For Quick Alerts
ALLOW NOTIFICATIONS  
For Daily Alerts

ಒತ್ತಡಕ್ಕೆ ಕಡಿವಾಣ ಹಾಕಲು 'ಉತ್ಥಾನ ಶಿಶೋ ಆಸನ' ಅನುಸರಿಸಿ

By Vani Naik
|

ಸಣ್ಣ ಪ್ರಮಾಣದಲ್ಲಿ ಎಲ್ಲರ ಜೀವನದಲ್ಲೂ ಒತ್ತಡ ಇದ್ದೇ ಇರುತ್ತದೆ. ವಿದ್ಯಾರ್ಥಿಗಳಿರಬಹುದು, ಹಿರಿಯ ವಯಸ್ಕರಿರಬಹುದು ಅಥವಾ ಕೆಲಸ ಮಾಡುವ ವ್ಯಕ್ತಿಗಳಿರಬಹುದು, ಯಾರಿಗೇ ಆಗಲಿ ತಮ್ಮದೇ ಆದ ವಿಭಿನ್ನ ರೀತಿಯ ಒತ್ತಡಗಳಿರುತ್ತವೆ. ಹೆಚ್ಚುತ್ತಿರುವ ಸ್ಪರ್ಧಾತ್ಮಕ ಜೀವನ, ಕೆಲಸದ ಒತ್ತಡಗಳು, ವರಿಷ್ಠ ರಿಂದಾಗುವ ಒತ್ತಡಗಳು ಹಾಗು ಜಡ ಜೀವನಶೈಲಿ ಮುಂತಾದವುಗಳು ಒತ್ತಡಮಯ ಜೀವನಕ್ಕೆ ಎಣೆ ಮಾಡಿಕೊಟ್ಟಿದೆ. ಇದನ್ನು ಹೊರತುಪಡಿಸಿ ಬೇರೆ ಕಾರಣಗಳಿಂದನೂ ಒತ್ತಡಗಳು ದೀರ್ಘಕಾಲ ಉಳಿದುಕೊಂಡುಬಿಡುತ್ತದೆ.

ಇಂತಹ ಒತ್ತಡಮಯ ಸಂದರ್ಭದಲ್ಲಿ, ರಕ್ತದೊತ್ತಡದಲ್ಲಿ ಏರುಪೇರಾಗುತ್ತದೆ, ಎದೆಬಡಿತದ ವೇಗ ಹೆಚ್ಚಾಗಿ , ಉಸಿರಾಡುವುದಕ್ಕೂ ತೊಂದರೆಯಾಗುತ್ತದೆ. ಇನ್ನು ಗಂಭೀರ ಸ್ಥಿಥಿಗಳಲ್ಲಿ, ದೇಹದ ರೋಗ ನಿಯಂತ್ರಣ ಶಕ್ತಿ, ಜೀರ್ಣಕ್ರಿಯೆ, ಸಂತಾನೋತ್ಪತ್ತಿ ವ್ಯೆವಸ್ಥೆ ಎಲ್ಲದರ ಮೇಲೂ ಪರಿಣಾಮ ಬೀರಿ ಹೃದಯಾಘಾತ ಹಾಗು ಲಕ್ವ ಹೊಡೆಯುವ ಅಪಾಯವನ್ನು ಹೆಚ್ಚಿಸುತ್ತದೆ. ಆಧುನಿಕ ಜೀವನ ಶೈಲಿಗೆ ಬೇಕು 'ಯೋಗ'

Uttana Shishosana (Extended Puppy Pose) To Relieve Chronic Stress

ಸರಿಯಾದ ಕಾಳಜಿ ವಹಿಸದಿದ್ದಲ್ಲಿ ದೇಹದ ಎಲ್ಲಾ ವ್ಯೆವಸ್ಥೆಯ ಮೇಲೆ ಪರಿಣಾಮ ಬೀರಿ ತೊಂದರೆಯನ್ನುಂಟು ಮಾಡುತ್ತದೆ. ಒತ್ತಡವನ್ನು ನಿವಾರಿಸಿಕೊಳ್ಳಲು ವ್ಯಾಯಾಮ ಹಾಗು ಸಾಕಷ್ಟು ಔಷಧಿ ಚಿಕಿತ್ಸೆಗಳಿರಬಹುದು. ಆದರೆ ಒತ್ತಡ ನಿವಾರೆಣೆಗೆ ಯೋಗಾಭ್ಯಾಸವು ಹೆಚ್ಚು ಸೂಕ್ತ ಎಂದು ಹೇಳಬಹುದು.

ಉತ್ಥಾನ ಶಿಶೋ ಆಸನವು ಒತ್ತಡನಿವಾರಣೆಗೆ ಉತ್ತಮ ಪರಿಣಾಮಕಾರಿಯಾದದ್ದು ಎಂದು ಹೇಳಲಾಗುತ್ತದೆ. ಉತ್ಥಾನ ಶಿಶೋ ಆಸನ ಪದದ ಮೂಲ ಸಂಸ್ಕೃತ ಭಾಷೆಯದ್ದಾಗಿದೆ. ಉತ್ಥಾನ ಎಂದರೆ "ವಿಸ್ತರಿಸಿದ" ಎಂದರ್ಥ. ಶಿಶೋ ಎಂದರೆ "ನಾಯಿ" ಎಂದರ್ಥ. ಆಸನ ಎಂದರೆ, "ಭಂಗಿ" ಎಂದರ್ಥ. ಈ ಆಸನವು ದೇಹ ಮತ್ತು ಮನಸ್ಸು ಎರಡನ್ನೂ ಆರಾಮಗೊಳಿಸಿ ಒತ್ತಡವನ್ನು ನಿವಾರಿಸುತ್ತದೆ. ಈ ಆಸನವನ್ನು ಹಾಕುವ ಬಗೆಯನ್ನು ಹೇಗೆ ಎಂದು ತಿಳಿದುಕೊಳ್ಳೋಣ.

ಈ ಆಸನವನ್ನು ಹಾಕಲು ಕ್ರಮಬದ್ಧವಾದ ವಿವರಣೆ:
1. ನೇರವಾಗಿ ನಿಂತುಕೊಂಡು ನಿಧಾನವಾಗಿ ನಿಮ್ಮ ಕೈಗಳನ್ನು ಊರಿ, ಮಂಡಿಯ ಮೇಲೇ ನಿಂತುಕೊಳ್ಳಿ.
2. ನಿಮ್ಮ ಮಂಡಿಯು ಸೊಂಟದ ಕೆಳ ಭಾಗದಲ್ಲಿರುನಂತೆ ನೋಡಿಕೊಳ್ಳಿ.
3. ನಿಧಾನವಾಗಿ, ನಿಮ್ಮ ಎದೆಯನ್ನು ನೆಲದಮೇಲೆ ಬರುವಂತೆ ಬಾಗಿಸಿ.
4. ನಿಮ್ಮ ಪೃಷ್ಠಭಾಗವನ್ನೂ ಕೂಡ ಪಾದಗಳ ಹತ್ತಿರ ಕೆಳಗೆ ತರಬೇಕು ಹಾಗು ಉಸಿರನ್ನು ಹೊರಗೆ ಬಿಡಬೇಕು.
5. ಎರಡೂ ತೋಳುಗಳನ್ನು ನೇರವಾಗಿರಿಸಿ, ಕೈಗಳು ನೆಲಕ್ಕೆ ತಾಕುವಂತಿರಬೇಕು.
6. ನಿಮ್ಮ ತಲೆಯನ್ನು ಮುಂದಕ್ಕೆ ಇರಿಸಿ ತೋಳುಗಳನ್ನು ನೆಲದಮೇಲಿರಿಸಬೇಕು.
7. ನಿಮ್ಮ ಬೆನ್ನೆಲಬನ್ನು ಚಾಚಿ ಸೊಂಟಭಾಗವನ್ನು ಹಿಂದಕ್ಕೆ ಸರಿಸಬೇಕು.
8. ದೀರ್ಘವಾಗಿ ಉಸಿರೆಳದುಕೊಂಡು ಅದೇ ಭಂಗಿಯಲ್ಲಿ ಒಂದು ನಿಮಿಷಗಳ ಕಾಲ ಇರಬೇಕು.
9. ನಿಧಾನವಾಗಿ ಆ ಭಂಗಿಯಿಂದ ಹೊರ ಬಂದು ಇದೇ ರೀತಿ ಕೆಲ ನಿಮಿಷಗಳ ಕಾಲ ಅಭ್ಯಾಸ ಮಾಡಬೇಕು. ಸದೃಢ ಕಾಲುಗಳಿಗಾಗಿ ಅನುಸರಿಸಿ 'ಪರಿವೃತ್ತ ತ್ರಿಕೋನಾಸನ'

ಈ ಉತ್ಥಾನ ಶಿಶೋ ಆಸನದಿಂದಾಗುವ ಇತರ ಪ್ರಯೋಜನಗಳು:
*ಒತ್ತಡವನ್ನು ನಿವಾರಿಸಲು ಸಹಾಯಕಾರಿ.
*ಬೆನ್ನೆಲಬನ್ನು ಮತ್ತು ಭುಜಗಳನ್ನು ಹಿಗ್ಗಿಸಲು ಸಹಾಯಕಾರಿ
*ಮನಸ್ಸನ್ನು ಪ್ರಶಾಂತಗೊಳಿಸುತ್ತದೆ.
*ನಿದ್ರಾಹೀನತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.
*ಬೆನ್ನು ಹಾಗು ಸೊಂಟಭಾಗವನ್ನು ಹಿಗ್ಗಿಸಲು ನೆರವಾಗುತ್ತದೆ.
*ಇಡೀ ದೇಹದ ಸದೃಢತೆಯನ್ನು ಹೆಚ್ಚಿಸುತ್ತದೆ.
*ತೋಳುಗಳ ಬಲವನ್ನು ವರ್ಧಿಸುತ್ತದೆ.

ಎಚ್ಚರಿಕೆ:
ಯಾರಿಗೆ ಮೊಣಕಾಲಿನಲ್ಲಿ ಅಥವಾ ಕಾಲುಗಳಲ್ಲಿ ಗಾಯಗಳಾಗಿವೆಯೋ ಅಂತವರು ಈ ಆಸನವನ್ನು ಹಾಕತಕ್ಕದ್ದಲ್ಲ. ಇಲ್ಲವಾದ್ದಲ್ಲಿ ನುರಿತ ಯೋಗಾ ತರಬೇತಿದಾರರಿಂದ ಅಭ್ಯಾಸ ಮಾಡುವುದು ಒಳ್ಳೆಯದು.

English summary

Uttana Shishosana (Extended Puppy Pose) To Relieve Chronic Stress

Uttana Shishosana also known as Extended Puppy Pose is one of the best yoga asanas to beat stress. The word Uttana Shishosana is derived from the Sanskrit word 'Uttana' which means extended, 'Shisho' which means puppy and 'Asana' which means pose. This Uttana Shishosana helps to relax the body and the mind and is found to be a great stress buster. Have a look at the step-wise procedure to perform the asana.
Story first published: Monday, August 1, 2016, 20:18 [IST]
X
Desktop Bottom Promotion