For Quick Alerts
ALLOW NOTIFICATIONS  
For Daily Alerts

ದೇಹದ ಉಷ್ಣತೆ ಹೆಚ್ಚಿಸುವ ತರಕಾರಿಗಳು

By Hemanth P
|

ನಮ್ಮ ದೇಹಕ್ಕೆ ಬೇಕಾಗಿರುವ ವಿಟಮಿನ್, ಖನಿಜಾಂಶ ಮತ್ತು ಅತ್ಯಗತ್ಯ ಪೋಷಕಾಂಶಗಳು ತರಕಾರಿಗಳಲ್ಲಿದೆ. ಇವು ಪ್ರತಿಯೊಬ್ಬರಿಗೆ ಬೇಕಾಗಿರುವ ಬ್ಯಾಂಕ್ ಡಿಪಾಸಿಟ್ ಇದ್ದಂತೆ. ಆದರೆ ಕೆಲವೊಂದು ತರಕಾರಿಗಳು ನಮ್ಮ ದೇಹದ ಉಷ್ಣತೆ ಹೆಚ್ಚು ಮಾಡುವಂತಹ ಗುಣ ಮತ್ತು ನೈಸರ್ಗಿಕ ಸಾಮರ್ಥ್ಯ ಹೊಂದಿದೆ.

ಕಾಬ್ರೋಹೈಡ್ರೆಡ್ ಮತ್ತು ಪ್ರೋಟೀನ್ ಗಳು ಅತ್ಯಧಿಕವಾಗಿರುವ ಕೆಲವೊಂದು ತರಕಾರಿಗಳು ದೇಹದ ಉಷ್ಣತೆ ಹೆಚ್ಚಿಸುತ್ತದೆ. ಕೊಬ್ಬು ಇಳಿಸಿ ಮಾಡಿ ದೇಹದ ತೂಕ ಕಡಿಮೆ ಮಾಡಲು ಬಯಸುವವರಿಗೆ ಇದು ಅತ್ಯಂತ ಉಪಯುಕ್ತ ತರಕಾರಿಗಳು. ಆದರೆ ಇದು ಒಂದು ಹಂತದವರೆಗೆ ಮಾತ್ರ ಒಳ್ಳೆಯದು. ಬೇಸಿಗೆ ಕಾಲದಲ್ಲಿ ಹೊರಗಿನ ಹವಾಮಾನವು ಹೆಚ್ಚಿನ ಉಷ್ಣತೆಯಿಂದ ಕೂಡಿರುವ ಕಾರಣ ಇಂತಹ ತರಕಾರಿಗಳನ್ನು ತಿಂದರೆ ದೇಹವನ್ನು ತಂಪಾಗಿಸುವು ಕಷ್ಟವಾಗಬಹುದು. ಇಂತಹ ದಿನಗಳಲ್ಲಿ ನೀವು ದೇಹದ ಉಷ್ಣಾಂಶ ಹೆಚ್ಚಿಸುವ ತರಕಾರಿಗಳನ್ನು ತಿನ್ನಬಾರದು.

ದೇಹದ ಉಷ್ಣಾಂಶ ಹೆಚ್ಚುವುದು ಕೆಲವರಿಗೆ ಎಲ್ಲಾ ಋತುವಿನಲ್ಲಿ ಕಂಡು ಬರುವಂತಹ ಸಾಮಾನ್ಯ ಸಮಸ್ಯೆ. ಹಾರ್ಮೋನಿನ ಅಸಮತೋಲನ, ಮೊಡವೆ ಮತ್ತು ತ್ವಚೆಯ ಇತರ ಸಮಸ್ಯೆಗಳು, ಪೈಲ್ಸ್ ಹಾಗೂ ಇತರ ಜೀರ್ಣ ಕ್ರಿಯೆ ಸಮಸ್ಯೆಯನ್ನು ಉಂಟು ಮಾಡಬಹುದು. ಇಂತವರು ದೇಹದ ಉಷ್ಣಾಂಶವನ್ನು ಹೆಚ್ಚು ಮಾಡುವ ತರಕಾರಿಗಳನ್ನು ತಿನ್ನಲೇಬಾರದು. ದೇಹದ ಉಷ್ಣಾಂಶ ಹೆಚ್ಚಿಸುವಂತಹ ಕೆಲವೊಂದು ತರಕಾರಿಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

1. ಶುಂಠಿ

1. ಶುಂಠಿ

ಶುಂಠಿ ಒಂದು ಮಸಾಲೆಯುಕ್ತ, ಒಳ್ಳೆಯ ಸುವಾಸನೆ ಹೊಂದಿದೆ. ಇದು ನಮ್ಮ ದೇಹದ ಉಷ್ಣಾಂಶ ಹೆಚ್ಚಿಸುವ ನೈಸರ್ಗಿಕ ಗುಣ ಹೊಂದಿದೆ. ಇದರಲ್ಲಿರುವ ಮಸಾಲೆಯಾಂಶಗಳಿಂದ ಹೀಗಾಗುತ್ತದೆ. ಇದು ದೇಹದ ಉಷ್ಣಾಂಶ ಹೆಚ್ಚಿಸುವ ಕಾರಣ ಇದನ್ನು ಕಡೆಗಣಿಸಬೇಕು. ಆದರೆ ಸ್ವಲ್ಪ ಪ್ರಮಾಣದ ಶುಂಠಿ ದೇಹಕ್ಕೆ ಒಳ್ಳೆಯದು ಮತ್ತು ಯಾವುದೇ ಸಮಸ್ಯೆ ಉಂಟು ಮಾಡದು. ನಿಯಮಿತವಾಗಿ ಹೆಚ್ಚಿನ ಪ್ರಮಾಣದಲ್ಲಿ ಶುಂಠಿ ಸೇವನೆಯಿಂದ ನಿಮ್ಮ ದೇಹದ ಆರೋಗ್ಯದ ಮೇಲೆ ಪರಿಣಾಮ ಉಂಟಾಗಬಹುದು.

2. ಖಾರ ಮೆಣಸು

2. ಖಾರ ಮೆಣಸು

ಮೆಣಸಿನಕಾಯಿ ಮತ್ತು ಕ್ಯಾಪ್ಸಿಕಂ ಮೆಣಸಿನ ಕುಟುಂಬಕ್ಕೆ ಸೇರಿದ ದೇಹದ ಉಷ್ಣಾಂಶವನ್ನು ಹೆಚ್ಚಿಸುವಂತಹ ಕೆಲವೊಂದು ತರಕಾರಿಗಳು. ಮೆಣಸಿನ ಕುಟುಂಬವು ದೇಹದ ರಕ್ತಪರಿಚಲನಾ ವ್ಯವಸ್ಥೆಯನ್ನು ಪ್ರಚೋದಿಸುತ್ತದೆ ಮತ್ತು ಇದರಿಂದ ದೇಹದ ಉಷ್ಣತೆ ಹೆಚ್ಚುತ್ತದೆ. ಕೆಲವೊಂದು ಮೆಣಸುಗಳು ನಿಮ್ಮ ಬಾಯಿಯ ಚರ್ಮ ಸುಡುವ ಗುಣ ಹೊಂದಿರುವ ಕಾರಣ ಇದನ್ನು ತುಂಬಾ ಜಾಗೃತೆಯಿಂದ ಬಳಸಬೇಕು.

3. ಕ್ಯಾರೆಟ್

3. ಕ್ಯಾರೆಟ್

ಕಿತ್ತಳೆ ಬಣ್ಣದ `ಬಗ್ಸ್ ಬನ್ನಿ' ಆಹಾರದಲ್ಲಿ ಹೆಚ್ಚಿನ ಉಷ್ಣ ಅಡಗಿದೆ ಮತ್ತು ಇದು ದೇಹದ ಉಷ್ಣಾಂಶವನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ಕೆಲವೊಂದು ಅಂಶಗಳು ದೇಹದಲ್ಲಿನ ರಕ್ತಪರಿಚಲನಾ ವ್ಯವಸ್ಥೆಯನ್ನು ಪ್ರಚೋದಿಸುವಂತೆ ಮಾಡುತ್ತದೆ. ಈ ಕಾರಣದಿಂದ ದೇಹದ ಉಷ್ಣತೆ ಹೆಚ್ಚುತ್ತದೆ. ಕ್ಯಾರೆಟ್ ದೇಹದ ಉಷ್ಣತೆ ಹೆಚ್ಚಿಸುವ ಮತ್ತೊಂದು ತರಕಾರಿ.

4. ಈರುಳ್ಳಿ

4. ಈರುಳ್ಳಿ

ಪ್ರತಿಯೊಂದು ಆಹಾರದಲ್ಲಿ ಈರುಳ್ಳಿ ಸೇರಿಸಿದರೆ ಅದರ ರುಚಿಯೇ ಬೇರೆಯಿರುತ್ತದೆ ಮತ್ತು ಇದು ಅಡುಗೆಯಲ್ಲಿ ಉಪಯೋಗಿಸುವ ಅತ್ಯಂತ ಪ್ರಮುಖ ತರಕಾರಿ. ಆದರೆ ಈರುಳ್ಳಿ ದೇಹದ ಉಷ್ಣತೆ ಹೆಚ್ಚಿಸಿ ಹಾರ್ಮೋನಿನ ಅಸಮತೋಲನಕ್ಕೆ ಕಾರಣವಾಗಬಹುದು. ನಿಮ್ಮ ಕಂಕುಳಲ್ಲಿ ಒಂದು ಈರುಳ್ಳಿಯನ್ನು ಗಟ್ಟಿಯಾಗಿ ಹಿಡಿದುಕೊಂಡರೂ ಅದು ನಿಮ್ಮ ದೇಹದ ಉಷ್ಣತೆ ಹೆಚ್ಚಿಸಬಲ್ಲದು. ಆಗ ನಿಮಗೆ ಜ್ವರ ಬಂದ ಭಾವನೆಯಾಗಬಹುದು. ನಿಮ್ಮದು ಉಷ್ಣ ದೇಹವಾಗಿದ್ದರೆ ಈರುಳ್ಳಿಯನ್ನು ತಿನ್ನದಿರುವುದು ತುಂಬಾ ಒಳ್ಳೆಯದು.

5. ಎಲೆ ತರಕಾರಿಗಳು

5. ಎಲೆ ತರಕಾರಿಗಳು

ಲೆಟಿಸ್, ಪಾಲಕ ಮತ್ತು ಇತರ ತರಕಾರಿಗಳು ತುಂಬಾ ಆರೋಗ್ಯಕಾರಿ ಹಾಗೂ ನಮ್ಮ ದೇಹಕ್ಕೂ ಒಳ್ಳೆಯದು. ಇದರಲ್ಲಿ ಉತ್ಕರ್ಷನ ನಿರೋಧಕಗಳು ರೋಗಗಳನ್ನು ತಡೆಗಟ್ಟುತ್ತದೆ. ಆದರೆ ಈ ಹಸಿರು ಎಲೆಗಳು ಪ್ರೋಟೀನ್ ನಿಂದ ಸಮೃದ್ಧವಾಗಿದೆ. ಇದರಿಂದ ನಾವು ಇದನ್ನು ತಿಂದಾಗ ಪ್ರೋಟೀನ್ ವಿಭಜನೆಗೊಂದು ಹೆಚ್ಚಿನ ಉಷ್ಣತೆ ಉಂಟಾಗುತ್ತದೆ. ಇದರಿಂದ ದೇಹದ ಉಷ್ಣತೆ ಏರುತ್ತದೆ. ನಿಮ್ಮ ದೇಹವು ಉಷ್ಣತೆಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ ನೀವು ಇಂತಹ ಹಸಿರು ಎಲೆ ತರಕಾರಿಗಳನ್ನು ಕಡೆಗಣಿಸಿ.

ದೇಹದ ಉಷ್ಣತೆ ಹೆಚ್ಚಿಸುತ್ತದೆ

ದೇಹದ ಉಷ್ಣತೆ ಹೆಚ್ಚಿಸುತ್ತದೆ

ಮೇಲಿನ ತರಕಾರಿಗಳು ದೇಹದ ಉಷ್ಣತೆ ಹೆಚ್ಚಿಸುತ್ತದೆ. ಆದರೆ ಇದನ್ನು ಒಂದು ನಿಯಂತ್ರಿತ ವಿಧಾನದಲ್ಲಿ ತಿಂದರೆ ಹಲವಾರು ಲಾಭಗಳಿವೆ ಮತ್ತು ಯಾವುದೇ ಹಾನಿಯಾಗದು. ಇದರಿಂದ ಸಂಪೂರ್ಣವಾಗಿ ಈ ತರಕಾರಿಗಳನ್ನು ಕಡೆಗಣಿಸಬೇಡಿ. ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳಿವೆ.

English summary

Heat Generating Vegetables To Avoid

Vegetables are a natural source of vitamins, minerals and every essential nutrient required by us. They are a bank deposit of good things one want. But, there are a few vegetables that have the quality and natural capability in them to increase body heat and temperature.
Story first published: Saturday, December 7, 2013, 12:54 [IST]
X
Desktop Bottom Promotion