For Quick Alerts
ALLOW NOTIFICATIONS  
For Daily Alerts

ಮಧುಮೇಹ ರೋಗಿಗಳು ಖರ್ಜೂರ ತಿನ್ನಬಹುದೇ?

|

ಖರ್ಜೂರ ಅತ್ಯುತ್ತಮ ಹಣ್ಣು ಹಾಗೂ ಸಂಪೂರ್ಣ ಆಹಾರಗಳಿಗೇನು ಕಮ್ಮಿ ಇಲ್ಲ. ಈ ಹಣ್ಣಿನಲ್ಲಿ ಕರಗಬಲ್ಲ ಹಾಗೂ ಕರಗದ ನಾರಿನ ಗುಣವು ಸಮೃದ್ಧವಾಗಿದೆ. ಇದು ಕರುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಇದರಲ್ಲಿ ಸೆಲೆನಿಯಮ್, ತಾಮ್ರ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಮ್ಯಾಂಗನಿಸ್, ಕಬ್ಬಿಣ, ರಂಜಕ ಮತ್ತು ಕ್ಯಾಲ್ಸಿಯಮ್ನ ಮಧ್ಯಮ ಸಾಂದ್ರತೆಯನ್ನು ಹೊಂದಿರುತ್ತದೆ. ಹಾಗಾಗಿ ಖರ್ಜೂರವನ್ನು ಅತ್ಯುತ್ತಮ ಒಣ ಹಣ್ಣುಗಳ ಪಟ್ಟಿಗೆ ಸೇರಿಸಲಾಗಿದೆ. ಇದರ ಇನ್ನೊಂದು ವಿಶೇಷ ಗುಣವೆಂದರೆ ಸಾಕಷ್ಟು ಅನಾರೋಗ್ಯಗಳನ್ನು ಗುಣಮುಖವಾಗಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಹಣ್ಣುಗಳು, ಒಣ ಬೀಜಗಳು ಹಾಗೂ ಒಣ ಹಣ್ಣುಗಳು ನಮ್ಮ ಆರೋಗ್ಯಕ್ಕೆ ತುಂಬಾ ಲಾಭಕಾರಿ. ಒಂದೊಂದು ಬಗೆಯ ಹಣ್ಣುಗಳಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ನಮಗೆ ತಿಳಿಯದೆ ಇರುವಂತಹ ಕೆಲವೊಂದು ಪೋಷಕಾಂಶಗಳು ನಾವು ತಿನ್ನುತ್ತಿರುವಂತಹ ಹಣ್ಣುಗಳು ಹಾಗೂ ಒಣ ಹಣ್ಣುಗಳಲ್ಲಿ ಇರಬಹುದು. ಅದರಲ್ಲೂ ಪ್ರಮುಕವಾಗಿ ಮರುಭೂಮಿಯಲ್ಲಿ ಬೆಳೆಯುವಂತಹ ಖರ್ಜೂರವು ದೇಹಕ್ಕೆ ತುಂಬಾ ಲಾಭಕಾರಿ ಎಂದು ಹೇಳಲಾಗುತ್ತದೆ. ಖರ್ಜೂರವನ್ನು ಹಲವಾರು ವಿಧಗಳಿಂದ ಸೇವಿಸಲಾಗುತ್ತಿದೆ. ಹಸಿ ಖರ್ಜೂರ ಹಾಗೂ ಒಣ ಖರ್ಜೂರ ಎಂದು ಎರಡು ವಿಧಗಳು ಇವೆ. ಇವುಗಳ ರುಚಿ ಮಾತ್ರ ಅದೇ ರೀತಿಯಲ್ಲಿರುವುದು ಮತ್ತು ಅದರಲ್ಲಿರುವ ಪೋಷಕಾಂಶಗಳು ಕೂಡ. ಹೆಚ್ಚಾಗಿ ನಾವೆಲ್ಲರೂ ತಿನ್ನುವುದು ಅರೆ ಒಣಗಿಸಿದ ಖರ್ಜೂರ.

diabetes

ಒಣ ಖರ್ಜೂರವು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಅದರಲ್ಲೂ ಚಳಿಗಾಲದಲ್ಲಿ ಇದು ನಮ್ಮ ಆರೋಗ್ಯಕ್ಕೆ ತುಂಬಾ ಲಾಭಕಾರಿ. ಒಣ ಖರ್ಜೂರವನ್ನು ಚುಹರಾಸ್ ಎಂದು ಕೂಡ ಕರೆಯಲಾಗುತ್ತದೆ. ಒಣ ಖರ್ಜೂರವೆಂದರೆ ಅದರಲ್ಲಿ ಯಾವುದೇ ರೀತಿಯ ತೇವಾಂಶವು ಇರದು. ಸಂಪೂರ್ಣವಾಗಿ ಒಣಗಿರುವುದು. ಭಾರತದಲ್ಲಿ ಒಣ ಖರ್ಜೂರವನ್ನು ಕೆಲವೊಂದು ಧಾರ್ಮಿಕ ವಿಧಿವಿಧಾನಗಳಿಗೂ ಬಳಸಲಾಗುತ್ತದೆ. ಇದರಲ್ಲಿ ಅದ್ಭುತವಾಗಿರುವಂತ ಶಕ್ತಿ ವರ್ಧಕ ಮತ್ತು ಶಕ್ತಿಶಾಲಿ ವಿಟಮಿನ್ ಹಾಗೂ ಖನಿಜಾಂಶಗಳು ಇವೆ. ಆರೋಗ್ಯವನ್ನು ಕಾಪಾಡಲು ಇವುಗಳು ಪ್ರಮುಖ ಪಾತ್ರ ನಿರ್ವಹಿಸುವುದು.

ಒಣ ಖರ್ಜೂರದಲ್ಲಿ ಉನ್ನತ ಮಟ್ಟದ ಕ್ಯಾಲ್ಸಿಯಂ ಇದೆ. ಇದು ಮೂಳೆಗಳು ಹಾಗೂ ಹಲ್ಲುಗಳನ್ನು ಬಲಪಡಿಸುವಲ್ಲಿ ತುಂಬಾ ಪ್ರಮುಖ ಪಾತ್ರ ವಹಿಸುವುದು. ದಿನಕ್ಕೆ ನೀವು ಕೆಲವು ಒಣ ಖರ್ಜೂರ ಸೇವನೆ ಮಾಡಿದರೆ ಅದರಿಂದ ಕ್ಯಾಲ್ಸಿಯಂ ಕೊರತೆಯಿಂದ ಕಾಡುವಂತಹ ಅಸ್ಥಿರಂಧ್ರತೆ ಮತ್ತು ಸಂಧಿವಾತ ಹಾಗೂ ಹಲ್ಲಿನ ಸಮಸ್ಯೆಗಳನ್ನು ನಿವಾರಣೆ ಮಾಡಬಹುದಾಗಿದೆ

ಒಣ ಖರ್ಜೂರದಲ್ಲಿ ನೈಸರ್ಗಿಕವಾಗಿರುವಂತಹ ವಿಟಮಿನ್ ಬಿ5 ಅಥವಾ ಪ್ಯಾಂಥೋಥೆನಿಕ್ ಆಮ್ಲವು ಸಮೃದ್ಧವಾಗಿದೆ. ಇದು ಚರ್ಮದ ಅಂಗಾಂಶಗಳಿಗೆ ತುಂಬಾ ಲಾಭಕಾರಿ ಮತ್ತು ಇದು ಫ್ರೀ ರ್ಯಾಡಿಕಲ್ ನಿಂದಾಗಿ ಚರ್ಮಕ್ಕೆ ಆಗುವಂತಹ ಹಾನಿಯನ್ನು ಸರಿಪಡಿಸುವುದು. ಒಣ ಖರ್ಜೂರದಲ್ಲಿ ಇರುವಂತಹ ಹಲವಾರು ರೀತಿಯ ಆ್ಯಂಟಿಆಕ್ಸಿಡೆಂಟ್ ಗಳಿಂದಾಗಿ ನಿಮಗೆ ಯೌವನಯುತ ಚರ್ಮ ಪಡೆಯಲು ಸಹಕಾರಿಯಾಗುವುದು. ಇದು ನಿಮ್ಮ ಚರ್ಮಕ್ಕೆ ಪೋಷಣೆ ನೀಡುವುದು ಮತ್ತು ಅದರ ಸೌಂದರ್ಯ ಸುಧಾರಿಸುವುದು.

ಸೆಲೆನಿಯಮ್ ಎನ್ನುವ ಗುಣವು ದೇಹವನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸುತ್ತದೆ. ಇದು ಮಧುಮೇಹದ ತೊಂದರೆ, ಅಪಧಮನಿಯ ತೊಂದರೆಗಳು, ಕ್ಯಾನ್ಸರ್ ಮತ್ತು ಆಲ್ಝಮೈರ್ ನಂತಹ ನ್ಯೂರೋ ಡಿಜೆನೆರೆಟಿವ್ ಕಾಯಿಲೆಗಳಿಂದ ರಕ್ಷಣೆ ನೀಡುವುದು. ಪೊಟ್ಯಾಸಿಯಂ ಮತ್ತು ಕಡಿಮೆ ಸೋಡಿಯಂ ಅಂಶವು ಅಧಿಕ ರಕ್ತದ ಒತ್ತಡ ಹೊಂದಿರುವವರಿಗೆ ಸಹಾಯ ಮಾಡುತ್ತದೆ. ಖರ್ಜೂರದಲ್ಲಿ ಈ ಗುಣವು ಅತ್ಯುತ್ತಮವಾಗಿರುವುದರಿಂದ ರಕ್ತ ಸಮಸ್ಯೆ ಇರುವವರಿಗೆ ಅತ್ಯುತ್ತಮ ರೀತಿಯಲ್ಲಿ ಆರೈಕೆ ಮಾಡುವುದು. ಇದರಲ್ಲಿ ಫೈಟೊಕೆಮಿಕಲ್ಸ್ಗಳ ಗುಣವಿದೆ. ಇದು ಕೊಲೆಸ್ಟ್ರಾಲ್, ಹೃದಯರೋಗ, ಕ್ಯಾನ್ಸರ್ಗಳಿಂದ ಉಂಟಾಗುವ ಅಪಾಯಗಳನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಕಬ್ಬಿಣದ ಅಂಶವು ಸಮೃದ್ಧವಾಗಿರುವುದರಿಂದ ರಕ್ತ ಹೀನತೆ ಅನುಭವಿಸುತ್ತಿದ್ದವರು ಇದನ್ನು ಸೇವಿಸುವುದು ಅತ್ಯುತ್ತಮ ಆಯ್ಕೆಯಾಗಿದೆ.

Most Read: ಮಧುಮೇಹ ರೋಗವನ್ನು ನಿಯಂತ್ರಿಸುವ ಪವರ್ ಫುಲ್ ನೈಸರ್ಗಿಕ ಪಾನೀಯ

ರಕ್ತ ಹೀನತೆ ಇರುವವರು ಅಥವಾ ಆರೋಗ್ಯವಂತರು ಸಹ ದಿನಕ್ಕೆ 3-5 ಖರ್ಜೂರವನ್ನು ತಿನ್ನುತ್ತಾ ಬಂದರೆ ದೇಹಕ್ಕೆ ಅಗತ್ಯವಾದ ಆರೋಗ್ಯಯುತವಾದ ರಕ್ತಕಣಗಳನ್ನು ಹೆಚ್ಚಿಸುತ್ತದೆ. ನೈಸರ್ಗಿಕವಾಗಿರುವ ಸಿಹಿ ಗುಣವು ದೇಹದ ಆರೋಗ್ಯವನ್ನು ಸಮತೋಲನದಲ್ಲಿ ಇಡುತ್ತದೆ. ಉಪವಾಸದ ಸಮಯದಲ್ಲಿ ಈ ಹಣ್ಣನ್ನು ತಿಂದರೆ ದಿನವಿಡಿ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಇದನ್ನು ಬೆಳಗಿನ ಉಪಹಾರದೊಂದಿಗೆ ಸೇವಿಸಿದರೆ ದಿನವಿಡೀ ಸಕ್ರಿಯವಾಗಿರಲು ಸಹಾಯಮಾಡುವುದು. ಪೋಷಕಾಂಶಗಳಿಂದ ಕೂಡಿರುವ ಈ ಹಣ್ಣು ಮಧು ಮೇಹ ರೋಗಿಗಳಿಗೆ ಉತ್ತಮವೇ? ಎನ್ನುವುದು ಸಾಕಷ್ಟು ಜನರಿಗೆ ಪ್ರಶ್ನೆಯಾಗಿಯೇ ಉಳಿದಿರಬಹುದು. ಇಂತಹ ಪ್ರಶ್ನೆಗೆ ಉತ್ತರವನ್ನು ಲೇಖನದ ಮುಂದಿನ ಭಾಗ ವಿವರಿಸುವುದು.

ಈ ಪೌಷ್ಟಿಕ ಪೂರ್ಣ ಹಣ್ಣು ಮಧುಮೇಹಿಗಳಿಗೆ ಒಳ್ಳೆಯದೇ?

ಮಧುಮೇಹ ಎನ್ನುವುದು ರಕ್ತದಲ್ಲಿನ ಅಸಹಜತೆ. ರಕ್ತದಲ್ಲಿ ಸಕ್ಕರೆ ಮಟ್ಟ ಅಧಿಕವಾಗಿರುವುದಕ್ಕೆ ಮಧುಮೇಹ ಎನ್ನಲಾಗುವುದು. ಇದನ್ನು ಜಿಐ ಅಥವಾ ಗ್ಲೈಸೆಮಿಕ್ ಸೂಚ್ಯಂಕವು ಆಹಾರದಲ್ಲಿನ ಕಾರ್ಬೋಹೈಡ್ರೇಟ್ನ ಸಾಪೇಕ್ಷ ಶ್ರೇಯಾಂಕವನ್ನು ತಿಳಿಸುವುದು. ಇದು ರಕ್ತದಲ್ಲಿ ಗ್ಲೂಕೋಸ್ ಮಟ್ಟ ಹೇಗೆ ಪರಿಣಾಮ ಬೀರುವುದು ಎನ್ನುವುದನ್ನು ಅವಲಂಬಿಸಿರುತ್ತದೆ. ಹಾಗಾಗಿ ಮಧುಮೇಹ ಇರುವವರು ಗ್ಲೈಸೆಮಿಕ್ ನಿಯಂತ್ರಣವನ್ನು ಯಾವರೀತಿಯಲ್ಲಿ ಅನುಸರಿಸುತ್ತಾರೆ? ಎನ್ನುವುದು ಮುಖ್ಯವಾಗಿರುತ್ತದೆ. ಕೆಲವು ಅಧ್ಯಯನಗಳ ಪ್ರಕಾರ ಮಧುಮೇಹ ಇರುವವರು ಸರಳ ಮೊಸರಿನೊಂದಿಗೆ ಖರ್ಜೂರವನ್ನು ಬೆರೆಸಿ ಸೇವಿಸಬಹುದು ಎಂದು ಹೇಳಲಾಗುವುದು. ಇನ್ನೊಂದು ಅಧ್ಯಯನದ ಪ್ರಕಾರ ಮಧುಮೇಹಿಗಳು ದಿನಕ್ಕೆ 7-10 ಖರ್ಜೂರವನ್ನು ಸೇವಿಸಬಹುದು ಎಂದು ಹೇಳುತ್ತಾರೆ ಮುಂಬೈನ ಭಾಟಿಯಾ ಆಸ್ಪತ್ರೆಯ ಪೌಷ್ಟಿಕತಜ್ಞ ಗಾರ್ಗಿ ಶರ್ಮ.

ಖರ್ಜೂರಗಳನ್ನು ಒಣಗಿಸಿರುವುದರಿಂದ, ಅವುಗಳ ಕ್ಯಾಲೊರಿ ಅಂಶವು ಇತರ ತಾಜಾ ಹಣ್ಣುಗಳಿಗಿಂತ ಹೆಚ್ಚಾಗಿರುತ್ತದೆ. ಅವುಗಳು ನೈಸರ್ಗಿಕ ಸಕ್ಕರೆಯಲ್ಲಿ ಅಧಿಕವಾಗಿದ್ದು, ತಕ್ಷಣದ ಶಕ್ತಿಯ ಸ್ಫೋಟಕ್ಕೆ ಇದು ಸೂಕ್ತವಾದ ತಿಂಡಿ ಮಾಡುತ್ತದೆ. "ಮಧುಮೇಹಿಗಳು ತಮ್ಮ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಖರ್ಜೂರವನ್ನು ಸೇವಿಸಬಹುದು.ಮಧುಮೇಹಿಗಳು ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಂಡು, ನಿಯಮಿತವಾಗಿ ವ್ಯಾಯಾಮ ಮಾಡಿ ಮತ್ತು ಆರೋಗ್ಯಕರ ಆಹಾರ ಪದ್ಧತಿಯನ್ನು ಕಾಪಾಡಿಕೊಳ್ಳುವವರೆಗೆ ವಾರಕ್ಕೆ 1-2 ಖರ್ಜೂರಗಳನ್ನು ತಿನ್ನುವುದು ಉತ್ತಮ ಎಂದು ಅವರು ಹೇಳುತ್ತಾರೆ.

ಖರ್ಜೂರವನ್ನು ಅತಿಯಾಗಿ ತಿಂದರೆ ಏನಾಗುತ್ತದೆ?

ಖರ್ಜೂರಗಳು ಹೆಚ್ಚಿನ ಕ್ಯಾಲೊರಿಗಳನ್ನು ಹೊಂದಿರುತ್ತವೆ. 1/4 ಕಪ್ ಖರ್ಜೂರ ತಿಂದರೆ100 ಕ್ಕಿಂತ ಹೆಚ್ಚು ಕ್ಯಾಲೊರಿಗಳನ್ನು ಹೊಂದಿರುತ್ತದೆ. ಆದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಖರ್ಜೂರಗಳನ್ನು ಸೇವಿಸುವುದರಿಂದ ಕ್ಯಾಲೊರಿ ಹೆಚ್ಚಳಕ್ಕೆ ಕಾರಣವಾಗಬಹುದು. ಇನ್ನು ಹೆಚ್ಚು ಖರ್ಜೂರ ತಿಂದರೆ ಹುಳುಕು ಹಲ್ಲಿನ ಸಮಸ್ಯೆ ಇರುವವರಿಗೆ ತೊಂದರೆ ಉಂಟಾಗುವುದು.

English summary

Are dates good for diabetes?

Dates are nothing short of a superfood. They are rich in soluble and insoluble fibres which boost gut health, and are loaded with selenium, copper, potassium, magnesium and moderate concentrations of manganese, iron, phosphorus, and calcium. While selenium protects the body from oxidative stress which leads to diabetic complications, atherosclerosis, cancer and neurodegenerative diseases like Alzheimer’s; the potassium and low sodium content makes it good for people suffering from hypertension. It also contains phytochemicals or naturally occurring plant chemicals that can lower cholesterol, reducing risk of heart disease and cancer.
X
Desktop Bottom Promotion