For Quick Alerts
ALLOW NOTIFICATIONS  
For Daily Alerts

ಇಂಥ ಚಿಕ್ಕ ಸಂಗತಿಗಳೇ ಮುಂದೆ ಮಧುಮೇಹ ತರುವುದು

|

"ನಾನು ಬೇಕಾಬಿಟ್ಟಿಯಾಗಿ ಸಿಕ್ಕಸಿಕ್ಕಿದ್ದನ್ನೆಲ್ಲ ತಿನ್ನುತ್ತ ಬಿಂದಾಸ್ ಆಗಿ ಬದುಕುತ್ತೇನೆ. ನನ್ ಲೈಫ಼ು, ನನ್ ಸ್ಟೈಲು, ನನ್ನ ಕೇಳೋರ್ಯಾರು ?" ಅನ್ನೋ ಮನೋಭಾವನೆ ಇರುವ ಜೀವನ ಶೈಲಿ ನಿಮ್ಮದೇ ? ಹಾಗಿದ್ದಲ್ಲಿ ಎಚ್ಚರ! ನಿಮಗೇ ಅರಿವಿಲ್ಲದಂತೆ ಕ್ರಮೇಣವಾಗಿ ನೀವು ಮಧುಮೇಹಕ್ಕೆ ತುತ್ತಾಗುತ್ತಿರಬಹುದು. ಮಧುಮೇಹ ಹೇಗೆ ಅಮರಿಕೊಳ್ಳುತ್ತದೆ, ಮಧುಮೇಹಕ್ಕೆ ಕಾರಣವಾಗುವ ಆ ಆರು ಸಂಗತಿಗಳ್ಯಾವುವು ಅನ್ನೋದನ್ನ ನಾವಿಲ್ಲಿ ಪಟ್ಟಿ ಮಾಡಿದ್ದೇವೆ ನೋಡಿ.....

ಮೇಲೆ ತಿಳಿಸಿರೋ ಹಾಗೆ, ಮಧುಮೇಹವೇನೂ ಧುತ್ತನೇ ಕಾಣಿಸಿಕೊಳ್ಳುವಂತಹದ್ದಲ್ಲ. ಅದು ಕಾಲಕ್ರಮೇಣವಾಗಿ ಬೆಳವಣಿಗೆ ಹೊಂದುವ ವ್ಯಾಧಿ. ನಿಜ ಹೇಳಬೇಕೆಂದರೆ, ದಿನನಿತ್ಯ ನೀವು ಏನನ್ನ ತಿನ್ನುತ್ತೀರಿ ಮತ್ತು ನಿಮ್ಮ ದೈನಂದಿನ ಜೀವನ ಶೈಲಿ ಯಾವ ರೀತಿಯದ್ದು ಅನ್ನೋದರ ಮೇಲೆ ನೀವು ಮಧುಮೇಹಿಗಳಾಗುವವರೇ ಅಥವಾ ಇಲ್ಲವೇ ಅನ್ನೋದು ಅವಲಂಬಿತವಾಗಿರುತ್ತದೆ. ಇನ್ನೂ ಮುಂದುವರೆದು ಹೇಳಬೇಕೆಂದರೆ, ಅದು ಎಷ್ಟೇ ದೊಡ್ಡದಿರಲೀ ಅಥವಾ ಚಿಕ್ಕದಿರಲೀ, ನೀವು ಕೈಗೊಳ್ಳುವ ಪ್ರತೀ ಅನಾರೋಗ್ಯಕರ ಅಭ್ಯಾಸವೂ ನಿಮ್ಮ ದೇಹಾರೋಗ್ಯದ ಸ್ಥಿತಿಗತಿಯನ್ನು ಇನ್ನಷ್ಟು ಹದಗೆಡಿಸಬಲ್ಲದು.

ಮಧುಮೇಹದಲ್ಲಿಯೂ ನಾಲ್ಕು ವಿಧಗಳಿವೆ:

ಮಧುಮೇಹದಲ್ಲಿಯೂ ನಾಲ್ಕು ವಿಧಗಳಿವೆ:

1. ಟೈಪ್ 1 ಮಧುಮೇಹ

2. ಟೈಪ್ 2 ಮಧುಮೇಹ

3. ಜೆಸ್ಟೇಷನಲ್ ಡಯಾಬಿಟೀಸ್

4. ಪ್ರೀಡಯಾಬಿಟೀಸ್

ಮೇಲಿನ ನಾಲ್ಕು ವಿಧಗಳಲ್ಲಿ, ಟೈಪ್ 2 ಮಧುಮೇಹ ಸರ್ವೇಸಾಮಾನ್ಯವಾಗಿ ಎಲ್ಲರನ್ನೂ ಕಾಡೋವಂತಹದ್ದು.

ತಜ್ಞರು ಹೇಳುತ್ತಾರೆ, ಮಧುಮೇಹಿಗಳು ಮೂತ್ರಪಿಂಡಗಳ ವೈಫಲ್ಯ, ಹೃದ್ರೋಗಗಳು, ಮತ್ತು ನರವ್ಯೂಹ ಹಾನಿಗಳಂತಹ ಜೀವ ಬೆದರಿಕೆಯನ್ನೊಡ್ಡುವ ಹಲವಾರು ಮಾರಣಾಂತಿಕ ರೋಗಗಳಿಗೆ ತುತ್ತಾಗುತ್ತಾರೆ ಅಂತ. ಆದ್ದರಿಂದ, ಅಂತಹ ದೀರ್ಘಕಾಲೀನ ಮಾರಣಾಂತಿಕ ರೋಗಗಳಿಗೆ ಈಡಾಗದಂತೆ ಜಾಗರೂಕರಾಗಿರುವುದು ಪ್ರತಿಯೋರ್ವರ ಜವಾಬ್ದಾರಿ.

ಮೇಲ್ನೋಟಕ್ಕೆ ಹಾನಿಕರವಲ್ಲದ ರೀತಿಯಲ್ಲಿ ಕಂಡುಬರುವ, ಆದರೆ ಕಾಲಕ್ರಮೇಣ ಮಧುಮೇಹದ ಅಪಾಯವನ್ನು ಆಹ್ವಾನಿಸುವ ಆರು ಅಭ್ಯಾಸಗಳ ಪಟ್ಟಿಯನ್ನು ಮಾಡಿದ್ದೇವೆ, ಓದಿಕೊಳ್ಳಿ......

1. ಕಾಫಿ ಕುಡಿಯುವುದು!

1. ಕಾಫಿ ಕುಡಿಯುವುದು!

"ಅರೇ! ಒಂದು ಕಪ್ ಕಾಫಿ ಕುಡಿದಾಕ್ಷಣ ಮಧುಮೇಹ ಅಮರಿಕೊಂಡು ಬಿಡುತ್ತದೆ ಅನ್ನೋದು ಎಷ್ಟರಮಟ್ಟಿಗೆ ಸರಿ ?!!" ಅಂತಾ ನೀವು ಪ್ರಶ್ನಿಸಬಹುದು. ವಿಷಯ ಏನೆಂದರೆ, ಕಾಫಿಯನ್ನು ಕುಡಿದಾಕ್ಷಣ ನಿಮ್ಮ ಶರೀರಕ್ಕೆ ಯಾವ ಹಾನಿಯೂ ಆಗದು ಆದರೆ ಕಾಲಕ್ರಮೇಣ ಅದು ನಿಮ್ಮ ಶರೀರದಲ್ಲಿ ಮಧುಮೇಹವನ್ನು ಹುಟ್ಟುಹಾಕುವ ಸಾಧ್ಯತೆ ಇದೆ.

"ದಿನಕ್ಕೆ ಒಂದೋ ಎರಡೋ ಕಪ್ ಗಳಷ್ಟು ಕಾಫಿ ಕುಡಿದರೆ ಬಾಧಕವಿಲ್ಲ. ಆದರೆ ಸಿಕ್ಕಾಪಟ್ಟೆ ಆಗೊಮ್ಮೆ ಈಗೊಮ್ಮೆ ಎಂಬಂತೆ ಕಾಫಿ ಕುಡಿಯುವ ಅಭ್ಯಾಸವಿದ್ದರೆ ಅದು ಕ್ರಮೇಣ ಶರೀರದಲ್ಲಿ ಇನ್ಸುಲಿನ್ ಪ್ರತಿರೋಧಕ್ಕೆ ದಾರಿ ಮಾಡಿಕೊಡುತ್ತದೆ. ಇದು ದೇಹದಲ್ಲಿ ಗ್ಲುಕೋಸ್ ನ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಹಾಗೂ ಆ ಮೂಲಕ ಟೈಪ್ 2 ಮಧುಮೇಹಕ್ಕೆ ದಾರಿ ಮಾಡಿಕೊಡುತ್ತದೆ" ಎನ್ನುತ್ತಾರೆ ಬೆಂಗಳೂರಿನ ಜಿಂದಾಲ್ ನೇಚರ್ ಕೇರ್ ಇನ್ಸ್ಟಿಟ್ಯೂಟ್ ನ ವೈದ್ಯಾಧಿಕಾರಿ ಡಾ. ವಿನೋದಾ ಕುಮಾರಿ ಅವರು.

ಮಧುಮೇಹದ ಅಪಾಯದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಗ್ರೀನ್ ಟೀ ಅಥವಾ ಹರ್ಬಲ್ ಟೀ ಯ ಮೊರೆ ಹೋಗುವುದೊಳಿತು ಎಂದೂ ಅವರು ಸಲಹೆ ಮಾಡುತ್ತಾರೆ.

2. ಬಹಳ ಹೊತ್ತಿನವರೆಗೆ ಒಂದೇ ಭಂಗಿಯಲ್ಲಿ ಕುಳಿತುಕೊಂಡಿರುವುದು

2. ಬಹಳ ಹೊತ್ತಿನವರೆಗೆ ಒಂದೇ ಭಂಗಿಯಲ್ಲಿ ಕುಳಿತುಕೊಂಡಿರುವುದು

ಈ ವಿಚಾರದಲ್ಲಂತೂ ಬಹುತೇಕ ನಾವೆಲ್ಲರೂ ಅಪರಾಧಿಗಳೇ!! ದಿನದ ಮುಕ್ಕಾಲು ಭಾಗಕ್ಕಿಂತಲೂ ಹೆಚ್ಚಿನ ಅವಧಿಯನ್ನು ನಾವು ನಮ್ಮ ಲ್ಯಾಪ್ಟಾಪ್ ಗಳೊಂದಿಗೆ ಡೆಸ್ಕ್ ನಲ್ಲಿ ಕುಳಿತುಕೊಂಡೋ ಇಲ್ಲವೇ ದೂರದರ್ಶನದಲ್ಲಿ ಏನಾದರೂ ಒಂದನ್ನು ನೋಡಿಕೊಂಡೋ ಕಾಲಕಳೆದುಬಿಡುತ್ತೇವೆ.

ಟಿ.ವಿ. ಯನ್ನ ನೋಡ್ತಾನೋ ಇಲ್ಲಾ ಲ್ಯಾಪ್ಟಾಪ್ ನಲ್ಲಿ ಕೆಲಸ ಮಾಡ್ತಾನೋ ನೀವು ಕಳೆಯೋ ಪ್ರತಿಯೊಂದು ಘಂಟೆನೂ ಕೂಡ ನೀವು ಮಧುಮೇಹಿಯಾಗುವ ಅಪಾಯವನ್ನ ಶೇ. 3.4 ಪಟ್ಟು ಹೆಚ್ಚಿಸುತ್ತೆ ಅಂತಾ "ಡಯಾಬಿಟೋಲೊಜಿಯಾ" (ಮಧುಮೇಹದ ಅಧ್ಯಯನಕ್ಕಾಗಿ ಯುರೋಪಿಯನ್ ಸಂಘಟನೆಯ ಒಂದು ಪತ್ರಿಕೆ) ಅನ್ನೋ ಪತ್ರಿಕೇಲಿ ಪ್ರಕಟವಾಗಿರೋ ಒಂದು ಅಧ್ಯಯನ ಹೇಳುತ್ತೆ.

3. ಸ್ತ್ರೀಯರು ಮಧುಮೇಹಕ್ಕೆ ತುತ್ತಾಗೋ ಅಪಾಯ ತುಸು ಹೆಚ್ಚೇ!

3. ಸ್ತ್ರೀಯರು ಮಧುಮೇಹಕ್ಕೆ ತುತ್ತಾಗೋ ಅಪಾಯ ತುಸು ಹೆಚ್ಚೇ!

ಹೆಂಗಳೆಯರ ಜೀವನ ಸುಲಭ ಏನಲ್ಲ ಅನ್ನೋದು ಗೊತ್ತಿರುವ ವಿಷಯಾನೇ. ಅದಕ್ಕೆ ಇನ್ನೊಂದು ಕಾರಣ ಕೂಡ ಇದೆ.

ಜೀವನದ ಪ್ರತೀ ಘಟ್ಟದಲ್ಲೂ ಮಹಿಳೆ ಹಲವು ಬಗೆಯ ಹಾರ್ಮೋನುಗಳ ಬದಲಾವಣೆಗೆ ಒಳಪಡುತ್ತಾಳೆ. ಋತುಮತಿಯಾಗುವುದರಿಂದ, ಗರ್ಭಿಣಿಯಾಗುವುದರಿಂದ ಮೊದಲ್ಗೊಂಡು ಋತುಚಕ್ರದ ನಿಲುಗಡೆಯವರೆಗೂ ಹೆಣ್ಣಿನ ಶರೀರ ಹಲಬಗೆಯ ಹಾರ್ಮೋನುಗಳ ಏರುಪೇರಿಗೆ ಒಳಗಾಗುತ್ತದೆ. ಇದು ಆಕೆಯ ಶರೀರದ ಇನ್ಸುಲಿನ್ ಮಟ್ಟದ ಮೇಲೆ ಪ್ರಭಾವ ಬೀರುತ್ತದೆ. ಆಕೆಗೆ ಒಂದೊಮ್ಮೆ ಪಿಸಿಓಎಸ್ ನಂತಹ ತೊಂದರೆಯೇನಾದರೂ ಇದ್ದಲ್ಲಿ, ಅದು ಅಂತಿಮವಾಗಿ ಆಕೆಯ ಶರೀರವು ಇನ್ಸುಲಿನ್ ನ ಪ್ರತಿರೋಧಕ್ಕೆ ತುತ್ತಾಗುವುದಕ್ಕೆ ದಾರಿಮಾಡಿಕೊಡುತ್ತದೆ. ಇದರ ಮುಂದಿನ ಹಂತವೇ ಮಧುಮೇಹ.

4. ಸೂರ್ಯನ ಬೆಳಕು ಅಂದ್ರೆ ಏನು ಅಂತಾನೇ ಗೊತ್ತಿಲ್ದಿರೋ ದೇಹ

4. ಸೂರ್ಯನ ಬೆಳಕು ಅಂದ್ರೆ ಏನು ಅಂತಾನೇ ಗೊತ್ತಿಲ್ದಿರೋ ದೇಹ

ಈಗಿನ ಕಾಲದಲ್ಲಂತೂ ಅಡುಗೆಮನೆಯಿಂದ ದುಡಿಯುವ ಕಛೇರಿಯವರೆಗೂ ಎಲ್ಲೆಲ್ಲೂ ಎ.ಸಿ. ಯದ್ದೇ ಕಾರುಬಾರು! ಇಂತಹ ಎ.ಸಿ. ಕೊಠಡಿಗಳಿಂದ ಹೊರಗೆ ಕಾಲಿಡೋದೇ ಅಪರೂಪ. ಅಧ್ಯಯನವೊಂದರ ಪ್ರಕಾರ ಇಂತಹ ಪರಿಸ್ಥಿತಿಯೂ ಮಧುಮೇಹಕ್ಕೆ ದಾರಿಮಾಡಿಕೊಡುತ್ತದೆ.

ಅದು ಹೇಗೆ ಅಂತೀರಾ ? ನೋಡಿ, ಸೂರ್ಯನ ಬಿಸಿಲಿನಲ್ಲಿರೋ ವಿಟಮಿನ್, ನಮ್ಮ ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯ ಉಸ್ತುವಾರಿ ಮಾಡತ್ತೆ. ಅದರ ಕೊರತೆ ಆದಾಗ, ರಕ್ತದಲ್ಲಿ ಸಕ್ಕರೆಯ ಅಂಶ ಜಾಸ್ತಿಯಾಗತ್ತೆ, ಇದೇ ಮಧುಮೇಹಕ್ಕೆ ಕಾರಣವಾಗತ್ತೆ. ಅಧ್ಯಯನವೊಂದು ಹೇಳೋ ಪ್ರಕಾರ, ವಿಟಮಿನ್ ಡಿ ಯ ಕೊರತೆಯಿರೋರು ಬೊಜ್ಜು ಬೆಳೆಸಿಕೊಳ್ಳೋ ಸಾಧ್ಯತೆ ತುಂಬಾನೇ ಜಾಸ್ತಿ. ಈ ಬೊಜ್ಜು ಕೂಡ ಮಧುಮೇಹಕ್ಕೆ ಹೆದ್ದಾರಿ ಮಾಡಿಕೊಡತ್ತೆ.

5. ಸಿಕ್ಕಾಪಟ್ಟೆ ತಿನ್ನೋದು

5. ಸಿಕ್ಕಾಪಟ್ಟೆ ತಿನ್ನೋದು

ಸಿಕ್ಕಾಪಟ್ಟೆ ತಿನ್ನೋದ್ರಿಂದ ಏನಾಗತ್ತೆ ಹೇಳಿ ? ದೇಹದೊಳಗೆ ಕೊಬ್ಬು (ಕ್ಯಾಲರಿ) ಜಾಸ್ತಿ ಸೇರ್ಕೊಳ್ಳತ್ತೆ. ಮೈ ಬಲೂನ್ ಥರ ಊದ್ಕೋಳ್ಳತ್ತೆ. ಇದನ್ನೇ "ಬೊಜ್ಜು ಮೈ" ಅನ್ನೋದು. ಈಗಾಗ್ಲೇ ಹೇಳಿರೋ ಹಾಗೆ ಬೊಜ್ಜು ಮೈ ಅನ್ನೋದು ಮಧುಮೇಹಾನಾ ರತ್ನಗಂಬಳಿ ಹಾಸಿ ಸ್ವಾಗತ ಮಾಡತ್ತೆ!!

6. ವ್ಯಾಯಾಮ ಮಾಡ್ದೇ ಇರೋದು

6. ವ್ಯಾಯಾಮ ಮಾಡ್ದೇ ಇರೋದು

ವಿಶೇಷವಾಗಿ ಮಹಿಳೆಯರು ನಿಯಮಿತವಾಗಿ ವ್ಯಾಯಾಮಾನಾ ಮಾಡ್ತಾ ಇದ್ರೆ ಅವರು ಮಧುಮೇಹಿಗಳಾಗೋ ಅಪಾಯ ಸಾಕಷ್ಟು ಕಡಿಮೆಯಾಗುತ್ತೆ. ಹಾರ್ವರ್ಡ್ ನ ಸಂಶೋಧಕರು ಕಂಡುಕೊಂಡಿರೋ ಪ್ರಕಾರ, ಜಿಮ್ ನಲ್ಲಿ ಬೆವರಿಳಿಸಿ ಮಾಡೋ ವ್ಯಾಯಾಮದಿಂದ ನೀವು ಮಧುಮೇಹಿಗಳಾಗೋ ಸಾಧ್ಯತೆ ಶೇ. 34 ರಷ್ಟು ಕಡಿಮೆಯಾಗುತ್ತೆ.

English summary

Harmless Things That Can Raise Your Diabetes Risk

Harmless things that can raise your diabetes risk, have a look,
Story first published: Thursday, November 5, 2020, 18:17 [IST]
X
Desktop Bottom Promotion