For Quick Alerts
ALLOW NOTIFICATIONS  
For Daily Alerts

ಕಚೇರಿಯಲ್ಲೇ ಮಾಡಬಹುದಾದ ಆರು ಯೋಗಾಸನಗಳು

By Super
|

ಭಾರತದ ಪ್ರಾಚೀನ ಶಿಸ್ತು ಮತ್ತು ದೇಹದ ಮೇಲೆ ನಿಯಂತ್ರಣ ಸಾಧಿಸುವ ವ್ಯಾಯಾಮ ಪದ್ಧತಿಯೇ ಯೋಗ. ಧ್ಯಾನ, ಶ್ವಾಸ ಮತ್ತು ಆಸನವೆಂದು ಕರೆಯಲ್ಪಡುವ ಕೆಲವು ದೈಹಿಕ ವ್ಯಾಯಮದ ಮೂಲಕ ದೇಹ ಮತ್ತು ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಬಹುದು. ಯೋಗದಿಂದ ನಿಮ್ಮ ದೇಹ ಮತ್ತು ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಬಹುದು. ಇದರಿಂದ ನಿಮ್ಮ ಜೀವನದ ಮೇಲೆ ಹಿಡಿತ ಪಡೆಯಬಹುದು. ಯೋಗ ಜೀವನಕ್ಕೆ ಸಮತೋಲ ನೀಡುತ್ತದೆ ಮತ್ತು ಇದರಿಂದ ನೀವು ಪ್ರಕೃತಿಯೊಂದಿಗೆ ಶಾಂತಿ ಮತ್ತು ಸೌಹಾರ್ತೆಯಿಂದ ಬದುಕಬಹುದು. ದೇಹದ ಫಿಟ್ ನೆಸ್ ಗಾಗಿ ಮಾಡುವ ದೈಹಿಕ ವ್ಯಾಯಮ ಎಂದು ಯೋಗದ ಬಗ್ಗೆ ವ್ಯಾಪಕ ತಪ್ಪು ಕಲ್ಪನೆಯಿದೆ.

ಯೋಗ ಜೀವನ ರೂಪಿಸುವ ಹಾದಿ ಮತ್ತು ಇದು ಪರಿಣಾಮಕಾರಿಯಾಗಬೇಕೆಂದರೆ ನಿಯಮಿತವಾಗಿ ಅಭ್ಯಾಸ ಮಾಡಬೇಕು. ಮಾಸ್ಟರ್ ಆಫ್ ಯೋಗ ಎಂದರೆ ತನ್ನ ಮೇಲಿನ ನಿಯಂತ್ರಣ ಇದರ ಅರ್ಥ ಜಗತ್ತಿನ ನಿಯಂತ್ರಕ. ಇದು ನಿಮ್ಮ ಯೋಚನೆ, ಜೀವನಶೈಲಿ, ಆಸೆ ಮತ್ತು ದೇಹದ ಮೇಲೆ ನಿಯಂತ್ರಣ ಸಾಧಿಸಲು ನೆರವಾಗುತ್ತದೆ. ಹಸಿವನ್ನು ನಿಯಂತ್ರಿಸಬಹುದು ಮತ್ತು ದೈಹಿಕ ಸಾಮರ್ಥ್ಯದ ಮಿತಿಗೆ ನಿಮ್ಮನ್ನು ತಳ್ಳಬಹುದು. ಉಸಿರಾಟದ ಮೇಲೆ ನಿಯಂತ್ರಣ ಸಾಧಿಸುವುದರಿಂದ ಕೋಪವನ್ನು ಹದ್ದುಬಸ್ತಿನಲ್ಲಿಡಬಹುದು.

ಇಂದಿನ ಜೀವನ ಶೈಲಿಯಲ್ಲಿ ಸಮಯದ ಅಭಾವದ ಮಧ್ಯೆ ಸಂಪೂರ್ಣ ಪ್ರಮಾಣದಲ್ಲಿ ಯೋಗವನ್ನು ಅಭ್ಯಾಸ ಮಾಡುವುದು ತುಂಬಾ ಕಷ್ಟ. ನಿಮ್ಮ ಅಗತ್ಯತೆಗೆ ತಕ್ಕಂತೆ ಯೋಗವನ್ನು ಅಳವಡಿಸಿಕೊಳ್ಳುವುದು ಅದರ ಒಂದು ಒಳ್ಳೆಯ ಗುಣ. ಕೇವಲ ಉಸಿರಾಟದ ಯೋಗ, ಧ್ಯಾನ ಯೋಗ ಅಥವಾ ದೈಹಿಕವಾಗಿ ಫಿಟ್ ಇಡಬಲ್ಲಂತಹ ಕೆಲವು ಆಸನಗಳನ್ನು ಕಲಿತುಕೊಳ್ಳಬಹುದು. ಸಮಯ ಸಿಕ್ಕಾಗ ಮಾಡಿಕೊಳ್ಳಬಹುದಾದ ಕೆಲವು ಆಸನಗಳು ಇವೆ. ದಿನದ ಹೆಚ್ಚಿನ ಸಮಯ ಕುರ್ಚಿ ಮತ್ತು ಕಂಪ್ಯೂಟರ್ ಬಿಟ್ಟು ಏಳದವರಿಗಾಗಿ ಕೆಲವೊಂದು ಆಸನಗಳನ್ನು ನಿಯಮಿತವಾಗಿ ನಿಮ್ಮ ಕಚೇರಿಯಲ್ಲೂ ಮಾಡಬಹುದು.

1. ದೀರ್ಘ ಉಸಿರಾಟ

1. ದೀರ್ಘ ಉಸಿರಾಟ

ಬೆನ್ನು ಮೂಳೆ ನೇರವಾಗಿರುವಂತೆ ಕುರ್ಚಿ ಮೇಲೆ ಕುಳಿತುಕೊಳ್ಳಿ ಮತ್ತು ಎರಡು ಕಾಲುಗಳನ್ನು ನೆಲದಲ್ಲಿ ನೇರವಾಗಿಡಿ. ನಿಮ್ಮ ಹೊಟ್ಟೆ, ಕೆಳ ಶ್ವಾಸಕೋಶ, ಮಧ್ಯ ಶ್ವಾಸಕೋಶಗಳು, ಮೇಲಿನ ಶ್ವಾಸಕೋಶ ಮತ್ತು ಎದೆಯ ತುಂಬುವ ದೀರ್ಘ ಉಸಿರು ತೆಗೆದುಕೊಳ್ಳಿ. ನಿಧಾನವಾಗಿ ನಿಮ್ಮ ಮೇಲಿನ ಶ್ವಾಸಕೋಶ, ಮಧ್ಯ ಶ್ವಾಸಕೋಶಗಳು, ಕೆಳ ಶ್ವಾಸಕೋಶದ ನಂತರ ಹೊಟ್ಟೆ ಯಿಂದ ಗಾಳಿಯನ್ನು ಹೊರಬಿಡಿ. ಹೀಗೆ ಮಾಡುವಾಗ ಗಾಳಿಯ ಹರಿವಿನ ಕಡೆ ಗಮನಕೇಂದ್ರೀಕರಿಸಿ. ಕಣ್ಣು ಮುಚ್ಚಿಕೊಂಡು ಹೀಗೆ ಐದು ಸಲ ಮಾಡಿ.

2. ಕತ್ತು ತಿರುಗಿಸುವುದು.

2. ಕತ್ತು ತಿರುಗಿಸುವುದು.

ಕಣ್ಣನ್ನು ಮುಚ್ಚಿ ಮತ್ತು ನಿಮ್ಮ ಗಲ್ಲ ಎದೆಗೆ ಸವರಿಕೊಂಡು ಇರುವಂತೆ ಇಡಿ. ಕತ್ತನ್ನು ನಿಧಾನವಾಗಿ ಗಡಿಯಾರದ ಮಾದರಿಯಲ್ಲಿ ತಿರುಗಿಸಿ, ಬಳಿಕ ವಿರುದ್ಧ ದಿಕ್ಕಿನಲ್ಲಿ ತಿರುಗಿಸಿ. ದೇಹ ಮತ್ತು ಮನಸ್ಸನ್ನು ಪ್ರಶಾಂತವಾಗಿಟ್ಟು, ಕತ್ತನ್ನು ತಿರುಗಿಸುವಾಗ ನಿಮ್ಮ ಅನುಗುಣವಾದ ಕಿವಿ ಭುಜವನ್ನು ಮುಟ್ಟುವುದನ್ನು ಖಾತ್ರಿಪಡಿಸಿಕೊಳ್ಳಿ.

3. ಪಾದಹಸ್ತಾಸನ

3. ಪಾದಹಸ್ತಾಸನ

ಕಾಲುಗಳು ಒಂದನ್ನೊಂದು ತಾಗುವಂತೆ ನೇರವಾಗಿ ನಿಲ್ಲಿ. ಈಗ ನಿಧಾನವಾಗಿ ಸೊಂಟದ ಕಡೆ ಕೆಳಗೆ ಬಗ್ಗಿ ಕೈಬೆರಳುಗಳಿಂದ ಪಾದವನ್ನು ಮುಟ್ಟಿ. ಈ ಪ್ರಕ್ರಿಯೆಯಲ್ಲಿ ಕೈಗಳನ್ನು ಸಂಪೂರ್ಣವಾಗಿ ಚಾಚಿ. ಈಗ ನಿಧಾನವಾಗಿ ಮೇಲಕ್ಕೆ ಹೋಗಿ ಮೊದಲಿನ ಸ್ಥಿತಿಗೆ ಬನ್ನಿ.

4. ಪಶ್ಚಿಮೊತ್ತನಾಸನ

4. ಪಶ್ಚಿಮೊತ್ತನಾಸನ

ನೆಲದ ಮೇಲೆ ನೇರವಾಗಿ ಕುಳಿತುಕೊಂಡು ಎರಡು ಕಾಲುಗಳನ್ನು ಮುಂದಕ್ಕೆ ಚಾಚಿ. ಕೈ ಮತ್ತು ದೇಹವನ್ನು ಮುಂದಕ್ಕೆ ಚಾಚಿ ಮತ್ತು ಮಂಡಿಗಳನ್ನು ಬಗ್ಗಿಸದೆ ಕಾಲ್ಬೆರಗಳುಗಳನ್ನು ಮುಟ್ಟಿ. ಈ ಆಸನ ನಿಮ್ಮ ಕೈ, ಭುಜ ಮತ್ತು ಬೆನ್ನುಮೂಳೆಗೆ ಒಳ್ಳೆಯ ವ್ಯಾಯಮ ನೀಡುತ್ತದೆ. ಹೊಟ್ಟೆಯಲ್ಲಿರುವ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಿ ನಿಮ್ಮನ್ನು ಆರೋಗ್ಯಕರವಾಗಿ ಮಾಡಿ ರೋಗದಿಂದ ಮುಕ್ತವಾಗಿಸುತ್ತದೆ.

5. ಯೋಧನ ಭಂಗಿ

5. ಯೋಧನ ಭಂಗಿ

ನೇರವಾಗಿ ನಿಂತುಕೊಳ್ಳಿ ಮತ್ತು ಕಾಲುಗಳನ್ನು ಒಂದಕ್ಕೊಂದು ನಾಲ್ಕು ಇಂಚು ದೂರದಲ್ಲಿರಲಿ. ಕೈಗಳನ್ನು ಮೇಲಕ್ಕೆತ್ತಿ ಚಾಚಿ. ಬಲದ ಕಾಲನ್ನು ಬಲಭಾಗದಲ್ಲಿ 90 ಡಿಗ್ರಿಗೆ ತಿರುಗಿಸಿ. ಅದೇ ರೀತಿ ಎಡದ ಕಾಲನ್ನು ಕೂಡ. ಬೆನ್ನು ನೇರವಾಗಿರಲಿ. ಆಕಾಶವನ್ನು ನೋಡುತ್ತಿರುವ ಕೈಗಳತ್ತ ನಿಮ್ಮ ಮುಖವನ್ನು ತಿರುಗಿಸಿ.

6. ಉತ್ತಿಥಾಸ್ತ ಪಾದಾಂಗುಷ್ಠಾಸನ

6. ಉತ್ತಿಥಾಸ್ತ ಪಾದಾಂಗುಷ್ಠಾಸನ

ತದಾಸನ ಭಂಗಿಯಲ್ಲಿ ನೇರವಾಗಿ ನಿಲ್ಲಿ. ಈಗ ನಿಮ್ಮ ಎಡಗಾಲನ್ನು ಮೇಲಕ್ಕೆತ್ತಲು ಪ್ರಯತ್ನಿಸಿ. ಎಡಕೈ ಬೆರಳಿನಿಂದ ಎಡಗಾಲಿನ ಬೆರಳುಗಳನ್ನು ಮುಟ್ಟಲು ಪ್ರಯತ್ನಿಸಿ. ಬಲಗಾಲನ್ನು ಕೂಡ ಇದೇ ರೀತಿ ಮಾಡಿ. ಈ ಆಸನವು ನಿಮ್ಮ ಬೆನ್ನುಮೂಳೆ, ಬೆನ್ನಿನ ಕೆಳಭಾಗ, ಸೊಂಟ, ಕಾಲು ಮತ್ತು ಕೈಗಳಿಗೆ ಒಳ್ಳೆಯ ವ್ಯಾಯಾಮ ನೀಡುತ್ತದೆ. ಈ ಭಾಗದಲ್ಲಿರುವ ಕೊಬ್ಬನ್ನು ಅದು ಕಡಿಮೆ ಮಾಡುತ್ತದೆ.

English summary

Top 6 Yoga Postures To Practise At Work

For people who are confined to their chairs and computers for most part of day, these are some aasana’s that can be regularly practised even at your workplace.
X
Desktop Bottom Promotion