Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ಜಿಮ್ ಮಾಡಿದ ನಂತರ ಅಪ್ಪಿ ತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ
ದೇಹದ ಆರೋಗ್ಯದ ದೃಷ್ಟಿಯಿಂದ ಅಥವಾ ನಮ್ಮ ಮೈಕಷ್ಟಿನ ಆಕರ್ಷಣೆಗಾಗಿ ನಿತ್ಯವೂ ಜಿಮ್, ವ್ಯಾಯಾಮ, ಓಟ ಅಥವಾ ನಡಿಗೆಯಂತಹ ದೇಹ ದಂಡನೆ ಅಥವಾ ವ್ಯಾಯಾಮ ಮಾಡುವುದು ಸಹಜ. ಆದರೆ ಇವುಗಳನ್ನು ಮಾಡುವಾಗ ಸೂಕ್ತ ರೀತಿಯ ಮಾಹಿತಿ ಮತ್ತು ವಿಧಿ-ವಿಧಾನಗಳು ನಮಗೆ ತಿಳಿದಿರಬೇಕು. ಇಲ್ಲವಾದರೆ ಅವುಗಳಿಂದ ಉಂಟಾಗುವ ಉಪಯೋಗಗಳಿಗಿಂತ ಅಪಾಯಗಳೇ ಹೆಚ್ಚಾಗಿರುತ್ತವೆ.
ಜಿಮ್‍ಗಳಲ್ಲಿ ಒಂದು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಸಮಯ ಅಭ್ಯಾಸ ಮಾಡುವುದರಿಂದ ಮೈಕಟ್ಟಿನ ಆರೋಗ್ಯ ಸುಧಾರಣೆ ಆಗಬಹುದು. ಆದರೆ ಅಭ್ಯಾಸದ ನಂತರ ಕೆಲವು ಸೂಕ್ತ ಕ್ರಮಗಳನ್ನು ಅನುಸರಿಸುವುದು ಮುಖ್ಯ. ಇಲ್ಲವಾದರೆ ಗಂಟೆಗಟ್ಟಲೆ ಮಾಡಿದ ಪರಿಶ್ರಮ ಕ್ಷಣಾರ್ಧದಲ್ಲಿ ವಿಫಲವಾಗಿ ಹೋಗುತ್ತದೆ. ಜಿಮ್ ಮಾಡಿದ ನಂತರ ನಾವು ಯಾವೆಲ್ಲಾ ಕ್ರಮವನ್ನು ಕೈಗೊಳ್ಳಬೇಕು? ಯಾವ ಕೆಲಸಗಳನ್ನು ಮಾಡಬಾರದು? ಎನ್ನುವುದನ್ನು ತಿಳಿದುಕೊಂಡಿರಬೇಕು. ಹೌದು, ಅಂತಹ ವಿಚಾರಗಳ ಚಿಕ್ಕ ಪರಿಚಯವನ್ನು ಈ ಲೇಖನ ಮಾಡಿಕೊಡುತ್ತದೆ..

ಕೊಬ್ಬಿನ ಆಹಾರವನ್ನು ಸೇವಿಸಬೇಡಿ
ದೇಹವು ಜಿಮ್ ಮತ್ತು ವ್ಯಾಯಾಮದಿಂದ ದೇಹವು ದಣಿದಿರುವಾಗ ಕೊಬ್ಬಿನ ಆಹಾರ ಪದಾರ್ಥಗಳನ್ನು ಸೇವಿಸಬಾರದು. ಹಾಗೊಮ್ಮೆ ಸೇವಿಸಿದರೆ ಮಾಡಿದ ಪರಿಶ್ರಮಕ್ಕೆ ಯಾವುದೇ ಫಲ ದೊರೆಯದು. ಆದಷ್ಟು ಗುಣಮಟ್ಟದ ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‍ಯುಕ್ತ ಆಹಾರವನ್ನು ಸೇವಿಸಬೇಕು. ನಾವು ಸೇವಿಸುವ ಆಹಾರವು ತ್ವರಿತವಾಗಿ ರಕ್ತವನ್ನು ಪ್ರವೇಶಿಸುತ್ತದೆ. ಕೊಬ್ಬಿನ ಆಹಾರ ಸೇವಿಸಿದರೆ ಅವು ಜೀರ್ಣಾಂಗ ಕ್ರಿಯೆಯನ್ನು ನಿಧಾನಗೊಳಿಸುತ್ತವೆ.

ನೀರನ್ನು ಕುಡಿಯಬಾರದು
ಸಾಮಾನ್ಯವಾಗಿ ದೇಹವು ಹೆಚ್ಚು ದಣಿದಾಗ ನೀರು ಕುಡಿಯುವುದು ಒಂದು ಅಭ್ಯಾಸ. ಆದರೆ ಈ ಅಭ್ಯಾಸ ಆರೋಗ್ಯ ದೃಷ್ಟಿಯಿಂದ ಸೂಕ್ತವಾದದ್ದಲ್ಲ. ತಾಲೀಮು ಅಥವಾ ಅಭ್ಯಾಸದ ಸಮಯದಲ್ಲಿ ದೇಹದಿಂದ ಹೊರ ಹೊಮ್ಮಿದ ನೀರಿನಂಶವು ಪುನಃ ತಾನಾಗಿಯೇ ದೇಹದಲ್ಲಿ ಶೇಖರಣೆಗೊಳಗಾಗಬೇಕು. ತಕ್ಷಣಕ್ಕೆ ನೀರನ್ನು ಕುಡಿಯ ಬಾರದು.

ಅದೇ ಉಡುಗೆಯಲ್ಲಿ ಇರಬಾರದು
ಜಿಮ್ ಮತ್ತು ವ್ಯಾಯಾಮ ಮಾಡುವ ಸಮಯದಲ್ಲಿ ದೇಹದಿಂದ ಬಿಡುಗಡೆಯಾಗುವ ಬೆವರು ಬಟ್ಟೆಗೆ ಅಂಟಿಕೊಂಡಿರುತ್ತವೆ. ಜಿಮ್‍ನ ನಂತರ ನಾವು ಕಡ್ಡಾಯವಾಗಿ ಉಡುಗೆಯನ್ನು ಬದಲಿಸಬೇಕು. ಇಲ್ಲವಾದರೆ ಸೂಕ್ಷ್ಮಾಣುಗಳು ನಮ್ಮ ತ್ವಚೆಯ ಆರೋಗ್ಯದ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿರುತ್ತವೆ. ಅಲ್ಲದೆ ದೇಹದ ವಾಸನೆಗೂ ಕಾರಣವಾಗುವುದು.

ತಣ್ಣಗಾಗಿಸುವುದನ್ನು ಮರೆಯದಿರಿ
ಜಿಮ್ ಮಾಡಿದ ನಂತರ ದೇಹ ದಣಿದು ಬಿಸಿಯಾಗಿರುತ್ತದೆ. ಅಂತಹ ಸಮಯದಲ್ಲಿ ದೇಹವನ್ನು ವಿಶ್ರಾಂತಿಗೊಳಪಡಿಸಿ, ತಂಪಾಗುವಂತೆ ಮಾಡಬೇಕು. ಈ ಕ್ರಿಯೆಯನ್ನು ಮರೆ ಮಾಚಬಾರದು. ಹೃದಯದ ಬಡಿತ ಸಾಮಾನ್ಯ ಸ್ಥಿರತೆಗೆ ತರಲು ಕೆಲವು ವಿಸ್ತರಣೆಗಳನ್ನು ಮಾಡುವುದರ ಮೂಲಕ ಸಮತೋಲನ ಕಾಯ್ದುಕೊಳ್ಳಬಹುದು. ಇದು ನಿಮ್ಮ ಮುಂದಿನ ಕಾರ್ಯವನ್ನು ಸರಾಗವಾಗಿ ಮಾಡಲು ಅನುವುಮಾಡಿಕೊಡುತ್ತದೆ.

ಮುಖವನ್ನು ಮುಟ್ಟಬೇಡಿ
ಜಿಮ್ ಮಾಡುವಾಗ ಬಳಸಿದ ಸಲಕರಣೆಗಳನ್ನು ಅನೇಕ ಜನರು ಮುಟ್ಟಿರುತ್ತಾರೆ. ಅವರ ಬೆವರಿನಿಂದ ಅನೇಕ ಸೂಕ್ಷ್ಮಾಣುಗಳು ಅಂಟಿಕೊಂಡಿರುತ್ತವೆ. ಅದನ್ನು ಮುಟ್ಟಿದ ನಮ್ಮ ಕೈಗಳಿಗೂ ಅಂಟಿಕೊಂಡಿರುತ್ತವೆ. ಆ ಕೈಗಳಿಂದ ಮುಖವನ್ನು ಸ್ಪರ್ಶಿಸಿದಾಗ ರೋಗಾಣುಗಳು ನಮ್ಮ ತ್ವಚೆಗೆ ಅಂಟಿಕೊಳ್ಳುತ್ತವೆ. ಹಾಗಾಗಿ ಜಿಮ್ ನಂತರ ಮೊದಲು ಸ್ನಾನ ಅಥವಾ ಕೈಕಾಲುಗಳನ್ನು ತೊಳೆದುಕೊಳ್ಳಬೇಕು.



Click it and Unblock the Notifications