ನಿಮ್ಮ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವ 18 ಅದ್ಭುತ ಆಹಾರಗಳು

Posted By:
Subscribe to Boldsky

ಜಂಜಾಟದ ಇಂದಿನ ವ್ಯಸ್ತ ಜೀವನದಲ್ಲಿ ನಮ್ಮ ಮೆದುಳು ತುಂಬಾ ಬಳಲಿದ ಮತ್ತು ಕ್ರಿಯೆಯಿಲ್ಲದಂತಿರುತ್ತದೆ. ನಮ್ಮ ಮೆದುಳಿಗೆ ನಿರಂತರ ವರ್ಧಕ ಬೇಕಿರುತ್ತದೆ ಮತ್ತು ಮೆದುಳಿಗೆ ನಾವು ಮಾಲೀಕರಾಗಿರುವ ಕಾರಣ ನೈಸರ್ಗಿಕ ಔಷಧಿಯೊಂದಿಗೆ ಇದನ್ನು ಒದಗಿಸುವುದು ತುಂಬಾ ಮುಖ್ಯ. ನಾವು ದಿನಾಲೂ ಸೇವಿಸುವ ಆಹಾರದಲ್ಲಿ ಮೆದುಳಿಗೆ ಬೇಕಾಗಿರುವ ಆಹಾರವಿದೆಯೆಂದು ಹೆಚ್ಚಿನವರು ಹೇಳಬಹುದು. ಅದಾಗ್ಯೂ, ಮೆದುಳಿನ ಶಕ್ತಿ ಉನ್ನತ ಮಟ್ಟದಲ್ಲಿಡಲು ನಾವು ಸ್ವಲ್ಪ ಹೆಚ್ಚಿನ ಮಟ್ಟದ ಆಹಾರ ಸೇವಿಸುವ ಅಗತ್ಯವಿದೆ.

ವಿವಿಧ ವರ್ಗದ ಬೆರ್ರಿಗಳಿಂದ ಹಿಡಿದು ವಿಟಮಿನ್ ಆಹಾರಗಳು ನಮ್ಮ ಮೆದುಳಿನ ಮಾನಸಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಾನಸಿಕವಾಗಿ ನೀವು ಬಳಲಿದರೆ ಇದು ನಿಮ್ಮ ಮೆದುಳಿನ ಶಕ್ತಿಯನ್ನು ಹೆಚ್ಚಿಸಲು ಒಂದು ವಿಧದ ಆಹಾರ ಬೇಕೆಂಬುದರ ಲಕ್ಷಣವಾಗಿದೆ. ಕೆಳಗೆ ಕೊಟ್ಟಿರುವ ಕೆಲವೊಂದು ಆಹಾರಗಳು ನಿಮ್ಮ ಮೆದುಳಿನ ಶಕ್ತಿ ಹೆಚ್ಚಿಸುವುದರೊಂದಿಗೆ ಸಂಪೂರ್ಣವಾಗಿ ನಿಮ್ಮ ಉತ್ತಮ ಆರೋಗ್ಯಕ್ಕೆ ನೆರವಾಗುತ್ತದೆ. ಪರ್ಕಿನ್ಸನ್ ನಂತಹ ಕಾಯಿಲೆಯಿಂದ ದೂರವಿಡಲು ಮೆದುಳಿನ ಆಹಾರ ಅತ್ಯಗತ್ಯ.

ಈ ಆಹಾರಗಳಲ್ಲಿರುವ ಕೆಲವೊಂದು ರಾಸಾಯನಿಕಗಳು ಮಕ್ಕಳಲ್ಲಿ ಐಕ್ಯೂ ಹೆಚ್ಚಿಸುತ್ತದೆ. ಇದರಿಂದ ಅವರು ಕಲಿಕೆಯಲ್ಲಿ ಅಗ್ರಸ್ಥಾನಕ್ಕೇರಲು ಸಾಧ್ಯ. ತಜ್ಞರ ಪ್ರಕಾರ ಮೆದುಳಿನ ಆಹಾರಗಳನ್ನು ಮಕ್ಕಳ ಪರೀಕ್ಷೆಯ ಸಮಯದಲ್ಲಿ ಅವರಿಗೆ ನೀಡಬೇಕು. ಇದರಿಂದ ಅವರು ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುವುದು ತಪ್ಪುತ್ತದೆ. ನಿಮ್ಮ ಮೆದುಳಿಗೆ ಅಗತ್ಯವಿರುವ ಮತ್ತು ಅದರ ಶಕ್ತಿ ಹೆಚ್ಚಿಸಬಲ್ಲ ಕೆಲವೊಂದು ಆರೋಗ್ಯಕರ ಆಹಾರಗಳು ಇಲ್ಲಿವೆ.

ಪಾಲಕ್ ಸೊಪ್ಪು

ಪಾಲಕ್ ಸೊಪ್ಪು

ಪಾಲಕ್ ಸೊಪ್ಪು ಕಬ್ಬಿಣ, ಪೊಟಾಶಿಯಂ ಮತ್ತು ಸತುಗಳನ್ನು ಒಳಗೊಂಡಿರುವ ಅದ್ಭುತವಾದ ಆಹಾರ ಪದಾರ್ಥವಾಗಿದ್ದು, ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪ್ರಭಾವವನ್ನು ಬೀರುವ ಆಹಾರ ಪದಾರ್ಥವಾಗಿದೆ. ಇದರಲ್ಲಿ ವಿಟಮಿನ್ ಬಿ,ಎ ಮತ್ತು ಕೆಗಳು ಅಧಿಕ ಪ್ರಮಾಣದಲ್ಲಿರುತ್ತವೆ. ವಿಟಮಿನ್ ಕೆ ದೇಹದಲ್ಲಿ ರಕ್ತದ ಪರಿಚಲನೆಯನ್ನು ಸರಾಗಗೊಳಿಸುತ್ತದೆ ಹಾಗು ಆ ಮೂಲಕ ರಕ್ತವು ಮೆದುಳಿಗೆ ಯಾವುದೇ ಅಡೆತಡೆಗಳಿಲ್ಲದೆ ಸಾಗುವಂತೆ ಮಾಡಿ, ಮೆದುಳಿನಲ್ಲಿರುವ ಕೋಶಗಳ ಆರೋಗ್ಯವನ್ನು ಸುಸ್ಥಿತಿಯಲ್ಲಿಡುತ್ತದೆ.

ಟೊಮೇಟೊ

ಟೊಮೇಟೊ

ಟೊಮೇಟೊಗಳು ಒಳ್ಳೆಯ ಕ್ಯಾನ್ಸರ್ ನಿರೋಧಕ ಆಹಾರ ಪದಾರ್ಥವಾಗಿದೆ. ಇದರಲ್ಲಿ ಲೈಕೊಪೀನ್ ಸಹ ಇರುತ್ತದೆ. ಇದು ಡಿಮೆನ್ಷಿಯಾ ಬರದಂತೆ ತಡೆಯುವುದರ ಜೊತೆಗೆ ಒಟ್ಟಾರೆ ಮಾನಸಿಕ ಆರೋಗ್ಯವನ್ನು ಸಹ ಕಾಪಾಡುವಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ.

ಒಣ ಹಣ್ಣುಗಳು

ಒಣ ಹಣ್ಣುಗಳು

ವಾಲ್‍ನಟ್‍ಗಳು, ಬಾದಾಮಿ ಬೀಜಗಳು ಮತ್ತು ಹಝೆಲ್‍ನಟ್‍ಗಳಂತಹ ಒಣಹಣ್ಣುಗಳು ನಿಮ್ಮ ಸ್ಮರಣೆ ಶಕ್ತಿ ಮತ್ತು ಏಕಾಗ್ರತೆಗಳನ್ನು ಸುಧಾರಿಸಲು ತಮ್ಮದೆ ಆದ ಕೊಡುಗೆಯನ್ನು ನೀಡುತ್ತವೆ. ಇವುಗಳಲ್ಲಿರುವ ಒಮೆಗಾ-3 ಕೊಬ್ಬಿನ ಆಮ್ಲಗಳು ಮತ್ತು ಪ್ರೊಟೀನ್‍ಗಳು ನಿಮ್ಮ ಮೆದುಳಿನ ಕೋಶಗಳನ್ನು ಲವಲವಿಕೆಯಿಂದ ಇರುವಂತೆ ಮಾಡುತ್ತವೆ. ಜ್ಞಾಪಕ ಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸಲು ಒಣ ಹಣ್ಣುಗಳು ಹೇಳಿ ಮಾಡಿಸಿದಂತಹ ಆಹಾರ ಪದಾರ್ಥಗಳಾಗಿವೆ.

ಚಿಯಾ ಬೀಜಗಳು

ಚಿಯಾ ಬೀಜಗಳು

ಇವುಗಳಲ್ಲಿ ಒಮೆಗಾ-3 ಕೊಬ್ಬಿನ ಅಮ್ಲಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಕರಗಬಹುದಾದ ಮತ್ತು ಕರಗದ ನಾರಿನಂಶಗಳು ಸಹ ಚಿಯಾ ಬೀಜಗಳಲ್ಲಿರುತ್ತವೆ. ಮಾನಸಿಕ ಆರೋಗ್ಯವನ್ನು ಹೆಚ್ಚಿಸುವಲ್ಲಿ ಚಿಯಾ ಬೀಜಗಳು ಉತ್ತಮ ಸಹಕಾರವನ್ನು ನೀಡುತ್ತವೆ. ಮೂಲ ಮಟ್ಟದಲ್ಲಿ ಹೇಳುವುದಾದರೆ ಇದರಲ್ಲಿರುವ ಒಮೆಗಾ-3 ಕೊಬ್ಬಿನ ಆಮ್ಲಗಳು ಮಾನಸಿಕ ಆರೋಗ್ಯವನ್ನು ಧನಾತ್ಮಕ ಮಟ್ಟದಲ್ಲಿ ಮೇಲೆ ತರುತ್ತದೆ ಮತ್ತು ಏಕಾಗ್ರತೆಯನ್ನು ಸುಧಾರಿಸುತ್ತದೆ.

ಚಾಕೊಲೆಟ್

ಚಾಕೊಲೆಟ್

ಚಾಕೊಲೆಟ್ ಸೇವಿಸಲು ಇದಕ್ಕಿಂತ ಒಳ್ಳೆಯ ನೆಪ ಬೇಕಾಗಿಲ್ಲ. ಅಲ್ಲವೇ!!? ಚಾಕೊಲೆಟ್‍ಗಳು, ವಿಶೇಷವಾಗಿ ಡಾರ್ಕ್ ಚಾಕೊಲೆಟ್‍ಗಳು ಜ್ಞಾಪಕ ಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸಲು ಹೇಳಿ ಮಾಡಿಸಿದಂತಹ ಆಹಾರವಾಗಿರುತ್ತದೆ. ಇದು ದೇಹದಲ್ಲಿ ರಕ್ತದ ಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ಮೆದುಳಿಗೆ ರಕ್ತವು ಸರಾಗವಾಗಿ ಸಾಗುವಂತೆ ಮಾಡುತ್ತದೆ.

ದ್ವಿದಳ ಧಾನ್ಯಗಳು ಮತ್ತು ಬೀನ್ಸ್

ದ್ವಿದಳ ಧಾನ್ಯಗಳು ಮತ್ತು ಬೀನ್ಸ್

ಬೀನ್ಸ್ ತರಕಾರಿಗಳಲ್ಲೆ ಅತ್ಯಂತ ಹೆಚ್ಚಿನ ಆರೋಗ್ಯಕಾರಿ ಅಂಶಗಳನ್ನು ಒಳಗೊಂಡಿರುವ ಕಾಳುಗಳಾಗಿವೆ. ಇವುಗಳಲ್ಲಿ ಪೋಷಕಾಂಶಗೌ ಹೆಚ್ಚಿದ್ದು, ವಿಟಮಿನ್ ಬಿ, ಫೋಲೆಟ್ ಮತ್ತು ಒಮೆಗಾ-3 ಕೊಬ್ಬಿನ ಆಮ್ಲಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇದರ ಜೊತೆಗೆ ಇವುಗಳಲ್ಲಿ ಸಂಕೀರ್ಣವಾದ ಕಾರ್ಬೊಹೈಡ್ರೆಟ್‍ಗಳು ಸಹ ಇರುತ್ತವೆ. ಇವು ಮೆದುಳಿಗೆ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತವೆ ಮತ್ತು ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಹತೋಟಿಯಲ್ಲಿಡುತ್ತವೆ.

ಅವೊಕ್ಯಾಡೊಗಳು

ಅವೊಕ್ಯಾಡೊಗಳು

ಇಡೀ ಪ್ರಪಂಚದಲ್ಲಿಯೇ ಅತ್ಯಂತ ಆರೋಗ್ಯಕಾರಿ ಪ್ರಯೋಜನಗಳನ್ನು ತನ್ನಲ್ಲಿ ಒಳಗೊಂಡಿರುವ ಅದ್ಭುತವಾದ ಹಣ್ಣೆಂದರೆ ಅವೊಕ್ಯಾಡೊ. ಇದರಲ್ಲಿ ವಿಟಮಿನ್ ಬಿ6,ಇ, ಸಿ ಮತ್ತು ಕೆ ಗಳು ಇರುತ್ತವೆ. ಇದರ ಜೊತೆಗೆ ಮೊನೊಸ್ಯಾಚುರೇಟೆಡ್ ಫ್ಯಾಟ್‍ಗಳು, ಒಮೆಗಾ-3 ಮತ್ತು ಒಮೆಗಾ- 6 ಕೊಬ್ಬಿನ ಆಮ್ಲಗಳು ಇರುತ್ತವೆ. ಇವು ಮೆದುಳಿಗೆ ರಕ್ತ ಪರಿಚಲನೆಯನ್ನು ಹೆಚ್ಚು ಮಾಡುತ್ತವೆ ಮತ್ತು ಮೆದುಳಿಗೆ ಬರುವ ಪಾರ್ಶ್ವ ವಾಯುವನ್ನು ತಡೆಯುತ್ತವೆ.

ಬ್ಲೂಬೆರ್ರಿಗಳು

ಬ್ಲೂಬೆರ್ರಿಗಳು

ಆಂಟಿ ಆಕ್ಸಿಡೆಂಟ್‍ಗಳ ಸಮೃದ್ಧವಾದ ಆಗರವಾಗಿರುವ ಬ್ಲೂಬೆರ್ರಿಗಳು ಮೆದುಳಿನ ಮೇಲೆ ಫ್ರೀ ರ‍್ಯಾಡಿಕಲ್‍ಗಳ ಪ್ರಭಾವವನ್ನು ತಡೆಯುತ್ತವೆ. ಇವುಗಳು ಜೀರ್ಣಶಕ್ತಿಯನ್ನು ಸಹ ಹೆಚ್ಚಿಸುತ್ತವೆ ಮತ್ತು ಆಹಾರದಲ್ಲಿರುವ ಟಾಕ್ಸಿನ್‍ಗಳು ಜಠರದ ಮೇಲೆ ಪ್ರಭಾವ ಬೀರದಂತೆ ತಡೆಯುತ್ತವೆ.

ಬ್ರೊಕ್ಕೊಲಿ

ಬ್ರೊಕ್ಕೊಲಿ

ಇದು ಸಹ ವಿಶ್ವದ ಅತ್ಯಂತ ಆರೋಗ್ಯಕಾರಿ ತರಕಾರಿಗಳಲ್ಲಿ ಒಂದು. ಬ್ರೊಕ್ಕೊಲಿಯಲ್ಲಿ ಸಮೃದ್ಧವಾದ ನಾರಿನಂಶ, ವಿಟಮಿನ್ ಬಿ,ಕೆ ಮತ್ತು ಸಿ, ಕಬ್ಬಿಣಾಂಶ ಮತ್ತು ಫೊಲೆಟ್‍ಗಳು ಇದ್ದು, ಇವೆಲ್ಲವು ಸೇರಿ, ಮಾನಸಿಕ ಆರೋಗ್ಯವನ್ನು ಸುಧಾರಿಸುವಲ್ಲಿ ತಮ್ಮದೆ ಆದ ಕೊಡುಗೆಯನ್ನು ನೀಡುತ್ತವೆ.

ಎಲೆಕೋಸು

ಎಲೆಕೋಸು

ಎಲೆಕೋಸುಗಳಲಿ ಗ್ಲುಕೊಸಿನೊಲೇಟ್‍ಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇವು ಕ್ಯಾನ್ಸರ್ ನಿವಾರಿಸುವಲ್ಲಿ ಪರಿಣಾಮಕಾರಿಯಾಗಿ ಸಹಕರಿಸುತ್ತವೆ. ಇದರಲ್ಲಿರುವ ಸಮೃದ್ಧವಾದ ಫೈಟೊ ನ್ಯೂಟ್ರಿಯೆಂಟ್‍ಗಳು ಸಹ ನಿಮ್ಮ ಜ್ಞಾಪಕ ಶಕ್ತಿ ಮತ್ತು ಏಕಾಗ್ರತೆಯನ್ನು ಗಣನೀಯವಾಗಿ ಸುಧಾರಿಸಲು ನೆರವಾಗುತ್ತವೆ.

ಧಾನ್ಯಗಳು

ಧಾನ್ಯಗಳು

ಧಾನ್ಯಗಳು ಮೆದುಳಿನ ಆರೋಗ್ಯಕ್ಕೆ ಬೇಕಾಗುವ ಅಸಂಖ್ಯಾತ ಪೋಷಕಾಂಶಗಳು ದೊರೆಯುತ್ತವೆ. ಇವು ನಾರಿನಂಶ, ಸಂಕೀರ್ಣವಾದ ಕಾರ್ಬೊಹೈಡ್ರೇಟ್‍ಗಳು ಮತ್ತು ಒಮೆಗಾ-3 ಕೊಬ್ಬಿನ ಆಮ್ಲಗಳನ್ನು ಯಥೇಚ್ಛವಾಗಿ ಹೊಂದಿರುತ್ತವೆ. ಇದರ ಜೊತೆಗೆ ಇವುಗಳಲ್ಲಿ ವಿಟಮಿನ್ ಬಿ ಸಹ ಅಧಿಕ ಪ್ರಮಾಣದಲ್ಲಿರುತ್ತವೆ. ಇವು ಮೆದುಳಿಗೆ ರಕ್ತ ಪರಿಚಲನೆಯನ್ನು ಸರಾಗಗೊಳಿಸುತ್ತವೆ.

ಮೆಂತ್ಯೆ ಸೊಪ್ಪು, ಮೂಲಂಗಿ, ಜೀರಿಗೆ ಮೆಂತ್ಯೆ ಸೊಪ್ಪು

ಮೆಂತ್ಯೆ ಸೊಪ್ಪು, ಮೂಲಂಗಿ, ಜೀರಿಗೆ ಮೆಂತ್ಯೆ ಸೊಪ್ಪು

ಮೂಲಂಗಿಯನ್ನು ಸಣ್ಣಗೆ ಹೆಚ್ಚಿಕೊಂಡು ಎರಡನ್ನೂ ಮಿಶ್ರಣ ಮಾಡಿ ಅದಕ್ಕೆ ಉಪ್ಪು, ಮೆಣಸು, ಜೀರಿಗೆಯ ಒಗ್ಗರಣೆ ನೀಡಿ ಸೇವಿಸಿದರೆ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಇದನ್ನು ಹಸಿಯಾಗಿಯೂ ತಿನ್ನಬಹುದು, ಇಲ್ಲವೆಂದರೆ ಸ್ವಲ್ಪ ಬೇಯಿಸಿಯೂ ತಿನ್ನಬಹುದು.

ಶುಂಠಿ, ಜೀರಿಗೆ, ಕಲ್ಲು ಸಕ್ಕರೆ

ಶುಂಠಿ, ಜೀರಿಗೆ, ಕಲ್ಲು ಸಕ್ಕರೆ

ಒಂದು ಚೂರು ಹಸಿ ಶುಂಠಿ, ಸ್ವಲ್ಪ ಜೀರಿಗೆ ಮತ್ತು ಕಲ್ಲು ಸಕ್ಕರೆಯನ್ನು ಚೆನ್ನಾಗಿ ಅಗಿದು ತಿನ್ನುತ್ತಿದ್ದರೆ ನಾಲಿಗೆ ರುಚಿ ಹೆಚ್ಚುವುದರ ಜೊತೆ ಜ್ಞಾಪಕ ಶಕ್ತಿಯೂ ವೃದ್ಧಿಸುತ್ತದೆ.

ಜ್ಞಾಪಕ ಶಕ್ತಿ ಹೆಚ್ಚಿಸುವ ಆಹಾರಗಳು

ಜ್ಞಾಪಕ ಶಕ್ತಿ ಹೆಚ್ಚಿಸುವ ಆಹಾರಗಳು

ಸೇಬನ್ನು ಪ್ರತಿದಿನ ಊಟವಾದ ನಂತರ ನಿರಂತರವಾಗಿ ಸೇವಿಸುತ್ತಿದ್ದರೆ ಜ್ಞಾಪಕ ಶಕ್ತಿ ಹೆಚ್ಚುತ್ತದೆ.

ನೆಲ್ಲಿಕಾಯಿ

ನೆಲ್ಲಿಕಾಯಿ

ನೆಲ್ಲಿಕಾಯಿಯನ್ನು ತಿನ್ನುತ್ತಿದ್ದರೆ ಜ್ಞಾಪಕ ಶಕ್ತಿ ಕ್ರಮೇಣ ಹೆಚ್ಚುತ್ತದೆ.

ಜ್ಞಾಪಕ ಶಕ್ತಿ ಹೆಚ್ಚಿಸುವ ಆಹಾರಗಳು

ಜ್ಞಾಪಕ ಶಕ್ತಿ ಹೆಚ್ಚಿಸುವ ಆಹಾರಗಳು

ಹಾಲಿಗೆ ಏಲಕ್ಕಿ ಪುಡಿ ಸೇರಿಸಿ ಕುದಿಸಿ ಜೇನು ತುಪ್ಪ ಬೆರೆಸಿ ಮಕ್ಕಳಿಗೆ ನೀಡಿದರೆ ಜ್ಞಾಪಕ ಶಕ್ತಿ ಹೆಚ್ಚುತ್ತದೆ.

ಚಹಾ

ಚಹಾ

ಚಹಾಯಿಂದ ಕೂಡ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಇದರಲ್ಲಿ ಆಂಟಿ ಆಕ್ಸಿಡೆಂಟ್ಸ್ ಗಳ ಅಂಶ ಉಳಿದೆಲ್ಲಾ ತರಕಾರಿ ಮತ್ತು ಹಣ್ಣುಗಳಲ್ಲಿ ಇರುವುದಕ್ಕಿಂತ ಹೆಚ್ಚಾಗಿರುತ್ತದೆ. ಈ ಅಂಶವನ್ನು ಪಾಲಿಫಿನೊಲ್ಸ್ಎಂದು ಕರೆಯಲಾಗುವುದು, ಇದು ಮೆದುಳಿನ ಚಟುವಟಿಕೆಗಳನ್ನು ಹೆಚ್ಚು ಮಾಡುತ್ತದೆ. ಇದರಲ್ಲಿರುವ ಅಮೈನೊ ಆಸಿಡ್ ವಿಷಯವನ್ನು ಸರಿಯಾದ ರೀತಿಯಲ್ಲಿ ಯೋಚಿಸಲು ಸಹಾಯ ಮಾಡುತ್ತದೆ.

ತರಕಾರಿ

ತರಕಾರಿ

ನೀಲಿ, ಕೆಂಪು ಮತ್ತು ಹಸಿರು ಬಣ್ಣದಲ್ಲಿರುವ ತರಕಾರಿಗಳು ಮೆದುಳಿಗೆ ಒಳ್ಳೆಯದು. ಬದನೆಕಾಯಿ, ಬೀಟ್ ರೂಟ್ಸ್, ಈರುಳ್ಳಿ, ಸೊಪ್ಪುಗಳು ಮೆದುಳಿನ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ.

English summary

Brilliant Foods That Enhance Memory And Concentration

The brain is an organ that consumes most of the energy required by the human body. An organ that works wondrously to maintain the operation of various other essential body organs, the brain is also the most delicate organ in the human body.