For Quick Alerts
ALLOW NOTIFICATIONS  
For Daily Alerts

ಸೊಂಟದ ಕೊಬ್ಬು ಕರಗಿಸಲು ಅನುಸರಿಸಿ ಈ ಸುಲಭ ಯೋಗಾಸನ

ಸುಲಭವಾದ ಯೋಗಾಸನವನ್ನು ಅನುಸರಿಸುವ ಮೂಲಕ ಕೊಬ್ಬನ್ನು ನಿಧಾನವಾಗಿಯಾದರೂ ಸರಿ, ಯಾವುದೇ ಅಡ್ಡಪರಿಣಾಮವಿಲ್ಲದೇ ಸಮರ್ಥವಾಗಿ ಕಡಿಮೆಗೊಳಿಸಲು ಸಾಧ್ಯ

By Manu
|

ಸ್ಥೂಲಕಾಯ ಹೊಂದಿರುವುದಕ್ಕಿಂತಲೂ ಸೊಂಟದಲ್ಲಿ ಹೆಚ್ಚಿನ ಕೊಬ್ಬು ಇರುವುದು ಹೆಚ್ಚು ಅಪಾಯಕಾರಿ ಎಂದು ಇತ್ತೀಚಿನ ಸಂಶೋಧನೆಯೊಂದು ಪ್ರಕಟಿಸಿದೆ. ಸೊಂಟದ ಕೊಬ್ಬು ಕರಗಿಸಲು ಅತ್ಯಂತ ಕಷ್ಟಕರವಾದ ಕೊಬ್ಬಾಗಿದ್ದು ಇದನ್ನು ಕರಗಿಸುವ ಯಾವುದೇ ಕ್ರಮಕ್ಕೆ ಇದು ಸುಲಭವಾಗಿ ಬಗ್ಗುವುದಿಲ್ಲ.

ಬದಲಿಗೆ ಕೊಬ್ಬು ಇನ್ನಷ್ಟು ಹೆಚ್ಚಬಹುದು. ಹೆಚ್ಚಿನವರು ತಮ್ಮ ಪ್ರಯತ್ನಗಳಿಗೆ ವ್ಯತಿರಿಕ್ತ ಪರಿಣಾಮವನ್ನು ಕಂಡಕೂಡಲೇ ಹತಾಶರಾಗಿ ಪ್ರಯತ್ನವನ್ನೇ ಬಿಟ್ಟುಬಿಡುತ್ತಾರೆ. ಹೊಟ್ಟೆ ಬೊಜ್ಜು ಕರಗಿಸಲು ಇರುವ ಅತ್ಯದ್ಭುತ ಯೋಗಾಸನಗಳು

ಆದರೆ ನಿಸರ್ಗ ಇದಕ್ಕೂ ಒಂದು ಕ್ರಮವನ್ನು ಒದಗಿಸಿದೆ. ಸುಲಭವಾದ ಯೋಗಾಸನವನ್ನು ಅನುಸರಿಸುವ ಮೂಲಕ ಈ ಕೊಬ್ಬನ್ನು ನಿಧಾನವಾಗಿಯಾದರೂ ಸರಿ, ಯಾವುದೇ ಅಡ್ಡಪರಿಣಾಮವಿಲ್ಲದೇ ಸಮರ್ಥವಾಗಿ ಕಡಿಮೆಗೊಳಿಸಲು ಸಾಧ್ಯ. ಸಾವಿರಾರು ವರ್ಷಗಳಿಂದ ಉತ್ತಮ ಆರೋಗ್ಯಕ್ಕೆ ತಳಹದಿಯಾಗಿರುವ ಯೋಗಾಸನಗಳು ದೇಹದ ವಿವಿಧ ಅಂಗಗಳಿಗೆ ಪ್ರತ್ಯೇಕವಾಗಿದ್ದು ಇದರಲ್ಲಿ ಕೆಲವು ಆಸನಗಳು ಸೊಂಟದ ಕೊಬ್ಬನ್ನು ಕರಗಿಸಲು ಸಮರ್ಥವಾಗಿವೆ. ಸಾಮಾನ್ಯವಾಗಿ ಎಲ್ಲಾ ಆಸನಗಳನ್ನು ಪ್ರಾರಂಭದಲ್ಲಿ ಅನುಸರಿಸಲು ಸಾಧ್ಯವಿಲ್ಲ. ಸಾಮಾನ್ಯ 9 ಯೋಗ ಮುದ್ರಾಗಳು ಮತ್ತು ಅದರ ಆರೋಗ್ಯಕಾರಿ ಲಾಭಗಳು

ಆದ್ದರಿಂದ ಒಂದು ವೇಳೆ ನೀವಿನ್ನೂ ಯೋಗಾಭ್ಯಾಸಕ್ಕೆ ಹೊಸಬರಾಗಿದ್ದರೆ ಈ ಆಸನ ನಿಮಗೆ ಸೂಕ್ತವಾಗಿದ್ದು ಸುಲಭವಾಗಿ ಅನುಸರಿಸಲು ಸಾಧ್ಯವಾಗುವಂತಹದ್ದಾಗಿದೆ. ಬನ್ನಿ, ಸೊಂಟದ ಸುತ್ತಳತೆ ಕರಗಿಸಲು ಯಾವ ಆಸನಗಳು ಸುಲಭ ಎಂಬುದನ್ನು ನೋಡೋಣ....

ಭುಜಂಗಾಸನ (ಹಾವಿನ ಭಂಗಿ)

ಭುಜಂಗಾಸನ (ಹಾವಿನ ಭಂಗಿ)

ಈ ಆಸನದಲ್ಲಿ ಹೊಟ್ಟೆಯ ಸ್ನಾಯುಗಳಿಗೆ ಹೆಚ್ಚು ಸೆಳೆತ ಬೀಳುವ ಮೂಲಕ ಇಲ್ಲಿ ಸಂಗ್ರಹವಾಗಿರುವ ಕೊಬ್ಬು ಅನಿವಾರ್ಯವಾಗಿ ಕರಗಲೇಬೇಕಾಗುತ್ತದೆ. ಅಲ್ಲದೇ ಈ ಆಸನದಿಂದ ದೇಹದ ಮೇಲ್ಭಾಗ ಹೆಚ್ಚು ಬಾಗುವಂತಹ ಶಕ್ತಿ ಪಡೆಯುತ್ತದೆ. ಥಟ್ ಅಂತ ಶಕ್ತಿ ಬರಬೇಕೇ? ಒಮ್ಮೆ ಭುಜಂಗಾಸನ ಪ್ರಯತ್ನಿಸಿ

ವಿಧಾನ

ವಿಧಾನ

*ಮೊದಲು ಹೊಟ್ಟೆಯ ಮೇಲೆ ಮಲಗಿ ಕಾಲುಗಳನ್ನು ನೇರವಾಗಿಸಿ. ದೇಹದ ಭಾರ ಪಾದಗಳನ್ನು ನೇರವಾಗಿಸಿ ಕಾಲುಬೆರಳುಗಳ ಮೇಲೆ ಬರುವಂತಿರಲಿ.

*ನಿಮ್ಮ ಹಸ್ತಗಳು ಭುಜಗಳ ಕೆಳಗೆ ಇರಲಿ

ವಿಧಾನ

ವಿಧಾನ

*ಪ್ರಾರಂಭದಲ್ಲಿ ಗದ್ದವನ್ನು ನೆಲಕ್ಕೆ ತಾಗಿಸಿ. ಈಗ ಉಸಿರನ್ನು ಎಳೆದುಕೊಳ್ಳುತ್ತಾ ಎದೆಯನ್ನು ಮೇಲಕ್ಕೆತ್ತಿ ಎಷ್ಟು ಮೇಲಕ್ಕೆ ಸಾಧ್ಯವೋ ಅಷ್ಟು ಮೇಲೆ ನೋಡಿ

*ಕೈಗಳನ್ನು ನೇರವಾಗಿಸಿ. ಈ ಹಂತದಲ್ಲಿ ಕೆಲವು ಸೆಕೆಂಡುಗಳಷ್ಟು ಕಾಲ ಉಸಿರು ಬಿಗಿಹಿಡಿದು ಬಳಿಕ ನಿಧಾನವಾಗಿ ಉಸಿರುಬಿಡುತ್ತಾ ಮೊದಲ ಹಂತಕ್ಕೆ ಬನ್ನಿ. ಈ ಕ್ರಮವನ್ನು ಕನಿಷ್ಠ ಐದು ಬಾರಿ ಅನುಸರಿಸಿ.

ತಾಡಾಸನ (ಪರ್ವತ ಭಂಗಿ)

ತಾಡಾಸನ (ಪರ್ವತ ಭಂಗಿ)

ಈ ಆಸನದಿಂದಲೂ ಹೊಟ್ಟೆಯ ಕೊಬ್ಬು ಸುಲಭವಾಗಿ ಕರಗುತ್ತದೆ. ಮಂಡಿ-ಪಾದಗಳನ್ನು ಸದೃಢಗೊಳಿಸಲು ತಾಡಾಸನ ಅನುಸರಿಸಿ

ವಿಧಾನ

ವಿಧಾನ

*ಮೊದಲು ಎರಡೂ ಪಾದಗಳ ಹೆಬ್ಬೆರಳುಗಳು ತಾಕುವಂತೆ ನೆಟ್ಟಗೆ ನಿಂತುಕೊಳ್ಳಿ. ಹಿಮ್ಮಡಿಗಳು ಕೊಂಚ ದೂರವಾಗಿರಲಿ. ಬೆನ್ನು ನೆಟ್ಟಗಿರಲಿ, ಕೈಗಳು ತೊಡೆಗಳಿಗೆ ತಾಕಿರಲಿ.

*ಈ ಭಂಗಿಯಲ್ಲಿ ನಿಧಾನವಾಗಿ ಉಸಿರೆಳೆದುಕೊಳ್ಳುತ್ತಾ ಎರಡೂ ಕೈಬೆರಳುಗಳನ್ನು ಜೋಡಿಸಿ ಹಸ್ತ ನಿಮ್ಮ ಕಡೆಗಿರುವಂತೆ ಅಥವಾ ಇರದಂತೆ, ನಿಮಗೆ ಸೂಕ್ತವೆನಿಸಿದ ಆಯ್ಕೆಯಲ್ಲಿ ಹಸ್ತಗಳನ್ನು ತಲೆಯ ಮೇಲೆ ಕೊಂಡೊಯ್ಯಿರಿ.

ವಿಧಾನ

ವಿಧಾನ

*ಹಾಗೇ ನಿಧಾನವಾಗಿ ಕಾಲು ಬೆರಳುಗಳ ಮೇಲೆ ನಿಲ್ಲಿ. ಉಸಿರು ಪೂರ್ಣವಾದ ಬಳಿಕ ಈ ಭಂಗಿಯಲ್ಲಿ ಕೆಲವು ಸೆಕೆಂಡು ಹಾಗೇ ಇರಿ. ಬಳಿಕ ನಿಧಾನವಾಗಿ ಉಸಿರು ಕಟ್ಟುತ್ತಾ ಹಿಮ್ಮಡಿ ನೆಲದ ಮೇಲಿರಿಸಿ ನಿಧಾನವಾಗಿ ಮೊದಲ ಹಂತಕ್ಕೆ ಬನ್ನಿ. ಸುಮಾರು ಹತ್ತು ಬಾರಿ ಈ ಆಸನವನ್ನು ಅನುಸರಿಸಿ.

ಉತ್ತನಾಸನ (ನಿಂತಲ್ಲೇ ಮುಂದೆ ಬಗ್ಗುವ ಭಂಗಿ)

ಉತ್ತನಾಸನ (ನಿಂತಲ್ಲೇ ಮುಂದೆ ಬಗ್ಗುವ ಭಂಗಿ)

ಈ ಭಂಗಿಯಲ್ಲಿ ಹೊಟ್ಟೆಯ ಸ್ನಾಯುಗಳು ಒಳಮುಖವಾಗಿ ಸೆಳೆಯಲ್ಪಡುವ ಕಾರಣ ಕೊಬ್ಬು ಶೀಘ್ರವಾಗಿ ಕರಗಲು ಸಾಧ್ಯವಾಗುತ್ತದೆ.

ವಿಧಾನ

*ಮೊದಲು ಕಾಲುಗಳನ್ನು ಕೊಂಚವೇ ಅಗಲಿಸಿ ನಿಂತುಕೊಳ್ಳಿ. ಪೂರ್ಣ ಉಸಿರು ಎಳೆದುಕೊಂಡು ಕೈಗಳನ್ನು ಕೆಳಗಿರಿಸಿ ಮುಂದಕ್ಕೆ ಬಾಗಿ ಕೈಗಳಿಂದ ನೆಲವನ್ನು ಮುಟ್ಟಲು ಯತ್ನಿಸಿ. ಈ ಹಂತದಲ್ಲಿ ನಿಧಾನವಾಗಿ ಉಸಿರು ಒಳಗೆ ಎಳೆದುಕೊಳ್ಳಿ.

*ಈ ಹಂತದಲ್ಲಿ ನಿಮಗೆ ಸಾಧ್ಯವಾದಷ್ಟು ಹೊತ್ತು ಹಾಗೇ ಇದ್ದು ಕೈಬೆರಳುಗಳಿಂದ ಕಾಲುಬೆರಳು ಮತ್ತು ಹಿಮ್ಮಡಿಯ ಗಂಟನ್ನು ಹಿಡಿಯಲು ಯತ್ನಿಸಿ. ಬಳಿಕ ನಿಧಾನವಾಗಿ ಉಸಿರುಬಿಡುತ್ತಾ ಮೊದಲ ಹಂತಕ್ಕೆ ಬನ್ನಿ. ಸುಮಾರು ಹತ್ತು ಬಾರಿ ಈ ವಿಧಾನವನ್ನು ಪುನರಾವರ್ತಿಸಿ.

English summary

Easy To Do Yoga Poses To Get Rid Of Belly Fat

As per a new study, it was found that excess fat around the belly is considered to be more harmful than being overweight. Belly fat is considered to be so stubborn that it is not really easy to get rid of it. If you're tired of trying out all the possible methods to get rid of it, here are some easy-to-do yoga poses to reduce belly fat.
X
Desktop Bottom Promotion