For Quick Alerts
ALLOW NOTIFICATIONS  
For Daily Alerts

ನಿದ್ರೆ ಬರುತ್ತಿಲ್ಲವೇ? ಮಾತ್ರೆ ಬಿಡಿ, ಯೋಗ ಮಾಡಿ

|

ದಿನವಿಡೀ ಕೆಲಸ ಮಾಡಿ ದಣಿದು ಬಂದ ಬಳಿಕ ಪ್ರತಿಯೊಬ್ಬರು ನಿರೀಕ್ಷಿಸುವುದು ಮರುದಿನದ ಬೆಳಗ್ಗಿನ ತನಕ ಸುಖ ನಿದ್ರೆ. ಆದರೆ ಎಷ್ಟೇ ಕಷ್ಟಪಟ್ಟರೂ ಶಾಂತಿಯಿಂದ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ಇದಕ್ಕೆಲ್ಲಾ ಕಾರಣವಾದ ನಿದ್ರಾಹೀನತೆ ಸಮಸ್ಯೆಯು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಅಷ್ಟೇ ಅಲ್ಲದೆ ದಿನನಿತ್ಯದ ಜಂಜಾಟ, ಕದಡಿದ ನೆಮ್ಮದಿ, ಕೌಟುಂಬಿಕ ಕಲಹ, ಒತ್ತಡದ ಜೀವನ ಶೈಲಿ, ಆಹಾರ ಕ್ರಮದಲ್ಲಿ ಏರುಪೇರು, ಹೀಗೆ ನಾನಾ ರೀತಿಯ ಕಾರಣಗಳಿಂದಾಗಿ ಕೂಡ ನಾವು ರಾತ್ರಿಯ ಸುಖ ನಿದ್ರೆಯನ್ನು ಕಳೆದು ಕೊಳ್ಳುತ್ತಿದ್ದೇವೆ.

ಹಾಗಾಗಿ ಇವೆಲ್ಲಾ ಸಮಸ್ಯೆಯಿಂದ ಮುಕ್ತಿ ಹೊಂದಲು ಕೆಲವರು ನಿದ್ದೆಗುಳಿಗೆಗಳ ಮೊರೆ ಹೋಗುತ್ತಿದ್ದಾರೆ. ಆದರೆ ಈ ಮಾತ್ರೆಗಳು ತಾತ್ಕಾಲಿಕವಾಗಿ ನಿದ್ದೆಯನ್ನು ಒದಗಿಸಿದರೂ ಇವುಗಳ ಅಡ್ಡಪರಿಣಾಮಗಳು ಈಗಾಗಲೇ ಇರುವ ಕಾಯಿಲೆಗಳನ್ನು ಉಲ್ಬಣಿಸುವ ಸಾಧ್ಯತೆ ಇರುವುದರಿಂದ ಇದರಿಂದ ದೂರವುಳಿಯುವುದೇ ಲೇಸು, ಇದನ್ನು ಹೊರತುಪಡಿಸಿ ನಿಮ್ಮ ಜೀವನಶೈಲಿಯಲ್ಲಿ ಆರೋಗ್ಯಕರ ಬದಲಾವಣೆಗಳನ್ನು ಮಾಡಿಕೊಳ್ಳಬಹುದು. ಆದರೆ ಇದಕ್ಕಿಂತ ತುಂಬಾ ಸರಳ ಪರಿಹಾರವೆಂದರೆ ಅದುವೇ ಯೋಗ. ಅಯ್ಯೋ ನಿದ್ದೆ ಮಾತ್ರೆಯ ಸಹವಾಸ ಬೇಡಪ್ಪಾ ಬೇಡ!

ಹೌದು ಪ್ರತಿದಿನ ಯೋಗವನ್ನು ಅಭ್ಯಾಸ ಮಾಡುವುದರಿಂದ ನೀವು ರಾತ್ರಿಯಿಡಿ ಶಾಂತಿಯಿಂದ ನಿದ್ರೆ ಮಾಡಲು ಸಾಧ್ಯವಾಗುತ್ತದೆ. ಅದರಲ್ಲೂ ಸಂಜೆ ವೇಳೆ ಅಥವಾ ರಾತ್ರಿ ಮಲಗುವ ಮೊದಲು ಕೆಲವೊಂದು ಯೋಗಾಸನಗಳನ್ನು ಮಾಡಿದರೆ ನಿಮಗೆ ಕಣ್ತುಂಬ ನಿದ್ರೆ ಮತ್ತು ಮರುದಿನ ಉಲ್ಲಾಸಿತರಾಗಿ ಎದ್ದೇಳಲು ನೆರವಾಗುತ್ತದೆ. ಅಷ್ಟೇ ಏಕೆ ಈ ಯೋಗಾಸನಗಳನ್ನು ನಿದ್ರಾಹೀನತೆ ಸಮಸ್ಯೆಯನ್ನು ತಡೆಯಲು ನೆರವಾಗುತ್ತದೆ...

Top Yoga Poses to Help You Sleep Better

ಜಾನು ಶಿರ್ಸಾಸನ(ತಲೆಯಿಂದ ಮೊಣಕಾಲಿನವರೆಗೆ)
ಕಾಲುಗಳನ್ನು ಮುಂದಕ್ಕೆ ಚಾಚಿಕೊಂಡು ನೇರವಾಗಿ ಕುಳಿತುಕೊಳ್ಳಿ. ಬಲ ಮೊಣಕಾಲನ್ನು ಬಗ್ಗಿಸಿ ಮತ್ತು ಅದನ್ನು ಎಡ ತೊಡೆಯ ತನಕ ತನ್ನಿ. ಬಲ ಮೊಣಕಾಲು ನೆಲವನ್ನು ಸ್ಪರ್ಶಿಸಲಿ. ಉಸಿರನ್ನು ಎಳೆದುಕೊಳ್ಳಿ ಮತ್ತು ಎರಡು ಕೈಗಳನ್ನು ವಿಸ್ತಾರಗೊಳಿಸಿ. ಈಗ ಉಸಿರನ್ನು ಹೊರಗೆ ಬಿಡಿ ಮತ್ತು ಎಡ ಪಾದಗಳನ್ನು ಮುಟ್ಟಿ. ಎಡಪಾದದ ಎರಡು ಕಡೆಗೆ ನಿಮ್ಮ ಕೈಗಳನ್ನಿಡಿ. ಹೆಬ್ಬೆರಳನ್ನು ಒಂದು ನಿಮಿಷ ಹಿಡಿಯಿರಿ ಮತ್ತು ಇನ್ನೊಂದು ಕಾಲಿನಲ್ಲಿಯೂ ಇದೇ ರೀತಿ ಮಾಡಿ.

ಸುಖಾಸನ(ಸುಲಭವಾಗಿ ಮುಂದಕ್ಕೆ ಬಾಗುವುದು)

ಇದು ನೀವು ಪ್ರಯತ್ನಿಸಬಹುದಾದ ತುಂಬಾ ಸುಲಭ ಆಸನ. ತುಂಬಾ ಆರಾಮವಾಗಿ ಕುಳಿತುಕೊಂಡು ಮೊಣಕಾಲುಗಳನ್ನು ಬಗ್ಗಿಸಿ. ಕೈಗಳನ್ನು ಹಿಗ್ಗಿಸಿ ಮತ್ತು ಮುಂದಕ್ಕೆ ಬಾಗಿ. ನಿಮ್ಮ ತಲೆಯಿಂದ ನೆಲವನ್ನು ಸ್ಪರ್ಶಿಸಲು ಪ್ರಯತ್ನಿಸಿ. ಒಂದು ನಿಮಿಷ ಹಾಗೆ ಇರಿ ಮತ್ತು ಮತ್ತೆ ಆರಾಮದಾಯಕ ಸ್ಥಿತಿಗೆ ಬನ್ನಿ. ದೈಹಿಕ ಸ್ವಾಸ್ಥ್ಯಕ್ಕಾಗಿ ಯೋಗ ಮಾಡಿ ಜಿಮ್ ಬಿಡಿ

ಉತ್ತನಾಸನ(ನೇರವಾಗಿ ನಿಂತು ಬಾಗುವುದು)

ನಿಮ್ಮ ಎರಡು ಕಾಲುಗಳ ಮಧ್ಯೆ ಆರು ಇಂಚು ಸ್ಥಳಾವಕಾಶ ಇರುವಂತೆ ನಿಂತುಕೊಳ್ಳಿ. ದೇಹವನ್ನು ಬಾಗಿಸಿ ಎರಡು ಕೈಗಳಿಂದ ನಿಮ್ಮ ಕಾಲುಗಳನ್ನು ಮುಟ್ಟಿ. ಈ ಆಸನದಿಂದ ಒಳ್ಳೆಯ ನಿದ್ರೆ ಮಾತ್ರವಲ್ಲದೆ, ತಲೆನೋವು ಶಮನವಾಗುತ್ತದೆ.

ಬಾಲಾಸನ(ಮಕ್ಕಳ ಭಂಗಿ)

ಕೈಗಳನ್ನು ಮತ್ತು ಭುಜವನ್ನು ಮುಂದಕ್ಕೆ ಬಾಗಿಸಿ ಮಗುವಿನಂತೆ ಭಂಗಿ ನೀಡಿ. ನಿಮ್ಮ ಹಿಂಗಾಲಿನ ಮೇಲೆ ಪೃಷ್ಠವಿರಲಿ. ಸಾಮಾನ್ಯವಾಗಿ ಉಸಿರಾಡಿ. ಇದೇ ರೀತಿ ಕೆಲವು ಸಮಯ ಮಾಡಿ. ಉಸಿರು ಮೇಲಕ್ಕೆಳೆದುಕೊಳ್ಳಿ ಮತ್ತು ಆರಂಭದ ಸ್ಥಿತಿಗೆ ಬನ್ನಿ.

ಶವಾಸನ(ಶವದ ಭಂಗಿ)

ಇದು ಎಲ್ಲಕ್ಕಿಂತಲೂ ತುಂಬಾ ಸುಲಭ ಆಸನ. ಬೆನ್ನನ್ನು ನೆಲಕ್ಕೊರಗಿಸಿ ಕೈಗಳು ಮತ್ತು ಕಾಲುಗಳನ್ನು ಜತೆಯಾಗಿಟ್ಟುಕೊಂಡು ಶವದಂತೆ ಮಲಗಿ ಮತ್ತು ನಿಮ್ಮ ಉಸಿರಾಟದ ಕಡೆ ಗಮನಹರಿಸಿ. ನಿದ್ರೆ ಬರಲು ಇದು ಒಳ್ಳೆಯ ಆಸನ.
English summary

Top Yoga Poses to Help You Sleep Better

Often have trouble sleeping? You're not alone – and it could be costing you more than just a restless night and sleepy day, according to recent research, which showed that people with insomnia are much more likely to experience associated health problems such as anxiety, depression, diabetes and congestive heart failure. Boost relaxation and beat insomnia by soothing your mind and body before bed. Here are easy yoga poses to get you there
Story first published: Wednesday, October 21, 2015, 20:15 [IST]
X
Desktop Bottom Promotion