ್ತು ಕುಳಿತುಕೊಳ್ಳುವುದು

  ಓಟದ ಅವಧಿಯಲ್ಲಿ ದೇಹದ ಪ್ರತಿ ಸ್ನಾಯುವಿಗೂ ಹೆಚ್ಚಿನ ಶಕ್ತಿ ಒದಗಿಸಬೇಕಾದ ಕಾರಣ ಕೊಂಚ ಹೊತ್ತಿಗೇ ನಮ್ಮ ದೇಹ ದಣಿಯುತ್ತದೆ. ಅಂದರೆ ಪ್ರಸ್ತುತ ಲಭ್ಯವಿರುವ ಶಕ್ತಿಯನ್ನು ಸ್ನಾಯುಗಳು ಬಳಸಿಬಿಟ್ಟಿರುವ ಕಾರಣ ಇನ್ನೂ ಹೆಚ್ಚಿನ ಶಕ್ತಿಯನ್ನು ಪಡೆಯಲು ಹೊಸರಕ್ತದ ಮೂಲಕ ಪೋಷಕಾಂಶಗಳನ್ನು ಪಡೆಯಲು ಕೊಂಚ ಕಾಯಬೇಕಾಗುತ್ತದೆ. ಇದನ್ನೇ ವಿಶ್ರಾಂತಿ ಎಂದು ಕರೆಯುತ್ತೇವೆ. ಹೊಸಶಕ್ತಿ ಪಡೆದ ಬಳಿಕ ಮತ್ತೆ ಸ್ನಾಯುಗಳು ಕೆಲಸ ನಿರ್ವಹಿಸಲು ಶಕ್ತವಾಗುತ್ತವೆ. ವಿಶ್ರಾಂತಿಯ ಅವಧಿ ಸಾಮಾನ್ಯವಾಗಿ ಮೂರರಿಂದ ಐದು ನಿಮಿಷಗಳವರೆಗೆ ಇದ್ದರೆ ಬೇಕಾದಷ್ಟಾಯಿತು.

  ಹೆಚ್ಚು ಹೊತ್ತು ಕುಳಿತುಕೊಳ್ಳುವುದು

  ಹೆಚ್ಚು ಹೊತ್ತು ಕುಳಿತುಕೊಳ್ಳುವುದು

  ಆದರೆ ಈ ವಿಶ್ರಾಂತಿಯ ಅವಧಿಯನ್ನು ವಿಸ್ತರಿಸಿದರೆ, ರಕ್ತ ಈ ಅಗತ್ಯತೆಗೆಂದು ಕೊಂಡು ಬಂದಿರುವ ಪೋಷಕಾಂಶಗಳು ಬಳಕೆಯಾಗದೇ ಪರೋಕ್ಷ ತೊಂದರೆ ಎದುರಾಗಬಹುದು. ಆದ್ದರಿಂದ ಓಟದ ಬಳಿಕ ಸ್ನಾಯುಗಳ ಸರಳ ಸೆಳೆತ ವ್ಯಾಯಾಮಗಳನ್ನು ಮಾಡುವ ಮೂಲಕ ಈ ಶಕ್ತಿಯನ್ನು ಸದ್ಬಳಕೆಗೊಳಿಸಬಹುದು. ಉದಾಹರಣೆಗೆ ಕೈಕಾಲುಗಳನ್ನು ಬೀಸುವುದು, ಯೋಗಾಭ್ಯಾಸ, ಧ್ಯಾನ ಇತ್ಯಾದಿ. ಇದರಿಂದ ಓಟದಿಂದ ದಣಿದಿದ್ದ ದೇಹ ಮತ್ತೆ ಶಕ್ತಿಯನ್ನು ಪಡೆದು ಮುಂದಿನ ಓಟಕ್ಕೆ ಸಿದ್ಧವಾಗುತ್ತದೆ.

  ಬೆವರಿನ ಬಟ್ಟೆಗಳನ್ನೇ ಹೆಚ್ಚು ಹೊತ್ತು ಧರಿಸಿರುವುದು

  ಬೆವರಿನ ಬಟ್ಟೆಗಳನ್ನೇ ಹೆಚ್ಚು ಹೊತ್ತು ಧರಿಸಿರುವುದು

  ಓಟದ ಸಮಯದಲ್ಲಿ ಬೆವರು ಧಾರಾಕಾರವಾಗಿ ಹರಿಯುತ್ತದೆ. ಈ ಸಮಯದಲ್ಲಿ ತೊಟ್ಟಿರುವ ಬಟ್ಟೆಗಳು ಬೆವರಿನಿಂದ ತೋಯುತ್ತವೆ. ಈ ಬೆವರಿನಲ್ಲಿ ಕ್ರಿಮಿಗಳು, ಬ್ಯಾಕ್ಟೀರಿಯಾಗಳೂ ಇರುತ್ತವೆ. ಅಲ್ಲದೇ ತೇವವಾಗಿದ್ದ ಚರ್ಮಕ್ಕೆ ಈ ಬ್ಯಾಕ್ಟೀರಿಯಾಗಳು ಹಾನಿ ಎಸಗುವ ಸಂಭವ ಹೆಚ್ಚು. ಪರಿಣಾಮವಾಗಿ ಶೀತ, ಕೆಮ್ಮು, ಜ್ವರ ಮೊದಲಾದವು ಎದುರಾಗಬಹುದು. ಓಟ ಸಾಗುತ್ತಿದ್ದಾಗ ಬೆವರೂ ದೇಹದಿಂದ ಹೊರ ಹರಿಯುತ್ತಿರುವ ಕಾರಣ ಬ್ಯಾಕ್ಟೀರಿಯಾಗಳು ಚರ್ಮದ ಮೂಲಕ ಒಳಬರುವ ಸಾಧ್ಯತೆ ಕಡಿಮೆ.

  ಬೆವರಿನ ಬಟ್ಟೆಗಳನ್ನೇ ಹೆಚ್ಚು ಹೊತ್ತು ಧರಿಸಿರುವುದು

  ಬೆವರಿನ ಬಟ್ಟೆಗಳನ್ನೇ ಹೆಚ್ಚು ಹೊತ್ತು ಧರಿಸಿರುವುದು

  ಆದರೆ ಓಟ ನಿಲ್ಲಿಸಿ ವಿಶ್ರಾಂತಿಯ ಅವಧಿ ಕಳೆದೊಡನೇ ದೇಹಕ್ಕೆ ಇಷ್ಟು ಪ್ರಮಾಣದ ಬೆವರನ್ನು ಉತ್ಪಾದಿಸುವ ಅಗತ್ಯತೆ ಇಲ್ಲದೇ ಹೋಗುತ್ತದೆ ಹಾಗೂ ದೇಹ ತಣಿದು ಬೆವರು ನಿಲ್ಲುತ್ತದೆ. ಈ ಅವಧಿಯಲ್ಲಿ ತಕ್ಷಣವೇ ತೊಟ್ಟ ಬಟ್ಟೆಗಳನ್ನು ಕಳಚಿ ಸ್ನಾನ ಮಾಡಿ ಹೊಸ ಬಟ್ಟೆಗಳನ್ನು ತೊಡಬೇಕು. ಇದೇ ಬಟ್ಟೆಗಳನ್ನು ಹೆಚ್ಚು ಹೊತ್ತು ತೊಟ್ಟಷ್ಟೂ ಈಗ ಬೆವರದ ಚರ್ಮದ ಸೂಕ್ಷ್ಮರಂಧ್ರಗಳ ಮೂಲಕ ವೈರಸ್ ಹಾಗೂ ಬ್ಯಾಕ್ಟೀರಿಯಾಗಳು ಸುಲಭವಾಗಿ ದೇಹವನ್ನು ಪ್ರವೇಶಿಸಬಹುದು.

  ಸಾಕಷ್ಟು ನೀರು ಕುಡಿಯದಿರುವುದು

  ಸಾಕಷ್ಟು ನೀರು ಕುಡಿಯದಿರುವುದು

  ನಮ್ಮ ದೇಹದ ಚಟುವಟಿಕೆಗಳಿಗೆ ನೀರು ತುಂಬಾ ಅಗತ್ಯ. ಅದರಲ್ಲೂ ಓಟದ ಸಮಯದಲ್ಲಿ ಇನ್ನೂ ಹೆಚ್ಚಿನ ನೀರಿನ ಅಗತ್ಯವಿದೆ. ಆದ್ದರಿಂದ ಓಟಕ್ಕೂ ಮುನ್ನ, ನಡುವೆ ಹಾಗೂ ಬಳಿಕ ಸಾಕಷ್ಟು ನೀರನ್ನು ಕುಡಿಯುತ್ತಿರಬೇಕು. ಕ್ರೀಡಾಪಟುಗಳು ತಮ್ಮ ಓಟದ ನಡುವೆ ಆಗಾಗ ನೀರನ್ನು ಕುಡಿಯುತ್ತಿರುವುದನ್ನು ಗಮನಿಸಿ. ನಮ್ಮ ಸ್ನಾಯುಗಳ ಚಟುವಟಿಕೆಗೆ ಸತತವಾದ ನೀರಿನ ಪೂರೈಕೆಯಾಗುತ್ತಲೇ ಇರಬೇಕು ಹಾಗೂ ಓಟದ ಸಮಯದಲ್ಲಿ ಹೆಚ್ಚು ನೀರಿನ ಬಳಕೆಯಾಗುತ್ತದೆ. ಅಷ್ಟೇ ಅಲ್ಲ, ದೇಹದಲ್ಲಿ ವಿಷವಸ್ತುಗಳೂ ಓಟದ ಸಮಯದಲ್ಲಿ ಹೆಚ್ಚೇ ಸಂಗ್ರಹವಾಗುತ್ತವೆ.

  ಸಾಕಷ್ಟು ನೀರು ಕುಡಿಯದಿರುವುದು

  ಸಾಕಷ್ಟು ನೀರು ಕುಡಿಯದಿರುವುದು

  ಇವನ್ನು ಹೊರಹಾಕಲೂ ನೀರು ಬೇಕು. ಆದ್ದರಿಂದ ಓಟಗಾರರಿಗೆ ಓಟಕ್ಕೂ ಮೊದಲು ಸಾಕಷ್ಟು ನೀರು ಕುಡಿಯುವುದು ಅವಶ್ಯವಾಗಿದೆ. ಓಟದ ನಡುವೆ ಹಾಗೂ ಓಟದ ಬಳಿಕವೂ ಸಾಕಷ್ಟು ನೀರು ಕುಡಿಯುವುದು ಅಗತ್ಯವಾಗಿದೆ. ಇದರಿಂದ ದೇಹ ಕಳೆದುಕೊಂಡಿದ್ದ ಶಕ್ತಿಯನ್ನು ಮತ್ತೆ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಒಂದು ವೇಳೆ ನೀರು ಕುಡಿಯದೇ ಇದ್ದರೆ ದೇಹ ಅತಿ ಶೀಘ್ರದಲ್ಲಿ ನಿರ್ಜಲೀಕರಣಕ್ಕೆ ಒಳಗಾಗುತ್ತದೆ ಹಾಗೂ ಇದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ.

  ಓಟಕ್ಕೂ ಮುನ್ನ ಹೆಚ್ಚಿನ ವ್ಯಾಯಾಮ ಮಾಡುವುದು

  ಓಟಕ್ಕೂ ಮುನ್ನ ಹೆಚ್ಚಿನ ವ್ಯಾಯಾಮ ಮಾಡುವುದು

  ಒಂದು ವೇಳೆ ನೀವು ಕೊಂಚ ದೂರವಾದರೂ ಓಡಬೇಕು ಎಂದು ಯೋಜಿಸಿದ್ದರೆ ಇದಕ್ಕೂ ಮುನ್ನ ಭಾರೀ ವ್ಯಾಯಾಮಗಳನ್ನು ಮಾಡಬಾರದು. ಏಕೆಂದರೆ ಭಾರೀ ವ್ಯಾಯಾಮದಲ್ಲಿ ಸ್ನಾಯುಗಳು ತಮ್ಮ ಗರಿಷ್ಟ ಮಿತಿಯಲ್ಲಿ ಕೆಲಸ ನಿರ್ವಹಿಸಿದ್ದು ತಮ್ಮ ಶಕ್ತಿಯನ್ನು ಕಳೆದುಕೊಂಡಿರುತ್ತವೆ. ಇವುಗಳು ಮತ್ತೆ ಮೊದಲಿನ ಸ್ಥಿತಿ ಪಡೆಯಲು ಕೊಂಚ ಹೆಚ್ಚೇ ಸಮಯ ಬೇಕಾಗುತ್ತದೆ.

  ಓಟಕ್ಕೂ ಮುನ್ನ ಹೆಚ್ಚಿನ ವ್ಯಾಯಾಮ ಮಾಡುವುದು

  ಓಟಕ್ಕೂ ಮುನ್ನ ಹೆಚ್ಚಿನ ವ್ಯಾಯಾಮ ಮಾಡುವುದು

  ಈ ಸಮಯದಲ್ಲಿ ಲಘು ವ್ಯಾಯಾಮಗಳಾದ ನಡಿಗೆ, ಮನೆಯ ಚಿಕ್ಕಪುಟ್ಟ ಕೆಲಸಗಳು ಮೊದಲಾದವುಗಳನ್ನು ಮಾಡುವ ಮೂಲಕ ಸ್ನಾಯುಗಳು ಉತ್ತಮ ಆರೋಗ್ಯದಿಂದಿರಲು ಸಾಧ್ಯವಾಗುತ್ತದೆ. ಬದಲಿಗೆ ಈ ಸಮಯದಲ್ಲಿ ಓಟ ಓಡಿದರೆ ಈಗಾಗಲೇ ದಣಿದಿರುವ ಸ್ನಾಯುಗಳನ್ನು ಪುನಃಶ್ಚೇತನ ಪಡೆಯುವ ಮುನ್ನವೇ ದಣಿಸುವ ಮೂಲಕ ಸ್ನಾಯುಗಳ ತುಂಡು ತುಂಡಾಗುವ ಹಾಗೂ ಪರಿಣಾಮವಾಗಿ ಭಾರೀ ನೋವು ಎದುರಾಗುವ ಸಾಧ್ಯತೆ ಇದೆ.

  ಅನಾರೋಗ್ಯಕರ ಆಹಾರ ಸೇವನೆ

  ಅನಾರೋಗ್ಯಕರ ಆಹಾರ ಸೇವನೆ

  ಇಷ್ಟು ದೂರ ಓಡಿ ಆಗಿದೆ, ಸಾಕಷ್ಟು ಕ್ಯಾಲೋರಿಗಳನ್ನೂ ದಹಿಸಿ ಆಗಿದೆ, ಈಗ ನೆಚ್ಚಿನ ಸಿದ್ಧ ಆಹಾರವನ್ನು ತಿನ್ನಲಡ್ಡಿಯಿಲ್ಲ ಎಂದು ಭಾವಿಸಿದ್ದವರಿಗೆ ನಿರಾಶೆ ಕಾದಿದೆ. ಏಕೆಂದರೆ ಓಟದ ಬಳಿಕ ದೇಹ ಹೆಚ್ಚಿನ ಆಹಾರವನ್ನು ಬೇಡುವುದೇನೋ ಹೌದು. ಆದರೆ ಈ ಸಮಯದಲ್ಲಿ ದೇಹಕ್ಕೆ ಪೌಷ್ಟಿಕ ಹಾಗೂ ಆರೋಗ್ಯಕರ ಆಹಾರದ ಅಗತ್ಯವಿದೆ. ಅನಾರೋಗ್ಯಕರ, ನಾರಿಲ್ಲದ ಮೈದಾ ಆಧಾರಿತ ಸಿದ್ಧ ಆಹಾರಗಳು ಈ ಸಮಯದಲ್ಲಿ ದೇಹಕ್ಕೆ ಸೂಕ್ತವಲ್ಲ. ನಾರಿಲ್ಲದೇ ಇರುವ ಕಾರಣ ಜೀರ್ಣಕ್ರಿಯೆ ಕಷ್ಟಕರವಾಗುತ್ತದೆ ಹಾಗೂ ಸೊಂಟದ ಸುತ್ತ ಕೊಬ್ಬು ಸಂಗ್ರಹಗೊಳ್ಳಲು ಕಾರಣವಾಗುತ್ತದೆ. ನೋಡಲು ಮಾತ್ರವೇ ಚೆನ್ನಾಗಿರುವ ಆದರೆ ಅತ್ಯಂತ ಅನಾರೋಗ್ಯಕರ ಆಹಾರವಾಗಿರುವ ಪಿಜ್ಜಾ ಬರ್ಗರ್ ಸ್ಯಾಂಡ್ವಿಚ್ ಫ್ರೈಡ್ ಚಿಕನ್ ಮೊದಲಾದ ಆಹಾರಗಳು ಸರ್ವಥಾ ಸಲ್ಲದು. ಒಂದು ವೇಳೆ ಕೊಂಚ ಪ್ರಮಾಣದಲ್ಲಿ ತಿಂದರೂ ನೀವು ಇಷ್ಟು ದೂರ ಓಡಿದ ಬಳಿಕ ಪಡೆದ ಕೊಂಚ ಪ್ರಯೋಜನವೂ ಆವಿಯಾಗಿ ಹೋಗುತ್ತದೆ ಹಾಗೂ ತೂಕದಲ್ಲಿ ಹೆಚ್ಚಳ ಹಾಗೂ ದಿನವಿಡೀ ಸುಸ್ತು ಆವರಿಸಿರುತ್ತದೆ. ಬದಲಿಗೆ ಈ ಸಮಯದಲ್ಲಿ ಹೆಚ್ಚಿನ ನಾರು ಇರುವ ಆಹಾರಗಳು, ಹಣ್ಣುಗಳು, ಗೋಧಿಯ ಆಹಾರಗಳನ್ನು ಸೇವಿಸುವುದು ಆರೋಗ್ಯಕರ.

  ಉಪಾಹಾರ ಮಾಡದೇ ಇರುವುದು

  ಉಪಾಹಾರ ಮಾಡದೇ ಇರುವುದು

  ಇಡಿಯ ದಿನದ ಚಟುವಟಿಕೆಗೆ ಉಪಾಹಾರ ತುಂಬಾ ಅಗತ್ಯ. ದಿನದ ಯಾವುದೇ ಹೊತ್ತಿನ ಆಹಾರವನ್ನು ಬಿಟ್ಟು ಉಪವಾಸ ಆಚರಿಸಿದರೂ ಬೆಳಗ್ಗಿನ ಉಪಾಹಾರವನ್ನು ಮಾತ್ರ ಯಾವುದೇ ಕಾರಣಕ್ಕೆ ತಡವಾಗಿಸಲೂಬಾರದು, ಬಿಡಲೂಬಾರದು. ವಿಶೇಷವಾಗಿ ಬೆಳಗ್ಗಿನ ಓಟದ ನಂತರ ವಿಶ್ರಾಂತಿಯ ಅವಧಿ ಕಳೆದ ಬಳಿಕ ಉಪಾಹಾರ ಸೇವಿಸದೇ ಇದ್ದರೆ ಇದು ದೇಹವನ್ನು ಅಪಾರವಾಗಿ ದಣಿಸಿ ದಿನದ ಎಲ್ಲಾ ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತದೆ. ಅತ್ಯಂತ ಮುಖ್ಯ ವಿಷಯವೆಂದರೆ ರಾತ್ರಿಯ ಅನೈಚ್ಛಿಕ ಕಾರ್ಯದಿಂದ ದಣಿದಿರುವ ಮೆದುಳಿಗೂ ಈಗ ರಕ್ತಪರಿಚಲನೆ ಹೆಚ್ಚು ಬೇಕಾಗಿದ್ದು ಈ ಸಮಯದಲ್ಲಿ ಉಪಾಹಾರ ಸೇವಿಸದೇ ಇದ್ದರೆ ಮೆದುಳಿನ ಎಲ್ಲಾ ಚಟುವಟಿಕೆಗಳ ಮೇಲೆ ಪ್ರಭಾವ ಉಂಟಾಗಬಹುದು ಹಾಗೂ ಖಿನ್ನತೆ, ಸಿಡಿಮಿಡಿ, ತಲೆನೋವು, ತಲೆ ತಿರುಗುವಿಕೆ, ಯೋಚನಾ ಸಾಮರ್ಥ ಕುಂದುವುದು ಮೊದಲಾದವು ಎದುರಾಗುತ್ತವೆ.

  ಉಪಾಹಾರ ಮಾಡದೇ ಇರುವುದು

  ಉಪಾಹಾರ ಮಾಡದೇ ಇರುವುದು

  ಆದ್ದರಿಂದ ಓಟ ಇರಲೀ ಇಲ್ಲದೇ ಇರಲಿ, ಉಪಾಹಾರವನ್ನೂ ಕಡ್ಡಾಯವಾಗಿ ಮಾಡಲೇಬೇಕು. ಓಟದ ಬಳಿಕ ದೇಹಕ್ಕೆ ಹೆಚ್ಚಿನ ಕಾರ್ಬೋಹೈಡ್ರೇಟುಗಳ ಅಗತ್ಯವಿರುತ್ತದೆ. ಈ ಸಮಯದಲ್ಲಿ ಪ್ರೋಟೀನು, ವಿಟಮಿನ್ನುಗಳು ಹೆಚ್ಚಿರುವ ಆಹಾರಗಳ ಸೇವನೆ ಸೂಕ್ತ. ಇದರಲ್ಲಿ ಬೇಯಿಸಿದ ಮೊಟ್ಟೆ, ಹಾಲು, ತಾಜಾ ಹಣ್ಣಿನ ರಸ, ಹಸಿಯಾಗಿ ಸೇವಿಸಬಹುದಾದ ಎಲೆಗಳು, ಓಟ್ಸ್, ಮೊಸರು ಮೊದಲಾದವು ಸೂಕ್ತ ಆಯ್ಕೆಯಾಗಿವೆ. ಅಷ್ಟೇ ಅಲ್ಲ, ಈ ಉಪಾಹಾರದ ಬಳಿಕ ನಮ್ಮ ಜೀರ್ಣಾಂಗಗಳು ಇವನ್ನು ಜೀರ್ಣಿಸಿಕೊಳ್ಳಲು ವ್ಯಸ್ತರಾಗುವ ಮೂಲಕ ಮಧ್ಯಾಹ್ನದ ಊಟದ ಸಮಯದವರೆಗೂ ಬೇರೇನೂ ತಿನ್ನಲು ಬೇಡಿಕೆ ಇಡುವುದಿಲ್ಲ. ಇದರಿಂದ ಅನಾರೋಗ್ಯಕರ ಸಿದ್ಧ ಆಹಾರಗಳನ್ನು ತಿನ್ನುವ ಬಯಕೆಯಾಗದೇ ತೂಕ ಹಾಗೂ ದೇಹದಾರ್ಢ್ಯತೆ ಉತ್ತಮವಾಗಿರಲು ನೆರವಾಗುತ್ತದೆ.

  English summary

  Never Do These Things After Running

  Running is a strenuous workout process that involves a great deal of muscle strength and body fitness. Health freaks, who are conscious about their physique and figure often opt for running as a predominant exercise for losing body weight and increasing the strength of leg muscles. In running, a lot of activity is involved which induces high levels of metabolism that burn the excess fat stored in the body. The body sweats a lot as a result of the heavy activity that it undertakes.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more