For Quick Alerts
ALLOW NOTIFICATIONS  
For Daily Alerts

ಜಿಮ್ ಮಾಡಿದ ನಂತರ ದಿನನಿತ್ಯದ ಆಹಾರಕ್ರಮ ಹೇಗಿರಬೇಕು?

By Deepu
|

ದೇಹದ ಆರೋಗ್ಯದ ದೃಷ್ಟಿಯಿಂದ ಅಥವಾ ನಮ್ಮ ಮೈಕಷ್ಟಿನ ಆಕರ್ಷಣೆಗಾಗಿ ನಿತ್ಯವೂ ಜಿಮ್, ವ್ಯಾಯಾಮ, ಓಟ ಅಥವಾ ನಡಿಗೆಯಂತಹ ದೇಹ ದಂಡನೆ ಅಥವಾ ವ್ಯಾಯಾಮ ಮಾಡುವುದು ಸಹಜ. ಆದರೆ ಇವುಗಳನ್ನು ಮಾಡುವಾಗ ಸೂಕ್ತ ರೀತಿಯ ಮಾಹಿತಿ ಮತ್ತು ವಿಧಿ-ವಿಧಾನಗಳು ನಮಗೆ ತಿಳಿದಿರಬೇಕು. ಇಲ್ಲವಾದರೆ ಅವುಗಳಿಂದ ಉಂಟಾಗುವ ಉಪಯೋಗಗಳಿಗಿಂತ ಅಪಾಯಗಳೇ ಹೆಚ್ಚಾಗಿರುತ್ತವೆ.

ಜಿಮ್‍ಗಳಲ್ಲಿ ಒಂದು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಸಮಯ ಅಭ್ಯಾಸ ಮಾಡುವುದರಿಂದ ಮೈಕಟ್ಟಿನ ಆರೋಗ್ಯ ಸುಧಾರಣೆ ಆಗಬಹುದು. ಆದರೆ ಅಭ್ಯಾಸದ ನಂತರ ಕೆಲವು ಸೂಕ್ತ ಕ್ರಮಗಳನ್ನು ಅನುಸರಿಸುವುದು ಮುಖ್ಯ. ಇಲ್ಲವಾದರೆ ಗಂಟೆಗಟ್ಟಲೆ ಮಾಡಿದ ಪರಿಶ್ರಮ ಕ್ಷಣಾರ್ಧದಲ್ಲಿ ವಿಫಲವಾಗಿ ಹೋಗುತ್ತದೆ. ಜಿಮ್ ಮಾಡಿದ ನಂತರ ನಾವು ಯಾವೆಲ್ಲಾ ಆಹಾರ ಕ್ರಮವನ್ನು ಕೈಗೊಳ್ಳಬೇಕು? ಯಾವ ಆಹಾರ ಕೆಲಸಗಳನ್ನು ಮಾಡಬಾರದು? ಎನ್ನುವುದನ್ನು ತಿಳಿದು ಕೊಂಡಿರಬೇಕು. ಹೌದು, ಅಂತಹ ವಿಚಾರಗಳ ಚಿಕ್ಕ ಪರಿಚಯವನ್ನು ಈ ಲೇಖನ ಮಾಡಿಕೊಡುತ್ತದೆ..

ಕೊಬ್ಬಿನ ಆಹಾರವನ್ನು ಸೇವಿಸಬೇಡಿ

ಕೊಬ್ಬಿನ ಆಹಾರವನ್ನು ಸೇವಿಸಬೇಡಿ

ದೇಹವು ಜಿಮ್ ಮತ್ತು ವ್ಯಾಯಾಮದಿಂದ ದೇಹವು ದಣಿದಿರುವಾಗ ಕೊಬ್ಬಿನ ಆಹಾರ ಪದಾರ್ಥಗಳನ್ನು ಸೇವಿಸಬಾರದು. ಹಾಗೊಮ್ಮೆ ಸೇವಿಸಿದರೆ ಮಾಡಿದ

ಪರಿಶ್ರಮಕ್ಕೆ ಯಾವುದೇ ಫಲ ದೊರೆಯದು. ಆದಷ್ಟು ಗುಣಮಟ್ಟದ ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‍ಯುಕ್ತ ಆಹಾರವನ್ನು ಸೇವಿಸಬೇಕು. ನಾವು

ಸೇವಿಸುವ ಆಹಾರವು ತ್ವರಿತವಾಗಿ ರಕ್ತವನ್ನು ಪ್ರವೇಶಿಸುತ್ತದೆ. ಕೊಬ್ಬಿನ ಆಹಾರ ಸೇವಿಸಿದರೆ ಅವು ಜೀರ್ಣಾಂಗ ಕ್ರಿಯೆಯನ್ನು ನಿಧಾನಗೊಳಿಸುತ್ತವೆ.

ನೀರನ್ನು ಕುಡಿಯಬಾರದು

ನೀರನ್ನು ಕುಡಿಯಬಾರದು

ಸಾಮಾನ್ಯವಾಗಿ ದೇಹವು ಹೆಚ್ಚು ದಣಿದಾಗ ನೀರು ಕುಡಿಯುವುದು ಒಂದು ಅಭ್ಯಾಸ. ಆದರೆ ಈ ಅಭ್ಯಾಸ ಆರೋಗ್ಯ ದೃಷ್ಟಿಯಿಂದ ಸೂಕ್ತವಾದದ್ದಲ್ಲ. ತಾಲೀಮು ಅಥವಾ ಅಭ್ಯಾಸದ ಸಮಯದಲ್ಲಿ ದೇಹದಿಂದ ಹೊರ ಹೊಮ್ಮಿದ ನೀರಿನಂಶವು ಪುನಃ ತಾನಾಗಿಯೇ ದೇಹದಲ್ಲಿ ಶೇಖರಣೆಗೊಳಗಾಗಬೇಕು.ತಕ್ಷಣಕ್ಕೆ ನೀರನ್ನು ಕುಡಿಯ ಬಾರದು.

ಬ್ರೆಡ್ ತಿನ್ನಬೇಡಿ

ಬ್ರೆಡ್ ತಿನ್ನಬೇಡಿ

ಕೆಲವು ಕಾರಣಗಳಿಗಾಗಿ ಶ್ರಮದ ಕೆಲಸದ ತರುವಾಯ ಬಿಳಿಯ ಬ್ರೆಡ್ ಅನ್ನು ತಿನ್ನದಿರುವುದೇ ಒಳಿತು. ಮೊದಲನೆಯದಾಗಿ, ಅದರಲ್ಲಿ ಸುಲಭವಾಗಿ ಜೀರ್ಣಗೊಳ್ಳುವ೦ತಹ ಶರ್ಕರ ಪಿಷ್ಟಗಳು ದ೦ಡಿಯಾಗಿವೆ ಎ೦ಬ ಒ೦ದೇ ಕಾರಣಕ್ಕೆ ಶ್ರಮದ ಕೆಲಸದ ತರುವಾಯ ಸೇವಿಸಲು ಅದು ನಿಮಗೆ ಅತ್ಯ೦ತ ಪ್ರಶಸ್ತವಾದದ್ದೆ೦ದೇನೂ ಅಲ್ಲ. ಇದು ಗರಿಷ್ಟ ಪ್ರಮಾಣದಲ್ಲಿ ಗ್ಲುಟೆನ್ ಮತ್ತು ಸಕ್ಕರೆಯನ್ನು ಹೊ೦ದಿದ್ದು, ಇದು ನಿಮ್ಮ ಜೀರ್ಣಕ್ರಿಯೆಗೆ ಅಡ್ಡಿಯನ್ನು೦ಟು ಮಾಡಿನಿಮ್ಮ ರಕ್ತದ ಸಕ್ಕರೆಯ ಮಟ್ಟವನ್ನು ಕ್ಷಿಪ್ರಗತಿಯಲ್ಲಿ ಏರಿಸುತ್ತದೆ. ಇದರ ಬದಲಿಗೆ, ಬಹುಧಾನ್ಯದ ಕ೦ದುಬಣ್ಣದ ಟೋಸ್ಟ್ ಅನ್ನು ಸೇವಿಸಿರಿ ಅಥವಾ ಇದಕ್ಕಿ೦ತಲೂ ಉತ್ತಮವಾದುದೆ೦ದರೆ, ಮೊಳಕೆ ಬರಿಸಿದ ಬ್ರೆಡ್. ಇದರಲ್ಲಿ ಸ೦ಸ್ಕರಿಸಿದ ಕಾಳುಗಳಿಗೆ ಬದಲಾಗಿ ಸಜೀವ ಕಾಳುಗಳಿರುತ್ತವೆ.

ಕೆ೦ಪು ಮಾ೦ಸದಿಂದ ದೂರವಿರಿ

ಕೆ೦ಪು ಮಾ೦ಸದಿಂದ ದೂರವಿರಿ

ಜೀರ್ಣಗೊಳ್ಳಲು ಅತೀ ಕಠಿಣವಾದ ವಸ್ತುಗಳಲ್ಲಿ ಕೆ೦ಪು ಮಾ೦ಸವೂ ಕೂಡ ಒ೦ದಾಗಿದ್ದು, ಈ ಕಾರಣಕ್ಕಾಗಿ, ಇದು ಪರಿಶ್ರಮದ ಕೆಲಸದ ನ೦ತರ ತಿನ್ನಬಾರದ ಆಹಾರವಸ್ತುಗಳ ನನ್ನ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊ೦ಡಿದೆ. ಕೆ೦ಪು ಮಾ೦ಸವು ಪ್ರಾಣಿಜನ್ಯ ಕೊಬ್ಬನ್ನು ಅತಿಯಾಗಿ ಹೊ೦ದಿದ್ದು, ಇದು ಕೇವಲ ರಕ್ತನಾಳಗಳಲ್ಲಿ ಸುಲಭ ರಕ್ತಪರಿಚಲನೆಗೆ ಅಡ್ಡಿಪಡಿಸುವುದಷ್ಟೇ ಅಲ್ಲ, ಇದು ನಿಮ್ಮ ಆಯ್ಕೆಯ ಯೋಗ್ಯ ಪ್ರೋಟೀನ್ ಅ೦ತೂ ಅಲ್ಲವೇ ಅಲ್ಲ.

ಮೊಸರು ಸೇವಿಸಬೇಡಿ

ಮೊಸರು ಸೇವಿಸಬೇಡಿ

ಪೂರ್ಣಪ್ರಮಾಣದಲ್ಲಿ ಕೊಬ್ಬನ್ನೊಳಗೊ೦ಡ ಮೊಸರಿನ ಸೇವನೆಯನ್ನು ಮಾಡಬೇಡಿರಿ. ಏಕೆ೦ದರೆ, ಇದು ಪರ್ಯಾಪ್ತ ಕೊಬ್ಬಿನಿ೦ದ ಸಮೃದ್ಧವಾಗಿದ್ದು, ಪ್ರೋಟೀನ್ ಅ೦ಶವನ್ನು ಕಡಿಮೆ ಹೊ೦ದಿದ್ದು, ಜೀರ್ಣಗೊಳ್ಳಲು ಸಾಮಾನ್ಯ ಮೊಸರಿಗಿ೦ತಲೂ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ. ಇನ್ನು ವರ್ಕ್ ಔಟ್ ಮಾಡಿದ ನಂತರ ಸೇವಿಸಬೇಕಾದ ಆಹಾರಗಳು ಇಲ್ಲಿದೆ ನೋಡಿ...

ಮೊಳಕೆ ಬರಿಸಿದ ಧಾನ್ಯಗಳು

ಮೊಳಕೆ ಬರಿಸಿದ ಧಾನ್ಯಗಳು

ಏಕದಳ ಧಾನ್ಯ ಒಂದು ಬಟ್ಟಲು ಏಕದಳ ಧಾನ್ಯ, ಸ್ನಾಯು ಶಕ್ತಿಗೆ ಒಂದು ಉತ್ತಮ ಮೂಲವಾಗಿದೆ. ಈ ಧಾನ್ಯಗಳಲ್ಲಿ ಜೀವಕೋಶೀಯ ಚಯಾಪಚಯ ಶಕ್ತಿಯನ್ನು ಹೆಚ್ಚಿಸುವ ಪ್ರೊಟೀನ್ ಮತ್ತು ಕಾರ್ಬೋಹೈಡ್ರೇಟ್ ಸಮೃದ್ಧವಾಗಿದೆ. ಹಾಲು ಅಥವಾ ಚಾಕಲೇಟ್ ಹಾಲಿನೊಂದಿಗೆ ಪ್ರೊಟೀನ್ ಹೊಂದಿರುವಏಕದಳ ಧಾನ್ಯಗಳನ್ನು ಒಂದು ಬೌಲ್ ನಷ್ಟು ಸೇವಿಸಿದರೆ ಸ್ನಾಯುಗಳು ಬಲಗೊಳ್ಳುತ್ತವೆ.

ಸಿಹಿ ಗೆಣಸು

ಸಿಹಿ ಗೆಣಸು

ಸಿಹಿ ಗೆಣಸು ಸಿಹಿ ಗೆಣಸು ಆಹಾರದಲ್ಲಿ ಕಾರ್ಬೋಹೈಡ್ರೇಟ್, ಫೈಬರ್, ಬೀಟಾ-ಕ್ಯಾರೋಟಿನ್, ವಿಟಮಿನ್ ಸಿ, ಮ್ಯಾಂಗನೀಸ್ ಮತ್ತು ಪೊಟ್ಯಾಶಿಯಂ ಅಂಶಗಳು ಸಮೃದ್ಧವಾಗಿದೆ. ವ್ಯಾಯಾಮದ ನಂತರ, ದೇಹದ ಗ್ಲೈಕೋಜೆನ್ (glycogen) ಮಟ್ಟ ಕಡಿಮೆಯಾಗಲ್ಪಡುತ್ತದೆ, ಮತ್ತು ಸಿಹಿ ಗೆಣಸು, ಗ್ಲೈಕೋಜೆನ್ ಮಟ್ಟವನ್ನು ಮತ್ತೆ ಹೆಚ್ಚಿಸುತ್ತದೆ.

ಆದಷ್ಟು ತಾಜಾ ಹಣ್ಣಿನ ಜ್ಯೂಸ್ ಕುಡಿಯಿರಿ

ಆದಷ್ಟು ತಾಜಾ ಹಣ್ಣಿನ ಜ್ಯೂಸ್ ಕುಡಿಯಿರಿ

ಹಣ್ಣುಗಳಲ್ಲಿ, ಫೈಬರ್, ನೀರು, ವಿಟಮಿನ್ ಸಿ ಹಾಗೂ ಕಾರ್ಬೋಹೈಡ್ರೇಟ್ ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಇವು ದೇಹಕ್ಕೆ ಪೋಷಕಾಂಶಗಳನ್ನು ಮರಳಿ ನೀಡಲು ಮತ್ತು ನಿಮ್ಮ ದಣಿದ ಸ್ನಾಯುಗಳನ್ನು ಶಕ್ತಿಯುತವಾಗಿಸಲು ಸಹಾಯ ಮಾಡುತ್ತವೆ. ಹಣ್ಣುಗಳು ಅಥವಾ ಹಣ್ಣಿನ ರಸವನ್ನು ವ್ಯಾಯಾಮದ ನಂತರಸೇವಿಸುವುದರಿಂದ ದಣಿದ ಸ್ನಾಯುಗಳಿಗೆ ಸಾಕಷ್ಟು ಪ್ರೊಟೀನ್ ಗಳು ದೊರಕುತ್ತವೆ.

ನಟ್ಸ್ ಮತ್ತು ಡ್ರೈ ಫ್ರೂಟ್ಸ್

ನಟ್ಸ್ ಮತ್ತು ಡ್ರೈ ಫ್ರೂಟ್ಸ್

ನಟ್ಸ್ ಮತ್ತು ಡ್ರೈ ಫ್ರೂಟ್ಸ್ ಗಳಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್, ವಿಟಮಿನ್ ಎ, ವಿಟಮಿನ್ ಕೆ ಮತ್ತು ಕ್ಯಾಲ್ಸಿಯಂ ಅಂಶಗಳು ಸಮೃದ್ಧವಾಗಿವೆ. ಡ್ರೈಫ್ರೂಟ್ಸ್ ಸೇವನೆಯಿಂದ ಸುಲಭವಾಗಿ ಜೀರ್ಣಿಸಿಕೊಳ್ಳಲು ಮತ್ತು ಗ್ಲೈಕೋಜಿನ್ ಮಟ್ಟ ಹೆಚ್ಚಲು ಸಾಧ್ಯ. ಮತ್ತು ಇದರಿಂದಾಗಿ ದೇಹದಲ್ಲಿ ಶಕ್ತಿಯ ಮಟ್ಟವೂ ಹೆಚ್ಚುತ್ತದೆ.

ಆವಕಾಡೊ(ಬೆಣ್ಣೆ ಹಣ್ಣು)

ಆವಕಾಡೊ(ಬೆಣ್ಣೆ ಹಣ್ಣು)

ಆವಕಾಡೊ ಸ್ಯಾಚುರೇಟೆಡ್ ಕೊಬ್ಬುಗಳನ್ನು, ಫೋಲಿಕ್ ಆಮ್ಲ, ವಿಟಮಿನ್ ಕೆ, ವಿಟಮಿನ್ ಸಿ, ವಿಟಮಿನ್ ಈ ಮತ್ತು ಪಾಂಟೊಥೆನಿಕ್ ಆಮ್ಲಗಳನ್ನು ಒಳಗೊಂಡಿದೆ. ಇದು ನಿಮ್ಮ ರಕ್ತದೊತ್ತಡ ಸರಿಯಾಗಿ ನಿಯಂತ್ರಿಸುವ ಪೊಟ್ಯಾಶಿಯಂ ಅಂಶವನ್ನು ಹೊಂದಿದೆ. ಇದು ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ನೀವು ದಿನವಿಡೀ ಸಕ್ರಿಯ ಮತ್ತು ಶಕ್ತಿಯುತರಾಗಿರಲು ಸಹಾಯ ಮಾಡುತ್ತದೆ.

ಆಮ್ಲೆಟ್

ಆಮ್ಲೆಟ್

ವ್ಯಾಯಾಮದ ನಂತರ ದೇಹದ ಸ್ನಾಯು ಆರೋಗ್ಯಕ್ಕೆ ಅಧಿಕ ಪ್ರೊಟೀನ್ ಆಹಾರ ಅಗತ್ಯವಿದೆ. ಮೊಟ್ಟೆಯ ಬಿಳಿಯ ಭಾಗ ವಿವಿಧ ಜೀವಸತ್ವಗಳ ಜೊತೆಗೆ ಪ್ರೊಟೀನ್ ಮತ್ತು ಅಗತ್ಯ ಅಮೈನೋ ಆಮ್ಲಗಳನ್ನು ಉತ್ತಮ ಪ್ರಮಾಣಲ್ಲಿ ಹೊಂದಿದೆ. ಅಮೈನೋ ಆಮ್ಲ ತೀವ್ರ ವ್ಯಾಯಾಮವನ್ನು ನಂತರ ಹಾನಿಗೊಳಗಾದ ಅಂಗಾಂಶಗಳನ್ನು ಪುನರ್ ನಿರ್ಮಿಸಲು ಸಹಾಯ ಮಾಡುತ್ತದೆ.

ಗರಂ ಗರಂ ಶುಂಠಿ ಚಹಾ ಕುಡಿಯಿರಿ

ಗರಂ ಗರಂ ಶುಂಠಿ ಚಹಾ ಕುಡಿಯಿರಿ

ವ್ಯಾಯಾಮದ ಬಳಿಕ ಸ್ನಾಯುಗಳ ನೋವನ್ನು ಕಡಿಮೆ ಮಾಡಿಕೊಳ್ಳಬೇಕಾದರೆ ಒಂದು ಕಪ್ ಶುಂಠಿ ಚಹಾ ಕುಡಿಯಬೇಕು. ಇದು ಮನಸ್ಸಿನ ಭಾವನೆಗಳನ್ನು ಉತ್ತಮಗೊಳಿಸಿ ಜೀರ್ಣಕ್ರಿಯೆಗೂ ಸಹಕಾರಿಯಾಗುವುದು. ಸ್ನಾಯುಗಳ ನೋವನ್ನು ಕಡಿಮೆ ಮಾಡಿಕೊಳ್ಳಲು ಶುಂಠಿ ಚಹಾವನ್ನು ಕುಡಿಯಿರಿ.

ಗ್ರೀನ್(ಹಸಿರು) ಟೀ ಕುಡಿಯಿರಿ

ಗ್ರೀನ್(ಹಸಿರು) ಟೀ ಕುಡಿಯಿರಿ

ತೂಕ ಕಳೆದುಕೊಳ್ಳಲು ಇದು ಅತ್ಯುತ್ತಮವಾದ ಗಿಡಮೂಲಿಕೆ ಚಹಾ. ವ್ಯಾಯಾಮದ ಮೊದಲು ಅಥವಾ ಬಳಿಕ ಗ್ರೀನ್ ಟೀ ಕುಡಿದರೆ ಅದರಿಂದ ಕೊಬ್ಬು ಕರಗಿ ದೇಹವು ಶಕ್ತಿಯನ್ನು ಪಡೆಯುವುದು. ಗ್ರೀನ್ ಟೀಯಲ್ಲಿರುವ ಕೆಫಿನ್ ತೂಕ ಕಳೆದುಕೊಳ್ಳಲು ಪ್ರಮುಖ ಕಾರಣವಾಗಿದೆ. ಗ್ರೀನ್ ಟೀಯಲ್ಲಿರುವ ಕೆಫಿನ್ಹಸಿವನ್ನು ನಿಯಂತ್ರಿಸಿ, ಕ್ಯಾಲರಿ ದಹಿಸಿ ದೇಹದಲ್ಲಿರುವ ಹೆಚ್ಚುವರಿ ನೀರನ್ನು ತೆಗೆಯುತ್ತದೆ. ವ್ಯಾಯಾಮದ ಬಳಿಕ ಗ್ರೀನ್ ಟೀ ಕುಡಿದರೆ ಚಯಾಪಚಾಯ ಕ್ರಿಯೆ ಸುಧಾರಣೆಯಾಗಿ ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ ಕ್ಯಾಲರಿ ದಹಿಸಲು ನೆರವಾಗುತ್ತದೆ.

English summary

Foods You Should Never Eat After a Workout

We would also try to gobble the food, the first thing that our eyes set on. Post workout foods are absolutely necessary to restore your much needed energy, to build and repair the torn out muscle tissues and to give a boost in metabolism. But, a word of caution! Though foods after exercise is absolutely necessary, care should be taken that they are chosen correctly and carefully which does not spoil all your hard work at the gym.
X
Desktop Bottom Promotion