For Quick Alerts
ALLOW NOTIFICATIONS  
For Daily Alerts

ಯಾವ್ಯಾವ ಸಮಸ್ಯೆಗಳಿಗೆ ಯಾವ ಯೋಗಾಸನ ಉಪಯುಕ್ತ?

By Deepu
|

ದೇಹದ ಪ್ರತಿಯೊಂದು ಅಂಗಗಳ ಮೇಲೆ ದಿನನಿತ್ಯ ಹೆಚ್ಚಿನ ಒತ್ತಡ ಹಾಕುತ್ತಿರುತ್ತೇವೆ. ಇದರಿಂದಾಗಿ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕುತ್ತಿಗೆ ನೋವು ಕಾಣಿಸಿಕೊಳ್ಳುವುದು. ಮಲಗುವ ಭಂಗಿ, ಕುಳಿತುಕೊಳ್ಳುವ ಭಂಗಿಯಿಂದಾಗಿ ಕುತ್ತಿಗೆ ನೋವು ಬರುವುದು. ಕುತ್ತಿಗೆ ನೋವು ನಿವಾರಣೆ ಮಾಡಲು ಸುಲಭವಾಗಿ ಮಾಡಬಹುದಾದ ಕೆಲವೊಂದು ಆಸನಗಳು ಇವೆ.

ನಿಮಗೆ ಕುತ್ತಿಗೆ ನೋವು ಕಾಣಿಸಿಕೊಂಡಾಗ ಈ ಆಸನ ಮಾಡಿದರೆ ಅದರಿಂದ ನೋವು ಕಡಿಮೆಯಾಗುವುದು. ನೀವು ಪ್ರತಿನಿತ್ಯವು ಈ ಆಸನಗಳನ್ನು ಮಾಡುವುದರಿಂದ ಹೆಚ್ಚು ಆರಾಮ ಪಡೆಯಬಹುದು. ಎಷ್ಟೇ ವ್ಯಸ್ತರಾಗಿದ್ದರೂ ನೀವು ಈ ಆಸನಗಳನ್ನು ಮಾಡಬಹುದಾಗಿದೆ. ಇದಕ್ಕೆ ಹೆಚ್ಚು ಸಮಯವೂ ಬೇಕಿಲ್ಲ.

Balasana

ಬಾಲಾಸನ ಅಥವಾ ಮಗುವಿನ ಆಸನ
ಲಾಭಗಳು
ಬೆನ್ನಿಗೆ ಆರಾಮ ನೀಡಿ ನರವ್ಯವಸ್ಥೆಯು ಶಾಂತವಾಗಿರುವಂತೆ ಮಾಡುವುದು.
ಮಲಬದ್ಧತೆ ನಿವಾರಿಸುವುದು
ಇಂತಹ ಸಮಸ್ಯೆಯಿದ್ದರೆ ಈ ಆಸನ ಮಾಡಬೇಡಿ
ಬೆನ್ನು ಅಥವಾ ಮೊಣಕಾಲಿನ ಗಾಯದ ಸಮಸ್ಯೆಯಿದ್ದರೆ
ಗರ್ಭಿಣಿ ಮಹಿಳೆಯರು ಇದನ್ನು ಕಡೆಗಣಿಸಬೇಕು. ಬಾಲಾಸನ ಮಾಡುವ ವಿಧಾನಕ್ಕಾಗಿ ಈ ಲಿಂಕ್ ಕ್ಲಿಕ್ ಮಾಡಿ

ಕಾಡುವ ಸೊಂಟ ನೋವಿಗೆ ಅನುಸರಿಸಿ-'ಆನಂದ ಬಾಲಾಸನ'

ನಟರಾಜ ಆಸನ
ಲಾಭಗಳು
ಇದು ಮನಸ್ಸಿಗೆ ಶಾಂತಿ ನೀಡಿ, ಒತ್ತಡ ಕಡಿಮೆ ಮಾಡುವುದು.
ಇದು ದೇಹಸ್ಥಿತಿ ಸುಧಾರಿಸುವುದು
ಆದರೆ ಗರ್ಭಿಣಿ ಮಹಿಳೆಯರು ಈ ಆಸನ ಮಾಡಬಾರದು.

ಮಾರ್ಜಾಸನ ಅಥವಾ ಬೆಕ್ಕಿನ ಆಸನ
ಲಾಭಗಳು
ಬೆನ್ನಿನಲ್ಲಿ ಸ್ಥಿತಿಸ್ಥಾಪಕತ್ವ ಹೆಚ್ಚಿಸುವುದು
ಮೊಣಕೈ ಹಾಗೂ ಭುಜ ಬಲಗೊಳಿಸುವುದು
ಜೀರ್ಣಕ್ರಿಯೆ ವ್ಯವಸ್ಥೆಗೆ ಮಸಾಜ್ ಮಾಡಿ ಜೀರ್ಣಕ್ರಿಯೆ ಸುಧಾರಿಸುವುದು.
ಹೊಟ್ಟೆಗೆ ಶಕ್ತಿ ನೀಡುವುದು.
ಮನಸ್ಸಿಗೆ ಆರಾಮ ನೀಡಿ ರಕ್ತಸಂಚಾರ ಉತ್ತಮಗೊಳಿಸುವುದು.
ಮರ್ಜಾಸನ ಯಾರು ಮಾಡಬಾರದು?
ಬೆನ್ನು ನೋವು ಅಥವಾ ಕುತ್ತಿಗೆ ನೋವು ಇರುವವರು.

ವಿಪರೀತ ಕರನಿ ಆಸನ ಅಥವಾ ಕಾಲುಗಳನ್ನು ಗೋಡೆಗೆ ಇಡುವುದು
ಲಾಭಗಳು
ಸಣ್ಣ ಮಟ್ಟದ ತಲೆನೋವು ನಿವಾರಣೆ
ನಿಶ್ಯಕ್ತಿ ನಿವಾರಣೆ
ಕಾಲುಗಳಲ್ಲಿ ಸ್ನಾಯು ಸೆಳೆತ ನಿವಾರಣೆ
ಆಸನ ಯಾರು ಮಾಡಬಾರದು
ಕುತ್ತಿಗೆ ಅಥವಾ ಬೆನ್ನು ನೋವು ಇರುವವರು.

ಉತ್ಥಿತ ತ್ರಿಕೋನಾಸನ
ಲಾಭಗಳು
ಸಾಮಾನ್ಯ ತಲೆ ನೋವು ನಿವಾರಣೆ
ದೇಹದ ಯಾವುದೇ ಒತ್ತಡ ನಿವಾರಣೆ
ಬೆನ್ನು ಮೂಳೆ ಬಲಗೊಳ್ಳುವುದು ಮತ್ತು ವಿಸ್ತಾರವಾಗುವುದು.
ಈ ಆಸನ ಯಾರು ಕಡೆಗಣಿಸಬೇಕು?
ಹೃದಯ ಸಮಸ್ಯೆ ಇರುವವರು.
ತಲೆನೋವು ಇರುವವರು.
ಭೇದಿ ಇರುವವರು.
ರಕ್ತದೊತ್ತಡ ಕಡಿಮೆ ಇರುವವರು.

ಸದೃಢ ಕಾಲುಗಳಿಗಾಗಿ ಅನುಸರಿಸಿ 'ಪರಿವೃತ್ತ ತ್ರಿಕೋನಾಸನ'

English summary

Here Are Simple Yoga Asanas To Relieve Neck Pain

Here are simple asanas that do away with the frequent or occasional neck pain. They are easy to do and very relaxing, you will feel much more at ease and want to do it everyday if you try. It doesn't eat into your schedule and goes on to strengthen your neck with less effort.
Story first published: Tuesday, October 3, 2017, 10:30 [IST]
X
Desktop Bottom Promotion