For Quick Alerts
ALLOW NOTIFICATIONS  
For Daily Alerts

ಜಾಗಿಂಗ್ ಮಾಡುವವರಿಗೆ ಮಾತ್ರ ಈ ಬಂಪರ್ ಕೊಡುಗೆ

|

ಜನರು ಆರೋಗ್ಯಯುತವಾಗಿರಲು ಬಹಳಷ್ಟು ವ್ಯಾಯಾಮಗಳಿಗೆ ಮೊರೆ ಹೋಗುತ್ತಿದ್ದಾರೆ. ಅದಕ್ಕಾಗಿ ಹಣ ತೆತ್ತು ವ್ಯಾಯಾಮ,ಯೋಗ, ಏರೋಬಿಕ್ಸ್ ಮುಂತಾದವುಗಳಿಗೆ ಸೇರಬೇಕಾದ ಪರಿಸ್ಥಿತಿ ಬಂದಿದೆ.ಇವುಗಳೊಂದಿಗೆ ಓಟ ಕೂಡ ಉತ್ತಮ ವ್ಯಾಯಾಮ. ಮನಸ್ಸನ್ನು ಉಲ್ಲಾಸದಿಂದ ಇಟ್ಟುಕೊಳ್ಳಲು ,ದೇಹವನ್ನು ಚೈತನ್ಯಗೊಳಿಸಲು ಓಟ ಸಹಕಾರಿ. ಓಟದಿಂದ ಸಾಕಷ್ಟು ಕಾಯಿಲೆಗಳು ಹತ್ತಿರ ಸುಳಿಯದಂತೆ ನೋಡಿಕೊಳ್ಳಬಹುದು. ಬೊಜ್ಜನ್ನು ಕರಗಿಸಬಹುದು.

ವಾರದಲ್ಲಿ 10 ಮೈಲಿ ಓಡುವವರಿಗಿಂತ,ವಾರದಲ್ಲಿ 50 ಮೈಲಿ ಓಡುವವರ ದೇಹದಲ್ಲಿ ಕೊಲೆಸ್ಟ್ರಾಲ್ ಕಡಿಮೆ ಪ್ರಮಾಣದಲ್ಲಿದ್ದು,ದೇಹ ಸಮ ತೂಕವನ್ನು ಕಾಪಾಡುತ್ತದೆ ಜೊತೆಗೆ ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ಬರದಂತೆ ತಡೆಯುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.

ರನ್ನಿಂಗ್ ಒಂದು ಉತ್ತಮ ವ್ಯಾಯಾಮ ಇದರಿಂದ ದೇಹದ ಹೆಚ್ಚುವರಿ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಜೊತೆಗೆ ಫಿಟ್ ಆಗಿ ಆರೋಗ್ಯಯುತವಾಗಿ ಇರಬಹುದು ಎನ್ನಲಾಗಿದೆ. ನೀವು ಪ್ರತಿದಿನದ ಓಟಗಾರರು ಅಥವಾ ಹೊಸದಾಗಿ ಓಡಲು ಪ್ರಾರಂಭಿಸಿದವರು ಯಾರೇ ಇರಲಿ,ಇದರಿಂದ ಆಗುವ 20 ಅನುಕೂಲತೆಗಳನ್ನು ತಿಳಿದುಕೊಂಡರೆ ಓಡಲು ಮತ್ತಷ್ಟು ಹುಮ್ಮಸ್ಸು ಬರುವುದು:

ಓಡುವುದರಿಂದ ಆರೋಗ್ಯಕ್ಕೆ ಆಗುವ ಅನುಕೂಲಗಳು

ತೂಕ ಕಡಿಮೆ ಆಗುವುದು

ತೂಕ ಕಡಿಮೆ ಆಗುವುದು

ಓಡುವುದರಿಂದ ಹೆಚ್ಚುವರಿ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.ಕ್ಯಾಲೋರಿಯನ್ನು ಕಡಿಮೆ ಮಾಡಿಕೊಳ್ಳಲು ರನ್ನಿಂಗ್ ಉತ್ತಮ ವ್ಯಾಯಾಮ. ಆದರೆ ದೇಹಕ್ಕೆ ಹಾನಿ ಆಗುವುದನ್ನು ತಡೆಯಲು ನಿಧಾನವಾಗಿ ಓಡುವುದನ್ನು ಪ್ರಾರಂಭಿಸಿ.

ಮೂಳೆಗಳನ್ನು ಬಲಯುತವಾಗಿಸುತ್ತದೆ

ಮೂಳೆಗಳನ್ನು ಬಲಯುತವಾಗಿಸುತ್ತದೆ

ಪ್ರತಿದಿನ ಓಡುವುದರಿಂದ ನಿಮ್ಮ ಮೂಳೆಗಳು ಮತ್ತು ಸ್ನಾಯುಗಳು ಬಲಯುತವಾಗುತ್ತದೆ. ಇದರಿಂದ ಆಸ್ಟಿಯೊಪೊರೋಸಿಸ್ ಮತ್ತು ಸಂಧಿವಾತ ಮುಂತಾದ ಮೂಳೆ ಸಂಬಂಧಿ ಕಾಯಿಲೆಗಳು ಹತ್ತಿರ ಬರುವುದಿಲ್ಲ.ಓಡುವುದರಿಂದ ನಮ್ಮ ಕಾಲುಗಳು ಮತ್ತು ಸೊಂಟದ ಮೂಳೆಗಳ ಸಾಂದ್ರತೆ ಉತ್ತಮಗೊಳಿಸಿಕೊಳ್ಳಬಹುದು.

ಪ್ರತಿರಕ್ಷಣಾ ಆರೋಗ್ಯ ವರ್ಧಕ

ಪ್ರತಿರಕ್ಷಣಾ ಆರೋಗ್ಯ ವರ್ಧಕ

ನೀವು ಪ್ರತಿದಿನ ಜಾಗಿಂಗ್ ಮಾಡುವವರಾದರೆ ತಂಡಿ,ಕೆಮ್ಮು ಅಲರ್ಜಿ ಇವುಗಳಿಂದ ದೂರವಿರಬಹುದು. ಪ್ರತಿದಿನ ರನ್ನಿಂಗ್ ಮಾಡುವುದರಿಂದ ಅರೋಗ್ಯ ವೃದ್ಧಿಸುತ್ತದೆ ಮತ್ತು ಎಲ್ಲಾ ರೀತಿಯ ಅರೋಗ್ಯ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ.

ಒತ್ತಡ ನಿವಾರಿಸುತ್ತದೆ

ಒತ್ತಡ ನಿವಾರಿಸುತ್ತದೆ

ರನ್ನಿಂಗ್ ಎಂದರೆ ಒತ್ತಡ ತಡೆಯುವ ಇನ್ನೊಂದು ವ್ಯಾಯಾಮ ಎನ್ನಬಹುದು. ಓಡುವುದರಿಂದ ನಿಮ್ಮ ಅರೋಗ್ಯ ವೃದ್ಧಿ ಜೊತೆಗೆ ಒತ್ತಡ ಕಡಿಮೆ ಆಗುತ್ತದೆ.

ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ

ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ

ಓಡುವುದರಿಂದ ರಕ್ತ ಸಂಚಲನ ಸರಿಯಾಗಿ ಆಗುತ್ತದೆ ಮತ್ತು ರಕ್ತದ ಒತ್ತಡವನ್ನು ಸರಿಯಾಗಿ ನಿರ್ವಹಿಸುತ್ತದೆ ಮತ್ತು ಇತರ ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟುತ್ತದೆ.

ಶಕ್ತಿಯನ್ನು ವೃದ್ಧಿಸುತ್ತದೆ

ಶಕ್ತಿಯನ್ನು ವೃದ್ಧಿಸುತ್ತದೆ

ನಿಮಗೆ ಪ್ರತಿದಿನ ಏಳುವಾಗ ಶಕ್ತಿ ಇಲ್ಲ ಎಂದೆನಿಸುತ್ತದೆಯೇ? ಹಾಗಿದ್ದರೆ ರನ್ನಿಂಗ್ ಮಾಡುವುದರಿಂದ ನಿಮ್ಮ ಬಲ ಹೆಚ್ಚುತ್ತದೆ ಮತ್ತು ಹೆಚ್ಚು ಆರೋಗ್ಯಯುತವಾಗಿರಬಹುದು.

ಜೀರ್ಣ ಕ್ರಿಯೆ ಹೆಚ್ಚಿಸುತ್ತದೆ

ಜೀರ್ಣ ಕ್ರಿಯೆ ಹೆಚ್ಚಿಸುತ್ತದೆ

ರನ್ನಿಂಗ್ ಮಾಡುವುದರಿಂದ ಜೀರ್ಣ ಕ್ರಿಯೆ ಹೆಚ್ಚಿ ಹಸಿವು ಕಾಣಿಸಿಕೊಳ್ಳುವಂತೆ ನೋಡಿಕೊಳ್ಳುತ್ತದೆ. ಓಡಿದ ನಂತರ ಕ್ಯಾಲೋರಿ ಕಡಿಮೆ ಆಗುವುದರಿಂದ ಹಸಿವು ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಆರೋಗ್ಯಯುತವಾದ ಆಹಾರ ತಿನ್ನಿ.

ಫ್ಯಾಟ್ ಅನ್ನು ಕಡಿಮೆ ಮಾಡುತ್ತದೆ

ಫ್ಯಾಟ್ ಅನ್ನು ಕಡಿಮೆ ಮಾಡುತ್ತದೆ

ಓಡುವುದರಿಂದ ಹೆಚ್ಚುವರಿ ಫ್ಯಾಟ್ ಅನ್ನು ತಡೆಯಬಹುದು ಮತ್ತು ತೆಳು ದೇಹವನ್ನು ಪಡೆಯಲು ಸಹಾಯಕವಾಗುವುದು. ಇದು ನಿಮ್ಮ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಿ ಅನಗತ್ಯ ಫ್ಯಾಟ್ ಅನ್ನು ತೆಗೆದು ಹಾಕುತ್ತದೆ.

ಮೆದುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ

ಮೆದುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ

ಓಡುವುದರಿಂದ ಇಡೀ ದೇಹದಲ್ಲಿ ರಕ್ತ ಸಂಚಲನ ಸರಿಯಾಗಿ ಆಗುತ್ತದೆ. ನಿಮ್ಮ ದೇಹಕ್ಕೆ ಹೆಚ್ಚು ಆಮ್ಲಜನಕ ಮತ್ತು ಪೋಷಕಾಂಶ ದೊರೆಯುವಂತೆ ಮಾಡುತ್ತದೆ ಇದರಿಂದ ನಿಮ್ಮ ಮಿದುಳಿನ ಅರೋಗ್ಯ ಹೆಚ್ಚುತ್ತದೆ.

ಸರಿಯಾಗಿ ನಿದ್ದೆ ಮಾಡಲು ಸಹಕರಿಸುತ್ತದೆ

ಸರಿಯಾಗಿ ನಿದ್ದೆ ಮಾಡಲು ಸಹಕರಿಸುತ್ತದೆ

ನಿಮಗೆ ನಿದ್ದೆ ಸರಿಯಾಗಿ ಬರದೆ ತೊಂದರೆಯಾಗುತ್ತಿದ್ದರೆ ದಿನದ ಸಮಯದಲ್ಲಿ ಓಡುವುದನ್ನು ರೂಡಿಸಿಕೊಳ್ಳಿ. ಓಡುವುದರಿಂದ ದೇಹಕ್ಕೆ ದಣಿವಾಗುತ್ತದೆ ಇದರಿಂದ ರಾತ್ರಿ ಹೊತ್ತು ಸರಿಯಾಗಿ ನಿದ್ದೆ ಬರುತ್ತದೆ.

ಮಧುಮೇಹ ಬರುವುದನ್ನು ತಡೆಯುತ್ತದೆ

ಮಧುಮೇಹ ಬರುವುದನ್ನು ತಡೆಯುತ್ತದೆ

ಅಧ್ಯಯನದ ಪ್ರಕಾರ ಪ್ರತಿದಿನ ಓಡುವುದರಿಂದ ಟೈಪ್ -2 ಮಧುಮೇಹದ ತೊಂದರೆ ಕಡಿಮೆ ಮಾಡಿಕೊಳ್ಳಬಹುದು.

ಖಿನ್ನತೆಯನ್ನು ತಡೆಯುತ್ತದೆ

ಖಿನ್ನತೆಯನ್ನು ತಡೆಯುತ್ತದೆ

ಪ್ರತಿದಿನ ಓಡುವುದರಿಂದ ಖಿನ್ನತೆ ಮತ್ತು ಆತಂಕಗಳು ಕಡಿಮೆ ಆಗುತ್ತದೆ ಮತ್ತು ನಿಮ್ಮ ಬಗ್ಗೆ ನಿಮಗೆ ಉತ್ತಮ ಅಭಿಪ್ರಾಯ ಬರುವಂತೆ ಮಾಡುತ್ತದೆ.

ತಾರುಣ್ಯ ಹೆಚ್ಚಿಸುತ್ತದೆ

ತಾರುಣ್ಯ ಹೆಚ್ಚಿಸುತ್ತದೆ

ಓಡುವುದರಿಂದ ನೀವು ಹೆಚ್ಚು ತಾರುಣ್ಯ ಹೊಂದಬಹುದು.ಇದು ಆರೋಗ್ಯಯುತ ಹೊಳೆಯುವ ಮೈಕಾಂತಿ ಕೊಡುತ್ತದೆ. ವಯಸ್ಸಾಗುತ್ತಿದ್ದಂತೆ ಬರುವ ಸಾಕಷ್ಟು ಸಮಸ್ಯೆಗಳಿಂದ ದೂರ ಮಾದುತ್ತದೆ ಮತ್ತು ಶಕ್ತಿಯುತ ದೇಹವನ್ನು ನೀಡುತ್ತದೆ.

ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ

ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ

ಓಡುವುದರಿಂದ ದೇಹದ ಕೊಲೆಸ್ಟ್ರಾಲ್ ನಿರ್ವಹಣೆ ಸರಿಯಾಗಿ ಆಗುತ್ತದೆ.ಕೊಲೆಸ್ಟ್ರಾಲ್ ನಿಂದ ಆಗುವ ಸಾಕಷ್ಟು ತೊಂದರೆಗಳನ್ನು ತಡೆಯುತ್ತದೆ.

ಸಂಧಿ ಅರೋಗ್ಯ ಹೆಚ್ಚಿಸುತ್ತದೆ

ಸಂಧಿ ಅರೋಗ್ಯ ಹೆಚ್ಚಿಸುತ್ತದೆ

ಓಡುವುದರಿಂದ ಗಂಟು ಮತ್ತು ಸ್ನಾಯುಗಳ ಅರೋಗ್ಯ ಹೆಚ್ಚುತ್ತದೆ.ಸ್ನಾಯುಗಳ ಬಲ ಹೆಚ್ಚುವುದರಿಂದ ಮೊಣಕಾಲು ಮತ್ತು ಕೈಗಳ ಸಂಧಿ ಸಂಬಂಧಿ ಸಮಸ್ಯೆಗಳು ಸಂಭವಿಸುವುದಿಲ್ಲ.

ಸಮನ್ವಯವನ್ನು ಸುಧಾರಿಸುತ್ತದೆ

ಸಮನ್ವಯವನ್ನು ಸುಧಾರಿಸುತ್ತದೆ

ಪ್ರತಿದಿನದ ಓಟ ಕೈ ಮತ್ತು ಕಣ್ಣಿನ ಸಮನ್ವಯವನ್ನು ಹೆಚ್ಚಿಸುತ್ತದೆ.ದೇಹವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಲು ಇದು ಸಹಕರಿಸುತ್ತದೆ.

ಆರೋಗ್ಯಯುತ ದೇಹವು ನಿಮ್ಮದಾಗುತ್ತದೆ

ಆರೋಗ್ಯಯುತ ದೇಹವು ನಿಮ್ಮದಾಗುತ್ತದೆ

ನೀವು ಫಿಟ್ ಆಗಿ ಇರಬೇಕು ಎಂದು ಬಯಸಿದಲ್ಲಿ ನಿಮಗೆ ಸಮಯ ಸಿಕ್ಕಾಗ ಓಡುವುದನ್ನು ರೂಡಿ ಮಾಡಿಕೊಳ್ಳಿ.ಪ್ರತಿದಿನದ ಓಟ ನೀವು ಆರೋಗ್ಯಯುತವಾಗಿ,ಫಿಟ್ ಆಗಿ ಇರಲು ಸೂಕ್ತ ವ್ಯಾಯಾಮ.

ಮಿತವ್ಯಯದ ಏರೋಬಿಕ್ ವ್ಯಾಯಾಮ

ಮಿತವ್ಯಯದ ಏರೋಬಿಕ್ ವ್ಯಾಯಾಮ

ಪ್ರತಿದಿನ ಓಡುವುದು ಒಂದು ರೀತಿಯ ಏರೋಬಿಕ್ ವ್ಯಾಯಾಮ.ಇದು ನಿಮ್ಮ ಉತ್ಸಾಹವನ್ನು ಹೆಚ್ಚಿಸುತ್ತದೆ. ಆರೋಗ್ಯಯುತವಾಗಿರಲು ಸಹಕರಿಸುತ್ತದೆ.

ನಿಮಗೆ ಒಳ್ಳೆಯ ಅನುಭವವನ್ನು ನೀಡುತ್ತದೆ

ನಿಮಗೆ ಒಳ್ಳೆಯ ಅನುಭವವನ್ನು ನೀಡುತ್ತದೆ

ಪ್ರತಿದಿನ ಓಡುವುದರಿಂದ ನಿಮ್ಮ ಅರೋಗ್ಯ ಸರಿಯಾಗಿ ಇರುವುದರಿಂದ ನಿಮಗೆ ಒಳ್ಳೆಯ ಫೀಲ್ ನೀಡುತ್ತದೆ. ಓಟ ನಿಮ್ಮ ಜೈವಿಕ ಆರೋಗ್ಯ, ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯ ಮತ್ತು ಭಾವನಾತ್ಮಕ ಆರೋಗ್ಯ ವೃದ್ಧಿಸುತ್ತದೆ.

ಹೆಚ್ಚು ಬಲ (ತ್ರಾಣ) ನೀಡುತ್ತದೆ

ಹೆಚ್ಚು ಬಲ (ತ್ರಾಣ) ನೀಡುತ್ತದೆ

ಪ್ರತಿದಿನದ ಓಟ ದೇಹಕ್ಕೆ ಚೈತನ್ಯ ನೀಡುತ್ತದೆ.ಸ್ನಾಯುಗಳ ಬಲವನ್ನು ಹೆಚ್ಚಿಸುತ್ತದೆ. ಆರೋಗ್ಯಯುತವಾಗಿರಲು ಸಹಕರಿಸುತ್ತದೆ.

English summary

Top 20 Health Benefits of Running

Running is one of the simplest forms of exercise as it not only helps you shed the extra kilos, it also helps you get fit and healthy. Whether you are a regular runner or new to the sport, Let's shares 20 of the best health benefits running can offer.
X
Desktop Bottom Promotion