For Quick Alerts
ALLOW NOTIFICATIONS  
For Daily Alerts

ಒಂದೇ ತಿಂಗಳಿನಲ್ಲಿ ಬರೋಬ್ಬರಿ ಆರು ಕೆಜಿ ತೂಕ ಇಳಿಸಿಕೊಳ್ಳಿ!

ನಿಮ್ಮ ದೇಹದ ತೂಕವನ್ನು ಒಂದೇ ತಿಂಗಳಲ್ಲಿ ಆರು ಕೇಜಿಗಳವರೆಗೆ ಇಳಿಸಿಕೊಳ್ಳಬೇಕೆ? ಹಾಗಾದರೆ ಇಲ್ಲಿ ನೀಡಿರುವ ಆಹಾರ ಕ್ರಮಗಳನ್ನು ಚಾಚೂ ತಪ್ಪದೇ ಪಾಲಿಸಿ, ತೂಕ ಇಳಿಸಿಕೊಳ್ಳಿ.....

By Manu
|

ಸ್ಥೂಲಕಾಯ ಹಲವು ಕಾಯಿಲೆಗಳಿಗೆ ಆಹ್ವಾನ ನೀಡುತ್ತದೆ. ಹೃದಯದ ಸಹಿತ ಹಲವು ಮುಖ್ಯ ಅಂಗಗಳ ಮೇಲೆ ಹೆಚ್ಚಿನ ಒತ್ತಡ ಹೇರುವ ಮೂಲಕ ಅವುಗಳ ಕ್ಷಮತೆಯನ್ನು ಕುಗ್ಗಿಸುತ್ತದೆ. ಆರೋಗ್ಯ ಕುಂದುವುದು ಮಾತ್ರವಲ್ಲ, ಸ್ಥೂಲಕಾಯದವರು ಇತರರ ಹೀಯಾಳಿಕೆಗೆ ಗುರಿಯಾಗುವ ಭಯದಿಂದ ಆತ್ಮವಿಶ್ವಾಸವನ್ನೂ ಕಳೆದುಕೊಳ್ಳುವ ಅಪಾಯವಿದೆ. ಅತ್ಯುತ್ತಮ ಗಿಡಮೂಲಿಕೆಗಳನ್ನು ಬಳಸಿ ತೂಕ ಇಳಿಸಿ

ಸ್ಥೂಲಕಾಯವಿದ್ದೂ ಉತ್ತಮ ಆರೋಗ್ಯವನ್ನು ಹೊಂದಿರುವವರು ಜಗತ್ತಿನಲ್ಲಿ ಕಡಿಮೆ. ಆದ್ದರಿಂದ ದೃಢಮನಸ್ಸು ಮಾಡಿ ಸ್ಥೂಲಕಾಯವನ್ನು ಇಳಿಸಿಕೊಂಡು ಆರೋಗ್ಯಕರ ಶರೀರವನ್ನು ಹೊಂದುವತ್ತ ಸತತ ಶ್ರಮ ಪಡುವುದರಲ್ಲಿ ಯಶಸ್ಸು ಅಡಗಿದೆ. ಸತತವಾದ ವ್ಯಾಯಾಮ, ಸೂಕ್ತ ಆಹಾರ ಮತ್ತು ಸರಿಯಾದ ಜೀವನಕ್ರಮಗಳನ್ನು ಅನುಸರಿಸುವ ಮೂಲಕ ಖಂಡಿತವಾಗಿಯೂ ತೂಕವನ್ನು ಇಳಿಸಲು ಸಾಧ್ಯ. ತೂಕ ಇಳಿಸಿಕೊಳ್ಳಬೇಕೇ? ಇದೋ ಇಲ್ಲಿದೆ ನೈಸರ್ಗಿಕ ಜ್ಯೂಸ್

ಒಂದು ವೇಳೆ ಕೆಳಗೆ ವಿವರಿಸಿರುವ ಆಹಾರಗಳನ್ನು ನಿಮ್ಮ ನಿತ್ಯದ ಆಹಾರಗಳೊಂದಿಗೆ ಬದಲಿಸಿಕೊಂಡಲ್ಲಿ ಒಂದೇ ತಿಂಗಳಲ್ಲಿ ಆರು ಕೇಜಿಯವರೆಗೂ ತೂಕವನ್ನು ಯಾವುದೇ ಅಡ್ಡಪರಿಣಾಮಗಳಿಲ್ಲದೇ ಇಳಿಸಲು ಸಾಧ್ಯವಾಗುತ್ತದೆ.....


ಮೊಟ್ಟೆ

ಮೊಟ್ಟೆ

ಸಾವಯವ ವಿಧಾನದಿಂದ ಬೆಳೆಸಿದ ಕೋಳಿಗಳ ಮೊಟ್ಟೆಯನ್ನು ಉಪಾಹಾರದ ರೂಪದಲ್ಲಿ ಪ್ರತಿದಿನ ಬೆಳಿಗ್ಗೆ ತಿನ್ನುವ ಮೂಲಕ ನಿಮಗೆ ಅಗತ್ಯವಾದ ಪ್ರೋಟೀನು ಮತ್ತು ಇತರ ಪೋಷಕಾಂಶಗಳು ದೊರಕುತ್ತದೆ. ಹಾಗೂ ಕೊಬ್ಬು ಸಹಾ ಬಳಕೆಯಾಗಿ ಸ್ಥೂಲಕಾಯ ಇಳಿಯಲು ನೆರವಾಗುತ್ತದೆ.

ಪಾಲಕ್ ಸೊಪ್ಪು

ಪಾಲಕ್ ಸೊಪ್ಪು

ಕೊಬ್ಬು ಇಳಿಸಲು ಉತ್ತಮವಾದ ಆಹಾರಗಳ ಪಟ್ಟಿಯಲ್ಲಿ ಪಾಲಕ್ ಮತ್ತು ಬಸಲೆ ಸೊಪ್ಪು ಪ್ರಮುಖ ಪಾತ್ರ ವಹಿಸುತ್ತವೆ. ಈ ಸೊಪ್ಪಿನ ಸೇವನೆಯಿಂದ ರಕ್ತದಲ್ಲಿ ಹೆಚ್ಚಿನ ಪ್ರಮಾಣದ ಕಬ್ಬಿಣ ಲಭ್ಯವಾಗುತ್ತದೆ ಹಾಗೂ ಈ ಆಹಾರವನ್ನು ಜೀರ್ಣಿಸಿಕೊಳ್ಳಲು ಹೆಚ್ಚಿನ ಕೊಬ್ಬು ಬಳಕೆಯಾಗುವ ಮೂಲಕ ಕೊಬ್ಬು ಕರಗುತ್ತದೆ. ಅಲ್ಲದೇ ಇದರಲ್ಲಿ ಹೆಚ್ಚಿನ ನಾರು ಇರುವ ಕಾರಣ ಜೀರ್ಣಾಂಗಗಳಿಂದ ತ್ಯಾಜ್ಯಗಳು ಮತ್ತು ವಿಷಕಾರಿ ವಸ್ತುಗಳನ್ನು ಸುಲಭವಾಗಿ ಹೊರಹಾಕಲು ನೆರವಾಗುತ್ತದೆ.

ಮೀನು

ಮೀನು

ಮೀನಿನಲ್ಲಿ ಒಮೆಗಾ 3 ಕೊಬ್ಬಿನ ಆಮ್ಲಗಳು ಉತ್ತಮ ಪ್ರಮಾಣದಲ್ಲಿದ್ದು ಇವುಗಳನ್ನು ಜೀರ್ಣಿಸಲು ಹೆಚ್ಚಿನ ಕೊಬ್ಬು ಬಳಕೆಯಾಗುತ್ತದೆ. ತನ್ಮೂಲಕ ಶೀಘ್ರವಾಗಿ ಕೊಬ್ಬು ಕರಗಲು ನೆರವಾಗುತ್ತದೆ.

ಹೂಕೋಸು

ಹೂಕೋಸು

ಈ ತರಕಾರಿ ಸಹಾ ಶೀಘ್ರವಾಗಿ ಕೊಬ್ಬು ಕಳೆದುಕೊಳ್ಳಲು ನೆರವಾಗುತ್ತದೆ. ಇದರಲಿ ಉತ್ತಮ ಪ್ರಮಾಣದ ಪ್ರೋಟೀನ್ ಮತ್ತು ಕರಗದ ನಾರು ಇದ್ದು ಕೊಬ್ಬನ್ನು ಕರಗಿಸಲು ನೆರವಾಗುತ್ತವೆ. ಹೂಕೋಸಿನ ದಂಟಿನಲ್ಲಿ ಹೆಚ್ಚಿನ ನಾರು ಇರುವ ಕಾರಣ ದಂಟು ಸಹಿತ ಸೇವಿಸಬೇಕು.

ಬೀನ್ಸ್

ಬೀನ್ಸ್

ಅವರೆ ಕಾಳು ಅಥವಾ ಬೀನ್ಸ್, ಇದು ಯಾವುದೇ ಬಣ್ಣದಲ್ಲಿರಲಿ, ಇವು ತೂಕ ಇಳಿಸಲು ನೆರವಾಗುತ್ತವೆ. ರಾಜ್ಮಾ, ಬಿಳಿ ಅವರೆ, ಕೆಂಪು ಅವರೆ, ಕಂದು ಅವರೆ, ಅಲಸಂಡೆ ಇತ್ಯಾದಿ ದ್ವಿದಳ ಧಾನ್ಯಗಳು ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸುತ್ತವೆ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬು ಕರಗಿಸಲು ನೆರವಾಗುತ್ತವೆ.

ಮಧ್ಯಾಹ್ನದ ಮತ್ತು ರಾತ್ರಿಯ ಊಟಕ್ಕೆ

ಮಧ್ಯಾಹ್ನದ ಮತ್ತು ರಾತ್ರಿಯ ಊಟಕ್ಕೆ

ಮಧ್ಯಾಹ್ನದ ಮತ್ತು ರಾತ್ರಿಯ ಊಟಕ್ಕೆ ಹೆಚ್ಚಿನ ನಾರು ಇರುವ ಧಾನ್ಯಗಳನ್ನು ಮತ್ತು ಕಾಳುಗಳನ್ನು ಹೆಚ್ಚಾಗಿ ಸೇವಿಸಬೇಕು. ಬಾರ್ಲಿ, ಹಬೆಯಲ್ಲಿ ಬೇಯಿಸಿದ ತರಕಾರಿಗಳು, ಓಟ್ಸ್, ಮೊದಲಾದವು ಹೆಚ್ಚು ನಾರಿನ ಅಂಶವನ್ನು ಹೊಂದಿದ್ದು ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಶಗಳನ್ನು ನೀಡುವ ಜೊತೆಗೆ ತೂಕ ಇಳಿಸಿಕೊಳ್ಳಲೂ ಸಹಾಯ ಮಾಡುತ್ತವೆ.

ಪ್ರೋಟೀನ್ ಯುಕ್ತ ಆಹಾರಗಳು

ಪ್ರೋಟೀನ್ ಯುಕ್ತ ಆಹಾರಗಳು

ಹೆಚ್ಚಿನ ಪ್ರೋಟೀನ್ ಯುಕ್ತ ಆಹಾರಗಳು ದೇಹಕ್ಕೆ ಅಗತ್ಯವಾದ ಪ್ರೋಟೀನುಗಳನ್ನು ವಿವಿಧ ಕಾಳುಗಳು ಪೂರೈಸುತ್ತವೆ. ತೊಗರಿಬೇಳೆ, ಕಡಲೆಬೇಳೆ, ಹುರುಳಿ ಕಾಳು, ಹೆಸರು ಕಾಳು ಮೊದಲಾದವು ಪ್ರೋಟೀನ್‌ನ ಉತ್ತಮ ಆಗರಗಳಾಗಿವೆ.

English summary

Foods Can Actually Help You Drop 6 Kilos In A Month!

if you want to maintain a healthy weight and attain a fitter physique, it is very crucial to alter your diet and also follow a strict exercise routine. You can also add these superfoods to your diet, that can help you shed about 6 kilos in a month!
X
Desktop Bottom Promotion