ಆರೋಗ್ಯ ಟಿಪ್ಸ್: ಕೊಬ್ಬು ಕರಗಿಸುವ ನೈಸರ್ಗಿಕ 'ಚಹಾ'

By: Hemanth
Subscribe to Boldsky

ತೂಕ ಹೆಚ್ಚಿಸಿಕೊಂಡಿರುವವರನ್ನು ನೋಡಿದರೆ ಅವರಿಗೆ ಕೊಬ್ಬು ಹೇಗೆ ಕರಗಿಸಿಕೊಳ್ಳಬೇಕೆಂಬ ಚಿಂತೆ ಇದ್ದೇ ಇರುತ್ತದೆ. ತೂಕ ಹೆಚ್ಚಾಗುವುದು ಆಹಾರ ಕ್ರಮ, ಜೀವನಶೈಲಿ ಮತ್ತು ಅನುವಂಶೀಯತೆಯಿಂದಾಗಿದೆ. ತೂಕ ಹೆಚ್ಚಿಸಿಕೊಂಡಿರುವ ಮಂದಿ ಇದನ್ನು ಕಡಿಮೆ ಮಾಡಲು ಹಲವಾರು ರೀತಿಯ ಕಸರತ್ತು ನಡೆಸುತ್ತಾರೆ. ಆದರೆ ಫಲಿತಾಂಶ ಹೆಚ್ಚಾಗಿ ಸಿಗುವುದಿಲ್ಲ. ಬರೀ ಒಂದೇ ವಾರದಲ್ಲಿ ಹೊಟ್ಟೆಯ ಕೊಬ್ಬು ಕರಗಿಸಿಕೊಳ್ಳಿ!

ಮಾರುಕಟ್ಟೆಯಲ್ಲಿ ಕೊಬ್ಬನ್ನು ಕರಗಿಸುವ ಹಲವಾರು ರೀತಿಯ ಮಾತ್ರೆಗಳು ಲಭ್ಯವಿದ್ದರೂ ಇದು ಅಡ್ಡ ಪರಿಣಾಮ ಬೀರುವುದು ಖಚಿತ. ಆದರೆ ಕೆಲವೊಂದು ಅಡುಗೆ ಸಾಮಗ್ರಿಗಳನ್ನೇ ಬಳಸಿಕೊಂಡು ಮಾಡುವಂತಹ ಚಹಾದಿಂದ ಕೊಬ್ಬನ್ನು ಕರಗಿಸಬಹುದು. ಶುಂಠಿ, ದಾಲ್ಚಿನ್ನಿ ಮತ್ತು ಜೇನುತುಪ್ಪವನ್ನು ಹಾಕಿಕೊಂಡು ಮಾಡುವಂತಹ ಚಹಾ ಕೊಬ್ಬನ್ನು ಕರಗಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಇದು ಹೇಗೆಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ.

ದಾಲ್ಚಿನ್ನಿಯು ಸೊಂಟದ ಸುತ್ತಲಿನ ಕೊಬ್ಬನ್ನು ಕರಗಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ದಾಲ್ಚಿನ್ನಿ, ಶುಂಠಿಯು ಪೂರ್ಣ ಸಂತೃಪ್ತಿಯನ್ನು ನೀಡಿ ಸಕ್ಕರೆಯನ್ನು ಕಡಿಮೆ ಮಾಡಲು ನೆರವಾಗುವುದು ಎಂದು ಅಧ್ಯಯನಗಳು ಕಂಡುಕೊಂಡಿವೆ. ಅದರಲ್ಲೂ ನಿಯಮಿತವಾಗಿ ದಾಲ್ಚಿನ್ನಿಯನ್ನು ಆಹಾರ ಕ್ರಮದಲ್ಲಿ ಸೇವಿಸುವುದರಿಂದ ರಕ್ತದ ಸಕ್ಕರೆ ಪರಿಚಲನೆಯು ಉತ್ತಮವಾಗಿ ಹೃದಯ ಹಾಗೂ ಮೆದುಳಿನ ಕಾರ್ಯ ಸುಧಾರಣೆಯಾಗುವುದು.   ಹೊಟ್ಟೆಯ ಬೊಜ್ಜನ್ನು ಕರಗಿಸಲು ಪರಿಣಾಮಕಾರಿ ಟಿಪ್ಸ್

ಶುಂಠಿ ಕೂಡ ಸೊಂಟದ ಸುತ್ತಲಿನ ಕೊಬ್ಬನ್ನು ಕರಗಿಸಬಲ್ಲದು ಎಂದು ಹೇಳಲಾಗುತ್ತಿದೆ. ಇದು ಜೀರ್ಣಕ್ರಿಯೆ ಮತ್ತು ತೂಕವನ್ನು ನಿಯಂತ್ರಣದಲ್ಲಿ ಇಡುತ್ತದೆ. ಈ ಚಹಾದಲ್ಲಿ ಶುಂಠಿಯನ್ನು ಸೇರಿಸಿಕೊಳ್ಳುವುದರಿಂದ ಅದು ಜೀರ್ಣ ಕ್ರಿಯೆಗೆ ನೆರವಾಗುತ್ತದೆ. ತಾಜಾ ಶುಂಠಿ ಹೊಟ್ಟೆಯಲ್ಲಿನ ಉಬ್ಬರ ಮತ್ತು ಸೆಳೆತವನ್ನು ಕಡಿಮೆ ಮಾಡುತ್ತದೆ. ಕೊಬ್ಬು ಕರಗಿಸುವ ಅದ್ಭುತ ಚಹಾವನ್ನು ಹೇಗೆ ತಯಾರಿಸಿಕೊಳ್ಳುವುದು ಎಂದು ತಿಳಿಯಲು ಮುಂದಕ್ಕೆ ಓದಿಕೊಳ್ಳಿ....    

!#

!#

ಈ ಪಾನೀಯವನ್ನು ಮಾಡಿಕೊಳ್ಳುವುದು ತುಂಬಾ ಸುಲಭ ಮತ್ತು ಲಾಭ ಅಧಿಕ

2#

2#

ದಾಲ್ಚಿನ್ನಿ ಚಕ್ಕೆ ಮತ್ತು ತಾಜಾ ಶುಂಠಿಯನ್ನು ಸ್ವಲ್ಪ ನೀರಿನಲ್ಲಿ ಸುಮಾರು 20 ನಿಮಿಷ ಕಾಲ ಕುದಿಸಿ.

3#

3#

ಈ ವೇಳೆ ಸುವಾಸನೆ ಮತ್ತು ಎಲ್ಲಾ ಲಾಭಗಳು ಅದರಲ್ಲಿರುವುದು

3#

3#

ಇನ್ನು ಈ ನೀರನ್ನು ಸೋಸಿಕೊಂಡು ಅದಕ್ಕೆ ಸ್ವಲ್ಪ ಜೇನುತುಪ್ಪ ಬೆರೆಸಿಕೊಂಡು ಕುಡಿಯಿರಿ.

4#

4#

ಬೇಕಿದ್ದರೆ ಸ್ವಲ್ಪ ಹೆಚ್ಚಿಗೆ ಮಾಡಿಕೊಂಡು ಇದನ್ನು ಫ್ರಿಡ್ಜ್‌ನಲ್ಲಿ ಇಟ್ಟುಬಿಡಿ. ಬಳಿಕ ಅದನ್ನು ತೆಗೆದು ಬಿಸಿ ಮಾಡಿ ರಾತ್ರಿ ಊಟದ ಬಳಿಕ ಕುಡಿಯಿರಿ.ಕೆಲವೇ ವಾರಗಳಲ್ಲಿ ಕೊಬ್ಬು ಕರಗಿ ನೀರಾಗುವುದು.

 
English summary

How To Make An Incredible Fat-burning Tea

Have your ever wished for a warm drink that will satisfy your sweet tooth as well as your weight loss goals? Then this article is for you. This easy-to-make tea requires just three ingredients - fresh ginger, cinnamon sticks and honey. It is definitely easy to prepare this, and will help you big time with your weight loss goals.
Please Wait while comments are loading...
Subscribe Newsletter