Latest Updates
-
ಬಂಬಲ್ ಆಪ್ನಲ್ಲಿ ಮಹತ್ವದ ಬದಲಾವಣೆ: ಡೇಟಿಂಗ್ನಲ್ಲಿ ಸಂಭಾಷಣೆ ಶುರು ಮಾಡುವುದು ಹೇಗೆ? -
ಬೆಂಗಳೂರಿನ ಡೇಟಿಂಗ್ ಆ್ಯಪ್ಗಳಲ್ಲಿ ಹೊಸ ವಂಚನೆ: ಪಬ್ಗಳಲ್ಲಿ ಹಣ ಕಳೆದುಕೊಳ್ಳದಂತೆ ಪಾರಾಗುವುದು ಹೇಗೆ? -
ಬೆಂಗಳೂರಿನಲ್ಲಿ ಮಳೆಗಾಲ: ನಿಮ್ಮ ಅಪಾರ್ಟ್ಮೆಂಟ್ನಲ್ಲಿ ಹಾವುಗಳ ಕಾಟವೇ? ಈ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಪಾಲಿಸಿ! -
ಇಂದು ರಾತ್ರಿ ಆಕಾಶದಲ್ಲಿ ಅದ್ಭುತ: ಪರ್ಸೀಡ್ಸ್ ಉಲ್ಕಾಪಾತ ವೀಕ್ಷಿಸಲು ಮತ್ತು ಫೋಟೋ ತೆಗೆಯಲು ಸರಳ ಟಿಪ್ಸ್ -
ಮಳೆಗಾಲದಲ್ಲಿ ಹೊರಗಿನ ಊಟ ಅಪಾಯಕಾರಿ: ಆನ್ಲೈನ್ ಫುಡ್ ಆರ್ಡರ್ ಮಾಡುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಕರ್ನಾಟಕ ಬಂದ್ 2026: ಬೆಂಗಳೂರಿನಲ್ಲಿ ಜನಜೀವನ ಹೇಗಿದೆ? ಇಲ್ಲಿದೆ ಇಂದಿನ ಲೇಟೆಸ್ಟ್ ಅಪ್ಡೇಟ್ -
ಎಡಗೈ ಬಳಸುವವರೇ ಗಮನಿಸಿ: ಕುತ್ತಿಗೆ ಮತ್ತು ಮಣಿಕಟ್ಟಿನ ನೋವಿಗೆ ಇಲ್ಲಿದೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ಕ್ಯಾಂಪಸ್ ಪ್ರೇಮಿಗಳೇ ಎಚ್ಚರ! ರ್ಯಾಗಿಂಗ್ನಿಂದ ಪಾರಾಗಲು ಮತ್ತು ಸುರಕ್ಷಿತವಾಗಿರಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ಮುಂಬೈ ಭೂಕುಸಿತದ ಎಚ್ಚರಿಕೆ: ಮಳೆಗಾಲದಲ್ಲಿ ನಿಮ್ಮ ಅಪಾರ್ಟ್ಮೆಂಟ್ ಸುರಕ್ಷಿತವಾಗಿಡಲು ಈ ಕ್ರಮಗಳನ್ನು ಪಾಲಿಸಿ -
ಮುಂಬೈ ಮಳೆ ಎಚ್ಚರಿಕೆ: ನಿಮ್ಮ ಮನೆಯನ್ನು ಪ್ರವಾಹದಿಂದ ರಕ್ಷಿಸಲು ಇಂದೇ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ!
ದೇಹದಲ್ಲಿ ನೀರಿನ ಬೊಜ್ಜು ಕರಗಿಸುವ ಆಹಾರ ಯಾವುದು?

ನೀರಿನ ಬೊಜ್ಜಿನ ಸಮಸ್ಯೆಯಿದ್ದವರು ಏನು ತಿನ್ನಬಾರದು?
1. ಉಪ್ಪು, ಸಕ್ಕರೆ: ದೇಹದಲ್ಲಿ ನೀರು ತುಂಬಿಕೊಳ್ಳಲು ಇವು ಮುಖ್ಯ ಕಾರಣ. ಆದರೆ ಇದನ್ನು ಸಂಪೂರ್ಣವಾಗಿ ದೂರವಿರಿಸಲು ಸಾಧ್ಯವಿಲ್ಲದ ಕಾರಣ ಉಪ್ಪು ಸಕ್ಕರೆ ಪ್ರಮಾಣವನ್ನು ಕಡಿಮೆಮಾಡಿದರೆ ಉತ್ತಮ.
2. ಹೆಚ್ಚು ಸೋಡಿಯಂನ ಆಹಾರ: ಹೆಚ್ಚು ಸೋಡಿಯಂ ತುಂಬಿರುವ ಪದಾರ್ಥಗಳನ್ನು ನೀರಿನ ಬೊಜ್ಜಿದ್ದವರು ತಿನ್ನಬಾರದು. ಅದರಲ್ಲೂ ಸೋಯಾ ಸಾಸ್ ಇನ್ನಿತರ ಸಾಸ್ ಗಳ ಸೇವನೆ ನಿಷಿದ್ಧ. ಸಂಸ್ಕರಿಸಿದ ಮಾಂಸವನ್ನೂ ತಿನ್ನಬಾರದು. ಯಾವುದೇ ಪದಾರ್ಥವನ್ನು ಕೊಂಡುಕೊಳ್ಳುವ ಮುನ್ನ ಅದರಲ್ಲಿನ ಸೋಡಿಯಂ ಮಟ್ಟವನ್ನು ಪರೀಕ್ಷಿಸಿ ಕೊಂಡುಕೊಳ್ಳಬೇಕು.
3. ಹೆಚ್ಚು ಪೊಟಾಶಿಯಂ ಆಹಾರ: ನೈಸರ್ಗಿಕ ಪೊಟಾಶಿಯಂ ತುಂಬಿರುವ ಹಣ್ಣುಗಳು ಮತ್ತು ತರಕಾರಿಗಳು ದೇಹಕ್ಕೆ ಒಳ್ಳೆಯದೇ. ಆದರೆ ಖಾರವಾದ ಆಹಾರ, ಕೆಂಪು ಮೆಣಸಿನ ಕಾಯಿ ಸೇವನೆ ಹೆಚ್ಚಿರಬಾರದು.
ನೀರಿನ ಬೊಜ್ಜು ಹೋಗಿಸಲು ಯಾವ ಆಹಾರ ಬೇಕು?
ದೇಹದಲ್ಲಿ ಅನಗತ್ಯ ನೀರು ಸೇರಿಕೊಂಡರೆ ಮೂತ್ರದ ಮೂಲಕ ಹೊರಹಾಕುವುದು ನೈಸರ್ಗಿಕ ಮಾರ್ಗ. ಆದ್ದರಿಂದ ಮೂತ್ರದ ಮಟ್ಟವನ್ನು ಹೆಚ್ಚಿಸುವ ಕೆಲವು ಆಹಾರಗಳಿಳು ದೇಹದಲ್ಲಿನ ನೀರಿನ ಬೊಜ್ಜನ್ನು ಪರಿಣಾಮಕಾರಿಯಾಗಿ ನಿವಾರಿಸುತ್ತವೆ.
1. ನೀರಿನಂಶವಿಲ್ಲದ ಆಹಾರವನ್ನು ಸೇವಿಸುವುದರಿಂದ ದೇಹದಲ್ಲಿ ಹೆಚ್ಚು ನೀರು ಸೇರಿಕೊಳ್ಳುವುದಿಲ್ಲ ಎಂಬ ತಪ್ಪು ನಂಬಿಕೆಯಿದೆ. ಆದರೆ ದೇಹಕ್ಕೆ ನೀರಿನ ಅಗತ್ಯವೂ ಇದೆ. ಕಲ್ಲಂಗಡಿ (ಅದರಲ್ಲೇ ನೀರಿನಂಶ ಹೆಚ್ಚಿದ್ದರೂ ಇದು ನೀರಿನ ತೂಕ ಇಳಿಸಲು ಸಹಕಾರಿ), ಓಟ್ಸ್ ಇವುಗಳನ್ನು ಹೆಚ್ಚು ಸೇವಿಸಬಹುದು.
2. ಕ್ಯಾರೆಟ್, ಎಲೆಕೋಸು, ಸೌತೆಕಾಯಿ, ಮೊಳಕೆ ಒಡೆದ ಹೆಸರು ಕಾಳು ಮುಂತಾದುವು ನೀರಿನ ಬೊಜ್ಜನ್ನು ಕಡಿಮೆ ಮಾಡಲು ಸಹಕಾರಿ.
3. ಗ್ರೀನ್ ಟೀ ಇನ್ನಿತರ ಹರ್ಬಲ್ ಟೀ ಸೇವನೆ ತೂಕವನ್ನು ಕ್ರಮೇಣ ಕಡಿಮೆಗೊಳಿಸುತ್ತೆ.
4. ದಿನಕ್ಕೆ ಅರ್ಧ ಗಂಟೆ ವ್ಯಾಯಾಮವೂ ಕೂಡ ದೇಹದಲ್ಲಿ ನೀರಿನ ಮಟ್ಟವನ್ನು ಕಡಿಮೆ ಮಾಡಲು ಹೆಚ್ಚು ಪರಿಣಾಮಕಾರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications