For Quick Alerts
ALLOW NOTIFICATIONS  
For Daily Alerts

ರೋಗನಿರೋಧಕ ಶಕ್ತಿ ಹೆಚ್ಚಿಸುವ ಸಿಟ್ರಸ್ ಹಣ್ಣು

By Prasad
|
Citrus fruits
ಧೂಮಪಾನಿಗಳಿಗೆ ಸಿ-ವಿಟಮಿನ್ ಹೇರಳವಾಗಿರುವ ಹಣ್ಣುಗಳು ದಿವ್ಯಔಷಧ ಇದ್ದ ಹಾಗೆ. ನೀವು ಸಿಟ್ರಸ್ ವಿಟಮಿನ್ ಇರುವ ಎಷ್ಟು ಹಣ್ಣುಗಳನ್ನು ಸೇವಿಸುತ್ತೀರಿ ಎಂಬುದರ ಮೇಲೆ ನೀವು ಎಷ್ಟು ವರ್ಷಗಳ ಕಾಲ ಆರೋಗ್ಯವಾಗಿ ಬದುಕುತ್ತೀರಿ ಎಂಬುದು ತಿಳಿಯುತ್ತದೆ.

ಹಾಗಾಗಿ ಒಂದು ದಿನಕ್ಕೆ ಒಂದು ಸಿಟ್ರಸ್ ಹಣ್ಣನ್ನಾದರೂ ನೀವು ದಿನಾ ತಿನ್ನುತ್ತಾ ಬನ್ನಿ. ನಿಂಬೆಹಣ್ಣು, ಕಿತ್ತಳೆ, ಕಲ್ಲಂಗಡಿ, ಟೊಮೊಟೊ, ಇವೆಲ್ಲವೂ ಸಿ-ಅನ್ನಾಂಗ ತುಂಬಿರುವ ಹಣ್ಣುಗಳಾಗಿದ್ದು, ಖಾಯಿಲೆಯ ವಿರುದ್ಧ ಹೋರಾಡಿ ನಿಮ್ಮನ್ನು ನೀವು ಕಾಪಾಡಿಕೊಂಡು ಹೋಗಲು ನಿಮಗೆ ಶಕ್ತಿಯನ್ನು ಒದಗಿಸಿಕೊಡುತ್ತವೆ.

ಈ ಹಣ್ಣುಗಳನ್ನು ಯತೇಚ್ಛವಾಗಿ ತಿಂದಲ್ಲಿ ರೋಗನಿರೋಧಕ ಶಕ್ತಿ ನಮ್ಮ ದೇಹದಲ್ಲಿ ತಾನಾಗಿಯೇ ಉತ್ಪತ್ತಿಯಾಗುತ್ತದೆ. ಮತ್ತೊಂದು ವಿಚಾರವೆಂದರೆ, ಈ ಹಣ್ಣುಗಳನ್ನು ಪಥ್ಯವೆಂದು ಸೇವಿಸದೆ ಆಹಾರಕ್ರಮದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡು ಸೇವಿಸುತ್ತ ಬನ್ನಿ.

ನೀವು ಸರಿಯಾದ ಧೂಮಪಾನ ಪಥ್ಯ ಪಾಲಿಸುವವರಾಗಿದ್ದು, ದೀರ್ಘಕಾಲ ಆರೋಗ್ಯವಾಗಿ ಬಾಳ ಬೇಕೆಂದರೆ ಈ ಆರೋಗ್ಯಕರವಾದ ಉತ್ತಮ ಸಲಹೆಗಳನ್ನು ಪಾಲಿಸಿ.

English summary

Detox Diet for Smokers | Citrus fruits | ರೋಗನಿರೋಧಕ ಶಕ್ತಿ ಹೆಚ್ಚಿಸುವ ಸಿಟ್ರಸ್ ಹಣ್ಣು

Detox Diet for Smokers. Use these good health tips to be on a proper smokers diet and live long. But, first advice is quit smoking, there is no alternative to it. Oranges, melons, tomatoes are all filled with vitamin C that gives you immunity to fight the diseases you are bringing upon yourself.
Story first published: Thursday, January 5, 2012, 17:48 [IST]
X
Desktop Bottom Promotion