For Quick Alerts
ALLOW NOTIFICATIONS  
For Daily Alerts

ಆಹಾರ ಸೇವಿಸಿದ ಬಳಿಕವೂ ಹಸಿವಾಗಲು ಕಾರಣಗಳು

By Hemanth P
|

ನೀವು ಪೂರ್ಣ ಊಟ ಮಾಡಿದ್ದರೂ ನಿಮಗೆ ಹಸಿವಾಗುತ್ತಿದೆಯಾ? ಹಲವಾರು ಮಂದಿ ಈ ಸಾಮಾನ್ಯ ಸಮಸ್ಯೆ ಎದುರಿಸುತ್ತಾರೆ. ಅದರಲ್ಲೂ ತಮ್ಮ ತೂಕ ಇಳಿಸಿಕೊಳ್ಳಲು ಬಯಸುವವರು. ಕೆಲವರಿಗೆ ಕ್ಯಾಲರಿಯನ್ನು ನಿರ್ಬಂಧಿಸಿರುವ ಕಾರಣ ಸಮಸ್ಯೆ ಉಂಟಾಗುತ್ತದೆ ಮತ್ತು ಇದರ ಪರಿಹಾರಕ್ಕೆ ಪ್ರಯತ್ನಿಸಿ ಹೆಚ್ಚಿನ ಆಹಾರ ತಿನ್ನುತ್ತಾರೆ.

ಊಟದ ಬಳಿಕವೂ ನಿಮಗೆ ಹಸಿವಾಗುವ ಕೆಲವೊಂದು ಕಾರಣಗಳನ್ನು ಇಲ್ಲಿ ನೀಡಲಾಗಿದೆ. ಈ ಕಾರಣ ತಿಳಿಯಿರಿ ಮತ್ತು ನಿಮ್ಮ ಹಸಿವಿಗೆ ಸೂಕ್ತ ಕಾರಣ ಪತ್ತೆ ಹಚ್ಚಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕಂಪ್ಯೂಟರ್ ಬಳಕೆದಾರರಿಗೆ ಕಣ್ಣಿನ ಕಾಳಜಿಯ ಟಿಪ್ಸ್

ಉಪಹಾರ ಸೇವನೆ ಕಡಿಮೆಯಾಗಿರುವುದು

ಉಪಹಾರ ಸೇವನೆ ಕಡಿಮೆಯಾಗಿರುವುದು

ಉಪಹಾರ ದಿನದ ಅತ್ಯಂತ ಪ್ರಾಮುಖ್ಯ ಆಹಾರವೆಂದು ಹಲವಾರು ಸಲ ಹೇಳಿದ್ದೇವೆ. ದಿನದ ಆರಂಭವನ್ನು ಸಮ ಪ್ರಮಾಣದ ಕ್ಯಾಲರಿ ಮತ್ತು ಪೌಷ್ಠಿಕಾಂಶಗಳೊಂದಿಗೆ ಆರಂಭಿಸುವುದು ತುಂಬಾ ಮುಖ್ಯ. ಇದು ದಿನವಿಡೀ ದೇಹದಲ್ಲಿನ ರಕ್ತದ ಸಕ್ಕರೆ ಪ್ರಮಾಣವನ್ನು ಸಮತೋಲನದಲ್ಲಿಡುತ್ತದೆ. ಇದರಿಂದ ನಿಮಗೆ ದಿನದ ವ್ಯಸ್ತ ಸಮಯದಲ್ಲಿ ಹಠಾತ್ ಆಗಿ ಹಸಿವಾಗುವುದು ತಪ್ಪುತ್ತದೆ. ಆಹಾರದಲ್ಲಿ ಹೆಚ್ಚಿನ ಪ್ರೋಟಿನ್ ಸೇರಿಸಿ, ಇದು ಹಸಿವು ನಿಯಂತ್ರಿಸುತ್ತದೆ.

ವೇಗದ ಊಟ

ವೇಗದ ಊಟ

ಪ್ರತೀ ಸಲ ನಿಮಗೆ ಊಟದ ಬಳಿಕ ಮತ್ತೆ ಹಸಿವಾಗುತ್ತಿದ್ದರೆ ಮುಂದಿನ ಸಲ ನೀವು ಊಟ ಮಾಡುವಾಗ ಸ್ಟಾಪ್ ವಾಚ್ ಅಳವಡಿಸಿ ಮತ್ತು ನಿಮಗೆ ಊಟ ಮಾಡಲು ಎಷ್ಟು ಸಮಯ ಬೇಕಾಗುತ್ತದೆ ಎಂದು ಗಮನಿಸಿ. ನೀವು ತುಂಬಾ ವೇಗವಾಗಿ ಊಟ ಮಾಡುತ್ತಿದ್ದರೆ ಆಗ ಪೂರ್ಣ ಸಂತೃಪ್ತಿಯ ಹಾರ್ಮೋನ್ ಬಿಡುಗಡೆಗೆ ಸಮಯ ಸಿಗುವುದಿಲ್ಲ. ಈ ಹಾರ್ಮೋನ್ ಬಿಡುಗಡೆಗೆ ಕನಿಷ್ಠ 20 ನಿಮಿಷ ಬೇಕಾಗುತ್ತದೆ. ನಿಯಮಿತವಾಗಿ ಐಸ್ ಕ್ರೀಮ್ ತಿನ್ನುವ ಪುರುಷರಲ್ಲಿ ನಿಧಾನವಾಗಿ ಊಟ ಮಾಡುವವರಷ್ಟು ಹಸಿವಿನ ಹಾರ್ಮೋನುಗಳು ಹೆಚ್ಚಳವಾಗುವುದಿಲ್ಲವೆಂದು ಒಂದು ಅಧ್ಯಯನ ಹೇಳಿದೆ. ಊಟಕ್ಕೆ ಸರಿಯಾದ ಸಮಯ ನೀಡಿ. ಪ್ರತೀ ಸಲ ನೀವು ಬಾಯಿಗೆ ತುತ್ತು ಇಡುವಾಗ ಸಮಯದ ಅಂತರವಿರಲಿ. ಇದರಿಂದ ನೀವು ಕಡಿಮೆ ಆಹಾರ ಸೇವಿಸಿದರೂ ಹೊಟ್ಟೆ ತುಂಬುತ್ತದೆ. ಜೀರ್ಣಕ್ರಿಯೆಗೂ ಇದು ನೆರವಾಗುತ್ತದೆ.

ನೀವು ಸಾಕಷ್ಟು ಪ್ರೋಟಿನ್ ಮತ್ತು ನಾರಿನಾಂಶ ಸೇವಿಸುತ್ತಿಲ್ಲ

ನೀವು ಸಾಕಷ್ಟು ಪ್ರೋಟಿನ್ ಮತ್ತು ನಾರಿನಾಂಶ ಸೇವಿಸುತ್ತಿಲ್ಲ

ಊಟದ ಬಳಿಕ ನಿಮಗೆ ಹಸಿವಾಗುತ್ತಿದ್ದರೆ ನೀವು ಸಾಕಷ್ಟು ಪ್ರಮಾಣದಲ್ಲಿ ಪ್ರೋಟಿನ್ ಮತ್ತು ನಾರಿನಾಂಶ ತಿನ್ನುತ್ತಿಲ್ಲ ಎಂದರ್ಥ. ಪ್ರೋಟಿನ್ ಮತ್ತು ಉನ್ನತ ಮಟ್ಟದಲ್ಲಿನ ನಾರಿನಾಂಶದ ಆಹಾರವು ಹಸಿವನ್ನು ತಗ್ಗಿಸುವ ಹಾರ್ಮೋನುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸುತ್ತದೆ. ಇದರಿಂದ ತಿನ್ನಬೇಕೆನ್ನುವ ಆಸೆ ಕಡಿಮೆಯಾಗುತ್ತದೆ. ಸ್ವಲ್ಪ ಪ್ರಮಾಣದ ಒಳ್ಳೆಯ ಕೊಬ್ಬು ನಿಮ್ಮ ಆಹಾರಕ್ಕೆ ಸೇವಿಸಿದರೆ ಅದರಿಂದ ನೆರವಾಗಬಹುದು.

ಬ್ಲ್ಯಾಕ್ ಟೀ

ಬ್ಲ್ಯಾಕ್ ಟೀ

ನೀವು ಚಹಾ ಸೇವಿಸದೆ ಇದ್ದರೆ ಇದು ತುಂಬಾ ಕೆಟ್ಟದು! ಊಟದ ಬಳಿಕ ಬ್ಲ್ಯಾಕ್ ಟೀ ಕುಡಿದರೆ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಶೇ. 10-15ರಷ್ಟು ಕಡಿಮೆ ಮಾಡುತ್ತದೆ. ಇದರಿಂದ ನೀವು ದೀರ್ಘ ಸಮಯದ ತನಕ ಹೊಟ್ಟೆ ತುಂಬಿದಂತೆ ಇರುತ್ತೀರಿ ಮತ್ತು ದಿನವಿಡಿ ಅನಗತ್ಯ ಆಹಾರ ಸೇವಿಸುವ ಅಗತ್ಯ ಬೀಳುವುದಿಲ್ಲ.

ಮನೆಯ ಆಹಾರ ತಪ್ಪಿಸುತ್ತಿದ್ದೀರಿ

ಮನೆಯ ಆಹಾರ ತಪ್ಪಿಸುತ್ತಿದ್ದೀರಿ

ನೀವು ಒಬ್ಬನೇ ವಾಸಿಸುತ್ತಿದ್ದರೆ ಮತ್ತು ಅಡುಗೆ ಮಾಡುವುದನ್ನು ದ್ವೇಷಿಸುತ್ತೀರಾ ಅಥವಾ ತುಂಬಾ ತೊಡಕುಂಟುಮಾಡುತ್ತಿದೆಯಾ? ಹಾಗಿದ್ದರೆ ನೀವು ಹೊರಗಿನ ಅಥವಾ ಪ್ಯಾಕ್ ಮಾಡಲ್ಪಟ್ಟ ಆಹಾರ ಸೇವಿಸುವ ಸಾಧ್ಯತೆ ಹೆಚ್ಚು. ಪ್ಯಾಕ್ ಮಾಡಲ್ಪಟ್ಟ ಹೆಚ್ಚಿನ ಆಹಾರಗಳಲ್ಲಿ ಸಂರಕ್ಷಣಗಳು ಮತ್ತು ಬಿಸ್ಫೆನಾಲ್-ಎ ರಾಸಾಯನಿಕ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ಲೆಪ್ಟಿನ್ ನಲ್ಲಿ ಏರಿಳಿತ ಉಂಟುಮಾಡುತ್ತದೆ ಮತ್ತು ಹೆಚ್ಚಿನ ಆಹಾರಕ್ಕಾಗಿ ನೀವು ಹಸಿಯುವಂತೆ ಮಾಡುತ್ತದೆ. ಇದರಿಂದ ಮತ್ತೊಂದು ಪ್ಯಾಕೆಟ್ ಚಿಪ್ಸ್ ನ್ನು ತಿನ್ನುತ್ತೀರಿ ಅಥವಾ ಬರ್ಗರ್ ಗೆ ಆರ್ಡರ್ ಮಾಡುತ್ತೀರಿ.

ಅತಿಯಾಗಿ ಸೋಡಾ ಕುಡಿಯುವುದು

ಅತಿಯಾಗಿ ಸೋಡಾ ಕುಡಿಯುವುದು

ಸೋಡಾಗಳು ಮತ್ತು ಇತರ ಸಿಹಿ ಪಾನೀಯಗಳಲ್ಲಿ ಉನ್ನತ ಮಟ್ಟದ ಫ್ರಕ್ಟೋಸ್ ಕಾರ್ನ್ ಸಿರಪ್ ಇರುತ್ತದೆ ಎಂದು ಅಧ್ಯಯನಗಳು ಹೇಳಿವೆ. ಈ ಪಾನೀಯಗಳು ರಕ್ತದ ಸಂಚಲನ ಮತ್ತು ಹಸಿವಿಗೆ ಬೇಕಾಗಿರುವ ಇತರ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ. ನಾವು ಸಾಕಷ್ಟು ಪ್ರಮಾಣದಲ್ಲಿ ಆಹಾರ ತಿಂದಿದ್ದೇವೆ ಎಂದು ಹೇಳುವ ಲೆಪ್ಟಿನ್ ಹಾರ್ಮೋನ್ ಗೆ ಅಡ್ಡಿಯನ್ನು ಉಂಟುಮಾಡಿ ನಮಗೆ ಹೆಚ್ಚು ಆಹಾರ ಬೇಕೆನ್ನುವಂತೆ ಮಾಡುತ್ತದೆ.

ಹೆಚ್ಚು ನೀರು ಕುಡಿಯದೇ ಇರುವುದು

ಹೆಚ್ಚು ನೀರು ಕುಡಿಯದೇ ಇರುವುದು

ಹಸಿವನ್ನು ನಿಯಂತ್ರಿಸಲು ನೀರು ಒಳ್ಳೆಯ ವಿಧಾನ. ನಾವು ಯಾವಾಗಲೂ ನಿರ್ಜಲೀಕರಣವನ್ನು ಹಸಿವೆಂದು ತಪ್ಪು ತಿಳಿದುಕೊಂಡು ಹೆಚ್ಚಿನ ಊಟ ಮಾಡುತ್ತದೆ. ನಿಮಗೆ ಹಸಿವಾದಾಗ ಒಂದು ಗ್ಲಾಸ್ ನೀರು ಕುಡಿಯಿರಿ ಮತ್ತು ಇದರಿಂದ ನಿಮ್ಮ ಹೊಟ್ಟೆಯಲ್ಲಿ ಭಿನ್ನವಾದ ವಾತಾವರಣ ಉಂಟಾಗಬಹುದು. ದಿನವಿಡಿ ನೀರು ಕುಡಿಯುವುದರಿಂದ ನಿಮ್ಮ ಹೊಟ್ಟೆ ತುಂಬಿದಂತಾಗಿರುತ್ತದೆ ಮತ್ತು ತೂಕ ಕಳಕೊಳ್ಳಬಹುದು.

English summary

REASONS YOU ARE STILL HUNGRY AFTER EATING

Are you hungry after eating - even if you've just enjoyed a full meal? This is a common problem many people. Here are some possible reasons why you still hunger after eating your meal. Know these reasons and find out the exact reason for your starvation.
X
Desktop Bottom Promotion