For Quick Alerts
ALLOW NOTIFICATIONS  
For Daily Alerts

ಮಧುಮೇಹ ಕಣ್ಣನ್ನೂ ಕಿತ್ತುಕೊಳ್ಳಬಹುದು

|
ನೀವು ಮಧುಮೇಹಿಗಳಾಗಿದ್ದರೆ, ನಿಮ್ಮ ರಕ್ತದಲ್ಲಿನ ಸಕ್ಕರೆ ಅಂಶ ದಿನೇ ದಿನೇ ಹೆಚ್ಚುತ್ತಿದ್ದರೆ, ಅದು ದೇಹದ ಇನ್ನಿತರ ಅಂಗಗಳ ಮೇಲೂ ಕೆಟ್ಟ ಪರಿಣಾಮ ಬೀರಬಹುದು.

ಮಧುಮೇಹ ಹೃದಯ, ಕಿಡ್ನಿಗಳ ವೈಫಲ್ಯಕ್ಕೆ ಮಾತ್ರ ಕಾರಣವಾಗುವುದಿಲ್ಲ, ಮಧುಮೇಹವನ್ನು ನಿರ್ಲಕ್ಷಿಸದರೆ, ಅದು ದೇಹದ ಅತಿ ಮುಖ್ಯ ಅಂಗವಾದ ಕಣ್ಣುಗಳ ಮೇಲೂ ಪರಿಣಾಮ ಬೀರುತ್ತದೆ. ರಕ್ತದಲ್ಲಿನ ಸಕ್ಕರೆ ಅಂಶ ದೀರ್ಘಕಾಲ ಹಾಗೇ ಉಳಿದರೆ ನಿಮ್ಮ ಕಣ್ಣು ಕುರುಡಾಗುವ ಸಂಭವವೂ ಇದೆ.

ಮಧುಮೇಹಕ್ಕೂ, ಕಣ್ಣಿಗೂ ಹೇಗೆ ಸಂಬಂಧ?
ರಕ್ತದಲ್ಲಿನ ಅತಿಯಾದ ಸಕ್ಕರೆ ಅಂಶದಿಂದ ಕಣ್ಣಿನ ರಕ್ತಕಣಗಳು ಸಮಸ್ಯೆಗೆ ಒಳಗಾಗುತ್ತದೆ. ಕಣ್ಣಿನ ಈ ರಕ್ತಕಣಗಳು ತೊಂದರೆಗೊಳಗಾದರೆ ಕಣ್ಣಿಗೆ ಸಂಬಂಧಿಸಿದ ನರಗಳ ಶಕ್ತಿಯೂ ಕುಂದುಹೋಗಿ, ರೆಟಿನಾ ಹಾನಿಗೊಳಗಾಗಿ ಕುರುಡುತನವನ್ನು ತಂದೊಡ್ಡುತ್ತದೆ.

ಏನು ಮಾಡಬಹುದು?
* ಜೀವನ ಶೈಲಿ: ಮಧುಮೇಹಿಗಳು ತಮ್ಮ ಜೀವನ ಶೈಲಿಯ ಗುಣಮಟ್ಟವನ್ನು ಉತ್ತಮ ಪಡಿಸಿಕೊಂಡರೆ ಈ ಗಂಭೀರ ತೊಂದರೆಗಳಿಂದ ತಪ್ಪಿಸಿಕೊಳ್ಳಬಹುದು.
* ತಿಂಗಳಿಗೊಮ್ಮೆ ರಕ್ತದಲ್ಲಿನ ಸಕ್ಕರೆ ಅಂಶವನ್ನು ಪರೀಕ್ಷಿಸಿಕೊಳ್ಳಬೇಕು. ಅದನ್ನು ಕಡಿಮೆ ಮಾಡಲು ಪ್ರಯತ್ನಿಸಬೇಕು.

English summary

Diabetes Injure Eyes, Diabetes leads to Blindness, ಮಧುಮೇಹದಿಂದ ಕಣ್ಣಿಗೆ ತೊಂದರೆ, ಸಕ್ಕರೆ ಕಾಯಿಲೆಯಿಂದ ಕುರುಡುತನ ಬರಬಹುದು

Increasing level of Diabetes can injure many parts of the body, including heart, kidneys and it can seriously injure your eyes too and can lead to blindness. Take a look at how diabetes can effects the eyes.
Story first published: Monday, September 12, 2011, 12:21 [IST]
X
Desktop Bottom Promotion