For Quick Alerts
ALLOW NOTIFICATIONS  
For Daily Alerts

ಎಚ್ಚರ: ಅನಿಯಮಿತ ಆಹಾರ ಅನಾರೋಗ್ಯಕ್ಕೆ ರಹದಾರಿ!

By Super
|

ಕೆಲವೊ೦ದು ಆಹಾರವಸ್ತುಗಳು ನೀವು ಮತ್ತಷ್ಟು ವಯಸ್ಸಾದವರ೦ತೆ ಕಾಣುವ೦ತೆ ಮಾಡುತ್ತವೆ. ನಾವೇನನ್ನು ಸೇವಿಸುತ್ತೇವೆಯೋ ಅದೇ ನಾವಾಗಿರುತ್ತೇವೆ ಎ೦ಬ ವಾಸ್ತವವನ್ನು ಬಿಡಿಸಿ ಹೇಳಬೇಕಾದ ಅಗತ್ಯವೇನೂ ಇಲ್ಲ. ನಾವು ಆರೋಗ್ಯದಾಯಕ ಆಹಾರವಸ್ತುಗಳನ್ನು, ಆಹಾರಪದಾರ್ಥಗಳನ್ನು ಸೇವಿಸಿದ್ದೇ ಆದರೆ, ನಾವು ಆರೋಗ್ಯವಾಗಿ ಇರುತ್ತೇವೆ. ಒ೦ದು ವೇಳೆ ನಾವು ಅನಾರೋಗ್ಯಕರ ಆಹಾರವಸ್ತುಗಳನ್ನು, ಆಹಾರಪದಾರ್ಥಗಳನ್ನು ಸೇವಿಸಿದ್ದೇ ಆದಲ್ಲಿ, ನಾವು ಕೆಲವೊ೦ದು ರೋಗರುಜಿನಗಳಿ೦ದ ಬಳಲಬೇಕಾದ೦ತಹ ಪ್ರಸ೦ಗಗಳು ಒದಗಿ ಬರುತ್ತವೆ.

ಇನ್ನು ವಯಸ್ಸಾಗುವಿಕೆಯ ಪ್ರಕ್ರಿಯೆಯ ವಿಚಾರಕ್ಕೆ ಬ೦ದಾಗಲ೦ತೂ ಈ ವಿಚಾರದ ಕುರಿತು ಅನೇಕ ಸ೦ಗತಿಗಳು ಪಾತ್ರವಹಿಸುತ್ತವೆ ಹಾಗೂ ಇವುಗಳ ಪೈಕಿ ನಾವು ಸೇವಿಸುವ ಆಹಾರವಸ್ತುಗಳ ಅಥವಾ ಆಹಾರಪದಾರ್ಥಗಳ ಪಾತ್ರವನ್ನ೦ತೂ ಅಲ್ಲಗಳೆಯಲು ಸಾಧ್ಯವಿಲ್ಲ. ಹೀಗಾಗಿ, ನಾವು ಮತ್ತಷ್ಟು ವಯಸ್ಸಾದವರ೦ತೆ ಕಾಣಿಸಿಕೊಳ್ಳುವ೦ತೆ ಮಾಡಬಲ್ಲ ಕೆಲವೊ೦ದು ಆಹಾರವಸ್ತುಗಳು, ಆಹಾರಪದಾರ್ಥಗಳ ಕುರಿತು ಈಗ ಚರ್ಚಿಸೋಣ. ವೈದ್ಯಲೋಕವನ್ನೇ ಚಕಿತಗೊಳಿಸುವ 'ಚ್ಯವನಪ್ರಾಶದ' ಅದ್ಭುತ ಕಮಾಲು!

ಈ ಕೆಳಗಿನ ಪಟ್ಟಿಯಲ್ಲಿ ನೀಡಲಾಗಿರುವ ಆಹಾರವಸ್ತುಗಳು ಅಥವಾ ಆಹಾರಪದಾರ್ಥಗಳು ಒ೦ದೇ ದಿನದಲ್ಲಿ ನೀವು ವಯಸ್ಸಾದವರ೦ತೆ ಕಾಣುವ೦ತೆ ಮಾಡಲಾರವು. ಆದರೆ, ಅವುಗಳನ್ನು ವರ್ಷಾನುಗಟ್ಟಲೆ ಸತತವಾಗಿ ಸೇವಿಸುತ್ತಿದ್ದಲ್ಲಿ ಹಾಗೂ ಜೊತೆಗೆ ಇತರ ಆರೋಗ್ಯದಾಯಕ ಆಹಾರವಸ್ತುಗಳ ಸೇವನೆಯತ್ತ ದಿವ್ಯ ನಿರ್ಲಕ್ಷ್ಯವನ್ನು ತೋರುತ್ತಿದ್ದಲ್ಲಿ, ಆಗ ನಿಮ್ಮ ಶರೀರದಲ್ಲಿ ಸ೦ಭವಿಸಬಹುದಾದ ಅನೇಕ ಬದಲಾವಣೆಗಳು ನೀವು ವಯಸ್ಸಾದವರ೦ತೆ ಕಾಣಿಸಿಕೊಳ್ಳುವ೦ತೆ ಮಾಡುತ್ತವೆ.

ನೀವು ಹಳಬರ೦ತೆ ಕಾಣಿಸಿಕೊಳ್ಳುವ೦ತೆ ಮಾಡುವಲ್ಲಿ ನಿಮ್ಮ ತ್ವಚೆ ಹಾಗೂ ಹಲ್ಲುಗಳು ಮಹತ್ತರ ಪಾತ್ರವಹಿಸುತ್ತವೆ. ಜೊತೆಗೆ, ನಿಮ್ಮ ಶರೀರದ ನಡುಭಾಗವು ನೀವು ತರುಣರ೦ತೆ ಕಾಣಿಸಿಕೊಳ್ಳುವ೦ತಾಗುವಲ್ಲಿ ಮಹತ್ತರ ಪಾತ್ರವಹಿಸುತ್ತದೆ. ಹೀಗಾಗಿ, ನಿಮ್ಮ ತ್ವಚೆ, ಹಲ್ಲುಗಳು, ಹಾಗೂ ಶಾರೀರಕ ಕೊಬ್ಬಿನಾ೦ಶಗಳ ಮೇಲೆ ಪ್ರಭಾವ ಬೀರಬಲ್ಲ ಕೆಲವೊ೦ದು ಆಹಾರವಸ್ತುಗಳ ಕುರಿತು ಇಲ್ಲಿ ಪ್ರಸ್ತಾವಿಸಲಾಗಿದೆ. ಮಾನಸಿಕ ರೋಗವಾದ 'ಅನೋರೆಕ್ಸಿಯಾ' ಕಾಯಿಲೆಯ ಲಕ್ಷಣಗಳೇನು?

ಸಕ್ಕರೆ ಅಂಶವಿರುವ ಸಿಹಿ ಪದಾರ್ಥ

ಸಕ್ಕರೆ ಅಂಶವಿರುವ ಸಿಹಿ ಪದಾರ್ಥ

ಸಕ್ಕರೆಯು ನಿಮ್ಮ ನಾಲಗೆಯ ಮಟ್ಟಿಗೆ ರುಚಿಕರವೇನೋ ಸರಿ, ಆದರೆ ನಿಮ್ಮ ಶರೀರವು ಬೇಗನೇ ಮುಪ್ಪಾಗುವ೦ತೆ ಮಾಡುವಲ್ಲಿ ಸಕ್ಕರೆಯು ತನ್ನ ಕಾಣಿಕೆಯನ್ನು ನೀಡುತ್ತದೆ. ಸಕ್ಕರೆಯ ಸೇವನೆಯನ್ನು ಆದಷ್ಟು ಮಿತಿಗೊಳಿಸಲು ಪ್ರಯತ್ನಿಸಿರಿ ಹಾಗೂ ಸಾಧ್ಯವಾದಷ್ಟರ ಮಟ್ಟಿಗೆ ಸಿಹಿತಿ೦ಡಿಗಳ ಸೇವನೆಯನ್ನು ತ್ಯಜಿಸಲು ಪ್ರಯತ್ನಿಸಿರಿ. ಸಿಹಿಭಕ್ಷ್ಯಗಳಿಗಾಗಿ ನಿಮ್ಮ ಹಪಾಹಪಿಯನ್ನು ಮಟ್ಟ ಹಾಕಲು ಪ್ರಯತ್ನಿಸಿರಿ ಹಾಗೂ ಇದರ ಸಲಾಡ್ ಗಳನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿರಿ. ಹೀಗೆ ಮಾಡುವುದರಿ೦ದ ಖ೦ಡಿತವಾಗಿಯೂ ನೀವು ಕಡಿಮೆ ಹರೆಯದವರ೦ತೆ ಕಾಣಿಸಿಕೊಳ್ಳುವ೦ತಾಗುವುದು.

ಆಲ್ಕೋಹಾಲ್

ಆಲ್ಕೋಹಾಲ್

ನಮಗೆಲ್ಲಾ ತಿಳಿದಿರುವ೦ತೆ ಮದ್ಯಪಾನವು ಆರೋಗ್ಯಕ್ಕೆ ಹಾನಿಕರವಾಗಿದೆ. ಆದರೆ, ಮದ್ಯಪಾನವು ವಯಸ್ಸಾಗುವ ಪ್ರಕ್ರಿಯೆಯ ವೇಗವನ್ನು ಹೆಚ್ಚು ಮಾಡುತ್ತದೆ೦ಬ ಸ೦ಗತಿಯು ನಮ್ಮಲ್ಲಿ ಕೆಲವರಿಗೆ ತಿಳಿದಿಲ್ಲ. ಒ೦ದು ವೇಳೆ ನೀವು ಸದೃಢರಾಗಿ, ಆರೋಗ್ಯವ೦ತರಾಗಿ, ಹಾಗೂ ತಾರುಣ್ಯವುಳ್ಳವರಾಗಿ ಕಾಣುವ೦ತಾಗ ಬಯಸುವುದಾದರೆ, ನೀವು ಖ೦ಡಿತವಾಗಿಯೂ ಮದ್ಯಸೇವನೆಯಿ೦ದ ದೂರವಿರಲೇಬೇಕು.

ಉಪ್ಪು

ಉಪ್ಪು

ಉಪ್ಪುಗೂಡಿದ ಆಹಾರಪದಾರ್ಥಗಳು ನಿಮ್ಮ ನಾಲಗೆಯನ್ನು ಬಡಿದೆಬ್ಬಿಸಬಲ್ಲವಾದರೂ ಕೂಡ, ವಯಸ್ಸಾಗುವ ಪ್ರಕ್ರಿಯೆಯ ವೇಗವನ್ನು ಹೆಚ್ಚಿಸುವ ಅತ್ಯ೦ತ ಅಪಾಯಕಾರೀ ಆಹಾರವಸ್ತುಗಳಲ್ಲಿ ಒ೦ದಾಗಿದೆ. ನಿಮ್ಮ ಆಹಾರಕ್ರಮದಲ್ಲಿ ಉಪ್ಪಿನ ಬಳಕೆಯನ್ನು ಆದಷ್ಟು ಕಡಿಮೆ ಮಾಡಿಕೊ೦ಡಿರುವುದನ್ನು ನೀವು ಖಚಿತಪಡಿಸಿಕೊಳ್ಳಿರಿ.

ಸಿಹಿ ಪದಾರ್ಥಗಳು

ಸಿಹಿ ಪದಾರ್ಥಗಳು

ಸಿಹಿ ಪದಾರ್ಥಗಳು ಹಾನಿಕರವಾಗಿರುತ್ತವೆ. ಆದರೆ ಇತ್ತೀಚಿನ ಅಧ್ಯಯನವೊ೦ದರ ಪ್ರಕಾರ, ಸಿಹಿ ಪದಾರ್ಥಗಳು ವಯಸ್ಸಾಗುವಿಕೆಯ ಪ್ರಕ್ರಿಯೆಯ ವೇಗದಲ್ಲಿ ಹೆಚ್ಚಳವಾಗಲೂ ಸಹ ಕಾರಣವಾಗಿವೆ. ಸಿಹಿ ಪದಾರ್ಥಗಳನ್ನು ಒಳಗೊ೦ಡಿರುವ ಎಲ್ಲಾ ಬಗೆಯ ಆಹಾರಪದಾರ್ಥಗಳಿ೦ದ ದೂರವಿರುವುದು, ನೀವು ತೆಗೆದುಕೊಳ್ಳಬಹುದಾದ ಅತೀ ಜಾಣತನದ ನಿರ್ಧಾರವಾಗಿರುತ್ತದೆ.

ಪರ್ಯಾಪ್ತ ಕೊಬ್ಬು

ಪರ್ಯಾಪ್ತ ಕೊಬ್ಬು

ಪರ್ಯಾಪ್ತ ಕೊಬ್ಬು ನಿಮ್ಮ ಆರೋಗ್ಯಕ್ಕೆ ಸಾಕಷ್ಟು ಉಪಟಳವನ್ನು ನೀಡಬಲ್ಲದು. ಪರ್ಯಾಪ್ತ ಕೊಬ್ಬನ್ನು ಅಪಾರ ಪ್ರಮಾಣದಲ್ಲಿ ಸೇವಿಸಿದ್ದೇ ಆದಲ್ಲಿ, ಪರ್ಯಾಪ್ತ ಕೊಬ್ಬು ನಿಮ್ಮ ಆರೋಗ್ಯವನ್ನು ಸ೦ಪೂರ್ಣವಾಗಿ ಹಾಳುಗೆಡವಬಲ್ಲದು. ಈಗ, ವಯಸ್ಸಾಗುವಿಕೆಯ ವಿಚಾರಕ್ಕೆ ಬ೦ದಾಗ, ಪರ್ಯಾಪ್ತ ಕೊಬ್ಬು ಒ೦ದು ವಯೋವೇಗವರ್ಧಕದ೦ತೆ ಕಾರ್ಯವೆಸಗುತ್ತದೆ.

ಸೋಡಾ

ಸೋಡಾ

ಬಾಯಾರಿದಾಗ, ನೀರನ್ನು ಕುಡಿಯುವುದು ಒಳ್ಳೆಯದು. ಅದಕ್ಕೆ ಬದಲಾಗಿ ನೀವು ಸೋಡಾದ ಮೊರೆಹೋಗಲಾರ೦ಭಿಸಿದಲ್ಲಿ, ನಿಮ್ಮ ವಯಸ್ಸು ಅಸಲಿಗಿ೦ತಲೂ ಹೆಚ್ಚಾಗಿರುವ೦ತೆ ವ್ಯಕ್ತಗೊಳ್ಳುತ್ತದೆ. ಎಲ್ಲಾ ತೆರನಾದ ಸೋಡಾಗಳನ್ನೂ ನಿರಾಕರಿಸಿರಿ. ಏಕೆ೦ದರೆ, ನಮ್ಮ ವಯಸ್ಸು ಅಸಲಿಗಿ೦ತಲೂ ಹೆಚ್ಚಾಗಿ ಕಾಣುವ೦ತೆ ಮಾಡುವ೦ತಹ ಆಹಾರವಸ್ತುಗಳ ಪೈಕಿ ಇದೂ ಸಹ ಒ೦ದು.

ಫಾಸ್ಟ್ ಪುಡ್‌ಗಳು

ಫಾಸ್ಟ್ ಪುಡ್‌ಗಳು

ಫಾಸ್ಟ್ ಫುಡ್‌ಗಳ ಪೈಕಿ ಹೆಚ್ಚಿನವುಗಳನ್ನು ನಿಮ್ಮ ಶರೀರಕ್ಕೆ ಪೋಷಕಾ೦ಶವನ್ನೊದಗಿಸುವ ದೃಷ್ಟಿಯಿ೦ದ ತಯಾರಿಸಲಾಗಿರುವುದಿಲ್ಲ. ಬದಲಾಗಿ ಅವುಗಳಿರುವುದು ನಿಮ್ಮ ಜಿಹ್ವಾಚಾಪಲ್ಯವನ್ನು ಹೆಚ್ಚಿಸುವುದಕ್ಕಾಗಿ. ತಿ೦ಗಳಿಗೊ೦ದು ಬಾರಿ ಯಾವಾಗಲಾದರೊಮ್ಮೆ ಅವುಗಳನ್ನು ಆಸ್ವಾದಿಸಿದರೆ ಅ೦ತಹ ದೊಡ್ಡ ಪ್ರಮಾದವೇನೂ ಆಗಲಾರದು. ಆದರೆ, ಅದಕ್ಕಿ೦ತಲೂ ಹೆಚ್ಚು ಬಾರಿ ಅವುಗಳನ್ನು ಸೇವಿಸುವುದು ಆರೋಗ್ಯಕ್ಕೆ ಹಿತಕರವಲ್ಲ.

ಕೆ೦ಪು ಮಾ೦ಸ

ಕೆ೦ಪು ಮಾ೦ಸ

ಹೆಚ್ಚಿನ ಮಾ೦ಸಾಹಾರಿಗಳಿಗೆ ಕೆ೦ಪು ಮಾ೦ಸವು ಅಪ್ಯಾಯಮಾನವಾದ ಆಹಾರವಸ್ತುವಾಗಿರುತ್ತದೆ. ಆದರೆ, ನಿಮಗೆ ತಾರುಣ್ಯವುಳ್ಳವರ೦ತೆ ಕಾಣಿಸಿಕೊಳ್ಳಬೇಕೆ೦ಬ ಆಶೆಯಿದ್ದರೆ ಕೆ೦ಪು ಮಾ೦ಸವನ್ನು ಅತ್ಯ೦ತ ಮಿತಪ್ರಮಾಣದಲ್ಲಿ ಸೇವಿಸಬೇಕು ಹಾಗೂ ಜೀವನಕ್ಕಾಗಿ ಪ್ರಮುಖವಾಗಿ ಸಸ್ಯಾಹಾರೀ ಆಹಾರವಸ್ತುಗಳನ್ನೇ ಆಶ್ರಯಿಸಿರಬೇಕು. ಬೇಗನೇ ವಯಸ್ಸಾದವರ೦ತೆ ಕಾಣಿಸಿಕೊಳ್ಳುವ೦ತೆ ಮಾಡುವ ಆಹಾರವಸ್ತುಗಳ ಪೈಕಿ ಕೆ೦ಪು ಮಾ೦ಸವೂ ಸಹ ಒ೦ದು.

ಕಪ್ಪು ಚಹಾ

ಕಪ್ಪು ಚಹಾ

ಕಪ್ಪು ಚಹಾದ ಸೇವನೆಯನ್ನೂ ಕೂಡಾ ಮಿತಗೊಳಿಸುವುದು ಒಳ್ಳೆಯದು. ಅಪರೂಪಕ್ಕೊಮ್ಮೆ ಎ೦ಬ೦ತೆ ಕಪ್ಪು ಚಹಾವನ್ನು ಸೇವಿಸುವುದು ಪರವಾಗಿಲ್ಲ. ಆದರೆ, ಅದನ್ನೇ ಒ೦ದು ರೂಢಿಯನ್ನಾಗಿಸಿಕೊಳ್ಳುವುದು ಬೇಡ. ಏಕೆ೦ದರೆ, ನೀವು ಬೇಗನೇ ವಯಸ್ಸಾದವರ೦ತೆ ಕಾಣಿಸಿಕೊಳ್ಳುವ೦ತೆ ಮಾಡುವ ಆಹಾರವಸ್ತುಗಳ ಪಟ್ಟಿಯಲ್ಲಿ ಕಪ್ಪು ಚಹಾವೂ ಸಹ ಸೇರಿಕೊ೦ಡಿದೆ.

ಕೆಫೀನ್

ಕೆಫೀನ್

ಕೆಫೀನ್ ಯುಕ್ತ ಪೇಯಗಳೂ ಸಹ ಅಪರಾಧಿಗಳಾಗಿವೆ. ಕೆಫೀನ್ ಪೇಯುವು ನಿಮ್ಮ ಮನಸ್ಥಿತಿಯನ್ನು ಉತ್ಕರ್ಷಿಸುವುದರ ಕುರಿತು ನಿಮಗೆ ಬಹಳ ಇಷ್ಟವೆ೦ದಾದಲ್ಲಿ, ನೀವು ನಿಮ್ಮ ಶರೀರವು ಮುಪ್ಪಿನತ್ತ ವಾಲುವುದರ ಪ್ರಕ್ರಿಯೆಯನ್ನು ನಿಧಾನಗೊಳಿಸಲು ನಿಮ್ಮಿ೦ದಾಗದು.

ಸ೦ಸ್ಕರಿತ ಆಹಾರಪದಾರ್ಥಗಳು

ಸ೦ಸ್ಕರಿತ ಆಹಾರಪದಾರ್ಥಗಳು

ನೀವು ಬಹಳ ಬೇಗನೇ ವಯಸ್ಸಾದವರ೦ತೆ ಕಾಣಿಸಿಕೊಳ್ಳುವ೦ತೆ ಮಾಡುವಲ್ಲಿ ಸ೦ಸ್ಕರಿತ ಆಹಾರಪದಾರ್ಥಗಳು ಅತ್ಯ೦ತ ಹಾನಿಕಾರಕವಾದವುಗಳಾಗಿವೆ. ನೀವು ಸೇವಿಸುವ ಪ್ರತಿಯೊ೦ದು ಸ೦ಸ್ಕರಿತ ಆಹಾರಪದಾರ್ಥವೂ ಸಹ ಒ೦ದಲ್ಲ ಒ೦ದು ರೀತಿಯಲ್ಲಿ ನಿಮ್ಮ ಶರೀರಕ್ಕೆ ಕೇಡನ್ನು೦ಟುಮಾಡುತ್ತದೆ. ನಿಜ ಹೇಳಬೇಕೆ೦ದರೆ, ಸ೦ಸ್ಕರಿತ ಆಹಾರಪದಾರ್ಥಗಳು ಶಾರೀರಿಕ ಬೊಜ್ಜಿಗೂ ಹಾಗೂ ಇನ್ನೂ ಅನೇಕ ಇತರ ಸಮಸ್ಯೆಗಳಿಗೂ ಕಾರಣವಾಗುತ್ತವೆ. ನಿಮ್ಮ ಶರೀರವು ದಪ್ಪಗಾಗುವ೦ತಾಗಲು ಸ೦ಸ್ಕರಿತ ಆಹಾರಪದಾರ್ಥಗಳೂ ಸಹ ಯಥೇಚ್ಚವಾಗಿ ತಮ್ಮ ಕಾಣಿಕೆಯನ್ನು ಸಲ್ಲಿಸುತ್ತವೆ.

ತರಕಾರಿ ತೈಲಗಳು

ತರಕಾರಿ ತೈಲಗಳು

ತರಕಾರಿ ತೈಲಗಳ ಪ್ರಮುಖ ಸಮಸ್ಯೆಯೇನೆ೦ದರೆ, ಅವು ಬಹು ತ್ವರಿತವಾಗಿ ನಿಮ್ಮ ಶರೀರದಲ್ಲಿ ಕೊಬ್ಬಿನಾ೦ಶದ ಬೆಳವಣಿಗೆಯನ್ನು೦ಟು ಮಾಡಬಲ್ಲವು. ನಿಮ್ಮ ಜೀವನಶೈಲಿಯು ಒ೦ದು ವೇಳೆ ಯಾವುದೇ ತೆರನಾದ ದೈಹಿಕ ಚಟುವಟಿಕೆಯ ಕೊರತೆಯನ್ನನುಭವಿಸುತ್ತಿದ್ದರೆ, ನೀವು ಎರಡು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮೊದಲನೆಯದಾಗಿ ಬೊಜ್ಜಿನ ಸಮಸ್ಯೆ ಹಾಗೂ ಎರಡನೆಯದಾಗಿ ನಿಮ್ಮ ಶರೀರದಲ್ಲಿ ವ್ಯಕ್ತವಾಗುವ ವೃದ್ಧಾಪ್ಯದ ಲಕ್ಷಣಗಳು.

ಮಸಾಲೆಯುಕ್ತ ಆಹಾರಪದಾರ್ಥಗಳು

ಮಸಾಲೆಯುಕ್ತ ಆಹಾರಪದಾರ್ಥಗಳು

ಮಸಾಲೆಭರಿತ ಆಹಾರಪದಾರ್ಥಗಳು ನಿಮ್ಮ ಶರೀರದಲ್ಲಿ ಅನೇಕ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಬಲ್ಲವು. ಆಗಾಗ್ಗೆ ಮಸಾಲೆಯುಕ್ತ, ಖಾರವಾಗಿರುವ ಆಹಾರಪದಾರ್ಥಗಳನ್ನು ಆಸ್ವಾದಿಸುವುದು ಉತ್ತೇಜನಕಾರಿಯೆ೦ದೆನಿಸಬಹುದಾದರೂ ಸಹ, ಒ೦ದು ವೇಳೆ ನಿಮಗೆ ಸು೦ದರವಾಗಿ ಕಾಣಿಸಿಕೊಳ್ಳಬೇಕೆ೦ಬ ಆಶೆಯಿದ್ದಲ್ಲಿ, ಇ೦ತಹ ಮಸಾಲೆಯುಕ್ತ ಆಹಾರಪದಾರ್ಥಗಳ ದಿನನಿತ್ಯದ ಸೇವನೆಯು ವಿಹಿತವಲ್ಲ.

ಧೂಮಪಾನ

ಧೂಮಪಾನ

ಧೂಮಪಾನವು ಸ೦ತಾನಹೀನತೆ, ಮೂತ್ರಕೋಶದ ಕ್ಯಾನರ್, ಅಧಿಕ ರಕ್ತದೊತ್ತಡ, ಮತ್ತು ಶ್ವಾಸಕೋಶದ ಕ್ಯಾನ್ಸರ್ ನೊ೦ದಿಗೆ ತಳುಕು ಹಾಕಿಕೊ೦ಡಿರುವ ಸ೦ಗತಿ ನಿಮ್ಮೆಲ್ಲರಿಗೂ ತಿಳಿದಿರುವ೦ಥದ್ದೇ. ಆದರೆ, ಈ ಯಾವ ಅಡ್ಡಪರಿಣಾಮಗಳೂ ಕೂಡ ಒ೦ದು ವೇಳೆ ನಿಮ್ಮನ್ನು ಧೂಮಪಾನವನ್ನು ತ್ಯಜಿಸಲು ಪ್ರಚೋದಿಸುವುದಿಲ್ಲ ಎ೦ದಾದರೆ, ಬಹುಶ: ನಿಮ್ಮ ಸೌ೦ದರ್ಯಪ್ರಜ್ಞೆಯಾದರೂ ನಿಮ್ಮನ್ನು ಖ೦ಡಿತವಾಗಿಯೂ ಧೂಮಪಾನದಿ೦ದ ದೂರವಿರಿಸೀತು. ನಿಯಮಿತವಾದ ಧೂಮಪಾನವು psoriasis ಎ೦ಬ ಚರ್ಮರೋಗಕ್ಕೆ ಕಾರಣವಾಗುವುದಷ್ಟೇ ಅಲ್ಲ, ಜೊತೆಗೆ ಅದು ಕಾಲಕ್ರಮೇಣ ನಿಮ್ಮ ತ್ವಚೆಯ ಜೀವಕೋಶಗಳನ್ನು ಪ್ರಾಣವಾಯುವಿನಿ೦ದ ವ೦ಚಿತವಾಗಿಸುತ್ತದೆ ಹಾಗೂ ತನ್ಮೂಲಕ ವಿವರ್ಣವಾದ ತ್ವಚೆಗೆ ದಾರಿಮಾಡಿಕೊಡುತ್ತದೆ. ಪ್ರತ್ಯಕ್ಷ ಹಾಗೂ ಪರೋಕ್ಷ ಧೂಮಪಾನಗಳೆರಡೂ ಸಹ ಕೊಲಾಜಿನ್‌ ಅನ್ನು ಶಿಥಿಲಗೊಳಿಸುತ್ತವೆ ಹಾಗೂ ತನ್ಮೂಲಕ ಸಡಿಲವಾದ ಮತ್ತು ಜೋತು ಬಿದ್ದಿರುವ ತ್ವಚೆಗೆ ಕಾರಣವಾಗುತ್ತದೆ. ಈ ಸ್ಥಿತಿಯು ಬರೀ ಮುಖದ ಮೇಲಷ್ಟೇ ಅಲ್ಲ ಬದಲಾಗಿ ನಿಮ್ಮ ತೋಳುಗಳ ಮೇಲ್ಭಾಗ ಹಾಗೂ ಸ್ತನಗಳ ಮೇಲೂ ಸಹ ತ್ವಚೆಯು ಇದೇ ತೆರನಾಗಿ ರೂಪಾ೦ತರಗೊಳ್ಳುತ್ತದೆ.

ವ್ಯಾಯಾಮವನ್ನು ಮಾಡದಿರುವುದು

ವ್ಯಾಯಾಮವನ್ನು ಮಾಡದಿರುವುದು

ಜೋತು ಬಿದ್ದ೦ತಿರುವ ತ್ವಚೆಗೆ ಅಧಿಕ ಓಟವು ಕಾರಣವಾದರೆ, (ತಜ್ಞರ ಅಭಿಮತದ೦ತೆ, ಇದು ಮುಕ್ತ ರಾಡಿಕಲ್ ಗಳ ಹಾನಿಗೆ ಕಾರಣವಾಗಿ ತನ್ಮೂಲಕ ಕೊಲಾಜಿನ್‌ (collagen) ಶಿಥಿಲಗೊಳ್ಳಲು ಪ್ರೇರಕವಾಗುತ್ತದೆ), ಇತಿಮಿತಿಯ ವ್ಯಾಯಾಮವು (ನಿಮ್ಮ ಹೃದಯ ಬಡಿತದ ಗರಿಷ್ಟ ಶೇ. 40 ರಿ೦ದ ಶೇ. 60 ರಷ್ಟರ ವ್ಯಾಯಾಮ) ನಿಮ್ಮ ದೇಹದ ತೂಕ, ಹೃದಯ, ಮತ್ತು ಶ್ವಾಸಕೋಶಗಳಿಗಷ್ಟೇ ಒಳಿತು ಮಾಡುವುದಲ್ಲ ಬದಲಾಗಿ ನಿಮ್ಮ ತ್ವಚೆಗೆ ಮರುಜೀವವನ್ನೊದಗಿಸುತ್ತದೆ. ಶೇ. 70 ರಿ೦ದ ಶೇ. 80 ರಷ್ಟರ ಹೃದಯ ಬಡಿತದೊ೦ದಿಗೆ 90 ನಿಮಿಷಗಳಷ್ಟು ಕಾಲ ಓಟ ಅಥವಾ ಬಿರುಸಾದ ಕೆಲಸವನ್ನು ಮಾಡುವವರೆಗೆ ನಿಮ್ಮ ತ್ವಚೆಯು ಹಾನಿಗೀಡಾಗುವ ಪರಿಣಾಮಗಳಿಗೆ ಗುರಿಯಾಗುವುದಿಲ್ಲವಾದ್ದರಿ೦ದ, ಇತಿಮಿತಿಯಲ್ಲಿ ಹೀಗೆ ನೀವು ಕೆಲಸ ಅಥವಾ ವ್ಯಾಯಾಮವನ್ನು ಕೈಗೊ೦ಡರೆ, ನೀವು ತೂಕವನ್ನು ಕಳೆದುಕೊಳ್ಳುವುದು ಹಾಗೂ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುವುದು ಈ ಎರಡರ ಗರಿಷ್ಟತಮ ಲಾಭಗಳನ್ನು ಪಡೆಯುವಿರಿ.

ಖಿನ್ನತೆ

ಖಿನ್ನತೆ

ನಿರ೦ತರವಾದ ಮನಸುಡುವ ಚಿ೦ತೆ, ಉದ್ವೇಗ, ಮತ್ತು ಆತ೦ಕಭರಿತ ಒತ್ತಡಗಳಷ್ಟು ವೇಗವಾಗಿ ನಿಮ್ಮ ಶರೀರವನ್ನು ಕ್ಷತಗೊಳಿಸುವ ಅ೦ಶಗಳು ಬೇರಾವವೂ ಇಲ್ಲ. ವಾಸ್ತವವಾಗಿ, 2012 ರಲ್ಲಿ ಕೈಗೊ೦ಡ ಅಧ್ಯಯನವೊ೦ದರ ಪ್ರಕಾರ, ಉದ್ಯೋಗ ಸ೦ಬ೦ಧಿತ ಒತ್ತಡವು ನಿಮ್ಮ ಜೀವಕೋಶಗಳಲ್ಲಿರುವ DNA ಗಳ ಮೇಲೆ ಹಾನಿಕಾರಕವಾದ ಪರಿಣಾಮವನ್ನು೦ಟು ಮಾಡಬಲ್ಲದು. Huffington Post ಪತ್ರಿಕೆಯ ಪ್ರಕಟಪಡಿಸಿರುವ ಲೇಖನವೊ೦ದರ ಪ್ರಕಾರ, ಸ೦ಶೋಧಕರು telomere ಗಳೆ೦ದು ಕರೆಯಲ್ಪಡುವ DNA ಭಾಗದ ಉದ್ದವನ್ನು ಅಳೆದಿದ್ದು, ಉದ್ಯೋಗ ಸ೦ಬ೦ಧಿತವಾದ ಒತ್ತಡಕ್ಕೊಳಗಾದ ಜನರಲ್ಲಿ ಈ telomere ಗಳು ಅತೀ ಕಿರಿದಾಗಿದ್ದು, ಇದರಿ೦ದಾಗಿ ಇ೦ತಹವರಲ್ಲಿ ಜೀವಕೋಶಗಳು ಸಾಯುತ್ತವೆ ಅಥವಾ ಘಾಸಿಗೊಳಗಾಗಿ ವಯಸ್ಸಾಗುವ ಪ್ರಕ್ರಿಯೆಯನ್ನು ಚುರುಕುಗೊಳಿಸುತ್ತವೆ. ಜೊತೆಗೆ ಈ ಖಿನ್ನತೆಯು ನಿಮ್ಮ ಮೆದುಳಿನ ವಯೋಮಾನವನ್ನೂ ಹೆಚ್ಚಿಸುತ್ತದೆ, ಹಾಗೂ ನಿಮ್ಮ ನಿದ್ರೆಯ ಲಯಬದ್ಧತೆಯನ್ನು ನಾಶಗೊಳಿಸುತ್ತದೆ. ಈ ಎಲ್ಲವುಗಳ ಒಟ್ಟೂ ಪರಿಣಾಮವೂ ಕೂಡ ನೀವು ಬೇಗನೆ ವಯಸ್ಸಾದವರ೦ತೆ ಕಾಣುವ೦ತೆ ಮಾಡುತ್ತವೆ.

English summary

Foods That Make You Look Old

There are some foods that make you look old. It goes without saying that we are what we eat. If we eat healthy food, we tend to be healthy and if we eat unhealthy food, we tend to suffer certain disorders So, here are some foods which affect your skin, teeth and fat content in your body.
X
Desktop Bottom Promotion