For Quick Alerts
ALLOW NOTIFICATIONS  
For Daily Alerts

ಡಯಾಬಿಟೀಸ್ ಇರುವ ಹೆಣ್ಣು ಮಕ್ಕಳು ಸಂಪೂರ್ಣ ಸೆಕ್ಸ್ ಸುಖ ಅನುಭವಿಸಲು ಹೀಗೆ ಮಾಡಿ

|

ಸೆಕ್ಸ್‌ನ ಸಂಪೂರ್ಣ ಸುಖ ಪಡೆಯುವುದು ನನ್ನ ಬಯಕೆ. ಆದರೆ ಇದಕ್ಕೆ ನನ್ನ ದೇಹ ಸ್ಪಂದಿಸುತ್ತಿಲ್ಲ. ಮಿಲನ ಕ್ರಿಯೆಗೆ ಅಣಿಗೊಳಿಸುತ್ತಿದ್ದ ಕ್ರಿಯೆಗಳು ಕೆಲಸ ಮಾಡುತ್ತಿಲ್ಲ. ಆದರೂ ಸೆಕ್ಸ್ ಮಾಡಿದಾಗ ಅದು ಹಿತ ನೀಡುತ್ತಿಲ್ಲ. ನನ್ನ ಪತಿ ನನ್ನನ್ನು ಕರುಣೆಯಿಂದ ನೋಡಿದರೂ ಅವರು ಒಳಗೆ ನಿರಾಶರಾಗಿದ್ದಾರೆ ಅಂತ ನನಗೆ ಗೊತ್ತು. ಹೀಗೆ ಆನ್ಲೈನ್ ಫೋರಂ ಒಂದರಲ್ಲಿ ಎಂಬ ಮಾರ್ಷಾ 38 ವರ್ಷದ ಟೈಪ್ 1 ಡಯಾಬಿಟೀಸ್ ಇರುವ ಮಹಿಳೆ ಬರೆದುಕೊಂಡಿದ್ದರು.

ಆದರೆ ಇದು ಮಾರ್ಷಾ ಒಬ್ಬರದೇ ಸಮಸ್ಯೆ ಅಲ್ಲ. ಬಹಳಷ್ಟು ಮಹಿಳೆಯರು ಇಂಥ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನ್ಯಾಷನಲ್ ಇನಸ್ಟಿಟ್ಯೂಟ್ ಆಫ್ ಹೆಲ್ತ್ ನಡೆಸಿದ ಸಂಶೋಧನೆಯೊಂದರ ಪ್ರಕಾರ ಟೈಪ್ 1 ಡಯಾಬಿಟೀಸ್ ಇರುವ ಶೇ.27 ರಷ್ಟು ಹಾಗೂ ಟೈಪ್ 2 ಡಯಾಬಿಟೀಸ್ ಇರುವ ಶೇ.42 ರಷ್ಟು ಹೆಂಗಸರು ಒಂದಿಲ್ಲೊಂದು ರೀತಿಯ ಲೈಂಗಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂಬುದು ತಿಳಿದು ಬಂದಿದೆ.

ಅಧ್ಯಯನದ ಪ್ರಕಾರ

ಅಧ್ಯಯನದ ಪ್ರಕಾರ

ಟರ್ಕಿಯಲ್ಲಿ ನಡೆಸಲಾದ ಮತ್ತೊಂದು ಅಧ್ಯಯನದಲ್ಲಿ ಲೈಂಗಿಕವಾಗಿ ಕ್ರಿಯಾಶೀಲರಾದ 176 ಹೆಣ್ಣು ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಇದರಲ್ಲಿ ಟೈಪ್ 2 ಡಯಾಬಿಟೀಸ್ ಇರುವ ಹೆಣ್ಣು ಮಕ್ಕಳು ಹೆಚ್ಚಿನ ಲೈಂಗಿಕ ಸಮಸ್ಯೆಗಳನ್ನು ಹೊಂದಿರುವುದು ಕಂಡು ಬಂದಿತು. ಹೆಚ್ಚು HbA1c(ಕಳೆದ 2 ರಿಂದ 3 ತಿಂಗಳ ಅವಧಿಯಲ್ಲಿನ ಗ್ಲುಕೋಸ್ ನಿಯಂತ್ರಣದ ಪ್ರಮಾಣ) ನಿಂದ ಬಳಲುತ್ತಿರುವ ಹಾಗೂ ದೀರ್ಘಾವಧಿ ಕಾಲದಿಂದ ಡಯಾಬಿಟೀಸ್ ಹೊಂದಿರುವ ಹೆಣ್ಣು ಮಕ್ಕಳು ಅತಿ ಹೆಚ್ಚು ಲೈಂಗಿಕ ಸಮಸ್ಯೆಗಳನ್ನು ಹೊಂದಿದ್ದರು.

ವೈದ್ಯಶಾಸ್ತ್ರದ ಪ್ರಕಾರ

ವೈದ್ಯಶಾಸ್ತ್ರದ ಪ್ರಕಾರ

ವೈದ್ಯಶಾಸ್ತ್ರದ ಪ್ರಕಾರ ಡಯಾಬಿಟೀಸ್ ಇರುವ ಹೆಣ್ಣು ಮಕ್ಕಳು ಈ ಕೆಳಗೆ ತಿಳಿಸಲಾದ ಸಾಮಾನ್ಯ ಲೈಂಗಿಕ ಸಮಸ್ಯೆಗಳನ್ನು ಹೊಂದಿರುತ್ತಾರಂತೆ:

*ಲೈಂಗಿಕ ನಿರಾಸಕ್ತಿ

*ಸ್ರವಿಸುವಿಕೆಯ ವೈಫಲ್ಯ ಅಥವಾ ಕಡಿಮೆ ಸ್ರವಿಸುವಿಕೆ

*ಮಿಲನ ವೇಳೆ ಅಥವಾ ನಂತರದಲ್ಲಿ ಯೋನಿಯ ಒಣಗುವಿಕೆ

*ಯೋನಿಯ ಸ್ನಾಯುಗಳಿಗೆ ಹಿತವಾಗಲು ವಿಫಲತೆ

*ಜನನಾಂಗದಲ್ಲಿ ಸ್ಪರ್ಶ ಸುಖದ ಕೊರತೆ

*ಮಿಲನ ಸಂದರ್ಭದಲ್ಲಿ ನೋವು

Most Read: ದೇಹದ ಕಲ್ಮಶಗಳನ್ನು ಹೊರಹಾಕಲು ಮನೆಯಲ್ಲಿಯೇ ಮಾಡಿ- ನೈಸರ್ಗಿಕ ಜ್ಯೂಸ್

ಡಯಾಬಿಟೀಸ್‌ನಿಂದ ಹೆಣ್ಣು ಮಕ್ಕಳಲ್ಲಿ

ಡಯಾಬಿಟೀಸ್‌ನಿಂದ ಹೆಣ್ಣು ಮಕ್ಕಳಲ್ಲಿ

ಡಯಾಬಿಟೀಸ್‌ನಿಂದ ಹೆಣ್ಣು ಮಕ್ಕಳಲ್ಲಿ ವಿವಿಧ ರೀತಿಯ ಲೈಂಗಿಕ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ರಕ್ತದಲ್ಲಿನ ಹೆಚ್ಚಿನ ಸಕ್ಕರೆಯ ಅಂಶದಿಂದ ಲೈಂಗಿಕಾಸಕ್ತಿ ಕೆರಳಿಸುವ, ಲೈಂಗಿಕ ಸುಖ ನೀಡುವ ನರ ವ್ಯವಸ್ಥೆಗೆ ಹಾನಿಯಾಗಬಹುದು. ಯೋನಿಯ ಭಾಗದಲ್ಲಿನ ಸಣ್ಣ ರಕ್ತನಾಳಗಳು ಬ್ಲಾಕ್ ಆಗುವುದರಿಂದ ಸ್ರವಿಸುವಿಕೆ, ಸ್ಪರ್ಶ ಹಾಗೂ ಸ್ನಾಯುಗಳ ಕೆಲಸದಲ್ಲಿ ಅಡ್ಡಿ ಉಂಟಾಗಬಹುದು. ಕೆಲ ಬಗೆಯ ಡಯಾಬಿಟೀಸ್ ನಿವಾರಣೆಯ ಔಷಧಿಗಳಿಂದ ಸಹ ಲೈಂಗಿಕ ಸಮಸ್ಯೆಗಳು ಬರಬಹುದು. ಒಂದೊಮ್ಮೆ ಯಾವುದೇ ಔಷಧಿಗಳಿಂದ ಸಮಸ್ಯೆ ಇರುವುದು ಕಂಡು ಬಂದಲ್ಲಿ ಪರ್ಯಾಯ ಔಷಧಿ ಬಳಸಲು ಯತ್ನಿಸುವುದು ಸೂಕ್ತ.

ಉದ್ವೇಗ, ಖಿನ್ನತೆ ಹಾಗೂ ಒತ್ತಡ

ಉದ್ವೇಗ, ಖಿನ್ನತೆ ಹಾಗೂ ಒತ್ತಡ

ಡಯಾಬಿಟೀಸ್‌ನಿಂದ ಸಾಮಾನ್ಯವಾಗಿ ಉದ್ವೇಗ, ಖಿನ್ನತೆ ಹಾಗೂ ಒತ್ತಡಗಳು ಹೆಚ್ಚಾಗುತ್ತವೆ. ಇವೆಲ್ಲದರಿಂದ ಹೆಂಗಸರಲ್ಲಿನ ಸೆಕ್ಸ್ ಆಸಕ್ತಿ ಕುಂಠಿತವಾಗಬಹುದು. ಅಲ್ಲದೆ ಡಯಾಬಿಟೀಸ್ ಇರುವ ಹೆಣ್ಣು ಮಕ್ಕಳಿಗೆ ಮೂತ್ರಕೋಶ ಹಾಗೂ ಯೋನಿಯ ಸೋಂಕು ತಗಲುವ ಸಾಧ್ಯತೆ ಜಾಸ್ತಿ ಇರುತ್ತದೆ. ಈ ಕಾರಣದಿಂದಲೂ ಸಹ ಸೆಕ್ಸ್ ಬೇಡವೆನಿಸಬಹುದು.

ಟೈಪ್ 2 ಡಯಾಬಿಟೀಸ್ ಹಾಗೂ ಅದಕ್ಕೆ ನೀಡಲಾಗುವ ಉಪಚಾರದಿಂದ ದೇಹತೂಕ ಹೆಚ್ಚಾಗಬಹುದು. ತೂಕ ಹೆಚ್ಚಾಗುವುದರಿಂದ ಲೈಂಗಿಕ ನಿರಾಸಕ್ತಿ ಕಾಣಿಸಿಕೊಳ್ಳಬಹುದು.

Most Read: ಶೀಘ್ರ ಸ್ಖಲನ ಬಗ್ಗೆ ಇರುವಂತಹ ಸತ್ಯ ಹಾಗೂ ಸುಳ್ಳುಗಳು-ಇವೆಲ್ಲಾ ಸಂಗತಿಗಳು ನಿಮಗೆ ತಿಳಿದಿರಲಿ

ಸೆಕ್ಸ್ ಹಾರ್ಮೋನ್‌ಗಳ ಕೊರತೆ

ಸೆಕ್ಸ್ ಹಾರ್ಮೋನ್‌ಗಳ ಕೊರತೆ

ಡಯಾಬಿಟೀಸ್ ಹೊರತು ಪಡಿಸಿ ಇನ್ನೂ ಕೆಲವು ಅಂಶಗಳು ಸೆಕ್ಸ್ ಸುಖಕ್ಕೆ ಅಡ್ಡಿ ಮಾಡಬಲ್ಲವು. ಸೆಕ್ಸ್ ಹಾರ್ಮೋನ್‌ಗಳ ಕೊರತೆ, ಇತರ ರೋಗ ಹಾಗೂ ಮುಪ್ಪಿನಿಂದ ಸಹ ಸೆಕ್ಸನಲ್ಲಿ ಆಸಕ್ತಿ ಕುಂದಬಹುದು. ಲೈಂಗಿಕಾಸಕ್ತಿ ಕುಂದುವುದರಿಂದ ಸಂಬಂಧಗಳಲ್ಲಿ ಬಿರುಕು ಕಾಣಿಸಿಕೊಳ್ಳಬಹುದು. ಆದರೂ ಇಂಥ ಎಲ್ಲ ಸಮಸ್ಯೆಗಳನ್ನು ಸ್ವತಃ ಪರಿಹರಿಸಿಕೊಂಡು ಸುಖವಾಗಿರಲು ಸಾಧ್ಯವಿದೆ.

ಡಯಾಬಿಟೀಸ್‌ನಿಂದಾಗುವ ಲೈಂಗಿಕ ನಿರಾಸಕ್ತಿಯ ನಿವಾರಣೋಪಾಯಗಳು

ಡಯಾಬಿಟೀಸ್‌ನಿಂದಾಗುವ ಲೈಂಗಿಕ ನಿರಾಸಕ್ತಿಯ ನಿವಾರಣೋಪಾಯಗಳು

*ಹೊರಗಡೆಯಿಂದ ದ್ರಾವಣ ಬಳಸುವುದರಿಂದ ಯೋನಿಯ ಒಣಗುವಿಕೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಮಾರುಕಟ್ಟೆಯಲ್ಲಿ ಸಾಕಷ್ಟು ರೀತಿಯ ಇಂಥ ವಸ್ತುಗಳು ಲಭ್ಯವಿವೆ. ಇವು ಲೈಂಗಿಕಾಸಕ್ತಿ ಕೆರಳಿಸುವ ಗುಣಗಳನ್ನು ಸಹ ಹೊಂದಿರುತ್ತವೆ.

ಯೋನಿಯ ಮಾತ್ರೆಗಳು ಅಥವಾ ಎಸ್ಟ್ರೊಜೆನ್ ಕ್ರೀಮ್‌ಗಳನ್ನು ನಿಯಮಿತವಾಗಿ ಬಳಸುವುದರಿಂದ ಯೋನಿಯ ಸ್ನಾಯುಗಳಿಗೆ ಹಿತವಾಗಿ ಮಿಲನ ಸಂದರ್ಭದ ನೋವು ಕಡಿಮೆಯಾಗುತ್ತದೆ.

*ಸ್ವತಃ ವೈಬ್ರೇಟರಗಳನ್ನು ಬಳಸಿ ಮಿಲನ ಕ್ರಿಯೆ ಇಲ್ಲದೆ ಸೆಕ್ಸ್ ಸುಖ ಅನುಭವಿಸಬಹುದು. ಅಲ್ಲದೆ ವೈಬ್ರೇಟರನಿಂದ ಯೋನಿಯ ಒಳಗಿನ ಸ್ನಾಯುಗಳು ಎಚ್ಚರಗೊಂಡು ಮತ್ತೆ ಕೆಲಸ ಮಾಡಲಾರಂಭಿಸುತ್ತವೆ.

*ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸರಿಯಾಗಿ ಕಾಪಾಡಿಕೊಳ್ಳುವುದರಿಂದ ಸಾಮರ್ಥ್ಯ ಹೆಚ್ಚಾಗಿ ಸ್ನಾಯುಗಳ ಕ್ಷಮತೆ ಸುಧಾರಿಸುತ್ತದೆ.

ಮೂತ್ರಕೋಶ ಹಾಗೂ ಯೋನಿಯ ಸೋಂಕು ತಗುಲದಂತೆ ಎಚ್ಚರ ವಹಿಸಬೇಕು.

*ತಜ್ಞ ವೈದ್ಯ ಬಳಿ ಸಲಹೆ ಪಡೆದು ಅವಶ್ಯಕತೆ ಬಿದ್ದಲ್ಲಿ ಹಾರ್ಮೋನ್ ರಿಪ್ಲೇಸಮೆಂಟ್ ಥೆರಪಿ ಪಡೆಯಬಹುದು. ಹೆಂಗಸರಲ್ಲಿ ಟೆಸ್ಟೊಸ್ಟಿರಾನ್ ಹಾಗೂ ಇಸ್ಟ್ರೊಜೆನ್ ಹಾರ್ಮೊನ್‌ಗಳ ಕೊರತೆಯಿಂದ ಲೈಂಗಿಕ ನಿರಾಸಕ್ತಿ ಉಂಟಾಗುತ್ತದೆ.

Most Read: ಮಹಿಳೆಯರೇ! ಒಳ ಚಡ್ಡಿಯನ್ನು ದಿನಕ್ಕೊಮ್ಮೆಯಾದರೂ ಬದಲಿಸಿ! ಇಲ್ಲಾಂದ್ರೆ ಇದೆಲ್ಲಾ ಸಮಸ್ಯೆ ಬರಬಹುದು....

ಸೆಕ್ಸ್ ಥೆರಪಿ ಅಥವಾ ಕೌನ್ಸೆಲಿಂಗ್‌

ಸೆಕ್ಸ್ ಥೆರಪಿ ಅಥವಾ ಕೌನ್ಸೆಲಿಂಗ್‌

ಸೆಕ್ಸ್ ಥೆರಪಿ ಅಥವಾ ಕೌನ್ಸೆಲಿಂಗ್‌ನಿಂದ ಲೈಂಗಿಕ ಸಮಸ್ಯೆಗಳು, ಉದ್ವೇಗ, ಖಿನ್ನತೆ, ಅಪರಾಧಿ ಭಾವನೆ, ಹಿಂದೆ ನಡೆದ ಲೈಂಗಿಕ ದೌರ್ಜನ್ಯದ ಭಾವನೆ, ಆತ್ಮ ವಿಶ್ವಾಸ ಕೊರತೆ ಮುಂತಾದುವುಗಳನ್ನು ನಿವಾರಿಸಬಹುದು.

ಉತ್ತಮ ಸೆಕ್ಸ್‌ಗಾಗಿ ಸ್ವಯಂ ಮಾರ್ಗಗಳು

ಉತ್ತಮ ಸೆಕ್ಸ್‌ಗಾಗಿ ಸ್ವಯಂ ಮಾರ್ಗಗಳು

ಲೈಂಗಿಕ ಸಮಸ್ಯೆಗಳಿಂದ ಯಾವಾಗಲೂ ಇಬ್ಬರು ವ್ಯಕ್ತಿಗಳು ಬಾಧೆ ಪಡುವಂತಾಗುತ್ತದೆ. ನಿಮ್ಮ ಸಂಗಾತಿಯೊಂದಿಗೆ ಇದನ್ನು ಚರ್ಚಿಸುವುದು ಬೇಡವೆನ್ನಿಸಿದರೂ ಚರ್ಚೆ ಅಗತ್ಯ. ಒಂದೊಮ್ಮೆ ಸಮಸ್ಯೆಗಳನ್ನು ಮುಚ್ಚಿಟ್ಟುಕೊಂಡಲ್ಲಿ ಸಂಬಂಧಗಳಲ್ಲಿ ಬಿರುಕು ಮೂಡಬಹುದು. ಹೀಗಾಗಿ ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಿ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗುವುದು ಸೂಕ್ತ.

Most Read: ಕೆಲವೊಮ್ಮೆ ಮಹಿಳೆಯರಿಗೆ ಸೆಕ್ಸ್ ಬಳಿಕ ಮೂತ್ರ ವಿಸರ್ಜನೆ ಮಾಡುವುದಕ್ಕೆ ಕಷ್ಟವಾಗುವುದು ಯಾಕೆ?

ಲೈಂಗಿಕಾಸಕ್ತಿ ಹೆಚ್ಚಿಸಿ ಸುಖಾನುಭವ ಹೆಚ್ಚಿಸಲು ಈ ಕೆಳಗಿನ ಕ್ರಮಗಳನ್ನು ಸಹ ಅನುಸರಿಸಬಹುದು

ಲೈಂಗಿಕಾಸಕ್ತಿ ಹೆಚ್ಚಿಸಿ ಸುಖಾನುಭವ ಹೆಚ್ಚಿಸಲು ಈ ಕೆಳಗಿನ ಕ್ರಮಗಳನ್ನು ಸಹ ಅನುಸರಿಸಬಹುದು

*ಮಿಲನ ಕ್ರಿಯೆಯ ವೇಳಾ ಪಟ್ಟಿ ಬದಲಾಯಿಸಿ. ಬೇರೆ ಬೇರೆ ಭಂಗಿಗಳನ್ನು ಟ್ರೈ ಮಾಡಿ. ರತಿ ಸಾಹಿತ್ಯದ ಪುಸ್ತಕ ಓದಿ ಅಥವಾ ಲೈಂಗಿಕ ವಿಡಿಯೋಗಳನ್ನು ನೋಡಿ. ಸೆಕ್ಸ್ ಸ್ಟೋರ್‌ಗೆ ಹೋಗಿ ಸಲಹೆಗಳನ್ನು ಪಡೆಯಲು ಯತ್ನಿಸಬಹುದು.

*ಸ್ಪರ್ಶ ಸುಖ ನೀಡುವ ಆದರೆ ಲೈಂಗಿಕವಲ್ಲದ ಮಸಾಜ್‌ನಿಂದ ಸಂಗಾತಿಗಳ ಮಧ್ಯದ ಭಾವನಾತ್ಮಕ ಸಂಬಂಧ ಸುಧಾರಿಸಬಹುದು.

*ಸ್ಮೋಕಿಂಗ್ ನಿಲ್ಲಿಸುವುದು ಸೂಕ್ತ. ಧೂಮಪಾನದಿಂದ ರಕ್ತನಾಳ ಹಾಗೂ ಸ್ನಾಯುಗಳಿಗೆ ಹಾನಿಯಾಗುತ್ತದೆ. ಅಲ್ಲದೆ ಅತಿಯಾದ ಅಲ್ಕೊಹಾಲ್ ಸೇವನೆಯಿಂದ ಸಹ ಲೈಂಗಿಕಾಸಕ್ತಿ ಕುಂದುತ್ತದೆ.

*ಯೋನಿಯ ಸ್ನಾಯುಗಳಿಗೆ ಬಲ ನೀಡುವಂಥ ವ್ಯಾಯಾಮಗಳನ್ನು ಮಾಡಿ.

*ಮಿಲನ ಸಂದರ್ಭದಲ್ಲಿ ಉಂಟಾಗುತ್ತಿರುವ ಒತ್ತಡದ ಸಂದರ್ಭಗಳನ್ನು ನಿವಾರಸಲು ಯತ್ನಿಸಿ.

*ಸೆಕ್ಸ್‌ಗಾಗಿ ಸಾಕಷ್ಟು ಸಮಯ ಮೀಸಲಿಡಿ. ಬೆಳಗ್ಗೆಯಿಂದ ರಾತ್ರಿಯವರೆಗೂ ಸತತವಾಗಿ ಕೆಲಸ ಮಾಡಿ ನೇರವಾಗಿ ಮಿಲನ ಕ್ರಿಯೆಗೆ ಮುಂದಾಗಬೇಡಿ. ಸೆಕ್ಸ್‌ಗೂ ಮುಂಚೆ ಸ್ವಲ್ಪ ರೆಸ್ಟ್ ಮಾಡಿ, ಹೊರಗೆ ಸುತ್ತಾಡಿ ಬನ್ನಿ.

ಈ ಕೆಳಗಿನ ಕ್ರಮಗಳನ್ನು ಸಹ ಅನುಸರಿಸಬಹುದು

ಈ ಕೆಳಗಿನ ಕ್ರಮಗಳನ್ನು ಸಹ ಅನುಸರಿಸಬಹುದು

ಮಿಲನ ಕ್ರಿಯೆ ಒಂದೇ ಅಲ್ಲದೆ ಇನ್ನೂ ಹಲವಾರು ವಿಧಾನಗಳ ಮೂಲಕ ಸಂಗಾತಿಗಳು ಸೆಕ್ಸ್ ಸುಖ ಪಡೆಯಲು ಸಾಧ್ಯ. ಕೈ, ಬಾಯಿ ಅಥವಾ ಸೆಕ್ಸ್ ಆಟಿಗೆಗಳನ್ನು ಬಳಸಿ ಸಂಗಾತಿಗಳು ಒಬ್ಬರಿಗೊಬ್ಬರು ಸುಖ ನೀಡಬಹುದು. ಈ ಕ್ರಿಯೆಗಳಿಂದ ಸಾಮಾನ್ಯ ಮಿಲನ ಕ್ರಿಯೆಗಿಂತಲೂ ಹೆಚ್ಚಿನ ಸುಖ ಪಡೆಯಲು ಸಾಧ್ಯ.

ಸಂಪೂರ್ಣ ತೃಪ್ತಿ ನೀಡಲಾಗದ ಸೆಕ್ಸ್‌ನಿಂದ ಪ್ರಯೋಜನವಿಲ್ಲ. ಇದರಿಂದ ಸೆಕ್ಸ್ ಆಸಕ್ತಿ ಮತ್ತಷ್ಟು ಕುಂದಬಹುದು. ಉತ್ತಮ ಸೆಕ್ಸ್‌ಗಾಗಿ ಸಮಯ ಮಾಡಿಕೊಳ್ಳಿ. ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಿ. ಸಾಧ್ಯವಿರುವ ಎಲ್ಲ ಸಮಸ್ಯೆಗಳಿಗೆ ಉಪಚಾರ ಮಾಡಿ, ಮೊದಲಿಗಿಂತ ಉತ್ತಮವಾದ ಸೆಕ್ಸ್ ಜೀವನ ನಡೆಸಲು ಪ್ರಯತ್ನಿಸಿ.

English summary

Better Sex for Women With Diabetes

Studies highlighted by the National Institutes of Health have found that as much as 27 percent of women with Type 1 and up to 42 percent of women with Type 2 experience some kind of sexual dysfunction. A Turkish study of 176 sexually active women found those with Type 2 diabetes had more sexual problems. Women with higher HbA1c (a measure of glucose control over the previous 2–3 months) and women who had diabetes longer had higher rates of sexual problems.
X
Desktop Bottom Promotion