For Quick Alerts
ALLOW NOTIFICATIONS  
For Daily Alerts

ಮಧುಮೇಹಿಗಳು ದಿನದಲ್ಲಿ ಎಷ್ಟು ಖರ್ಜೂರ ತಿನ್ನಬಹುದು?

|

ಖರ್ಜೂರ ಅನೇಕ ಆರೋಗ್ಯಕರ ಗುಣಗಳನ್ನು ಹೊಂದಿರುವ ಒಂದು ಅದ್ಭುತವಾದ ಹಣ್ಣಾಗಿದೆ. ಖರ್ಜೂರದಲ್ಲಿ ಪ್ರೊಟೀನ್, ಕಾರ್ಬೋಹೈಟ್ರೇಟ್ಸ್, ನಾರಿನಂಶ, ಕೊಬ್ಬಿನಂಶ, ಕ್ಯಾಲ್ಸಿಯಂ, ಕಬ್ಬಿಣದಂಶ, ಸೋಡಿಯಂ, ವಿಟಮಿನ್ ಸಿ, ವಿಟಮಿನ್ ಎ ಇರುವುದರಿಂದ ಖರ್ಜೂರ ತಿಂದರೆ ಈ ಪೋಷಕಾಂಶಗಳ ಕೊರತೆ ಉಂಟಾಗದಂತೆ ನೋಡಿಕೊಳ್ಳಬಹುದು.

ಖರ್ಜೂರ ತಿನ್ನುವುದರಿಂದ ದೇಹಕ್ಕೆ ಶಕ್ತಿ ದೊರೆಯುತ್ತದೆ, ವಿಪರೀತ ಹಸಿವನ್ನು ನಿಯಂತ್ರಿಸಬಹುದು, ಇದರಲ್ಲಿರುವ ನಾರಿನಂಶ ಜೀರ್ಣಕ್ರಿಯೆಗೆ ಸಹಾಯ ಮಾಡುವುದು, ಇನ್ನು ರಕ್ತಹೀನತೆ ಸಮಸ್ಯೆ ಹೋಗಲಾಡಿಸಲು ಈ ಖರ್ಜೂರ ತುಂಬಾ ಸಹಕಾರಿಯಾಗಿದೆ. ಇಷ್ಟೆಲ್ಲಾ ಆರೋಗ್ಯಕರ ಗುಣಗಳಿರುವ ಈ ಹಣ್ಣನ್ನು ಮಧುಮೇಹಿಗಳು ತಿನ್ನಬಹುದೇ? ಈ ಹಣ್ಣನ್ನು ತಿನ್ನುವುದರಿಂದ ಅವರ ದೇಹದ ಮೇಲೆ ಬೀರುವ ಪ್ರಭಾವ ಏನು ಎಂಬುವುದನ್ನು ತಿಳಿಯೋಣ ಬನ್ನಿ:

Dates

ಮಧುಮೇಹ ಎನ್ನುವುದು ಪ್ರಮುಖವಾಗಿ ಜೀವನಶೈಲಿಯಿಂದ ಬರುವ ಕಾಯಿಲೆ ಆಗಿದೆ. ಮಧುಮೇಹ ಕಾಯಿಲೆ ಬಂದರೆ ಅದನ್ನು ನಿಯಂತ್ರಣದಲ್ಲಿ ಇಡಬಹುದೇ ಹೊರತು ಅದರಿಂದ ಸಂಪೂರ್ಣ ಗುಣಮುಖರಾಗಲು ಸಾಧ್ಯವಿಲ್ಲ. ಅದ್ದರಿಂದ ಮಧುಮೇಹಿಗಳು ತಾವು ತಿನ್ನುವ ಆಹಾರದ ಕಡೆ ಹೆಚ್ಚಿನ ಗಮನ ಕೊಡಬೇಕಾಗುತ್ತದೆ. ದೇಹದಲ್ಲಿ ಸಕ್ಕರೆಯಂಶವನ್ನು ಹೆಚ್ಚಿಸುವ ಆಹಾರಗಳಿಂದ ದೂರವಿರಬೇಕು.

ಆದರೆ ಕೆಲವೊಂದು ಸಿಹಿ ಹಣ್ಣುಗಳನ್ನು ಮಿತಿಯಲ್ಲಿ ತಿಂದರೆ ಏನು ಆಗುವುದಿಲ್ಲ. 2002ರಲ್ಲಿ ನಡೆಸಿದ ಸಂಶೋಧನೆಯು ಮಧುಮೇಹಿಗಳು ಖರ್ಜೂರವನ್ನು ತಿಂದರೆ ಅನೇಕ ಆರೋಗ್ಯಕರ ಗುಣಗಳನ್ನು ಪಡೆಯಬಹುದು ಎಂದು ಹೇಳಿದೆ. ಖರ್ಜೂರ ತಿನ್ನುವುದರಿಂದ ಮಧುಮೇಹಿಗಳಲ್ಲಿ ಗ್ಲೈಸೆಮಿಕ್ ಹಾಗೂ ಲಿಪಿಡ್ ಅನ್ನು ನಿಯಂತ್ರಣದಲ್ಲಿಡಬಹುದಾಗಿದೆ.

ಮಧುಮೇಹಿಗಳು ಖರ್ಜೂರವನ್ನು ಇತರ ಆಹಾರಗಳೂ ಜತೆ ಸೇವಿಸುವ ಬದಲು ಹಾಗೇ ತಿನ್ನುವುದು, ಇನ್ನು ಪ್ಲೇನ್ ಯೋಗರ್ಟ್ ಜತೆ ಕೂಡ ತಿನ್ನುವುದು ಒಳ್ಳೆಯದು ಎಂದು ಯೂರೋಪಿಯನ್ ಜರ್ನಲ್ ಆಫ್‌ ಕ್ಲಿನಿಕಲ್ ನ್ಯೂಟ್ರಿಷಿಯನಲ್ಲಿ ಪ್ರಕಟವಾದ ಅಧ್ಯಯನ ಲೇಖನದಲ್ಲಿ ಹೇಳಲಾಗಿದೆ. ಈ ರೀತಿ ತಿಂದರೆ ಗ್ಲೈಸಮಿಕ್ ಹಾಗೂ ಲಿಪಿಡ್ ಪ್ರಮಾಣವನ್ನು ನಿಯಂತ್ರಣದಲ್ಲಿಡಬಹುದಾಗಿದೆ.

Also Read: ಖರ್ಜೂರ ಸೇವನೆಯ ಆರೋಗ್ಯಕರ ಪ್ರಯೋಜನಗಳು

2011ರ ಅಧ್ಯಯನ ಪ್ರಕಾರ ಖರ್ಜೂರವನ್ನು ಮಿತಿಯಲ್ಲಿ ತಿನ್ನುವುದರಿಂದ ಮಧುಮೇಹಿಗಳು ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡುವುದರ ಜತೆಗೆ ಅದರ ಇತರ ಪೋಷಕಾಂಶಗಳ ಪ್ರಯೋಜನವನ್ನು ಪಡೆಯಬಹುದು ಎಂದು ಹೇಳಿದೆ. ಸಮತೋಲನ ಆಹಾರ ಜತೆಗೆ ಖರ್ಜೂರವನ್ನು ಮಿತಿಯಲ್ಲಿ ತಿನ್ನುವುದರಿಂದ ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗುವುದಿಲ್ಲ ಎಂದು ಅಧ್ಯಯನ ಹೇಳಿದೆ.

ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಇರುವ ಅಹಾರಗಳನ್ನು ಮಧುಮೇಹಿಗಳು ಸೆವಿಸಬೇಕು. ಖರ್ಜೂರದಲ್ಲಿ ಗ್ಲೈಸೆಮಿಕ್‌ ಇಂಡೆಕ್ಸ್ ಪ್ರಮಾಣ ಕಡಿಮೆ ಇದ್ದು, ನಾರಿನಂಶ ಅಧಿಕವಿರುವುದರಿಂದ ಇದು ದೇಹದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡುವಲ್ಲಿ ಸಹಕಾರಿಯಾಗಿದೆ ಎಂದು ಇಂಟರ್‌ನ್ಯಾಷನಲ್ ಜರ್ನಲ್ ಆಫ್‌ ಕ್ಲಿನಿಕಲ್ ಅಂಡ್‌ ಎಕ್ಸ್‌ಪೆರಿಮೆಂಟಲ್ ಜರ್ನಲ್‌ ಆಪ್ ಕ್ಲಿನಿಕಲ್ ಅಂಡ್ ಎಕ್ಸ್‌ಪೆರಿಮೆಂಟಲ್ ಮೆಡಿಸಿನ್ ವರದಿ ಹೇಳಿದೆ.

Also Read: ಮಧುಮೇಹಿಗಳಿಗೆ ಸೂಕ್ತ ಆಹಾರ ಯಾವುದು?

ಮತ್ತೊಂದು ಅಧ್ಯಯನದಲ್ಲಿ 10 ಮಧುಮೇಹಿಗಳಿಗೆ ಪ್ರತಿದಿನ 100ಗ್ರಾಂ ಖರ್ಜೂರ ತಿನ್ನಲು ನೀಡಲಾಗಿತ್ತು ಈ ರೀತಿ 4 ವಾರಗಳು ನಿಡಲಾಯಿತು, ಆ ಬಳಿಕ ಅವರ ರಕ್ತವನ್ನು ಪರೀಕ್ಷಿಸಿದಾಗ ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಯೇ ಇದ್ದದ್ದು ತಿಳಿದು ಬಂತು ಎಂದು ಜರ್ನಲ್ ಆಫ್‌ ಅಗ್ರಿಕಲ್ಚರ್ ಅಂಡ್ ಫುಡ್‌ ಕೆಮಿಸ್ಟ್ರಿನಲ್ಲಿ ಪ್ರಕಟವಾದ ಅಧ್ಯಯನ ಲೇಖನದಲ್ಲಿ ವಿವರಿಸಲಾಗಿದೆ.

ದಿನಕ್ಕೆ ಎಷ್ಟು ಖರ್ಜೂರ ತಿನ್ನಬಹುದು?

ಮಧುಮೇಹಿಗಳು ದಿನದಲ್ಲಿ 2-3 ಖರ್ಜೂರ ತಿನ್ನಬಹುದಾಗಿದೆ. ಆದ್ದರಿಂದ ಖರ್ಜೂರದಲ್ಲಿ ಸಕ್ಕರೆಯಂಶವಿದೆ, ಕ್ಯಾಲೋರಿ ಇದೆ ಎಂದು ತಲೆಕೆಡಿಸಿಕೊಳ್ಳದೆ ಮಿತಿಯಲ್ಲಿ ತಿಂದು ಖರ್ಜೂರದ ಆರೋಗ್ಯಕರ ಗುಣಗಳ ಲಾಭವನ್ನು ಪಡೆಯಬಹುದಾಗಿದೆ.

English summary

How Much Dates Good For Diabetes

There is a myth that diabetics are not supposed to consume dates because they are high in sugar and calories.But study says if diabetic patient consume dates in moderate level is good for them. To know how much quantity is better read this article.
X
Desktop Bottom Promotion