For Quick Alerts
ALLOW NOTIFICATIONS  
For Daily Alerts

ಇಡಿಯ ದಿನ ಕುಳಿತೇ ಇರುವ ಅಭ್ಯಾಸದ ದುಷ್ಪರಿಣಾಮಗಳು

By
|

ಇತ್ತೀಚಿನ ವರ್ಷಗಳಲ್ಲಿ ಉದ್ಯೋಗಾವಕಾಶಗಳೇನೋ ಹೆಚ್ಚಿವೆ ಆದರೆ ಹೆಚ್ಚಿನವು ಒಂದೆಡೆ ಕುಳಿತೇ ಮಾಡಬೇಕಾದ ಕೆಲಸಗಳಾಗಿವೆ. ಇವು ಕಂಪ್ಯೂಟರ್ ಮುಂದೆ ಕೆಲಸದ ಅವಧಿಯ ಬಹುತೇಕ ಸಮಯವನ್ನು ಒಂದೇ ಭಂಗಿಯಲ್ಲಿ ಕುಳಿತು ಮಾಡಬೇಕಾದ ಕೆಲಸಗಳಾಗಿದ್ದು ಹೆಚ್ಚಿನವರು ಸರಿಸುಮಾರು ಇಡಿಯ ದಿನ ತಟಸ್ಥರಾಗಿರುವ ಈ ಪರಿಗೆ ಒಗ್ಗಿಯೇ ಹೋಗಿದ್ದಾರೆ. ಈಗ ಊಟಕ್ಕೆಂದು ಹೊರ ಹೋಗುವ ಪ್ರಮೇಯವೂ ಇಲ್ಲ, ಫೋನ್ ಮಾಡಿದರೆ ಪಾರ್ಸೆಲ್ ಆಗಮಿಸುವ ಕಾರಣ ಕುಳಿತೇ ಇರುವ ಅವಧಿ ಇನ್ನಷ್ಟು ಹೆಚ್ಚಾಗುತ್ತದೆ.

ಒಂದು ವಯಸ್ಸಿನವರೆಗೆ ಈ ಕುಳಿತು ಮಾಡುವ ಕೆಲಸಗಳು ಹೆಚ್ಚು ಬಾಧಿಸದೇ ಇದ್ದರೂ ಹೆಚ್ಚು ಹೊತ್ತು ಕುಳಿತೇ ಇರುವುದು ಆರೋಗ್ಯಕರವಲ್ಲ ಎಂದು ತಜ್ಞರು ಎಚ್ಚರಿಸುತ್ತಲೇ ಬಂದಿದ್ದಾರೆ. ಆದರೆ ನಮಗೆ ಇನ್ನೊಂದು ದುರಭ್ಯಾಸವಿದೆ. ಗೋಡೆಗೆ ಬಣ್ಣ ಹಚ್ಚಿದ್ದೇವೆ ಮುಟ್ಟಬೇಡಿ ಎಂದು ಹೇಳಿದರೂ ಬೆರಳಿನಿಂದ ಮುಟ್ಟಿ ಕೊಂಚ ಬಣ್ಣವನ್ನು ಅಂಟಿಸಿಕೊಂಡ ಬಳಿಕವೇ ದೂರಾಗುವುದು. ಇದು ನಮ್ಮ ಆರೋಗ್ಯಕ್ಕೂ ಅನ್ವಯಿಸುತ್ತದೆ.

What Sitting For A Long Time Can Do To Your Body?

ಉದಾಹರಣೆಗೆ ಕುಳಿತುಕೊಳ್ಳುವಾಗ ಬೆನ್ನಮೂಳೆ ನೆಟ್ಟಗಿರಲಿ ಎಂದು ನಮ್ಮ ಹಿರಿಯರು ಎಷ್ಟೇ ಹೇಳಿದರೂ ನಾವು ಆರಾಮವಾಗಿ ಕುಳಿತರೆ ಏನಾಗುತ್ತದೆ ಎಂಬ ಉಢಾಫೆಯಿಂದ ಆರಾಮವಾಗಿಯೇ ಕುಳಿತುಕೊಳ್ಳುತ್ತೇವೆ.

ಇದರ ಪರಿಣಾಮವನ್ನು ಮಧ್ಯವಯಸ್ಸು ದಾಟಿದ ಬಳಿಕ ಬೆನ್ನುಮೂಳೆಯೇ ನಮಗೆ ತೋರಿಸುತ್ತದೆ. ದಿನವಿಡೀ ಕುಳಿತು ಕೆಲಸ ಮಾಡಬೇಕಾದ ಕೆಲಸವೂ ಅಷ್ಟೇ, ಈಗ ಏನನ್ನು ಹೇಳದೇ ಇದ್ದರೂ ಒಳಗಿನಿಂದ ದೇಹದ ಮೇಲೆ ಹಲವು ಪರಿಣಾಮಗಳು ಆಗುತ್ತಲೇ ಇವೆ. ಇವುಗಳನ್ನು ಅರಿತ ಬಳಿಕವಾದರೂ ಕೊಂಚ ವ್ಯಾಯಾಮವನ್ನು ಅಳವಡಿಸಿಕೊಳ್ಳಲಾಗುವಂತಾಗಬೇಕು ಎಂಬುದೇ ಈ ಲೇಖನದ ಉದ್ದೇಶ:

ನಿಮ್ಮ ಸೊಂಟದ ಸುತ್ತಳತೆ ಹೆಚ್ಚುತ್ತದೆ
ದಿನದಲ್ಲಿ ಹೆಚ್ಚು ಹೊತ್ತು ಕುಳಿತೇ ಇದ್ದು ಅತ್ತಿತ್ತ ಅಡ್ಡಾಡದವರ ಸೊಂಟದ ಸುತ್ತಳತೆ ಬೇಗಬೇಗನೇ ವಿಸ್ತಾರವಾಗುತ್ತಾ ಹೋಗುತ್ತದೆ. ಏಕೆಂದರೆ ದೇಹದಲ್ಲಿ ಸಂಗ್ರಹವಾಗುವ ಕೊಬ್ಬು ಸೊಂಟದ ಸುತ್ತ ಹೆಚ್ಚು ಹೆಚ್ಚು ಸಂಗ್ರಹವಾಗುತ್ತದೆ. ಹೊಟ್ಟೆ ಮುಂದೆ ಬರುತ್ತದೆ ಹಾಗೂ ಡೊಳ್ಳಾಗಿರುತ್ತದೆ. ಬೆನ್ನು ಸಹಾ ಬಗ್ಗಲು ತೊಡಗುತ್ತದೆ. ಅತೀವ ಸೊಂಟ ನೋವೇ..? ಚಿಂತೆ ಬಿಡಿ, ಈ ಲೇಖನ ಓದಿ

ಕ್ಯಾನ್ಸರುಗಳ ಸಾಧ್ಯತೆ ಹೆಚ್ಚುತ್ತದೆ
ದೇಹದಲ್ಲಿ ಸಂಗ್ರಹವಾಗಿರುವ ವಿಷಕಾರಿ ಕಲ್ಮಶಗಳನ್ನು ಹೊರಹಾಕುವ ಪ್ರಕ್ರಿಯೆಗೆ ಇಡಿಯ ದಿನ ಕುಳಿತಿರುವುದು ಅಡ್ಡಗಾಲು ಹಾಕುತ್ತದೆ ಎಂದು ಸಂಶೋಧನೆಗಳ ಮೂಲಕ ಈಗ ಸಾಬೀತುಪಡಿಸಲಾಗಿದೆ. ಅಂದರೆ ಹೊರಹೋಗಬೇಕಾಗಿದ್ದ ವಿಷಕಾರಿ ವಸ್ತುಗಳು ಪೂರ್ಣಪ್ರಮಾಣದಲ್ಲಿ ಹೊರಹೋಗದೇ ದೇಹದಲ್ಲಿಯೇ ಉಳಿದುಬಿಡುತ್ತವೆ. ಇವುಗಳಲ್ಲಿ ಕೆಲವು ರಾಸಾಯನಿಕಗಳು ಅಂಗಾಂಶ ಅಥವಾ ಜೀವಕೋಶಗಳ ಅಡ್ದಾದಿಡ್ಡಿ ಬೆಳವಣಿಗೆಗೆ ಕಾರಣವಾಗಿ ಕ್ರಮೇಣ ಇದು ಕ್ಯಾನ್ಸರ್‌ಗೆ ತಿರುಗಬಹುದು.

ಖಿನ್ನತೆಗೆ ದಾರಿಯಾಗುತ್ತದೆ
ನಮ್ಮ ಮೆದುಳಿಗೆ ಇಡಿಯ ದಿನ ಅಮ್ಲಜನಕದ ಪೂರೈಕೆಯಾಗುತ್ತಲೇ ಇರಬೇಕು. ಇದಕ್ಕಾಗಿ ಮೆದುಳಿನ ವಿವಿಧ ಭಾಗಗಳು ಸಕ್ಷಮವಾಗಿರಬೇಕು. ಮೆದುಳಿನ ವಿವಿಧ ಭಾಗಗಳು ದೇಹದ ಎಲ್ಲಾ ಭಾಗಗಳನ್ನು ನಿಯಂತ್ರಿಸುವ ಕಾರಣ ದೈನಿಕ ಚಟುವಟಿಕೆಗಳ ಅಗತ್ಯಕ್ಕೆ ತಕ್ಕಂತೆ ಮೆದುಳಿಗೆ ರಕ್ತಸರಬರಾಜು ಆಗುತ್ತಲೇ ಇರುತ್ತದೆ. ಮಾನಸಿಕ ಖಿನ್ನತೆಗೆ ಎದೆಗುಂದುವುದು ಸರಿಯೇ?

ಇಡಿಯ ದಿನ ಕುಳಿತು ಮಾಡುವ ಕೆಲಸಗಳಲ್ಲಿ ಚಿಂತನೆ, ಗ್ರಹಣ ಮತ್ತು ಕೈಬೆರಳುಗಳಿಗೆ ಬಿಟ್ಟರೆ ಬಿಟ್ಟರೆ ದೇಹದ ಇತರ ಐಚ್ಛಿಕ ಅಂಗಗಳೆಲ್ಲಾ ಇಡಿಯ ದಿನ ವಿಶ್ರಾಂತಿ ತೆಗೆದುಕೊಂಡಿರುತ್ತವೆ.ಕೆಲಸವೇ ಇಲ್ಲದೇ ಆ ಅಂಗಗಳಿಗೆ ಸೂಚನೆ ನೀಡುವ ಅಗತ್ಯವೂ ಇಲ್ಲದೇ ಮೆದುಳಿನ ಆ ಭಾಗಕ್ಕೆ ರಕ್ತಪರಿಚಲನೆಯೂ ಕಡಿಮೆಯಾಗುತ್ತದೆ. ಇದು ಖಿನ್ನತೆಗೆ ಮುಖ್ಯ ಕಾರಣವಾಗಿದೆ. ಉದ್ವೇಗ, ಖಿನ್ನತೆ ಇದ್ದಾಗ ಗಾಳಿಗೆ ಅಡ್ಡಾಡಿ ಬನ್ನಿ ಎಂದು ಹಿರಿಯರು ಹೇಳುವುದು ಇದಕ್ಕೇ.

ಮೂಳೆಸಂಧಿಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ
ನಮ್ಮ ಮೂಳೆಗಳ ಸಂಧಿಗಳು ಸುವ್ಯವಸ್ಥಿತವಾಗಿ ಕೆಲಸ ಮಾಡುತ್ತಿರಬೇಕು ಎಂದರೆ ಇದರ ನಡುವೆ ಕೀಲುಕಾರಕ ದ್ರವ ಸ್ರವಿಸುತ್ತಲೇ ಇರಬೇಕು. ಮೂಳೆಗಳ ಮೇಲೆ ಭಾರ ಬೀಳುತ್ತಿರುವಷ್ಟೂ ಕಾಲ ಮೂಳೆಗಳನ್ನು ದೃಢವಾಗಿಸಲು ಕ್ಯಾಲ್ಸಿಯಂ ಬಳಕೆಯಾಗುತ್ತಲೇ ಇರಬೇಕು. ಇಡಿಯ ದಿನ ಕುಳಿತೇ ಮಾಡುವ ಕೆಲಸಗಳಲ್ಲಿ ಮೂಳೆಗಳ ಚಲನೆಗೆ ಅತಿ ಕಡಿಮೆ ಅವಕಾಶವಿರುವ ಕಾರಣ ಮೂಳೆಗಳು ನಿಧಾನವಾಗಿ ಶಿಥಿಲವಾಗುತ್ತಾ ಹೋಗುತ್ತವೆ. ಇದರಿಂದ ವೃದ್ಧಾಪ್ಯದಲ್ಲಿ ಕಾಡುವ ಮೂಳೆ ಸಂಬಂಧಿತ ತೊಂದರೆಗಳು ಚಿಕ್ಕ ವಯಸ್ಸಿನಲ್ಲಿಯೇ ಕಾಣತೊಡಗುತ್ತವೆ.

ಹೃದಯ ಸಂಬಂಧಿ ತೊಂದರೆಗಳ ಸಾಧ್ಯತೆ ಹೆಚ್ಚುತ್ತದೆ
ಇಡಿಯ ದಿನ ಕುಳಿತು ಮಾಡುವ ಕೆಲಸಗಳಿಂದ ಹೃದಯಕ್ಕೆ ಎರಡು ಕಡೆಯಿಂದ ಅಪಾಯವಿದೆ. ಮೊದಲನೆಯದಾಗಿ ಏರಿದ ತೂಕ, ಹೆಚ್ಚಿನ ಕೊಲೆಸ್ಟ್ರಾಲ್ ಮೊದಲಾದವುಗಳ ಮೂಲಕ ಇಡಿಯ ದೇಹಕ್ಕೆ ರಕ್ತಪರಿಚಲನೆ ಒದಗಿಸಲು ಅಗತ್ಯಕ್ಕಿಂತಲೂ ಹೆಚ್ಚು ಒತ್ತಡದಲ್ಲಿ ರಕ್ತವನ್ನು ದೂಡಿಕೊಡಬೇಕಾಗಿದ್ದು ಇದು ಅಧಿಕ ರಕ್ತದೊತ್ತಡ ಮತ್ತು ಇದರ ಆಧಾರಿತ ತೊಂದರೆಗಳಿಗೆ ನಾಂದಿ ಹಾಡುತ್ತದೆ. ಇನ್ನೊಂದು ಪ್ರಮುಖ ತೊಂದರೆ ಎಂದರೆ ನಮ್ಮ ದೇಹ ನಿಸರ್ಗಕ್ಕೆ ವಿರುದ್ಧವಾಗಿ ನಡೆಯುತ್ತಿರುವುದು. ಹೃದಯ ಬಡಿತದ ಏರಿಳಿತ: ಇದು ಅಪಾಯದ ಸೂಚನೆಯೇ?
ನಿಸರ್ಗ ನಿಯಮದ ಪ್ರಕಾರ ನಡುನಡುವೆ ನಮ್ಮ ಹೃದಯ ಅದರ ಗರಿಷ್ಠ ಸಾಮರ್ಥ್ಯದಲ್ಲಿ ಹೊಡೆದುಕೊಳ್ಳಬೇಕು. ಆದರೆ ಇಡಿಯ ದಿನ ಸುಮ್ಮನೇ ಕುಳಿತು ಇದಕ್ಕೆ ಆಸ್ಪದ ನೀಡದೇ ನಿಸರ್ಗ ನಿಯಮಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದೇವೆ. ಇದರಿಂದ ಹೃದಯವೂ ಸೋಮಾರಿಯಾಗಿಬಿಡುತ್ತದೆ. ನಿಜವಾಗಿಯೂ ಗರಿಷ್ಠ ಸಾಮರ್ಥ್ಯದಲ್ಲಿ ದೂಡಿಕೊಡಬೇಕಾದ ಸಮಯದಲ್ಲಿ ಕೈಕೊಡುವ ಸಂಭವಗಳೂ ಹೆಚ್ಚುತ್ತವೆ. ಹೃದಯ ಕೈಕೊಟ್ಟರೆ ಏನಾಗುತ್ತದೆ ಎಂದು ಬಿಡಿಸಿ ಹೇಳಬೇಕಾಗಿಲ್ಲ ಅಲ್ಲವೇ?

ಹಾಗಾದರೆ ಈ ಉದ್ಯೋಗದಲ್ಲಿರುವವರು ಏನು ಮಾಡಬೇಕು?
ಈ ಬಗ್ಗೆ ಅರಿವು ಮೂಡಿದರೆ ಸಾಕು, ಉಳಿದ ಕೆಲಸಗಳನ್ನು ತನ್ನಿಂತಾನೇ ಮಾಡಲು ಸಾಧ್ಯ
* ಸಾಧ್ಯವಾದಷ್ಟು ಮಟ್ಟಿಗೆ ನಡುನಡುವೆ ಯಾವುದಾದರೊಂದು ನೆಪ ತೆಗೆದು ಅತ್ತಿತ್ತ ನಡೆದಾಡುತ್ತಾ ಇರಬೇಕು.
* ಕಡ್ಡಾಯವಾಗಿ ದಿನಕ್ಕೆ ಅರ್ಧಗಂಟೆಯಾದರೂ ವ್ಯಾಯಾಮ ಮಾಡಬೇಕು
* ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಬೈಸಿಕಲ್ ಬಳಸಿ ಅಥವಾ ನಡೆದೇ ಹೋಗಬೇಕು.
* ವಾರಕ್ಕೊಮ್ಮೆಯಾದರೂ ಹೃದಯದ ಬಡಿತ ಗರಿಷ್ಟ ಮಟ್ಟಕ್ಕೇರುವಂತೆ ಓಡಬೇಕು. ಕೊಂಚ ದೂರವಾದರೂ ಸರಿ.
* ಆಹಾರದಲ್ಲಿ ನಿಯಂತ್ರಣ, ಸೂಕ್ತಕಾಲದಲ್ಲಿ ಸಾಕಷ್ಟು ನಿದ್ದೆ ಪಡೆಯಬೇಕು. ರಾತ್ರಿ ಪಾಳಿ ಕೆಲಸದವರಿಗೆ ಆರೋಗ್ಯ ಸಲಹೆಗಳು

English summary

What Sitting For A Long Time Can Do To Your Body?

Do you have a desk-bound job that requires you to sit in your chair for prolonged hours, working on your computer? Do you love sitting comfortably on your couch and enjoy movie marathons for hours in a row? If yes, then may be it is time for you to get off your behinds and avoid sitting down. So If you are curious to know how sitting down for a long time can harm your body, have a look here.
X
Desktop Bottom Promotion