For Quick Alerts
ALLOW NOTIFICATIONS  
For Daily Alerts

ಬೊಜ್ಜು ಕರಗಿಸಲು ಸೂಪರ್ ಟಿಪ್ಸ್

|

‘ಪ್ರೆಸೆಂಟೆಬಿಲಿಟಿ' ಅನ್ನುವ ವಿಷಯ ಇತ್ತೀಚೆಗೆ ಬಹಳ ಮುಖ್ಯವಾಗುತ್ತಾ ಹೋಗುತ್ತಿದೆ. ಯಾರ ಮುಂದೆಯಾದರೂ ಸರಿ ನಾವು ಕಾಣಿಸಿಕೊಂಡಾಗ ಅವರು ನಮ್ಮನ್ನು ಮೊದಲ ನೋಡದಲ್ಲೇ ಜಡ್ಜ್ ಮಾಡುವ ಸಾಧ್ಯತೆಗಳಿವೆ. ಹಾಗಾಗಿ ನಮ್ಮ ಮೈಕಟ್ಟು ನಾವು ತೊಡುವ ಬಟ್ಟೆಗಳು ಮತ್ತು ಅವುಗಳ ಗುಣಮಟ್ಟ ಎಲ್ಲಾ ಮುಖ್ಯವೇ. ಬಟ್ಟೆಗಳ ಆಯ್ಕೆಯಾದರೂ ಸುಲಭ ಆದರೆ ಮೈಕಟ್ಟು. ಅದರಲ್ಲೂ ಫಿಟ್ ಇಲ್ಲಾ ಎಂದಾದರೆ ನಮ್ಮ ಬಗ್ಗೆ ಬರುವ ಭಾವನೆ ಹೇಗಿರುತ್ತದೆ ಎಂದು ಅನುಮಾನ ಪಡುವುದು ಸಾಮಾನ್ಯ. ಇಂದಿನ ಫಾಸ್ಟ್ ಫುಡ್ ಜಗತ್ತಿನಲ್ಲಿ ಹೊರ ಚಾಚಿದ ಹೊಟ್ಟೆ ಸಾಮಾನ್ಯ ಸಮಸ್ಯೆ.

ಹೊರಗಡೆ ಹೋಗುವಾಗ ಗೆಳೆಯರ ಜೊತೆಗೆ ಬೆರೆಯುವಾಗ ದೊಡ್ಡ ಹೊಟ್ಟೆ ಇದ್ದವರು ಮುಜುಗರ ಪಡುವುದು ಸಹಜ. ಕೆಲವರು ಇದನ್ನು ಹೆಚ್ಚು ಮನಸ್ಸಿಗೆ ತೆಗೆದುಕೊಳ್ಳುವುದಿಲ್ಲವಾದರೆ ಇನ್ನೂ ಕೆಲವರು ಇದನ್ನೇ ಬಹಳ ದೊಡ್ಡ ವಿಷಯವನ್ನಾಗಿಸಿ ತಲೆ ಕೆಡಿಸಿಕೊಳ್ಳುತ್ತಾರೆ. ಆದರೆ ಮರುದಿನ ಹೊರಗಡೆ ಹೋಗಿ ಫಾಸ್ಟ್ ಫುಡ್ ಸೆಂಟರ್ ಬಳಿ ನಿಂತರೆ ಮನಸ್ಸು ಕೇಳುವುದಿಲ್ಲ. ಎಲ್ಲರೂ ಚಪ್ಪರಿಸಿ ತಿನ್ನುತ್ತಿರುವಾಗ ತಾನೊಬ್ಬನೇ ಎಲ್ಲರ ಮುಖ ನೋಡುತ್ತಾ ನಿಲ್ಲಲು ಆಗುವುದಿಲ್ಲ. ಎರಡರ ಬದಲಿಗೆ ಒಂದಾದರೂ ಪ್ಲೇಟ್ ತಿನ್ನುವುದು ದಿಟ. ಆದರೆ ಕುಛ್ ಪಾನೇ ಕೇ ಲಿಯೆ ಕುಛ್ ಖೋನಾ ಪಡ್ತಾ ಹೈ ಅನ್ನುವುದನ್ನು ಇಲ್ಲಿ ನೆನಪಿಡಿ. ತಿನ್ನುವ ಆಸೆ ಅಥವಾ ದೊಡ್ಡ ಹೊಟ್ಟೆ ಎಂಬ ತಲೆಬಿಸಿ ಈ ಎರಡರಲ್ಲಿ ಒಂದನ್ನಾದರೂ ಬಿಡಲೇಬೇಕು.

ಹೊಟ್ಟೆ ಕರಗಿಸಲು ಮತ್ತು ದೇಹದ ತೂಕವನ್ನು ಕಡಿಮೆ ಮಾಡಲು ಮೊದಲಿಗೆ ಮಾಡಬೇಕಾಗಿರುವ ಕೆಲಸ ಮನೋನಿಗ್ರಹ! ಅರ್ಥಾರ್ಥ್ ಎಲ್ಲಾ ತಿನ್ನಬೇಕು ಎನ್ನುವ ಆಸೆಗೆ ಕಡಿವಾಣ ಹಾಕಬೇಕು. ಮುಂದಿನ ಕೆಲಸ ನಿಯಮಿತ ವ್ಯಾಯಾಮ. ಎರಡೂ ಕಷ್ಟವೇ ಆದರೆ ಕುಛ್ ಪಾನೇ ಕೇ ಲಿಯೆ.... ನೆನಪಿರಲಿ. ಏನು ಮಾಡಬೇಕು ಎಂದಷ್ಟೇ ಹೇಳಿ ಹೇಗೆ ಮಾಡಬೇಕು ಎನ್ನುವುದನ್ನು ಹೇಳದೆ ಇರಲು ಸಾಧ್ಯವಿಲ್ಲ. ಏನು ಮತ್ತು ಹೇಗೆ ಎರಡಕ್ಕೂ ಇಲ್ಲಿ ಉತ್ತರವಿದೆ.

1.ಸಿಟ್ರಸ್ ಯುಕ್ತ ಹಣ್ಣುಗಳು

1.ಸಿಟ್ರಸ್ ಯುಕ್ತ ಹಣ್ಣುಗಳು

ಹಣ್ಣುಗಳೆಂದರೆ ಎಲ್ಲರಿಗೂ ಸಾಧಾರಣವಾಗಿ ಇಷ್ಟ. ಇವೇ ಹಣ್ಣುಗಳು ನಿಮ್ಮ ಹೊಟ್ಟೆಯನ್ನೂ ಕರಗಿಸಿದರೆ! ಕಿತ್ತಳೆ, ನಿಂಬೆಹಣ್ಣು, ಕಿವಿ, ಟಾಂಜರಿನ್ ಇತ್ಯಾದಿಗಳು ಅತ್ಯುತ್ತಮ ಕೊಬ್ಬು ಕರಗಿಸುವ ಶಕ್ತಿ ಉಳ್ಳ ಹಣ್ಣುಗಳು. ಸಿಟ್ರಸ್ ಹೆಚ್ಚಿರುವ ಈ ಹಣ್ಣುಗಳಲ್ಲಿ ವಿಟಮಿನ್ ಸಿ ಹೇರಳ ಪ್ರಮಾಣ ದಲ್ಲಿ ದೊರೆಯುತ್ತದೆ. ಇದು ಬೇರೆ ಹಣ್ಣುಗಳಿಗೆ ಹೋಲಿಸಿದರೆ ಹೆಚ್ಚು ಬೇಗನೆ ಕೊಬ್ಬನ್ನು ಕರಗಿಸುತ್ತದೆ. ನೀವು ದೇಹದ ತೂಕ ಕಡಿಮೆ ಮಾಡಬೇಕು ಎಂದು ನಿರ್ಧರಿಸಿದ ದಿನದಿಂದ ಇತರೆ ಹಣ್ಣುಗಳಾದ ಸೇಬು, ಕಲ್ಲಂಗಡಿ, ದ್ರಾಕ್ಷಿ ಹಾಗೂ ಸ್ಟ್ರಾಬೆರಿಯ ಜೊತೆಗೆ ಸಿಟ್ರಸ್ ಯುಕ್ತ ಸೇವಿಸಲು ಆರಂಭಿಸಿ. ಪರಿಣಾಮ ನೀವೇ ನೋಡಿ.

2.ತರಕಾರಿಗಳು:

2.ತರಕಾರಿಗಳು:

ಡಾಕ್ಟರ್ ಬಳಿ ಹೋದಾಗ ಅಥವಾ ಸಣ್ಣ ತರಗತಿಗಳಲ್ಲಿ ಹಸಿರು ತರಕಾರಿಗಳು ಎಂಬುದು ನಮ್ಮ ಆರೋಗ್ಯಕ್ಕೆ ಎಷ್ಟು ಉಪಯುಕ್ತ ಎಂದು ನೀವು ಕೇಳಿರಲೇ ಬೇಕು. ಅದು ನಿಜ. ತರಕಾರಿಗಳಲ್ಲಿ ಜೀವಸತ್ವಗಳು ಅತೀ ಹೆಚ್ಚಿನ ಪ್ರಮಾಣದಲ್ಲಿದ್ದು ಕ್ಯಾಲರಿಗಳು ಅತಿ ಕಡಿಮೆ ಪ್ರಮಾಣದಲ್ಲಿರುತ್ತವೆ. ಕ್ಯಾಬೇಜ್, ಕೋಸುಗೆಡ್ಡೆ, ಟೊಮಾಟೋ, ಪಾಲಕ್ ಸೊಪ್ಪು, ಬೀನ್ಸ್ ಮತ್ತು ಹಸಿರು ಬಟಾಣಿ ಎಲ್ಲವೂ ಜೀವ ಸತ್ವದಿಂದ ತುಂಬಿವೆ ಹಾಗೂ ಕೊಬ್ಬಿನ ಅಂಶಗಳು ಸ್ವಲ್ಪವೂ ಇಲ್ಲ. ತರಕಾರಿಗಳನ್ನು ಬೇಯಿಸುವುದು ಸುಲಭ ಆದರೆ ಹೆಚ್ಚು ಎಣ್ಣೆ ಹಾಕಿ ಬಹಳ ಹೊತ್ತು ಬೇಯಿಸಿ ಅದರ ಜೀವಸತ್ವಗಳನ್ನು ಸುಮ್ಮನೆ ವ್ಯರ್ಥ ಮಾಡುವ ಬದಲು ಅವನ್ನು ಚೆನ್ನಾಗಿ ಸುಟ್ಟು ನಂತರ ಬೇಯಿಸುವುದು ಬಹಳ ಉತ್ತಮ.

3.ದಾಲ್ ಗಳು:

3.ದಾಲ್ ಗಳು:

ಕಾಳುಗಳು ಅಥವಾ ಬೇಳೆಗಳು ಆಮಿನೋ ಆಸಿಡ್ ಯುಕ್ತವಾಗಿರುತ್ತವೆ. ಹಾಗೂ ಕಡಿಮೆ ಕ್ಯಾಲರಿಗಳನ್ನು ಹಾಗೂ ಕೊಬ್ಬಿನಂಶಗಳನ್ನು ಹೊಂದಿರುತ್ತವೆ. ಚಿಗುರೊಡೆದ ಧಾನ್ಯಗಳು ಕೂಡ ಆಮಿನೊ ಆಸಿಡ್ ಗಳನ್ನು ಹೊಂದಿದ್ದು ಆರೋಗ್ಯಕ್ಕೆ ಉತ್ತಮವಾಗಿವೆ.

4.ಓಟ್ಸ್ ಉಪಾಹಾರ :

4.ಓಟ್ಸ್ ಉಪಾಹಾರ :

ಓಟ್ಸ್ ನಲ್ಲಿ ಕರಗದ ನಾರು ಪದಾರ್ಥ ಹಾಗೂ ಸ್ವಲ್ಪ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ ಗಳು ಇರುತ್ತವೆ. ಇವು ನಿಮ್ಮ ಹಸಿವನ್ನು ಕಡಿಮೆ ಮಾಡಿ ಹೆಚ್ಚಿನ ಅವಧಿಯ ವರೆಗೆ ಕೆಲಸ ಮಾಡಲು ನೆರವಾಗುತ್ತವೆ.

5. ಬೀಜಯುಕ್ತ ತಿಂಡಿಗಳು:

5. ಬೀಜಯುಕ್ತ ತಿಂಡಿಗಳು:

ಮಿತ ಪ್ರಮಾಣದಲ್ಲಿ ಬಾದಾಮಿ ಅಥವಾ ಕಡಲೆ ಕಾಯಿ ತಿಂದರೆ ಆರೋಗ್ಯಕ್ಕೆ ನೆರವಾಗುತ್ತದೆ. ಇದು ಹೆಚ್ಚಿನ ಕ್ಯಾಲರಿಗಳನ್ನೂ ನಿಮ್ಮ ದೇಹಕ್ಕೆ ಸೇರಿಸುವುದಿಲ್ಲ. ಆದರೆ ಬಾದಾಮಿಯ ಪ್ಯಾಕೆಟ್ಟನ್ನೇ ಎದುರಿಗಿಟ್ಟು ಟಿ.ವಿ ನೋಡುತ್ತಾ ಹೆಚ್ಚು ಸೇವಿಸಿ ಮತ್ತೆ ನಮ್ಮನ್ನು ದೂರಬೇಡಿ!

6.ಮೊಟ್ಟೆ :

6.ಮೊಟ್ಟೆ :

ಮೊಟ್ಟೆಯಲ್ಲಿ ಕಡಿಮೆ ಕ್ಯಾಲರಿ ಹಾಗೂ ಕೊಬ್ಬಿನಂಶವಿದ್ದು ಪ್ರೊಟೀನ್ ನಿಂದ ಸಮೃದ್ಧವಾಗಿದೆ. ಹಾಗಾಗಿ ಹಳೆಯ ಜಾಹೀರಾತಿನ ಮಾತಿನಂತೆ ವಾರದ ಎಲ್ಲಾ ದಿನಗಳಲ್ಲಿ ಒಂದು ಮೊಟ್ಟೆ ಸೇವಿಸಬಹುದು.

7.ಎಣ್ಣೆಯುಕ್ತ ಮೀನು:

7.ಎಣ್ಣೆಯುಕ್ತ ಮೀನು:

ಸಾಲ್ಮನ್, ಬಂಗುಡೆ ಮೀನು ಮತ್ತು ಟ್ಯುನಾ ಮೀನು ಪ್ರೊಟೀನ್ ನಿಂದ ಕೂಡಿದ್ದು ನಮ್ಮ ದೇಹದ ಚಯಾಪಚಯ ಕ್ರಿಯೆಗಳಿಗೆ ಬಹಳ ಸಹಕಾರಿ. ಇದು ಆರೋಗ್ಯಕರ ಒಮೆಗಾ 3 ಆಸಿಡ್ ಗಳನ್ನು ಹೊಂದಿದ್ದು ನಿಮ್ಮ ಹೊಟ್ಟೆ ಕರಗಲು ರಾಮಬಾಣ.

8.ನೀರು ಕುಡಿಯಿರಿ:

8.ನೀರು ಕುಡಿಯಿರಿ:

ನೀರು ನಮ್ಮ ಜೀರ್ಣಕ್ರಿಯೆಗೆ ಬಹಳ ಸಹಕಾರಿ. ಇದು ಕೊಬ್ಬಿನಂಶ ಕರಗಿಸುವಲ್ಲಿ ಬಹಳ ಮಹತ್ವದ ಪಾತ್ರ ವಹಿಸಲಿದೆ. ಹಾಗಾಗಿ ಸಾಧ್ಯವಾದಷ್ಟು ನೀರು ಕುಡಿಯಿರಿ.

ವ್ಯಾಯಾಮ 1

ವ್ಯಾಯಾಮ 1

ಹೆಚ್ಚಿನ ಬೊಜ್ಜು ಕಾಣಿಸಿಕೊಳ್ಳುವುದು ನಮ್ಮ ಸೊಂಟ ಮತ್ತು ತೊಡೆಯ ಭಾಗದಲ್ಲಿ. ಕಾಲುಗಳನ್ನು ಎತ್ತಿ ತಿರುಗಾಡಿಸುವುದು ನಿಮ್ಮ ತೊಡೆ ಮತ್ತು ಸೊಂಟದ ಭಾಗದ ಬೊಜ್ಜನ್ನು ಕರಗಿಸಲು ಸೂಕ್ತವಾದ ವ್ಯಾಯಾಮ. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ. ನೆಲದ ಮೇಲೆ ಮಲಗಿ ಬೆನ್ನಿನ ಹಿಂದೆ ನಿಮ್ಮ ಕೈಗಳನ್ನು ಜೋಡಿಸಿಡಿ. ಹೀಗೆ ಮಾಡುವಾಗ ನಿಮ್ಮ ಕೈ ನೆಲಮುಖವಾಗಿರಲಿ. ನಿಮ್ಮ ಎರಡೂ ಕಾಲುಗಳನ್ನು ನೆಲದ ಮಟ್ಟದಿಂದ ಸುಮಾರು 45 ಡಿಗ್ರಿ ಆಗುವ ಹಾಗೆ ಎತ್ತಿ. ಹಾಗೆಯೇ ಮೊದಲು ಪ್ರದಕ್ಷಿಣಾಕಾರವಾಗಿ ಹತ್ತು ಬಾರಿ ನಂತರ ಹಾಗೆಯೇ ಅಪ್ರದಕ್ಷಿಣಾಕಾರವಾಗಿ ಹತ್ತು ಸಲ ತಿರುಗಾಡಿಸಿ.

ಆದರೆ ನೆನಪಿರಲಿ ಮೊದಲ ದಿನವೇ ಎಲ್ಲಾ ಹತ್ತು ಸುತ್ತುಗಳನ್ನು ಮಾಡಲು ಹೋಗಿ ಎರಡನೆಯೆ ದಿನಕ್ಕೆ ಉತ್ಸಾಹವೇ ಇಲ್ಲದಂತೆ ಮಾಡಿಕೊಳ್ಳಬೇಡಿ! ಮೊದಲ ದಿನ ಎರಡು ಸುತ್ತುಗಳಿಂದ ಆರಂಭಿಸಿ. ಜೊತೆಗೆ ಮೊದ ಮೊದಲು ನಿಮ್ಮ ಕಾಲುಗಳನ್ನು ಸ್ವಲ ಬಗ್ಗಿಸಿಯೂ ಈ ವ್ಯಾಯಾಮ ಮಾಡಬಹುದು. ಹೀಗೆ ಅಭ್ಯಾಸ ಆದ ನಂತರ ಐದು ಅಥವಾ ಆರು ಆವರ್ತಗಳನ್ನು ಮಾಡಿ. ಹೀಗೆ ಮಾಡಿದಾಗ ನಿಮ್ಮ ಹೊಟ್ಟೆಯ ಭಾಗದ ಸ್ನಾಯುಗಳಲ್ಲಿ ಮತ್ತು ನಿಮ್ಮ ತೊಡೆಯ ಭಾಗದಲ್ಲಿ ಆಗುವ ಹಿತವಾದ ನೋವೇ ಇದರ ಪ್ರಭಾವವನ್ನು ತಿಳಿಸುತ್ತದೆ.

ವ್ಯಾಯಾಮ 2 :

ವ್ಯಾಯಾಮ 2 :

ಮೊದಲನೆಯ ವ್ಯಾಯಾಮದಲ್ಲಿ ಹೇಳಿರುವ ಹಾಗೆಯೇ ಇಲ್ಲಿ ಕೂಡ ನಿಮ್ಮ ಕಾಲುಗಳನ್ನು ಮೇಲಕ್ಕೆತ್ತಿ ಹೀಗೆಯೇ ಕಾಲುಗಳನ್ನು ಮೇಲೆ ಕೆಳಗೆ ಮಾಡಿ. ಇದೇ ರೀತಿ ಐದು ಅಥವಾ ಆರು ಬಾರಿ ಮಾಡಿ. ಇಲ್ಲೂ ಹಾಗೆಯೇ ಮೊದಲ ದಿನವೇ ದೇಹವನ್ನು ಹೆಚ್ಚು ದಣಿಸಬೇಡಿ. ಮೊದಲು ಒಂದು ಕಾಲಿನಿಂದ ಆರಂಭಿಸಿ. ಮೊದಲ ದಿನ ನೋವಾಗುವುದು ಸಹಜ ಆದರೆ ಮೊದಲ ದಿನವೇ ನಿಲ್ಲಿಸಿ ಬಿಡಬೇಡಿ. ಎರಡನೆಯ ದಿನದಿಂದ ಸುಲಭವಾಗುತ್ತದೆ.

ವ್ಯಾಯಾಮ 3:

ವ್ಯಾಯಾಮ 3:

ಕ್ರಂಚಸ್ ವ್ಯಾಯಾಮ ಹೊಟ್ಟೆ ಕರಗಿಸಲು ಇರುವ ಇನ್ನೊಂದು ಬಹಳ ಉಪಯುಕ್ತ ವ್ಯಾಯಾಮ. ಆದರೆ ಇದನ್ನು ಮಾಡುವಾಗ ಸರಿಯಾದ ವಿಧಾನವನ್ನೇ ಪಾಲಿಸಲು ಮರೆಯದಿರಿ.

ಮಹಿಳೆಯರು ಮನೆಯಲ್ಲೇ ಮಾಡಬಹುದಾದ ಹೊಟ್ಟೆ ಕರಗಿಸುವ ವ್ಯಾಯಾಮಗಳು

1.ನೆಲಸ ಮೇಲೆ ಒಂದು ಮ್ಯಾಟ್ ಅನ್ನು ಹಾಸಿ ಅದರ ಮೇಲೆ ಅಂಗಾತ ಮಲಗಿ ಮೊಣಕಾಲನ್ನು ಬಗ್ಗಿಸಿ ಕಾಲು ನೆಲಕ್ಕೆ ತಾಗಿರಲಿ.

ಹೀಗೆ ಮಾಡಿದ ನಂತರ ಕಾಲುಗಳನ್ನು 90 ಡಿಗ್ರಿಯ ಎತ್ತರಕ್ಕೆ ಎತ್ತಿ. (ಚಿತ್ರದಲ್ಲಿ ನೋಡಿ)

2. ಈಗ ನಿಮ್ಮ ಕೈಗಳನ್ನು ತಲೆಯ ಹಿಂಭಾಗದಲ್ಲಿಡಿ ಅಥವಾ ಎದೆಯ ಮೇಲ್ಭಾಗದಲ್ಲಿ ಅಡ್ಡವಾಗಿಯೂ ಇಡಬಹುದು. ನಿಮಗೆ ಯಾವುದು ಸುಲಭವೋ ಅದನ್ನೇ ಮಾಡಿ.

3.ಉಸಿರನ್ನು ಒಳಗೆ ತೆಗೆದುಕೊಳ್ಳಿ ಮತ್ತು ಹೀಗೆ ಮಾಡುವಾಗ ನಿಮ್ಮ ಶಿರವನ್ನು ಮೇಲಕ್ಕೆತ್ತಿ. ಹಾಗೂ ಉಸಿರನ್ನು ಹೊರಬಿಡಿ.

4. ಆಂರಭದಲ್ಲಿ ಇದನ್ನು ಹತ್ತು ಬಾರಿ ಮಾಡಿ ಮತ್ತು ಎರಡು ಮೂರು ಆವರ್ತಗಳಲ್ಲಿ ಮಾಡಿ. ದಿನ ಕಳೆದಂತೆ ಮತ್ತು ಸಾಮರ್ಥ್ಯ ಹೆಚ್ಚಾದಂತೆ ಹೆಚ್ಚು ಬಾರಿ ಮಾಡಿ.

ತಲೆಯನ್ನು ಮೇಲಕ್ಕೆತ್ತಿದಂತೆ 30-40 ಡಿಗ್ರಿ ಕೋನದಲ್ಲಿ ನೆಲದಿಂದ ಮೇಲಕ್ಕೆ ದೇಹವನ್ನು ಎತ್ತಿ. ಹೀಗೆ ಮಾಡಿದಾಗ ನಿಮ್ಮ ಹೊಟ್ಟೆಯ ಭಾಗದ ಸ್ನಾಯುಗಳ ಮೇಲೆ ಬೀಳುವ ಒತ್ತಡವನ್ನು ನೀವು ಅನುಭವಿಸುತ್ತೀರಿ.

ವ್ಯಾಯಾಮ 4

ವ್ಯಾಯಾಮ 4

ಮಹಿಳೆಯರಿಗೆ ಹೊಟ್ಟೆ ಸಣ್ಣದಾಗಿಸಲು ಮನೆಯಲ್ಲೇ ಮಾಡಬಹುದಾದ ವ್ಯಾಯಾಮ

1.ನೆಲದ ಮೇಲೆ ಅಂಗಾತ ಮಲಗಿ ಕೈಗಳನ್ನು ಆಯಾ ಭಾಗದಲ್ಲಿ ನೆಲದ ಮೇಲೆ ಅಥವಾ ಕ್ರಂಚಸ್ ವ್ಯಾಯಾಮದಲ್ಲಿ ಇಟ್ಟ ಹಾಗೆ ಇಡಿ.

2.ಈಗ ಎರಡೂ ಕಾಲುಗಳನ್ನು ಮೊಣಕಾಲಿನಲ್ಲಿ ಬಗ್ಗಿಸಿ ಮೇಲಕೆತ್ತಿ.

3.ಬಲ ಕಾಲನ್ನು ನಿಮ್ಮ ಎದೆಯ ಸಮೀಪ ತನ್ನಿ ಹಾಗೂ ಎಡ ಕಾಲು ಹಾಗೆಯೇ ಮೇಲ್ಭಾಗದಲ್ಲಿ ಇರಲಿ.

4.ಈಗ ಇದನ್ನೇ ಎಡ ಕಾಲಿನೊಂದಿಗೆ ಪುನರಾವರ್ತಿಸಿ. ಎಡ ಕಾಲನ್ನು ಎದೆಯ ಸಮೀಪ ತನ್ನಿ ಹಾಗೂ ಬಲಕಾಲನ್ನು ಮೇಲಕ್ಕೆತ್ತಿ.

ಇವೆಲ್ಲವೂ ನಿಮ್ಮ ಹೊಟ್ಟೆಯನ್ನು ಕರಗಿಸಿ ನಿಮ್ಮನ್ನು ಸ್ಲಿಮ್ ಮತ್ತು ಫಿಟ್ ಮಾಡುವ ಕೆಲವು ವ್ಯಾಯಾಮಗಳು. ಒಂದು ಬಾರಿ ಮಾಡಿ ಪರಿಣಾಮ ಸಿಕ್ಕ ಮೇಲೆ ಹಾಗೆಯೇ ಬಿಟ್ಟು ಬಿಡಬೇಡಿ. ಸ್ವಲ್ಪ ಕಡಿಮೆ ಅವಧಿಗೆ ಮಾಡಿದರೂ ಸರಿ ಪ್ರತಿನಿತ್ಯ ಮಾಡುವ ಅಭ್ಯಾಸ ಇಟ್ಟುಕೊಳ್ಳಿ. ದೊಡ್ಡ ಹೊಟ್ಟೆಯ ಚಿಂತೆಯಿಂದ ದೂರವಿರಿ.

English summary

How To Flatten Out Your Belly At Home?

If you want to flatten your belly your belly out, then you must watch what you eat. It must be tempting to eat fast foods and but it is not easy to get rid of fat accumulation in your middle section. It’s all about what you love more…the food or the flat belly.
Story first published: Tuesday, September 17, 2013, 10:48 [IST]
X
Desktop Bottom Promotion