For Quick Alerts
ALLOW NOTIFICATIONS  
For Daily Alerts

ದೇಹದ ಮೂಳೆಗಳ ಆರೋಗ್ಯ ವರ್ಧನೆಗೆ ಸರಳ ಸೂತ್ರ

By Arshad
|

ನಮ್ಮ ಶರೀರದಲ್ಲಿ ನಶ್ವರವಾಗದ ಭಾಗವೆಂದರೆ ಮೂಳೆಗಳು. ಇಡಿಯ ದೇಹ ಭೂಮಿಯಲ್ಲಿ ಜೀರ್ಣವಾದರೂ ಮೂಳೆಗಳು ಮಾತ್ರ ಮಿಲಿಯಾಂತರ ವರ್ಷಗಳಿಂದ ಹಾಗೇ ಇರುತ್ತವೆ. ಡೈನಾಸಾರುಗಳ ಬಗ್ಗೆ ನಮಗೆ ತಿಳಿದದ್ದೇ ಅವುಗಳ ಮೂಳೆಗಳಿಂದ. ಆರೋಗ್ಯಕರವಾದ ಮೂಳೆಗಳು ಸರಿಸುಮಾರು ಕಲ್ಲಿನಷ್ಟು ದೃಢವಾಗಿರಬೇಕು. ಆಗಲೇ ಇಡಿಯ ದೇಹದ ಭಾರವನ್ನು ಹೊರಲು ಸಾಧ್ಯವಾಗುತ್ತದೆ.

ಆದರೆ ಸೂಕ್ತವಾದ ಆರೈಕೆಯಿಲ್ಲದಿದ್ದರೆ ಮೂಳೆಗಳು ಎಷ್ಟು ದೃಢವಾಗಿರ ಬೇಕೋ ಅಷ್ಟು ದೃಡವಾಗಿರದೇ ಮೂಳೆಯ ಟೊಳ್ಳು ದೊಡ್ಡದಾಗುವ, ಗಾಳಿಗುಳ್ಳೆಗಳು ತುಂಬುವ (osteoporosis) ಸಂಭವವಿದೆ. ಈ ಮೂಳೆಗಳು ಸುಲಭವಾಗಿ ತಂಡಾಗುವಂತಿದ್ದು ಚಿಕ್ಕದಾಗಿ ಜಾರಿ ಬೀಳುವಂತಹ ಚಿಕ್ಕ ನೆಪಕ್ಕಾಗಿ ಕಾಯುತ್ತಿರುತ್ತವೆ. ಸದೃಢವಾದ ಮೂಳೆಗಳಿಗಾಗಿ ಅತ್ಯುತ್ತಮವಾದ ವ್ಯಾಯಾಮಗಳು

ಮೂಳೆಗಳ ದೃಢತೆಗೆ ಅಗತ್ಯವಾಗಿ ಕ್ಯಾಲ್ಸಿಯಂ ಬೇಕು. ಜೊತೆಗೆ ವಿಟಮಿನ್ ಡಿ ಸಹಾ ಬೇಕು. ಕ್ಯಾಲ್ಸಿಯಂ ಮೂಳೆಗಳ ಅಣುಅಣುಗಳ ರಚನೆಯನ್ನು ದೃಢಗೊಳಿಸಲು ಒಂದು ಸಿಮೆಂಟಿನಂತೆ ಕೆಲಸ ಮಾಡಿದರೆ ವಿಟಮಿನ್ ಡಿ ಈ ಸಿಮೆಂಟಿಗೆ ಬೆರೆಸುವ ನೀರಿನಂತೆ ಕೆಲಸ ಮಾಡುತ್ತದೆ. ಮೂಳೆಗಳು ಗಟ್ಟಿಮುಟ್ಟಾಗಿರಲು 8 ಟಿಪ್ಸ್

ಸಾಮಾನ್ಯವಾಗಿ ಹದಿಹರೆಯದಲ್ಲಿ ಪೂರ್ಣಬೆಳವಣಿಗೆ ಪಡೆಯುವ ಮೂಳೆಗಳು ಪ್ರಬುದ್ಧತೆಯನ್ನು ಪಡೆದಂತೆ ಬೆಳವಣಿಗೆಯ ಗರಿಷ್ಟ ಹಂತವನ್ನು ಪಡೆಯುತ್ತವೆ. ನಂತರ ಸುಮಾರು ಮೂವತ್ತರವರೆಗೆ ಅತ್ಯುತ್ತಮ ದೃಢತೆ ಹೊಂದಿರುತ್ತವೆ. ಮೂವತ್ತು ದಾಟಿದ ಬಳಿಕ ಸೂಕ್ತ ಆರೈಕೆ ಇಲ್ಲದಿದ್ದರೆ ನಿಧಾನವಾಗಿ ಶಿಥಿಲಗೊಳ್ಳುತ್ತಾ ಹೋಗುತ್ತವೆ. ಇದಕ್ಕೆ ಆನುವಂಶಿಕವಾದ ಕಾರಣಗಳೂ ಇರಬಹುದು. ಆದರೆ ಕೆಲವು ಅಂಶ ನಮ್ಮ ಆಹಾರ ಮತ್ತು ಚಟುವಟಿಕೆಗಳನ್ನೂ ಅವಲಂಬಿಸಿದೆ. ಮೂಳೆಗಳನ್ನು ಹೇಗೆ ಆರೋಗ್ಯವಾಗಿಟ್ಟುಕೊಳ್ಳಬಹುದು ಎಂಬ ಮಾಹಿತಿಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ...

ನಿಮ್ಮ ಆನುವಂಶೀಯತೆಯನ್ನು ಗಮನಿಸಿ

ನಿಮ್ಮ ಆನುವಂಶೀಯತೆಯನ್ನು ಗಮನಿಸಿ

ನಿಮ್ಮ ಹಿರಿಯರ ಆರೋಗ್ಯ ಹೇಗಿತ್ತು ಎಂದು ವಿಚಾರಿಸಿ. ಒಂದು ವೇಳೆ ನಿಮ್ಮ ಗುರು ಹಿರಿಯರಿಗೆ ಮೂಳೆಗಳ ಸಂಬಂಧಿ ಕಾಯಿಲೆಗಳಿದ್ದರೆ ನಿಮಗೂ ಈ ತೊಂದರೆ ಬರುವ ಸಾಧ್ಯತೆ ಹೆಚ್ಚಾಗಿದೆ. ಈ ಪರಿಸ್ಥಿತಿಯಲ್ಲಿ ಚಿಕ್ಕ ವಯಸ್ಸಿನಿಂದಲೇ ಮೂಳೆಗಳ ಬಗ್ಗೆ ಕಾಳಜಿ ವಹಿಸುವುದು ಅಗತ್ಯ.

ಕ್ಯಾಲ್ಸಿಯಂ ಸೇವನೆ ಒಂದು ಅಭ್ಯಾಸವಾಗಿರಲಿ

ಕ್ಯಾಲ್ಸಿಯಂ ಸೇವನೆ ಒಂದು ಅಭ್ಯಾಸವಾಗಿರಲಿ

ನಿಮ್ಮ ಆಹಾರದಲ್ಲಿ ಕ್ಯಾಲ್ಸಿಯಂ ಹೇರಳವಾಗಿರುವಂತೆ ನೋಡಿಕೊಳ್ಳಿ. ಇದಕ್ಕೆ ಅತ್ಯುತ್ತಮ ಸಲಹೆ ಎಂದರೆ ರಾತ್ರಿ ಮಲಗುವ ಮುನ್ನ ಒಂದು ಲೋಟ ಬಿಸಿಹಾಲಿಗೆ ಒಂದು ಚಮಚ ಜೇನು ಸೇರಿಸಿ ಕುಡಿಯುವುದು.

ವಿಟಮಿನ್ ಡಿ ಸಹಾ ಇರಲಿ

ವಿಟಮಿನ್ ಡಿ ಸಹಾ ಇರಲಿ

ಕೇವಲ ಕ್ಯಾಲ್ಸಿಯಂ ನಿಮ್ಮ ಆಹಾರದಲ್ಲಿದ್ದರೆ ಸಾಲದು, ಇದಕ್ಕೆ ವಿಟಮಿನ್ ಡಿ ಸಹಾ ಪೂರಕವಾಗಿ ಬೇಕು. ವಿಟಮಿನ್ ಡಿ ನಮಗೆ ಕಿತ್ತಳೆ, ಮೊಟ್ಟೆ, ಮೀನುಗಳಿಂದ ದೊರಕುತ್ತದೆ. ಆದರೆ ನಮಗೆ ಇದನ್ನು ಪಡೆಯಲು ಸೂರ್ಯನ ಬೆಳಕು ಸಹಾ ಅಗತ್ಯವಾಗಿದೆ.

ವಿಟಮಿನ್ ಕೆ ಸಹಾ ಅಗತ್ಯ

ವಿಟಮಿನ್ ಕೆ ಸಹಾ ಅಗತ್ಯ

ಮೂಳೆಗಳ ಮಜ್ಜೆಯಲ್ಲಿ ರಕ್ತ ಉತ್ಪಾದನೆಯಾಗುತ್ತದೆ. ರಕ್ತದ ಉತ್ಪಾದನೆಗೆ ವಿಟಮಿನ್ ಕೆ ಅಗತ್ಯವಾಗಿದೆ. ಅಂತೆಯೇ ಮೂಳೆಗಳಿಗೂ ವಿಟಮಿನ್ ಕೆ ಅಗತ್ಯವಾಗಿದೆ. ವಿಟಮಿನ್ ಕೆ ಹೆಚ್ಚಿರುವ ಬ್ರೋಕೋಲಿ ಮತ್ತು ಕೇಲ್ ಎಲೆಗಳನ್ನು ಹೆಚ್ಚು ಹೆಚ್ಚು ಸೇವಿಸಿ.

ಸ್ವಲ್ಪ ಪೊಟಾಶಿಯಂ ಸಹಾ ಇರಲಿ

ಸ್ವಲ್ಪ ಪೊಟಾಶಿಯಂ ಸಹಾ ಇರಲಿ

ಪೊಟಾಶಿಯಂ ಮೂಳೆಗಳ ದೃಢತೆಯಲ್ಲಿ ನೇರವಾದ ಪಾತ್ರ ವಹಿಸದೇ ಇದ್ದರೂ ಕ್ಯಾಲ್ಸಿಯಂ ಮೂಳೆಗಳಲ್ಲಿ ಅಡಕಗೊಳ್ಳಲು ನೆರವಾಗುತ್ತದೆ. ಸಿಹಿಗೆಣಸು ಮತ್ತು ಬಾಳೆಹಣ್ಣುಗಳಲ್ಲಿ ಪೊಟ್ಯಾಶಿಂ ಉತ್ತಮ ಪ್ರಮಾಣದಲ್ಲಿವೆ.

ಸಾಕಷ್ಟು ವ್ಯಾಯಾಮ ಅಗತ್ಯ

ಸಾಕಷ್ಟು ವ್ಯಾಯಾಮ ಅಗತ್ಯ

ನಿಮ್ಮ ನಿತ್ಯದ ಚಟುವಟಿಕೆಗಳಲ್ಲಿ ಸಾಕಷ್ಟು ವ್ಯಾಯಾಮ ಇರಬೇಕಾದುದು ಅಗತ್ಯ. ಚಟುವಟಿಕೆ ಕಡಿಮೆ ಇರುವವರ ಮೂಳೆಯಲ್ಲಿ ಗಾಳಿಗುಳ್ಳೆ ತುಂಬಿರುವ ಸಾಧ್ಯತೆ ಹೆಚ್ಚಾಗಿದೆ.

ಕೆಫೀನ್‌ಗೆ ವಿದಾಯ ಹೇಳಿ

ಕೆಫೀನ್‌ಗೆ ವಿದಾಯ ಹೇಳಿ

ಒಂದು ಸಂಶೋಧನೆಯ ಪ್ರಕಾರ ಮೂಳೆಗಳು ಕ್ಯಾಲ್ಸಿಯಂ ಹೀರಿಕೊಳ್ಳಲು ಕೆಫೀನ್ ಅಡ್ಡಿಪಡಿಸುವುದರಿಂದ ಮೂಳೆಗಳು ಅಗತ್ಯವಾದ ದೃಢತೆಯನ್ನು ಪಡೆಯದಿರುವುದರಿಂದ ಕೆಫೀನ್ ಹೆಚ್ಚಿರುವ ಆಹಾರ, ಪಾನೀಯ ಮತ್ತು ಔಷಧಿಗಳನ್ನು ದೂರವಿರಿಸುವುದು ಮೇಲು.

ಆಲ್ಕೋಹಾಲ್‌ನಿಂದ ದೂರಾಗಿ

ಆಲ್ಕೋಹಾಲ್‌ನಿಂದ ದೂರಾಗಿ

ಆಲ್ಕೋಹಾಲ್ ಸೇವನೆಯಿಂದ ವಿಟಮಿನ್ ಡಿ ಪ್ರಮಾಣ ಅಪಾಯಕರ ಮಟ್ಟಕ್ಕೆ ಕುಸಿಯುತ್ತದೆ. ಇದರಿಂದ ಮೂಳೆಗಳು ಕ್ಯಾಲ್ಸಿಯಂ ಹೀರಿಕೊಳ್ಳಲು ಅಸಮರ್ಥವಾಗಿ ಶಿಥಿಲವಾಗುತ್ತವೆ.

English summary

How To Keep Your Bones Healthy

How to keep bones healthy? Let us get down to the basics. You need vitamin D and Calcium to strengthen your bones. The role of Calcium is to provide support to the structure of your bones. And what does vitamin D do? Well, it helps your body absorb enough of Calcium from the foods you eat.. So, let us discuss how to strengthen your bones.
X
Desktop Bottom Promotion