For Quick Alerts
ALLOW NOTIFICATIONS  
For Daily Alerts

ನೆಗಡಿಯಿಂದ ರಕ್ಷಿಸಿಕೊಳ್ಳಲು 7 ಸಲಹೆಗಳು

By Manohar.V
|

ನೆಗಡಿಯು ಸುಲಭವಾಗಿ ನಮ್ಮನ್ನು ಕಾಡುವ ಸಮಯ ಇದಾಗಿದೆ, ಏಕೆಂದರೆ ಹವಾಮಾನ ವೈಪರೀತ್ಯವು ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಪ್ರಮಾಣದಲ್ಲಿ ಕುಗ್ಗಿಸುತ್ತದೆ ಇದರಿಂದಾಗಿ ಸಾಮಾನ್ಯ ನೆಗಡಿ ಸೇರಿದಂತೆ ಹೆಚ್ಚಿನ ಕಾಯಿಲೆಗಳಿಗೆ ನಾವು ಹೆಚ್ಚು ತುತ್ತಾಗುತ್ತೇವೆ.

ಹಾಗಾಗಿ , ಸಾಮಾನ್ಯ ಶೀತದಿಂದ ನಿಮಗೆ ಮುಕ್ತಿ ದೊರೆಯಲು ಕೆಲವು ರೀತಿಯ ತಾಜಾ ತರಕಾರಿಗಳ ಎಲೆಗಳು ಹೆಚ್ಚು ಉಪಯುಕ್ತವಾಗಲಿವೆ. ಇಂತಹ ತಾಜಾ ತರಕಾರಿಗಳ ಎಲೆಗಳನ್ನು ನಿಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಕ್ರಮಾನುಗತವಾಗಿ ನೀವು ಸೇವಿಸುತ್ತಿದ್ದರೆ, ಸಾಮಾನ್ಯವಾಗಿ ಕಂಡುಬರುವ ಶೀತಕ್ಕೆ ನೀವು ಶೀಘ್ರದಲ್ಲಿ ಗುಡ್ ಬೈ ಹೇಳಬಹುದು!.

ಈ ತರಕಾರಿಗಳ ಎಲೆಗಳು ಫೋಷಕಾಂಶದಿಂದ ಕೂಡಿದ್ದು, ಶೀತದಿಂದ ರಕ್ಷಿಸಿಕೊಳ್ಳುವುದಕ್ಕಾಗಿ ನಿಮ್ಮ ದೇಹಕ್ಕೆ ಅಗತ್ಯವಿರುವ ಪೌಷ್ಟಿಕಾಂಶಗಳನ್ನು ನೀಡುವುದರ ಜೊತೆಗೆ, ನಿಮ್ಮ ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಚಳಿಗಾಲದಲ್ಲಿ ಆಗಾಗ ಕಂಡುಬರುವ ಇಂತಹ ಸಮಸ್ಯೆಯಿಂದ ದೂರವಿರಲು, ನಿಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ತಾಜಾ ತರಕಾರಿಗಳ ಎಲೆಗಳನ್ನು ನಿಯಮಿತವಾಗಿ ಸೇವಿಸಿರಿ.

 ಲೆಟ್ಯೂಸ್:

ಲೆಟ್ಯೂಸ್:

ಇದು ತಾಜಾ ತರಕಾರಿಗಳ ಎಲೆಗಳಾಗಿದ್ದು ನಿಮ್ಮಲ್ಲಿ ಸಾಮಾನ್ಯವಾಗಿ ಕಂಡುಬರುವ ಶೀತವನ್ನು ಗುಣಪಡಿಸಲು ಸಹಕಾರಿಯಾಗುತ್ತದೆ. ದಿನಾ ನಿಮ್ಮ ಆಹಾರದೊಂದಿಗೆ ಒಂದು ಬೌಲ್ ಮೊಳಕೆ ಬಂದಿರುವ ಧಾನ್ಯದ ಜೊತೆ ತಾಜಾ ಲೆಟ್ಯೂಸ್ ಜ್ಯೂಸ್ ಅನ್ನು ಮಿಕ್ಸ್ ಮಾಡಿ ಸೇವಿಸಿದರೆ, ನಿಮ್ಮ ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಾಗುವುದರೊಂದಿಗೆ, ಶೀತದಿಂದ ರಕ್ಷಿಸಿಕೊಳ್ಳಲು ಸಹಕಾರಿಯಾಗಲಿದೆ.

ತಾಜಾ ಕೋಸುಗೆಡ್ಡೆಯ ಎಲೆಗಳು:

ತಾಜಾ ಕೋಸುಗೆಡ್ಡೆಯ ಎಲೆಗಳು:

ತಾಜಾ ಕೋಸುಗೆಡ್ಡೆಯ ಎಲೆಗಳಲ್ಲಿ ವಿಟಮಿನ್ A C, ಮತ್ತು K ಪ್ರೊಟೀನ್ ಅಂಶಗಳಿದ್ದು, ನಿಮ್ಮ ದೇಹಕ್ಕೆ ಅಗತ್ಯವಿರುವ ಪೌಷ್ಟಿಕಾಂಶಗಳನ್ನು ಹೆಚ್ಚಿಸುತ್ತದೆ, ಜೊತೆಗೆ ಇಂತಹ ತಾಜಾ ಎಲೆಗಳಲ್ಲಿ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಮ್ ಅಂಶವಿರುವುದರಿಂದ, ನಿಮ್ಮ ದೇಹ ಸೋಂಕಿನಿಂದ ರಕ್ಷಿಸಿಕೊಳ್ಳಲು ಸಹಾಯವಾಗಲಿದೆ.

ಕ್ಯಾಬೇಜ್:

ಕ್ಯಾಬೇಜ್:

ಹಲವಾರು ಜನರು ಕ್ಯಾಬೇಜ್ ಅನ್ನು ಇಷ್ಟ ಪಡುವುದಿಲ್ಲ, ಆದರೆ ಕ್ಯಾಬೇಜ್‌ನಲ್ಲಿ ಅಧಿಕ ಪ್ರಮಾಣದ ವಿಟಮಿನ್ C, ಅಂಶಗಳಿದ್ದು ಸಾಮಾನ್ಯವಾಗಿ ಕಂಡುಬರುವ ಶೀತವನ್ನು ಶಮನಗೊಳಿಸುತ್ತದೆ.

ಬಸಲೆ ಅಥವಾ ಪಾಲಕ್ ಸೊಪ್ಪು:

ಬಸಲೆ ಅಥವಾ ಪಾಲಕ್ ಸೊಪ್ಪು:

ವಿಟಮಿನ್ A ಹಾಗೂ C ಇರುವ ಇಂತಹ ಸೊಪ್ಪಿನಲ್ಲಿ , ನಿಮ್ಮ ದೇಹಕ್ಕೆ ಅಗತ್ಯವಿರುವ ಪೌಷ್ಟಿಕಾಂಶಗಳನ್ನು ಹೆಚ್ಚಿಸುತ್ತದೆ, ಹಾಗೂ ವಾತವರಣದ ವೈಪರೀತ್ಯದಿಂದ ಉಂಟಾಗುವ ಶೀತವನ್ನು ಶಮನಗೊಳಿಸುವಲ್ಲಿ ಸಹಕಾರಿಯಾಗಲಿದೆ. ಒಂದು ವೇಳೆ ನಿಮಗೆ ಶೀತ ಜಾಸ್ತಿಯಾಗಿದ್ದರೆ, ನಿಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಬಸಲೆ ಅಥವಾ ಪಾಲಕ್ ಸೊಪ್ಪು ಅನ್ನು ಸೇವಿಸಲು ಮರೆಯದಿರಿ.

ಕೊಲ್ಲಾರ್ಡ್ಸ್:

ಕೊಲ್ಲಾರ್ಡ್ಸ್:

ಹಚ್ಚ ಹಸಿರಿನಿಂದ ಕೂಡಿರುವ ಈ ಎಲೆಗಳು, ನಿಮ್ಮ ದೇಹಕ್ಕೆ ಅಗತ್ಯವಿರುವ ಅಧಿಕ ಪ್ರಮಾಣದ ಪೌಷ್ಟಿಕಾಂಶಗಳನ್ನು ಇದು ಒಳಗೊಂಡಿರುತ್ತದೆ, ಹಾಗೂ ನಿಮ್ಮಲ್ಲಿ ಕಂಡುಬರುವ ಶೀತವನ್ನು ತಕ್ಷಣ ಶಮನಗೊಳಿಸುತ್ತದೆ.

ಮಸ್ಟರ್ಡ್ ಗ್ರೀನ್ಸ್:

ಮಸ್ಟರ್ಡ್ ಗ್ರೀನ್ಸ್:

ತಾಜಾ ಎಲೆಗಳಿಂದ ಕೂಡಿರುವ ಈ ಮಸ್ಟರ್ಡ್ ಗ್ರೀನ್ಸ್ , ನಿಮ್ಮ ಆರೋಗ್ಯಕ್ಕೆ ಧನಾತ್ಮಕ ಪರಿಣಾಮ ಬೀರುತ್ತದೆ. ನಿಮ್ಮ ದೇಹಕ್ಕೆ ಅಗತ್ಯವಿರುವ ಅಧಿಕ ಪ್ರಮಾಣದ ಪೌಷ್ಟಿಕಾಂಶಗಳನ್ನು ಇದು ಒಳಗೊಂಡಿದ್ದು, ಎದೆಯಲ್ಲಿ ಕಂಡುಬರುವ ಸೊಂಕುಗಳನ್ನು ನಿವಾರಿಸಲು ಕೂಡ ಇದು ಸಹಕಾರಿಯಾಗಿದೆ.

ಐಸ್‌ಬರ್ಗ್ ಲೆಟ್ಯೂಸ್:

ಐಸ್‌ಬರ್ಗ್ ಲೆಟ್ಯೂಸ್:

ನಿಮ್ಮ ದಿನನಿತ್ಯ ಆಹಾರ ಪದ್ಧತಿಯಲ್ಲಿ ಇಂತಹ ತರಕಾರಿ ಎಲೆಗಳನ್ನು ಸೇವಿಸುತ್ತ ಬಂದರೆ, ಖಂಡಿತವಾಗಿಯೂ ನೀವು ವಾತವರಣದ ವೈಪರೀತ್ಯದಿಂದ ಉಂಟಾಗುವ ಶೀತದಿಂದ ಮುಕ್ತಿ ಪಡೆಯಬಹುದು. ಇದರಲ್ಲಿ ಅಧಿಕ ಪ್ರಮಾಣದ ವಿಟಮಿನ್ K ಅಂಶಗಳಿದ್ದು, ಶೀತದಿಂದ ಉಂಟಾಗುವ ಮೂಗು ಕಟ್ಟುವಿಕೆಯನ್ನು ಶಮನಗೊಳಿಸಲು ಸಹಕಾರಿ ಆಗಲಿದೆ.

Read more about: health ಆರೋಗ್ಯ
English summary

Leafy Vegetables For Colds

It is that time of the year when one catches a cold easily. Because of the weather changes, the immunity system of the body decreases to a great extent thereby making us more susceptible to ailments including the common cold.
X
Desktop Bottom Promotion