For Quick Alerts
ALLOW NOTIFICATIONS  
For Daily Alerts

ಸದೃಢ ಸ್ನಾಯುಗಳ ಆರೋಗ್ಯಕ್ಕೆ-ಪರಿಗಾಸನ

By Vani Naik
|

ಪೆಡಸಾದ ಕುತ್ತಿಗೆ ಇದ್ದರೆ, ಕತ್ತನ್ನು ತಿರುಗಿಸುವುದಕ್ಕೆ ಆಗುವುದಿಲ್ಲ. ಕುತ್ತಿಗೆಯ ಸುತ್ತ ಇರುವ ಸ್ನಾಯುಗಳಿಗೆ ತೊಂದರೆಯಾದರೆ, ಕತ್ತನ್ನು ತಿರುಗಿಸಲೂ ಆಗದ ಪರಿಸ್ಥಿತಿ ಉಂಟಾಗುತ್ತದೆ. ಸ್ನಾಯುಗಳು ಅಶಕ್ತವಾಗಿದ್ದರೂ ಈ ರೀತಿಯಾಗುವ ಸಂಭವವಿರುತ್ತದೆ.

ನಮ್ಮ ದೇಹವು ಸಲೀಸಾಗಿ ಕೆಲಸ ಮಾಡಬೇಕೆಂದರೆ, ಸ್ನಾಯುಗಳ ಆರೋಗ್ಯ ಬಹಳ ಮುಖ್ಯ. ಸಾಕಷ್ಟು ಕಾರಣಗಳು ಸ್ನಾಯುಗಳ ಶಕ್ತಾಶಕ್ತತೆ ಮೇಲೆ ಪರಿಣಾವನ್ನುಂಟು ಮಾಡುತ್ತದೆ. ಸ್ನಾಯುಗಳ ಅಸ್ವಸ್ಥತೆ ದೈಹಿಕ ಅಶಕ್ತತೆ, ನೋವು ಮತ್ತು ಪಾರ್ಶವಾಯು ಸಹ ಆಗಬಹುದು.

Parighasana (Gate Pose) To Strengthen The Muscles

ಆದ್ದರಿಂದ ನಮ್ಮ ಸ್ನಾಯುಗಳ ಬಲ ವರ್ಧಿಸಲು ನಾವು ಏನು ಮಾಡಬೇಕು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಕೆಲವರು ವ್ಯಾಯಾಮದ ಮೊರೆಹೊಕ್ಕರೆ ಮತ್ತು ಕೆಲವರು, ಅದಕ್ಕೆ ಪೂರಕವಾದ ಆಹಾರ ಪದ್ಧತಿಯನ್ನು, ಔಷಧಿಯನ್ನು ಸೇವಿಸುವ ಕ್ರಮವನ್ನು ಅನುಸರಿಸುತ್ತಾರೆ. ಆದರೆ, ಈ ಎಲ್ಲಾ ಕ್ರಮಗಳನ್ನು ಹೋಲಿಸಿ ನೋಡಿದರೆ, ಸ್ನಾಯುಗಳ ಬಲವರ್ಧನೆಗೆ ಯೋಗಾಭ್ಯಾಸವೇ ಅನುಸರಿಸಬೇಕಾದ ಸರಿಯಾದ ಕ್ರಮ ಎಂದು ತಿಳಿದು ಬಂದಿದೆ. ಸ್ನಾಯುಗಳ ಬಲವರ್ಧನೆಗೆ ಪರಿಗಾಸನವೂ ಒಂದು ಎಂದು ತಿಳಿದು ಬಂದಿದೆ. ಕುತ್ತಿಗೆ, ಸೊಂಟ ನೋವು ನಿವಾರಣೆಗೆ-'ಭಾರಧ್ವಾಜಾಸನ'

ಪರಿಗಾಸನದ ಹೆಸರಿನ ಮೂಲ ಸಂಸ್ಕೃತ ಭಾಷೆಯದ್ದಾಗಿದೆ. "ಪರಿಗ" ಎಂದರೆ ಕಬ್ಬಿಣದ ಅಡ್ಡ ಎಂದರ್ಥ. ಇದನ್ನು ಸಾಧಾರಣವಾಗಿ, ಪ್ರವೇಶದ್ವಾರ(ಗೇಟು)ಗಳಿಗೆ ಚಿಲಕದಂತೆ ಉಪಯೋಗಿಸುತ್ತಾರೆ. ಆಸನ ಎಂದರೆ "ಭಂಗಿ" ಎಂದರ್ಥ. ಈ ಆಸನವು ದೇಹದ ವಿವಿಧ ಭಾಗಗಳಿಗೆ ಆಮ್ಲಜನಕ ಪೂರೈಕೆ ಮಾಡುವುದರಲ್ಲಿ ನೆರವಾಗುತ್ತದೆ.

ಸ್ನಾಯುಗಳಿಗೆ ಅಂಟಿಕೊಂಡಿರುವ ಬೆನ್ನುಪಟ್ಟಿ ಸಹ ಹಿಗ್ಗುತ್ತದೆ. ಈ ಆಸನವು ಕಷ್ಟಕರವಾಗಿರದೇ ಸುಲಭವಾಗಿದ್ದು ಹೊಸದಾಗಿ ಯೋಗಾಭ್ಯಾಸ ಮಾಡುವವರು ಕೂಡ, ಈ ಆಸನವನ್ನು ಹಾಕಬಹುದು. ಈ ಕೆಳಗೆ ಆಸನವನ್ನು ಹಾಕುವ ಬಗೆಯನ್ನು ತಿಳಿಸಿಕೊಡಲಾಗಿದೆ.

ಪರಿಗಾಸನವನ್ನು ಹಾಕಲು ಕ್ರಮಬದ್ಧವಾದ ವಿವರಣೆ:
1. ಮಂಡಿಗಾಲಿನ ಮೇಲೆ ಒಂದು ಚಾಪೆಯ ಮೇಲೆ ಕುಳಿತುಕೊಳ್ಳಿ. ನಿಮ್ಮ ಪಾದದ ಮೇಲ್ಭಾಗ ಚಾಪೆಯ ಮೇಲಿರಿಸುವಂತೆ ನೋಡಿಕೊಳ್ಳಿ.
2. ಒಂದು ಕಾಲನ್ನು ಹೊರಗೆ ಚಾಚಿ, ಒಂದು ಮಂಡಿಯ ಮೇಲೇಳಿ.
3. ಯಾವ ಮಂಡಿಯನ್ನು ಊರಿರುತ್ತೀರೋ, ಅದು ಸರಿಯಾಗಿ ನಿಮ್ಮ ಸೊಂಟದ ಕೆಳಭಾಗದಲ್ಲಿರಬೇಕು.
4. ಮಂಡಿಯನ್ನು ಊರಿರುವ ಕಾಲು ಹಾಗು ಹೊರಗೆ ಚಾಚಿರುವ ಕಾಲು ಎರಡೂ ಒಂದೇ ಸಾಲಿನಲ್ಲಿ ಇರಬೇಕು.
5. ನಿಮ್ಮ ಕೈಯನ್ನು ತಲೆಯ ಮೇಲ್ಭಾಗಕ್ಕೆ ಎತ್ತಬೇಕು. ನಿಮ್ಮ ತೋಳುಗಳು ನಿಮ್ಮ ಕಿವಿಯ ಪಕ್ಕದಲ್ಲಿರಬೇಕು. ಧೀರ್ಘವಾಗಿ ಉಸಿರೆಳೆದುಕೊಳ್ಳಬೇಕು.
6. ಮತ್ತೊಂದು ಕೈಯನ್ನು ನಿಮ್ಮ ತೊಡೆ ಅಥವಾ ಪಾದದ ಮೇಲಿರಿಸಬೇಕು. ಯೋಗ ಟಿಪ್ಸ್: ಅಸ್ತಮಾ ವಿರುದ್ಧ ಹೋರಾಡಲು 'ಪಾಶಾಸನ'
7. ಇದೇ ಭಂಗಿಯಲ್ಲಿ ಸ್ವಲ್ಪ ಕಾಲ ಇರಬೇಕು.
8. ಧೀರ್ಘವಾಗಿ ಉಸಿರೆಳೆದುಕೊಂಡು, ನಿಧಾನವಾಗಿ ಬಿಡಬೇಕು.
9. ಮತ್ತೊಂದು ಕಾಲಿಗೂ ಇದೇ ಕ್ರಮವನ್ನು ಉನುಸರಿಸಬೇಕು.

ಪರಿಗಾಸನದಿಂದಾಗುವ ಇತರ ಪ್ರಯೋಜನಗಳು:
ಕಿಬ್ಬೊಟ್ಟೆಯ ಅಂಗಗಳನ್ನು, ಶ್ವಾಸಕೋಶವನ್ನು ಪ್ರಚೋದಿಸಲು ನೆರವಾಗುತ್ತದೆ. ಮಂಡಿರಜ್ಜು ಮತ್ತು ಮೊಣಕಾಲಿನ ಹಿಂಭಾಗದ ಹಿಗ್ಗುವಿಕೆಗೆ ಸಹಾಯ ಮಾಡುತ್ತದೆ. ರಕ್ತ ಸಂಚಾರವನ್ನು ಸುಗಮಗೊಳಿಸಿ ನರಗಳಿಗೆ ಶಕ್ತಿ ಕೊಡುತ್ತದೆ. ಪಚನಕಾರ್ಯವನ್ನು ಸುಗಮಗೊಳಿಸುತ್ತದೆ. ಮಂಡಿ-ಪಾದಗಳನ್ನು ಸದೃಢಗೊಳಿಸಲು ತಾಡಾಸನ ಅನುಸರಿಸಿ

ಎಚ್ಚರಿಕೆ
ಮಂಡಿಯಲ್ಲಿ ಗಾಯವಾಗಿದ್ದರೆ ಅಥವಾ ಕುತ್ತಿಗೆ ನೋವಿದ್ದರೆ, ಬಹಳ ಎಚ್ಚರಿಕೆಯಿಂದ ಈ ಆಸನವನ್ನು ಹಾಕಬೇಕಾಗುತ್ತದೆ. ಇಲ್ಲವಾದರೆ, ತಜ್ಞರ ಸಲಹೆ ಸೂಚನೆಗಳ ಮೇಲೆ ಆಸನವನ್ನು ಮಾಡುವುದು ಹೆಚ್ಚು ಸೂಕ್ತ.

English summary

Parighasana (Gate Pose) To Strengthen The Muscles

The word Parighasana comes from the Sanskrit word 'Parigha' which means an iron beam that is used to lock the gate and 'Asana' which means pose. This asana helps in proper oxygen circulation to all parts of the body. The muscles that connect the ribs also gets stretched. This asana is not very tough and can be performed by beginners as well. Check out the step-wise method to perform Parighasana.
X
Desktop Bottom Promotion