For Quick Alerts
ALLOW NOTIFICATIONS  
For Daily Alerts

ಡಯಟ್ ಗೆ ಭಂಗ ತರುವುದಿಲ್ಲ ಈ ಕುರುಕಲು ತಿಂಡಿ

|
4 Healthy And Tasty Junk Foods
ದೇಹದ ತೂಕವನ್ನು ಸಮತೋಲನದಲ್ಲಿ ಇಡಲು ಡಯಟ್ ಅಗತ್ಯ. ಸೌಂದರ್ಯದ ಬಗ್ಗೆ ಹೆಚ್ಚಿನ ಪ್ರಜ್ಞೆ ಇರುವವರು ಕಟ್ಟುನಿಟ್ಟಿನ ಡಯಟ್ ಮಾಡುತ್ತಾರೆ. ಆದರೆ ಕೆಲವೊಮ್ಮೆ ಕುರುಕಲು ತಿಂಡಿಗಳನ್ನು ನೋಡಿದಾಗ ತಿನ್ನಬೇಕೆಂದು ಆಸೆಯಾಗುತ್ತದೆ. ಒಂದು ಕಡೆ ತಿಂದರೆ ದಪ್ಪಗಾಗುತ್ತೇವೆ ಎಂಬ ಭಯ. ಆದರೆ ಕೆಲವೊಂದು ಕುರುಕಲು ತಿಂಡಿಗಳಿವೆ ಅವುಗಳನ್ನು ತಿಂದರೆ ಬೊಜ್ಜು ಬರುವುದಿಲ್ಲ, ಬಾಯ ಚಪಲ ಕೂಡ ತೀರಿಸಬಹುದು. ಅವುಗಳ ಬಗ್ಗೆ ತಿಳಿಯಲು ಮುಂದೆ ಓದಿ.

ಬೇಯಿಸಿದ ಆಲೂಗೆಡ್ಡೆ: ಬೇಯಿಸಿದ ಆಲೂಗೆಡ್ಡೆಗೆ ಏಲಕ್ಕಿ ಪುಡಿ ಮತ್ತು ಕರಿಮೆಣಸಿನ ಪುಡಿ ಹಾಕಿ ಅದನ್ನು ಬೇಯಿಸಿದ ತರಕಾರಿ ಅಂದರೆ ಎಲೆಕೋಸು ಅಥವಾ ಬ್ರೊಕೋಲಿ ಜೊತೆ ಸೇರಿಸಿ ತಿನ್ನಬಹುದು. ಆಲೀವ್ ಎಣ್ಣೆಯಲ್ಲಿ ಹುರಿದ ಆಲೂಗೆಡ್ಡೆಯನ್ನು ಕೂಡ ಸೇವಿಸಬಹುದು. ಸಕ್ಕರೆ ಮತ್ತು ಉಪ್ಪನ್ನು ಕಡಿಮೆ ಪ್ರಮಾಣದಲ್ಲಿ ಬಳಸುವುದು ಒಳ್ಳೆಯದು.

ಕಡಿಮೆ ಕೊಬ್ಬಿನ ಕುಕ್ಕೀಸ್: ಈ ರೀತಿಯ ತಿಂಡಿಗಳನ್ನು ಜಾಮ್, ಚೀಸ್ ಜೊತೆ ಸೇವಿಸಬಹುದು. ಸಕ್ಕರೆ ರಹಿತ ಕುಕ್ಕೀಸ್ ಬಳಸುವುದರಿಂದ ದಪ್ಪಗಾಗುವುದಿಲ್ಲ.

ತಿಂಡಿಗಳು: ಹಪ್ಪಳ ಅಥವಾ ಸೇವ್, ದವಸ ಧಾನ್ಯಗಳ ಮಿಕ್ಸರ್ (ನಮ್ ಕೀನ್) ಸೇವಿಸಬಹುದು. ಮೊಸರನ್ನು ಮಿಕ್ಸರ್ ಜೊತೆ ಸೇರಿಸಿ ಅದಕ್ಕೆ ಕರಿಮೆಣಸಿನ ಪುಡಿ ಸ್ವಲ್ಪ ಉಪ್ಪು ಮತ್ತು ನಿಂಬೆರಸ ಜೊತೆ ಸೇರಿಸಿ ತಿನ್ನಲು ರುಚಿಕರವಾಗಿರುತ್ತದೆ. ಹುರಿದ ಹಪ್ಪಳ ಜೊತೆ ಕತ್ತರಿಸಿದ ಈರುಳ್ಳಿ, ಟೊಮೊಟೊ, ಹಸಿಮೆಣಸನ್ನು ಚಿಕ್ಕದಾಗಿ ಕತ್ತರಿಸಿ ಅದಕ್ಕೆ ನಿಂಬೆರಸ ಹಾಕಿ ಅದನ್ನು ಹಪ್ಪಳ ಜೊತೆ ಸೇರಿಸಿ ತಿಂದರೆ ರುಚಿಯ ಜೊತೆ ಆರೋಗ್ಯಕ್ಕೂ ಒಳ್ಳೆಯದು.

ನಟ್ಸ್: ನಟ್ಸ್ ತುಂಬಾ ಅರೋಗ್ಯಕರವಾದ ಕುರುಕಲು ತಿಂಡಿಯಾಗಿದೆ. ಬಾದಾಮಿ, ಗೋಡಂಬಿಗಳನ್ನು , ಒಣದ್ರಾಕ್ಷಿ ಇವುಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಅಲ್ಲದೆ ದೇಹದ ತೂಕವನ್ನು ಕೂಡ ಸಮತೋಲನದಲ್ಲಿ ಇಡಬಹುದಾಗಿದೆ

English summary

4 Healthy And Tasty Junk Foods | Tips For Diet | ಆರೋಗ್ಯಕರವಾದ 4 ಕುರುಕಲು ತಿಂಡಿಗಳು | ಡಯಟ್ ಗಾಗಿ ಕೆಲ ಸಲಹೆಗಳು

Junk food is unhealthy and is well known for adding weight. Did you know, there are healthy junk foods too which don't add weight. Take a look at the healthy junk food.
X
Desktop Bottom Promotion