ಹಾನಿಯನ್ನುಂಟುಮಾಡುವ ನಿತ್ಯದ ಆಹಾರಗಳಿವು!

By: Poornima Heggade
Subscribe to Boldsky

ಬಹುಶಃ ನೀವು ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಒಳ್ಳೆಯ ಆಹಾರಗಳು ಎಂದು ಅರಿವಿದ್ದೇ ಸೇವಿಸುತ್ತೀರಿ. ಆದರೆ ನಿಮಗೆ ಹಾನಿಯನ್ನುಂಟು ಮಾಡುವ ಆಹಾರ ಬಗ್ಗೆ ನಿಮಗೆಷ್ಟು ಗೊತ್ತು? ಈ ಅನಾರೋಗ್ಯಕರ ಆಹಾರಗಳನ್ನು ಸೇವಿಸಿದರೆ ಅದರಲ್ಲೂ ನಿಯಮಿತವಾಗಿ ಸೇವಿಸಿದರೆ ಕೆಲವು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅಂತಹ ಆಹಾರಗಳು ಯಾವವು ಎಂದು ತಿಳಿಯಲು ಬಯಸುವಿರಾ? ಹಾಗಾದರೆ ಈ ಲೇಖನವನ್ನು ಮುಂದೆ ಓದಿ!

ಇನ್ನಷ್ಟು ಮಾಹಿತಿಗಾಗಿ ಈ ಲೇಖನಗಳನ್ನು ಓದಿ: ಆಹಾರ ಸೇವಿಸಿದ ಬಳಿಕವೂ ಹಸಿವಾಗಲು ಕಾರಣಗಳು

ಕಡಿಮೆ ಕೊಬ್ಬಿನ ಆಹಾರಗಳು

ಕಡಿಮೆ ಕೊಬ್ಬಿನ ಆಹಾರಗಳು

ಬಹಳಷ್ಟು ಜನರು "ಕಡಿಮೆ ಕೊಬ್ಬು" ಎಂದು ಲೇಬಲ್ ಇರುವ ಆಹಾರ ವಸ್ತುಗಳನ್ನು ಖರೀದಿಸುವುದು ಆರೋಗ್ಯಕರ ಎಂದು ಭಾವಿಸುತ್ತಾರೆ. ದುರದೃಷ್ಟವಶಾತ್, ಈ ಆಹಾರಗಳಲ್ಲಿ ಕೊಬ್ಬಿನ ಅಂಶವನ್ನು ಕಡಿಮೆ ಮಾಡಲು ಅನಾರೋಗ್ಯಕರ ರಾಸಾಯನಿಕಗಳನ್ನು ತುಂಬಿಸಲಾಗುತ್ತದೆ! ಈ ರಾಸಾಯನಿಕಗಳು ನಿಮ್ಮ ದೇಹದಕೆ ಅತ್ಯಂತ ಕೆಟ್ಟ ಪರಿಮಾಮ ಬೀರುತ್ತವೆ ಮತ್ತು ಕಾಲಾನಂತರದಲ್ಲಿ ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತವೆ.

ಅಡಿಗೆಗೆ ಬಳಸುವ ಜಿಡ್ಡು ಪದಾರ್ಥ (Margarine)

ಅಡಿಗೆಗೆ ಬಳಸುವ ಜಿಡ್ಡು ಪದಾರ್ಥ (Margarine)

ಜನರು, ಕೊಲೆಸ್ಟ್ರಾಲ್ ಹೊಂದಿಲ್ಲ ಎಂಬ ಕಾರಣಕ್ಕೆ ಬೆಣ್ಣೆಯ ಮೇಲೆ ಮಾರ್ಗರೀನ್ ಇರುವುದನ್ನು ಆಯ್ಕೆ ಮಾಡುತ್ತಾರೆ, ಆದರೆ ನೀವು ಗಮನ ನೀಡಬೇಕಾದ ವಿಷಯ ಇದರಲ್ಲೇನಿದೆ ಎಂದು ! ಮಾರ್ಗರೀನ್ ನಿಮ್ಮ ರಕ್ತನಾಳಗಳನ್ನು ಹಾನಿ ಮಾಡಬಹುದಾದ ಮತ್ತು ನಿಮ್ಮ ಕೊಲೆಸ್ಟ್ರಾಲ್ ಹೆಚ್ಚಾಗಿಸುವ, ಟ್ರಾನ್ಸ್ ಕೊಬ್ಬುಗಳನ್ನು ಅಧಿಕ ಪ್ರಮಾಣದಲ್ಲಿ ಒಳಗೊಂಡಿದೆ!

ಹಣ್ಣಿನ ರಸ

ಹಣ್ಣಿನ ರಸ

ಬಹಳಷ್ಟು ಅಂಗಡಿಯವರು ಹಣ್ಣಿನ ರಸ ಆರೋಗ್ಯಕರವೆಂದು ಭಾವಿಸಿ ಖರೀದಿಸುತ್ತಾರೆ. ಆದರೆ ಇವು ವಾಸ್ತವವಾಗಿ ದೇಹಕ್ಕೆ ಬಹಳ ಕೆಟ್ಟದ್ದು. ಅತ್ಯಂತ ಕೃತಕ ಸುವಾಸನೆ ಮತ್ತು ಯಾವುದೇ ನಿಜವಾದ ಹಣ್ಣುಗಳಿಂದ ಮಾಡಿರದ ಈ ಪಾನೀಯಗಳು ಕೇವಲ, ಸಕ್ಕರೆ ಮತ್ತು ಬೊಜ್ಜು ಮತ್ತು ಇತರ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದಾದ ಇತರ ರಾಸಾಯನಿಕಗಳಿಂದ ತುಂಬಿರುತ್ತವೆ.

ಸಂಸ್ಕರಿಸಿದ ಮಾಂಸ

ಸಂಸ್ಕರಿಸಿದ ಮಾಂಸ

ಸಂಸ್ಕರಿಸಿದ ಮಾಂಸದ ಒಳಗಿರುವ ರಾಸಾಯನಿಕಗಳು, ಕರುಳಿನ ಕ್ಯಾನ್ಸರ್ ಮತ್ತು ಇತರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಸಕ್ಕರೆ, ಉಪ್ಪು ಮತ್ತು ಕೊಬ್ಬಿನ ಅಂಶಗಳನ್ನು ಬಳಸಿ ತಯಾರಿಸಲಾಗುವ ಪ್ಯಾಕ್ ಮಧುಮೇಹ ಮತ್ತು ಕೊಬ್ಬಿಗೆ ಕಾರಣವಾಗುತ್ತವೆ. ನೀವು ಯಾವಾಗಲೂ ನೇರವಾಗಿ ತಕ್ಷಣವೇ ಕತ್ತರಿಸಿದ ಮಾಂಸವನ್ನೇ ಅಡುಗೆಗೆ ಬಳಸಿ ಮತ್ತು ಸಂಸ್ಕರಿಸಿದ ಮಾಂಸವನ್ನು ಸೇವಿಸುವುದನ್ನೂ ತಪ್ಪಿಸಿ.

ಎನರ್ಜಿ ಬಾರ್ ಗಳು

ಎನರ್ಜಿ ಬಾರ್ ಗಳು

ಶಕ್ತಿ ಬಾರ್ ಗಳು, ತೂಕವನ್ನು ಕಡಿಮೆ ಮಾಡಲು ಮತ್ತು ಫಿಟ್ ಆಗಿರಲು ಬಯಸುವ ಜನರಿಗೆ ಆರೋಗ್ಯಕರ ತಿಂಡಿ ಎಂಬ ರೀತಿಯಲ್ಲಿ ಮಾರಾಟ ಮಾಡಲಾಗುತ್ತದೆ. ದುರದೃಷ್ಟವಶಾತ್, ಬಹುಮಂದಿ ಈ ಬಾರ್ ಗಳ ಬಗ್ಗೆ ಪೌಷ್ಠಿಕಾಂಶದ ಮಾಹಿತಿಯನ್ನು ಓದುವುದೇ ಇಲ್ಲ. ಅವುಗಳನ್ನು ಪ್ರೋಟೀನ್ ಹೆಚ್ಚಾಗಿರುವ, ಸಕ್ಕರೆ ಮತ್ತು ಕೊಬ್ಬಿನ ಅಂಶವನ್ನು ಬಹಳಷ್ಟು ಹಾಕಿ ತಯಾರಿಸಲಾಗುತ್ತದೆ.

ಹೆಪ್ಪುಗಟ್ಟಿದ ರಾತ್ರಿ ಊಟ ಮತ್ತು ಉಪಾಹಾರದಲ್ಲಿ

ಹೆಪ್ಪುಗಟ್ಟಿದ ರಾತ್ರಿ ಊಟ ಮತ್ತು ಉಪಾಹಾರದಲ್ಲಿ

ಖಂಡಿತವಾಗಿ ಘನೀಕೃತ ಊಟ ಅನುಕೂಲಕರ, ಆದರೆ ನಿಮ್ಮ ಈ ಅನುಕೂಲಕ್ಕಾಗಿ ಏನು ಬೆಲೆ ಪಾವತಿಸುತ್ತೀರಿ? ಈ ಹೆಪ್ಪುಗಟ್ಟಿದ ಊಟಗಳಲ್ಲಿ, ಕ್ಯಾಲೊರಿಗಳು ಕಡಿಮೆಯಾಗಿದ್ದರೂ ಕೂಡ, ಸೋಡಿಯಂ ಅಧಿಕವಾಗಿರುತ್ತದೆ.

ಮಿಠಾಯಿ

ಮಿಠಾಯಿ

ದಿನ ಆರಂಭಿವಾಗುವ ಮೊದಲು ಉಪಹಾರಗಳನ್ನು ಸೇವಿಸುತ್ತ, ಸಿಹಿಯಾದ ಮಿಠಾಯಿ ತಿನ್ನುವುದು ಯಾರಿಗೆ ತಾನೆ ಇಷ್ಟವಲ್ಲ ಹೇಳಿ ? ಆದರೆ ಇವು ಉತ್ತಮ ರುಚಿ ಹೊಂದಿದ್ದರೂ ಕೂಡ, ಅಧಿಕ ಸಕ್ಕರೆ, ಕೊಬ್ಬು, ಟ್ರಾನ್ಸ್ ಕೊಬ್ಬು ಮತ್ತು ಕಾರ್ಬೋಹೈಡ್ರೇಟ್ ಗಳ ಬೃಹತ್ ಮೂಲವಾಗಿವೆ!

ಸೋಡಾ

ಸೋಡಾ

ನಿಯಮಿತವಾಗಿ ಸೇವಿಸುವ ಸೋಡಾ, ಸಕ್ಕರೆಯ ಬೃಹತ್ ಮೂಲ ಮತ್ತು ಹಲವಾರು ವಿಧದ ಕ್ಯಾನ್ಸರ್ ಗಳಿಗೆ ಕಾರಣವಾಗಬಹುದಾದ ರಾಸಾಯನಿಕಗಳನ್ನು ಹೊಂದಿದೆ. ಇದು ನಿಮಗೆಯಾವುದೇ ಪೌಷ್ಟಿಕಾಂಶದ ಮೌಲ್ಯವನ್ನು ಒದಗಿಸುವುದಿಲ್ಲ ಹಾಗೂ ಮಧುಮೇಹಕ್ಕೂ ಕಾರಣವಾಗಬಹುದು.

ಆಲೂ ಚಿಪ್ಸ್

ಆಲೂ ಚಿಪ್ಸ್

ಹೆಚ್ಚಿನ ಚಿಪ್ಸ್ ಗಳನ್ನು, ಅತ್ಯಂತ ಹೆಚ್ಚಿನ ತಾಪಮಾನದಲ್ಲಿ ಹುರಿದು ಮಾಡಿದಾಗ ರಚನೆಯಾಗುವ ಆಕ್ರಿಲಾಮೈಡ್ ಗಳಿಂದ ತಯಾರಿಸಲಾಗುತ್ತದೆ. ಈ ರಾಸಾಯನಿಕಗಳು ಸಾವಿಗೆ ಕಾರಣವಾಗಬಹುದಾದ ಕ್ಯಾನ್ಸರ್ ನಿಮ್ಮ ದೇಹಕ್ಕೆ ಸೇರುವಂತೆ ಮಾಡುತ್ತದೆ. ಆದ್ದರಿಂದ ನೀವು ಯಾವುದೇ ಆಹಾರಗಳನ್ನು ಆಯ್ಕೆ ಮಾಡುವಾಗ ಅವು ನಿಮಗೆಷ್ಟು ಎಳ್ಳೆಯದು ಎಂಬುದರ ಬಗ್ಗೆ ಸ್ವಲ್ಪ ಗಮನವಹಿಸಿ!

English summary

Foods That Will Kill You!

You’re probably aware of all the foods that are good for you, like fresh fruits and vegetables, but do you know about the foods that can kill you? These unhealthy foods can lead to some serious health problems, Well, keep reading!
Please Wait while comments are loading...
Subscribe Newsletter