For Quick Alerts
ALLOW NOTIFICATIONS  
For Daily Alerts

ಆಯುರ್ವೇದ ಔಷಧಿ ಅಶ್ವಗಂಧದಿಂದ ಲೈಂಗಿಕ ಆರೋಗ್ಯವನ್ನು ವೃದ್ಧಿಸಬಹುದೇ?

By Super
|

ಕಿರೇಮಲ್ಲಿನಗಿಡ ಎಂದು ಕನ್ನಡದಲ್ಲಿ ಕರೆಯಲ್ಪಡುವ ಅಶ್ವಗಂಧ (ಸಂಸ್ಕೃತ) ನಮ್ಮ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಉಪಯುಕ್ತವಾಗಿದೆ. ಅಲ್ಪ ಪ್ರಮಾಣದಲ್ಲಿ ನಿತ್ಯ ಸೇವಿಸುವುದರಿಂದ ದೇಹದ ವಿವಿಧ ಕ್ರಿಯೆಗಳು ಯಾವುದೇ ತೊಂದರೆಯಿಲ್ಲದಂತೇ ನಡೆದು ಆರೋಗ್ಯ ವೃದ್ಧಿಯಾಗುತ್ತದೆ. ಅದರಲ್ಲೂ ಸಾಮಾನ್ಯವಾಗಿ ನಡುವಯಸ್ಸು ದಾಟಿದ ಬಳಿಕ ವಿವಾಹಿತರನ್ನು ಕಾಡುವ ಲೈಂಗಿಕ ಶಕ್ತಿಯಲ್ಲಿ ಇಳಿಯುವಿಕೆಯನ್ನು ಅಶ್ವಗಂಧ ಯಶಸ್ವಿಯಾಗಿ ಪುನಃಶ್ಚೇತನಗೊಳಿಸುತ್ತದೆ. ಇದೇ ಕಾರಣಕ್ಕೆ ಈ ಅದ್ಭುತವಾದ ಮೂಲಿಕೆಗೆ ಭಾರತೀಯ ಜಿಂನ್ಸೆಂಗ್ ಎಂದೂ ಕರೆಯಲಾಗುತ್ತದೆ.

ಜೆಂನ್ಸೆಂಗ್ ಎಂಬುವುದು ಚೀನಾದ ಒಂದು ಶುಂಠಿಯಾಕಾರದ ಗಡ್ಡೆಯಾಗಿದ್ದು ಅಪ್ರತಿಮ ಕಾಮೋತ್ತೇಜಕವಾಗಿದೆ. ಆದರೆ ಇದರ ಸೇವನೆ ಸೂಕ್ತ ಪ್ರಮಾಣದಲ್ಲಿದ್ದರೆ ಮಾತ್ರ ಇದರ ಪೂರ್ಣ ಫಲವನ್ನು ಪಡೆಯಬಹುದು. ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಮಾರಕವಾಗಬಲ್ಲದು. ಲೈಂಗಿಕ ಜೀವನದಲ್ಲಿ ಕಾಮಾಸಕ್ತಿ ಕಡಿಮೆ ಮಾಡುವ ಆಹಾರಗಳು

ಆಯುರ್ವೇದದಲ್ಲಿಯೂ ಅಶ್ವಗಂಧವನ್ನು ಒಂದು ಅದ್ಭುತವಾದ ಮೂಲಿಕೆ ಎಂದು ಬಣ್ಣಿಸಲಾಗಿದೆ. ಸಾವಿರಾರು ವರ್ಷಗಳಿಂದ ಭಾರತದಲ್ಲಿ ವಿವಿಧ ಕಾಯಿಲೆಗಳಿಗೆ ಬಳಸಲಾಗುತ್ತಾ ಬಂದಿರುವ ಈ ಮೂಲಿಕೆ ಭಾರತದಾದ್ಯಂತ ಸುಲಭವಾಗಿ, ವರ್ಷದ ಎಲ್ಲಾ ದಿನಗಳಲ್ಲಿ ದೊರಕುವುದು ಒಂದು ವರವಾಗಿದೆ. ಅಶ್ವಗಂಧದ ಬೇರನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಪುಡಿಮಾಡಿ ಸೂಕ್ತ ಪ್ರಮಾಣದಲ್ಲಿ ಸೇವಿಸುವುದು ಆಯುರ್ವೇದ ಸೂಚಿಸಿದ ವಿಧಾನವಾಗಿದೆ. ಈ ಅಶ್ವಗಂಧದ ಪ್ರಮುಖ ಪ್ರಯೋಜನಗಳನ್ನು ಈಗ ನೋಡೋಣ. ಅಶ್ವಗಂಧ ಅಂದರೆ ಕ್ಯಾನ್ಸರ್ ಗೂ ಭಯ!

ಅಪ್ರತಿಮ ಕಾಮೋತ್ತೇಜಕವಾಗಿದೆ

ಅಪ್ರತಿಮ ಕಾಮೋತ್ತೇಜಕವಾಗಿದೆ

ದಂಪತಿಗಳಲ್ಲಿ ವಿರಸಕ್ಕೆ ಕಾಮದಲ್ಲಿ ನಿರಾಸಕ್ತಿ ಒಂದು ಪ್ರಮುಖ ಕಾರಣವಾಗಿದೆ. ಈ ನಿರಾಸಕ್ತಿ ಹಲವು ಕಾರಣಗಳಿಂದಾಗಿರಬಹುದು. ಉದ್ರೇಕವನ್ನು ಹೆಚ್ಚು ಹೊತ್ತು ಹಿಡಿದಿಟ್ಟುಕೊಳ್ಳಲಾಗದಿರುವುದು, ಶೀಘ್ರಸ್ಖಲನ, ಉದ್ರೇಕವೇ ಆಗದಿರುವುದು, ಉದ್ರೇಕವಾದರೂ ಸಾಕಷ್ಟು ಬಿಗಿಯಿಲ್ಲದಿರುವುದು ಮೊದಲಾದವು ಸಾಮಾನ್ಯವಾದ ತೊಂದರೆಗಳಾಗಿವೆ. ಈ ಎಲ್ಲಾ ತೊಂದರೆಗಳಿಗೆ ಅಶ್ವಗಂಧ ಅತ್ಯುತ್ತಮ ಪರಿಹಾರ ಒದಗಿಸುತ್ತದೆ. ವಿಶೇಷವಾಗಿ ಪುರುಷರಲ್ಲಿ ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ಅಶ್ವಗಂಧವನ್ನು ಆಯುರ್ವೇದ ವೈದ್ಯರು ಸೂಚಿಸಿದ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು. ಶೀಘ್ರದಲ್ಲಿಯೇ ಲೈಂಗಿಕ ಶಕ್ತಿ ಹೆಚ್ಚಾಗಿ ಕುಟುಂಬದಲ್ಲಿ ಹರ್ಷ, ನೆಮ್ಮದಿ ಕಾಣಿಸಿಕೊಳ್ಳುತ್ತದೆ.

ವೀರ್ಯದ ಫಲವತ್ತತೆಯನ್ನು ಹೆಚ್ಚಿಸುತ್ತದೆ

ವೀರ್ಯದ ಫಲವತ್ತತೆಯನ್ನು ಹೆಚ್ಚಿಸುತ್ತದೆ

ಇತ್ತೀಚಿನ ದಿನಗಳಲ್ಲಿ ದಂಪತಿಗಳಲ್ಲಿ ಮಕ್ಕಳಾಗದಿರುವುದು ಚಿಂತನೆಯ ವಿಷಯವಾಗಿದೆ. ಪೂರ್ವಾಗ್ರಹವಾದ ನಂಬಿಕೆಯಂತೆ ತೊಂದರೆ ಹೆಣ್ಣಿನಲ್ಲಿರುವುದೇ ಕಾರಣ ಎಂದು ಬೆರಳು ತೋರಿಸುವವರು ಒಮ್ಮೆ ಗಂಡಿನ ಕಡೆಗೂ ಬೆರಳು ತೋರಿಸುವುದು ಒಳಿತು. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ವಿಪರೀತವಾಗಿ ಕಡಿಮೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸಫಲ ಗರ್ಭಧಾರಣೆಗೆ ಕೇವಲ ಒಂದೇ ಒಂದು ವೀರ್ಯಾಣು ಸಾಕಾದರೂ ಒಂದು ಸಿಸಿ ಯಲ್ಲಿ ಕನಿಷ್ಟ ಇಪ್ಪತ್ತು ಮಿಲಿಯನ್ ವೀರ್ಯಾಣುಗಳಿದ್ದರೇ ಸಫಲವಾದ ಗರ್ಭಧಾರಣೆಯಾಗುವುದು ಸೃಷ್ಟಿಯ ಒಂದು ವಿಚಿತ್ರವಾಗಿದೆ. ಖಚಿತವಾದ ಗರ್ಭಧಾರಣೆಗೆ ನೂರರಿಂದ ನೂರೈವತ್ತಕ್ಕೂ ಹೆಚ್ಚಿದ್ದರೆ ಉತ್ತಮ. ಅಶ್ವಗಂಧ ಈ ಕೊರತೆಯನ್ನು ಯಶಸ್ವಿಯಾಗಿ ನಿವಾರಿಸುತ್ತದೆ. ಆಯುರ್ವೇದ ವೈದ್ಯರು ಸೂಚಿಸಿದ ಪ್ರಮಾಣದಲ್ಲಿ ನಿತ್ಯ ಸೇವನೆಯಿಂದ ಈ ಸಂಖ್ಯೆ ಹೆಚ್ಚುತ್ತದೆ. ಕೇವಲ ಹದಿನಾಲ್ಕು ಇದ್ದ ಪುರುಷರೊಬ್ಬರ ವೀರ್ಯಾಣುಗಳ ಸಂಖ್ಯೆ ಅರವತ್ತಕ್ಕೇರಿ ಇಂದು ಮಗುವಿನ ತಂದೆಯಾಗಿರುವುದು ಅಶ್ವಗಂಧದ ಸಾಮರ್ಥ್ಯದ ಸಾಕ್ಷಿಯಾಗಿದೆ.

ಇಡಿಯ ಶರೀರವನ್ನು ನವಯೌವನಕ್ಕೆ ಕೊಂಡೊಯ್ಯುತ್ತದೆ

ಇಡಿಯ ಶರೀರವನ್ನು ನವಯೌವನಕ್ಕೆ ಕೊಂಡೊಯ್ಯುತ್ತದೆ

ಅಶ್ವಗಂಧದ ನಿಯಮಿತ ಸೇವನೆಯಿಂದ ಪ್ರತಿ ಜೀವಕೋಶಕ್ಕೆ ಅತ್ಯಗತ್ಯವಾದ ಪೋಷಕಾಂಶಗಳು ದೊರಕಲು ಸಹಕಾರಿಯಾಗಿ ಕಳೆಯಿಂದ ಪುಟಿದೇಳುತ್ತದೆ. ಪರಿಣಾಮವಾಗಿ ಯಾವುದೇ ಕಾರ್ಯ ನಿರ್ವಹಿಸಲು ದೇಹ ಹೆಚ್ಚು ಶಕ್ತಿಶಾಲಿಯಾಗುತ್ತದೆ. ನರಮಂಡಲ, ಸಂತಾನೋತ್ಪತ್ತಿ, ಜೀರ್ಣಕ್ರಿಯೆ, ರಕ್ತಪರಿಚಲನೆ ಮೊದಲಾದ ಎಲ್ಲಾ ವ್ಯವಸ್ಥೆಗಳು ಸುಲಲಿತವಾಗಿ ಕೆಲಸ ಮಾಡತೊಡಗುತ್ತವೆ. ಪರಿಣಾಮವಾಗಿ ಮಾನಸಿಕ ನೆಮ್ಮದಿ, ಆರೋಗ್ಯಕರ ಶರೀರ, ಸುಖವಾದ ನಿದ್ದೆ ನಿಮ್ಮದಾಗುತ್ತದೆ.

ಯೌವನವನ್ನು ಬಹುವರ್ಷಗಳವರೆಗೆ ಕಾಪಾಡುತ್ತದೆ

ಯೌವನವನ್ನು ಬಹುವರ್ಷಗಳವರೆಗೆ ಕಾಪಾಡುತ್ತದೆ

ಯೌವನ ಎಂದರೇನು ಎಂಬ ಪ್ರಶ್ನೆಗೆ ಇಪ್ಪತ್ತೈದರ ಹರೆಯದಲ್ಲಿರುವ ಶರೀರ ಎಂಬ ಉತ್ತರವನ್ನೇ ಹೆಚ್ಚಿನವರು ನೀಡುತ್ತಾರೆ. ಆದರೆ ಇಪ್ಪತ್ತೈದರಲ್ಲಿದ್ದೂ ದೇಹದ ರೋಗನಿರೋಧಕ ಶಕ್ತಿ ಕುಂದಿದ್ದರೆ? ಯಾವಾಗಲೂ ಶೀತ ನೆಗಡಿ ಕೆಮ್ಮು ಆವರಿಸಿದ್ದರೆ? ಒಂದು ಕಿ.ಮೀ ನಡೆಯಲೂ ನಾಲ್ಕು ಬಾರಿ ನಿಲ್ಲುವಂತಿದ್ದರೆ? ಹಾಗಾದರೆ ಯೌವನದ ವ್ಯಾಖ್ಯಾನೆಯನ್ನು ಹೀಗೆ ಬದಲಿಸಿಕೊಳ್ಳಬಹುದು. ಯಾವುದೇ ವಯಸ್ಸಿನಲ್ಲಿ ನಿಮ್ಮ ಶರೀರ ಅತ್ತ್ಯುತ್ತಮವಾದ ಆರೋಗ್ಯ ಹೊಂದಿದ್ದು, ರೋಗ ನಿರೋಧಕ ಶಕ್ತಿ ಸದಾ ಕಾರ್ಯಗತವಾಗಿದ್ದು, ಯಾವುದೇ ಕೆಲಸವನ್ನು ಕಡಿಮೆ ಪರಿಶ್ರಮ ಮತ್ತು ಆಯಾಸದೊಂದಿಗೆ ಸಮರ್ಥವಾಗಿ ನಿಭಾಯಿಸಿದರೆ, ಯಾವುದೇ ಪರಿಸ್ಥಿತಿಯಲ್ಲಿ ಮಾನಸಿಕ ಸಂತುಲನೆ ಕಪಾಡಿಕೊಂಡರೆ ನೀವು ಯೌವನದಲ್ಲಿದ್ದೀರಿ ಎಂದು ಅರ್ಥ. ಈ ಎಲ್ಲಾ ಕೆಲಸಗಳಿಗೆ ಅಶ್ವಗಂಧ ಪೂರಕವಾಗಿ ಕೆಲಸಮಾಡುತ್ತದೆ.

ಹೆಚ್ಚಿನ ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ

ಹೆಚ್ಚಿನ ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ

ಅಶ್ವಗಂಧದಲ್ಲಿರುವ ಪೋಷಕಾಂಶಗಳು ರಕ್ತದಲ್ಲಿ ಬೆರೆತು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ತೊಲಗಿಸುವಲ್ಲಿ ನೆರವಾಗುತ್ತವೆ. ಅಲ್ಲದೇ ಮಾನಸಿಕ ಒತ್ತಡ ಕಡಿಮೆಗೊಳಿಸಲೂ ಸಾಧ್ಯವಾಗುತ್ತದೆ. ಪರಿಣಾಮವಾಗಿ ಹೃದಯಕ್ಕೆ ಬೀಳುತ್ತಿದ್ದ ಹೆಚ್ಚಿನ ಒತ್ತಡ ಕಡಿಮೆಯಾಗಿ ಆರೋಗ್ಯ ವೃದ್ದಿಯಾಗುತ್ತದೆ.

ಕೊಲೆಸ್ಟ್ರಾಲ್ ಕಡಿಮೆಗೊಳಿಸಿ ಮಧುಮೇಹವನ್ನು ನಿಯಂತ್ರಿಸುತ್ತದೆ

ಕೊಲೆಸ್ಟ್ರಾಲ್ ಕಡಿಮೆಗೊಳಿಸಿ ಮಧುಮೇಹವನ್ನು ನಿಯಂತ್ರಿಸುತ್ತದೆ

ಅಶ್ವಗಂಧದ ನಿಯಮಿತ ಸೇವನೆಯಿಂದ ರಕ್ತದಲ್ಲಿರುವ ಕೆಟ್ಟ್ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಅಲ್ಲದೇ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನೂ ನಿಯಂತ್ರಿತಗೊಳಿಸುವುದರಿಂದ ಮಧುಮೇಹವೂ ನಿಯಂತ್ರಣಕ್ಕೆ ಬರುತ್ತದೆ.

ಸಂಧಿವಾತದಿಂದ ಬಿಡುಗಡೆಗೊಳಿಸುತ್ತದೆ

ಸಂಧಿವಾತದಿಂದ ಬಿಡುಗಡೆಗೊಳಿಸುತ್ತದೆ

ಬೆರಳು ಮತ್ತು ಮಂಡಿ ಮೊದಲಾದ ಕಡೆ ಭಯಂಕರ ಉರಿ ತರಿಸುವ ಸಂಧಿವಾತ (arthritis) ರೋಗದಿಂದ ಶೀಘ್ರ ಗುಣಮುಖರಾಗಲು ಅಶ್ವಗಂಧ ನೆರವು ನೀಡುತ್ತದೆ.

ಜೀರ್ಣಕ್ರಿಯೆಯಲ್ಲಿನ ತೊಂದರೆಗಳನ್ನು ನಿವಾರಿಸುತ್ತದೆ

ಜೀರ್ಣಕ್ರಿಯೆಯಲ್ಲಿನ ತೊಂದರೆಗಳನ್ನು ನಿವಾರಿಸುತ್ತದೆ

ಅಜೀರ್ಣದ ಕಾರಣವಾಗಿ ಉದ್ಭವವಾಗಿರುವ ಹಲವು ತೊಂದರೆಗಳನ್ನು ಅಶ್ವಗಂಧ ನಿವಾರಿಸುತ್ತದೆ. ಜೀರ್ಣಾಂಗಗಳ ಕ್ಷಮತೆಯನ್ನು ಹೆಚ್ಚಿಸಿ ಜೀರ್ಣಕ್ರಿಯೆ ಸುಲಭವಾಗಿಸುವ ಮೂಲಕ ವಿವಿಧ ಅಜೀರ್ಣಸಂಬಂಧಿ ರೋಗಗಳಿಂದ ಕಾಪಾಡುತ್ತದೆ.

ಇತರ ಆರೋಗ್ಯಕರ ಉಪಯೋಗಗಳು

ಇತರ ಆರೋಗ್ಯಕರ ಉಪಯೋಗಗಳು

*ನಿದ್ದೆಯಿಲ್ಲದಿರುವಿಕೆ:

ರಾತ್ರಿಯ ಊಟದ ಬಳಿಕ ಅಶ್ವಗಂಧ ಸೇವಿಸುವುದರಿಂದ ಮನಸ್ಸು ನಿರಾಳವಾಗಿ ಶೀಘ್ರವೇ ಸುಖನಿದ್ದೆ ಆವರಿಸುವುದು.

*ಬಿಳಿಸೆರಗು:

ಬಿಳಿಸೆರಗು ತೊಂದರೆಯಿಂದ ಬಳಲುತ್ತಿರುವ ಮಹಿಳೆಯರಿಗೆ ಅಶ್ವಗಂಧ ಉತ್ತಮ ಪರಿಹಾರವಾಗಿದೆ.

ಖಿನ್ನತೆ ವಿರುದ್ಧ ಹೋರಾಡುತ್ತದೆ

ಖಿನ್ನತೆ ವಿರುದ್ಧ ಹೋರಾಡುತ್ತದೆ

ಖಿನ್ನತೆ, ಮಾನಸಿಕ ಒತ್ತಡದಿಂದ ಬಳಲುತ್ತಿರುವವರಿಗೆ ಶಾಂತಿ ದೊರಕುತ್ತದೆ. ವಿಷಣ್ಣತೆಯಿಂದ ಹೊರಬರಲು ಮಾನಸಿಕ ಶಕ್ತಿಯನ್ನು ನೀಡುತ್ತದೆ.

ಕ್ಷಯರೋಗವನ್ನು ನಿವಾರಿಸಲು ನೆರವಾಗುತ್ತದೆ

ಕ್ಷಯರೋಗವನ್ನು ನಿವಾರಿಸಲು ನೆರವಾಗುತ್ತದೆ

ಅಂಟುಜಾಡ್ಯವಾದ ಕ್ಷಯರೋಗವನ್ನು ಹತೋಟಿಗೆ ತರಲು ಅಶ್ವಗಂಧ ನೆರವಾಗುತ್ತದೆ. ನಿಯಮಿತ ಸೇವನೆಯಿಂದ ಶೀಘ್ರವೇ ಕ್ಷಯರೋಗದಿಂದ ಮುಕ್ತಿ ಪಡೆಯಬಹುದು.

ಸಂತಾನೋತ್ಪತ್ತಿಯ ಶಕ್ತಿಯನ್ನು ಹೆಚ್ಚಿಸುತ್ತದೆ

ಸಂತಾನೋತ್ಪತ್ತಿಯ ಶಕ್ತಿಯನ್ನು ಹೆಚ್ಚಿಸುತ್ತದೆ

ಗರ್ಭಧಾರಣೆಯ ಬಳಿಕ ಫಲಿತಗೊಂಡ ಅಂಡಾಣು ದೇಹದಿಂದ ಹೊರಹೋಗದಂತೆ ರಕ್ಷಿಸುವುದು ಅತ್ಯಂತ ಅಗತ್ಯವಾಗಿದೆ. ಅಶ್ವಗಂಧದ ಸೇವನೆಯಿಂದ ಬಿಳಿಸೆರಗು ಹೋಗುವುದನ್ನು ತಡೆಯಬಹುದಾದುದರಿಂದ ಫಲಿತಗೊಂಡ ಅಂಡಾಣುವನ್ನು ಹೊರಹೋಗದಂತೆ ರಕ್ಷಿಸಬಹುದಾಗಿದೆ. ಪರಿಣಾಮವಾಗಿ ಸಂತಾನದ ಭಾಗ್ಯ ಪಡೆಯುವ ಸಾಧ್ಯತೆಗಳು ಅಪಾರಪ್ರಮಾಣದಲ್ಲಿ ಹೆಚ್ಚಾಗುತ್ತದೆ.

ಕಾಮೋತ್ತೇಜಕವಾಗಿ ಉಪಯೋಗಿಸುವುದಾದರೆ

ಕಾಮೋತ್ತೇಜಕವಾಗಿ ಉಪಯೋಗಿಸುವುದಾದರೆ

ಒಂದು ಚಮಚ ಅಶ್ವಗಂಧದ ಲೇಹ್ಯ ಅಥವಾ ಅರ್ಧ ಚಮಚ ಒಣಪುಡಿಯನ್ನು ಅಥವಾ ಮಾತ್ರೆಯ ರೂಪದಲ್ಲಿ ಸೇವನೆಗೆ ಸಿದ್ಧರೂಪದಲ್ಲಿ ಸಿಗುವ ಎರಡು ಮಾತ್ರೆಗಳನ್ನು ದಿನಕ್ಕೆರಡು ಬಾರಿಯಂತೆ ಸತತವಾಗಿ ಒಂದು ತಿಂಗಳು ತೆಗೆದುಕೊಳ್ಳಬೇಕು. ತಿಂಗಳ ಬಳಿಕ ವೀರ್ಯಾಣುಗಳ ಸಂಖ್ಯೆ, ಗುಣಮಟ್ಟ, ಲೈಂಗಿಕಾಸಕ್ತಿಯಲ್ಲಿ ಅಭಿವೃದ್ಧಿಯನ್ನು ಕಾಣುವಿರಿ. ಕಾಮದ ಶಕ್ತಿ ಸಹಾ ಹೆಚ್ಚು ಹೊತ್ತಿನವರೆಗೆ ಉಳಿದಿರುವುದನ್ನು ನೋಡಿ ದಂಗಾಗುವಿರಿ.

ದೇಹ ಮತ್ತು ನರಮಂಡಲದ ಪುನಃಶ್ಚೇತನಕ್ಕಾಗಿ

ದೇಹ ಮತ್ತು ನರಮಂಡಲದ ಪುನಃಶ್ಚೇತನಕ್ಕಾಗಿ

ಸಮಪ್ರಮಾಣದಲ್ಲಿ ಅಶ್ವಗಂಧ, ಜೇನು, ಕಲ್ಲುಸಕ್ಕರೆ ಮತ್ತು ತುಪ್ಪಗಳನ್ನು ಮಿಶ್ರಣ ಮಾಡಿ ಇದರದಲ್ಲಿ ಪ್ರತಿದಿನ ರಾತ್ರಿ ಊಟದ ಬಳಿಕ ಅರ್ಧ ಚಮಚ ಸೇವಿಸಿ. ಪರ್ಯಾಯವಾಗಿ ಅಶ್ವಗಂಧ ಪುಡಿ ಮತ್ತು ತ್ರಿಬುಲಾ ಪುಡಿಯನ್ನು ಸಹಾ ಸೇವಿಸಬಹುದು. ಸೇವನೆಯ ಬಳಿಕ ಒಂದು ಲೋಟ ಬಿಸಿ ಹಾಲನ್ನು ಸೇವಿಸುವುದು ಅಗತ್ಯವಾಗಿದೆ.

ಯೌವನವನ್ನು ಕಾಪಾಡಲು ಮತ್ತು ವೃದ್ದಾಪ್ಯದಿಂದ ದೂರವಿರಲು

ಯೌವನವನ್ನು ಕಾಪಾಡಲು ಮತ್ತು ವೃದ್ದಾಪ್ಯದಿಂದ ದೂರವಿರಲು

ಸಮಪ್ರಮಾಣದಲ್ಲಿ ಅಶ್ವಗಂಧದ ಪುಡಿ ಮತ್ತು ನೆಲ್ಲಿಕಾಯಿಯ ರಸವನ್ನು ಮಿಶ್ರಣಮಾಡಿ ಪ್ರತಿದಿನ ಅರ್ಧ ಚಮಚ ಸೇವಿಸಿ. ಇದರಿಂದಾಗಿ ಹೆಚ್ಚಿನ ವರ್ಷಗಳ ಕಾಲ ಯೌವನವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.

ಮುನ್ನೆಚ್ಚರಿಕೆಗಳು

ಮುನ್ನೆಚ್ಚರಿಕೆಗಳು

1) ಒಂದು ವೇಳೆ ಸೂಚಿಸಿದ ಪ್ರಮಾಣಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಹಲವು ಅಡ್ಡಪರಿಣಾಮಗಳು ಗೋಚರಿಸಬಹುದು ಹಾಗೂ ಉದ್ದೇಶಿತ ಕಾರ್ಯವೂ ನಡೆಯದೇ ಇರಬಹುದು. ಹಾಗಾಗಿ ಆಯುರ್ವೇದ ವೈದ್ಯರು ಅಥವಾ ಚಿಕಿತ್ಸಕರ ಸಲಹೆಯ ಮೇರೆಗೆ ನಿಗದಿತ ಪ್ರಮಾಣದಲ್ಲಿ ಮಾತ್ರ ಸೇವಿಸುವುದು ಅವಶ್ಯವಾಗಿದೆ.

2) ಗರ್ಭಧಾರಣೆಗೆ ಅಶ್ವಗಂಧ ಪೂರಕವಾದರೂ ಗರ್ಭಧಾರಣೆಯ ಬಳಿಕದ ದಿನಗಳಲ್ಲಿ ಮಾರಕವಾಗಿದೆ. ಅಶ್ವಗಂಧದ ಅಡ್ಡಪರಿಣಾಮಗಳು ಪಿಂಡದ ಮೇಲೆ ಪರಿಣಾಮ ಬೀರುವುದರಿಂದ ಸೇವನೆ ಉಚಿತವಲ್ಲ.

3) ದೀರ್ಘಕಾಲದ ಸೇವನೆಯಿಂದ ಆಗುವ ಅಡ್ಡಪರಿಣಾಮಗಳು ಇದುವರೆಗೆ ತಿಳಿದಿರದೇ ಇರುವುದರಿಂದ ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಹೆಚ್ಚಿನ ದಿನಗಳ ಕಾಲ ನಿಗದಿತ ಪ್ರಮಾಣಕ್ಕಿಂತಲೂ ಹೆಚ್ಚು ಸೇವಿಸಿದ ಕಲವು ರೋಗಿಗಳಲ್ಲಿ ಥೈರಾಯ್ಡ್ ಗ್ರಂಥಿಯಲ್ಲಿ ಊತ ಕಂಡುಬಂದಿದೆ. ಈ ಊತ thyrotoxicosis ಎಂಬ ರೋಗಕ್ಕೆ ಕಾರಣವಾಗಿದೆ.

4) ಹೆಚ್ಚಿನ ರಕ್ತದೊತ್ತಡದ ತೊಂದರೆ ಇರುವವರು, ಹೊಟ್ಟೆ ಮತ್ತು ಕರುಳುಗಳಲ್ಲಿ ಹುಣ್ಣು (ulcer) ತೊಂದರೆ ಇರುವ ರೋಗಿಗಳು ಅಶ್ವಗಂಧವನ್ನು ಸೇವಿಸದಿರುವುದನ್ನು ವೈದ್ಯರು ಶಿಫಾರಸ್ಸು ಮಾಡುತ್ತಾರೆ.

English summary

How Ashwagandha can be used as Sexual Rejuvenator

Ashwagandha is one of the most wonderful herbs we have come across in our lives. The herb can be taken in small quantities for a long time which would have a profound impact on our health and mind. Here, I have focused on the key medicinal uses of taking it, in what dosages it should be taken and the benefits
X
Desktop Bottom Promotion