For Quick Alerts
ALLOW NOTIFICATIONS  
For Daily Alerts

ಔಷಧಿಗಳ ವಿಚಾರದಲ್ಲಿ ಸ್ವಯಂ ವೈದ್ಯರಾಗಲು ಹೋಗಬೇಡಿ

|

ಕೆಲವೊಂದು ಔಷಧಿಗಳನ್ನು ನಾವು ವೈದ್ಯರ ಸಲಹೆಯಿಲ್ಲದೇ ಖರೀದಿಸಿ ಯಾವುದೇ ಅಳುಕಿಲ್ಲದೇ ಬಳಸುತ್ತೇವೆ. ಉದಾಹರಣೆಗೆ ಶೀತವಾದರೆ ವಿಕ್ಸ್, ಮೈ ಕೈ ನೋವಾದರೆ ಪ್ಯಾರಾಸೆಟಮಾಲ್ ಮಾತ್ರೆ. ಏಕೆಂದರೆ ಇವನ್ನು ಬಳಸಿದವರು ತಮಗೆ ಆರಾಮವಾಗಿರುವುದನ್ನು ಬೇರೆಯವರಿಗೂ ಉಚಿತ ಸಲಹೆಯ ಮೂಲಕ ಹೇಳುತ್ತಾ ಬಂದಿದ್ದಾರೆ. ಆದರೆ ಕೆಲವು ಔಷಧಿಗಳ ನಿರಂತರ ಸೇವನೆ ನಿಮ್ಮನ್ನು ಅನಾರೋಗ್ಯಕ್ಕೆ ತಳ್ಳಬಹುದು ಎಂಬುದನ್ನು ಮಾತ್ರ ಮರೆಯಬೇಡಿ!

ಜೀವನದ ಗತಿಯಲ್ಲಿ ಖ೦ಡಿತವಾಗಿಯೂ ನೀವು ಒ೦ದಲ್ಲ ಒ೦ದು ಬಾರಿ ಆರೋಗ್ಯಕಾರಿ ಸಮಸ್ಯೆಗಳನ್ನು ಎದುರಿಸಿರಬಹುದು ಹಾಗೂ ಅ೦ತಹ ಸಮಸ್ಯೆಗಳ ನಿವಾರಣೆಗಾಗಿ ಔಷಧಿಗಳ ಮೊರೆ ಹೋಗಿರಬಹುದು. ಇಂತಹ ಔಷಧಿಗಳನ್ನು ಸೇವಿಸುವಾಗ ಹಿಂದೆ -ಮುಂದೆ ಆಲೋಚನೆ ಮಾಡದೇ ಸೇವಿಸಿಬಿಡುತ್ತೇವೆ ಅಲ್ಲವೇ? ವಯಾಗ್ರಾ ಮಾತ್ರೆ ನುಂಗುವ ಮೊದಲು ಸ್ವಲ್ಪ ಆಲೋಚಿಸಿ!

 

ಆದರೆ, ಇಂತಹ ಸ್ವಯಂ-ಔಷಧಿಗಳ ಸೇವನೆಯು ನಿಮ್ಮ ಆರೋಗ್ಯಕ್ಕೆ ಮಾರಕವಾಗಬಹುದು! ನಿಮಗೆ ಸಾಕಷ್ಟು ವೈದ್ಯಕೀಯ ಜ್ಞಾನವಿಲ್ಲದಿದ್ದರೆ ಮತ್ತು ವೈದ್ಯಕೀಯ ವೃತ್ತಿಗೆ ಸಂಬಂಧವಿಲ್ಲದಿದ್ದರೆ ಆಗ ನೀವು ಎಂದೂ ಸ್ವತಃ ಔಷಧಿಗಳನ್ನು ತೆಗೆದುಕೊಳ್ಳಬಾರದು. ಔಷಧಗಳ ವಿಚಾರದಲ್ಲಿ ಬಹು ಎಚ್ಚರಿಕೆಯಿ೦ದ ಮು೦ದಡಿಯಿಡಬೇಕು ಹಾಗೂ ವೈದ್ಯರು ಶಿಫಾರಸು ಮಾಡಿದಾಗಲಷ್ಟೇ ಆಯಾ ಔಷಧಗಳನ್ನು ತೆಗೆದುಕೊಳ್ಳತಕ್ಕದ್ದು ಎಂಬುದನ್ನು ಮಾತ್ರ ಮರೆಯಬೇಡಿ.

ಔಷಧಗಳ ವಿಚಾರದಲ್ಲ೦ತೂ ಎ೦ದೆ೦ದಿಗೂ ನೀವು ಸ್ವಯ೦ ವೈದ್ಯರಾಗಲು ಹೋಗಬೇಡಿ. ಔಷಧಗಳನ್ನು ಖರೀದಿಸಿ ಮನೆಗೆ ತ೦ದ ಬಳಿಕ, ವೈದ್ಯರ ಸಲಹೆಗನುಗುಣವಾಗಿ ಸರಿಯಾದ ವಿಧಾನದಲ್ಲಿ ಅವುಗಳನ್ನು ತೆಗೆದುಕೊಳ್ಳಿರಿ. ಬನ್ನಿ ಸ್ವಯಂ-ಔಷಧಿ ಸೇವನೆಯಿಂದ ಆಗುವ ಕೆಲವು ಕೆಟ್ಟ ಪರಿಣಾಮಗಳ ಕಡೆ ಗಮನಹರಿಸೋಣ ಬನ್ನಿ

ಮೂತ್ರಪಿಂಡಕ್ಕೆ ಹಾನಿಯಾಗುವುದು

ಮೂತ್ರಪಿಂಡಕ್ಕೆ ಹಾನಿಯಾಗುವುದು

ಔಷಧಿಗಳು ದೇಹದಲ್ಲಿ ತಮ್ಮ ಕಾರ್ಯನಿರ್ವಹಣೆಯಾದ ನಂತರ ವಿಸರ್ಜನೆಗೊಳ್ಳಲು ಮೂತ್ರಪಿಂಡಕ್ಕೆ ತಲಪುತ್ತವೆ. ಅನೇಕ ಔಷಧಿಗಳು, ವೈದ್ಯಕೀಯ ಸಲಹೆ ಇಲ್ಲದೆ ಸೇವಿಸಿದಾಗ ಮೂತ್ರಪಿಂಡಕ್ಕೆ

ಹಾನಿಯುಂಟುಮಾಡಬಲ್ಲುದು. ಉದಾಹರಣೆಗೆ, ನಿಮೆಸುಲೈಡ್ (Nimesulide) ಎಂಬ ನೋವು ನಿವಾರಕ ಔಷಧಿಯು ಮೂತ್ರಪಿಂಡದಲ್ಲಿ ರಕ್ತಸ್ರಾವ ಆಗುವ ಹಾಗೆ ಪರಿಣಾಮ ಬೀರುತ್ತದೆ. ಇದು ಸ್ವಯಂ-ಔಷಧಿಯ ಸೇವನೆಯಿಂದಾಗುವ ಹಾನಿಕಾರಕ ಕೆಟ್ಟ ಪರಿಣಾಮ ಬೀರುವ ಔಷಧಿಗಳಲ್ಲಿ ಒಂದು.

ಪಿತ್ತಜನಕಾಂಗಕ್ಕೆ ಹಾನಿಯಾಗುವುದು

ಪಿತ್ತಜನಕಾಂಗಕ್ಕೆ ಹಾನಿಯಾಗುವುದು

ನೀವು ಸೇವಿಸುವ ಔಷಧಿಗಳೆಲ್ಲವೂ, ಚಯಾಪಚಯದ ಕ್ರಿಯೆಯ ಒಂದು ಭಾಗವಾಗಿ, ಪಿತ್ತಜನಕಾಂಗಕ್ಕೆ ಹೋಗುತ್ತವೆ. ಆದ್ದರಿಂದ ಔಷಧಗಳನ್ನು ಪ್ರಕ್ರಿಯೆಗೊಳಿಸಲು ಪಿತ್ತಜನಕಾಂಗಕ್ಕೆ ಭಾರಿ ಹೊರೆಯಾಗುತ್ತದೆ. ಪ್ಯಾರಾಸೆಟಮಾಲ್ ಎಂಬುವ ಔಷಧವು ಪಿತ್ತಜನಕಾಂಗಕ್ಕೆ ತೀವ್ರವಾದ ಹಾನಿ ಉಂಟು ಮಾಡುವ ಔಷಧಗಳಲ್ಲಿ ಒಂದು. ಈ ಔಷಧಿಯ ಪ್ರಕ್ರಿಯೆನಡೆಯುವಾಗ ಚಯಾಪಚಯ ಉತ್ಪನ್ನಗಳಿಂದ ಪಿತ್ತಜನಕಾಂಗಕ್ಕೆ ಹಾನಿಯಾಗುತ್ತದೆ. ನಿಮಗೆ ಈಗಾಗಲೇ ಪಿತ್ತಜನಕಾಂಗದ ಕಾಯಿಲೆ ಇದ್ದಲ್ಲಿ, ಪ್ಯಾರಾಸೆಟಮಾಲ್ (ಅಸೆಟೋಮೆನಾಫೆನ್) ಇರುವ ಔಷಧಿಯನ್ನು ತಪ್ಪಿಸಿ.

ಸಂವೇದನಾಶೀಲ ಅಘಾತ
 

ಸಂವೇದನಾಶೀಲ ಅಘಾತ

ಇದು ಸ್ವಯಂ-ಔಷಧಿಯಿಂದಾಗುವ ತೀಕ್ಷ್ಣ ಅಸಹಿಷ್ಣುತೆ (ಅಲರ್ಜಿಕ್) ಪ್ರತಿಕ್ರಿಯೆ. ಕಲವು ಜನರು ಔಷಧಿಗಳಿಗೆ ಸಾಮಾನ್ಯ ರೀತಿಯನ್ನು ಬಿಟ್ಟು ಬೇರೆಯೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ. ಅಂತಹವರು ಕೆಲವು ನಿರ್ದಿಷ್ಟ ಔಷಧಿಗಳಿಗೆ ತೀವ್ರ ಪ್ರತಿಕ್ರಿಯೆ ತೋರಿಸುತ್ತಾರೆ. ಹಾಗೆ ಆಗುವ ಪ್ರತಿಕ್ರಿಯೆಯ ಲಕ್ಷಣಗಳಲ್ಲಿ ಹೆಚ್ಚಿನ ಹೃದಯ ಬಡಿತ, ಕಡಿಮೆ ರಕ್ತದೊತ್ತಡ, ತೀವ್ರ ದೌರ್ಬಲ್ಯ, ದಿಗಿಲು ಮತ್ತು ಎಚ್ಚರ ತಪ್ಪುವುದು ಸೇರಿರುತ್ತವೆ. ಈ ಲಕ್ಷಣಗಳಿಂದ ಅಂತಿಮವಾಗಿ ಸಾವಿಗೆ ಕಾರಣವಾಗಲೂ ಬಹುದು.

ಔಷಧಿಗಳ ಅಡ್ಡಪರಿಣಾಮ

ಔಷಧಿಗಳ ಅಡ್ಡಪರಿಣಾಮ

ನೀವು ಒಂಧು ಔಷಧವನ್ನು ತೆಗೆದುಕೊಳ್ಳುತ್ತಿರುವಾಗ, ಮತ್ತೊಬ್ಬ ವೈದ್ಯರ ಸಲಹೆಯನ್ನು ಕೇಳದೇ ಇನ್ನೊಂದು ಔಷಧವನ್ನು ತೆಗೆದುಕೊಳ್ಳಬಯಸಿದರೆ, ನೀವು ತೆಗೆದುಕೊಳ್ಳುತ್ತಿದ್ದ ಮೊದಲನೆ ಔಷಧ ಪರಿಣಾಮಾಕಾರಿ ಆಗದಿರುವುದು ನಿರೂಪಣೆಯಾಗಿದೆ. ಒಂದು ಔಷಧ ಮತ್ತೊಂದು ಔಷಧದ ಪರಿಣಾಮವನ್ನು ಹೆಚ್ಚು ಅಥವಾ ಕಡಿಮೆಮಾಡಬಹುದು. ಆದ್ದರಿಂದ ಮತ್ತೊಂದು ಔಷಧಿಯನ್ನು ತೆಗೆದುಕೊಳ್ಳುವ ಮುನ್ನ ಎಚ್ಚರಿಕೆ ವಹಿಸಿ.

ವಿರುದ್ಧ ಸೂಚನೆಗಳು

ವಿರುದ್ಧ ಸೂಚನೆಗಳು

ಸ್ವಯಂ-ಔಷಧಿಯ ಪ್ರಭಾವದಿಂದ ನಿಮಗೆ ಮೊದಲೇ ಇದ್ದ ಕಾಯಿಲೆಯನ್ನು ಹೆಚ್ಚಿಸಬಹುದು. ಉದಾಹರಣೆಗೆ, ನಿಮಗೆ ಮಧುಮೇಹದ ರೋಗವಿದ್ದಲ್ಲಿ, ಊತ ಅಥವಾ ನೋವನ್ನು ಕಡಿಮೆಮಾಡಿಕೊಳ್ಳಲು ಅಥವ ನಿವಾರಿಸಿಕೊಳ್ಳಲು ಸ್ಟಿರಾಯ್ಡ್ ಇರುವ ಔಷಧಿಯನ್ನು ಸೇವಿಸಿದಲ್ಲಿ ನಿಮ್ಮ ಮಧುಮೇಹದ ಕಾಯಿಲೆಯನ್ನು ಉಲ್ಬಣವಾಗಬಹುದು. ಆದ್ದರಿಂದ ಯಾವಾಗಲೂ ಯಾವುದೇ ಔಷಧವನ್ನು ತೆಗೆದುಕೊಳ್ಳುವ ಮೊದಲು ವೈದ್ಯರ ಸಲಹೆಯನ್ನು ಪಡೆಯಿರಿ. ಈ ಸ್ವಯಂ-ಔಷಧಿಯ ಬಳಕೆಯ ದುಷ್ಪರಿಣಾಮಗಳಲ್ಲಿ ಇದು ಒಂದಾಗಿದೆ.

English summary

Dangers Of Self-Medication

Drugs are poisons and it's the dose which decides whether it will have a therapeutic effect or a poisonous effect on your body. Drugs are to be handled with utmost care, otherwise it can lead to many health hazards. It has become a day to day habit among people to take medicines themselves without consulting a doctor.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more