ಮಧುಮೇಹಕ್ಕೆ ಸರಳ ನೈಸರ್ಗಿಕ ಔಷಧಿಗಳು- ಬರೀ ಒಂದೇ ವಾರದಲ್ಲಿ ನಿಯಂತ್ರಣಕ್ಕೆ!

Posted By: Deepu
Subscribe to Boldsky

ಮಧುಮೇಹ ಎಂದಾಕ್ಷಣ ಕೆಲವರಲ್ಲಿ ಅಳುಕಿನ ಭಾವ ಎದುರಾಗುತ್ತದೆ. ಇದರಿಂದ ತಮ್ಮ ಜೀವನವೇ ಮುಗಿದ ಹಾಗೆ ಎಂದು ಹೆಚ್ಚಿನವರು ಭಾವಿಸುತ್ತಾರೆ. ಇನ್ನು ಕೆಲವರು ಅನೇಕ ಔಷಧಿ ಮತ್ತು ಮಾತ್ರೆಗಳನ್ನು ಸೇವಿಸುತ್ತಾ ನರಳುತ್ತಿರುತ್ತಾರೆ. ತಾವು ಸೇವಿಸುವ ಔಷಧಿಗಳಿಂದ ಕೆಲವರಿಗೆ ಅಡ್ಡಪರಿಣಾಮಗಳು ಉಂಟಾಗಿ ಅನೇಕ ರೀತಿಯ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಈ ನಿಟ್ಟಿನಲ್ಲಿ ಬೋಲ್ಡ್ ಸ್ಕೈ ತಾಣವು ನಿಮ್ಮ ಮನೆಯಲ್ಲಿಯೇ ಸಿಗುವ ವಸ್ತುಗಳಿಂದ ಪ್ರಾಕೃತಿಕವಾಗಿ ಮಧುಮೇಹವನ್ನು ನಿಯಂತ್ರಿಸಲು ಸಹಕಾರಿಯಾಗುವ ಸುಲಭದ ಸಂಗತಿಗಳನ್ನು ನಿಮ್ಮ ಉಪಯೋಗಕ್ಕಾಗಿ ನೀಡಿದೆ.

ಮಧುಮೇಹದಿಂದ ಬಳಲುತ್ತಿರುವವರು ಹೆಚ್ಚಿನ ಕಾಳಜಿ ವಹಿಸುವ ಅಗತ್ಯವಿದೆ ಮತ್ತು ರಕ್ತದೊತ್ತದ ಮಟ್ಟವನ್ನು ಸಮತೋಲನದಲ್ಲಿಡಲು ಸರ್ವಪ್ರಯತ್ನ ಮಾಡಬೇಕಿದೆ. ನಿರ್ಲಕ್ಷಿಸಿದರೆ, ಮಧುಮೇಹದ ತೊಂದರೆಯು ಹೆಚ್ಚಾಗಿ ಅಪಾಯವುಂಟಾಗಲು ಕಾರಣವಾಗುತ್ತದೆ. ಈ ಕಾಯಿಲೆ ಬಂದ ಮೇಲೆ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲದೇ ಹೋದರೂ ಸೂಕ್ತ ಜೀವನ ಶೈಲಿ, ಆಹಾರಪದ್ಧತಿ ಮತ್ತು ವೈದ್ಯರು ಸಲಹೆ ನೀಡಿದ ಔಷಧಿಗಳ ಸೇವನೆಯ ಮೂಲಕ ಸಂಪೂರ್ಣವಾಗಿ ಹತೋಟಿಯಲ್ಲಿಟ್ಟುಕೊಳ್ಳಬಹುದು. ವಿವಿಧ ವೈದ್ಯಪದ್ಧತಿಯಲ್ಲಿ ಇಂದು ವಿವಿಧ ರೀತಿಯ ಚಿಕಿತ್ಸೆಗಳು ಹಾಗೂ ಔಷಧಿಗಳು ಲಭ್ಯವಿವೆ. ಆದರೆ ದುಬಾರಿಯಾದ ಈ ಔಷಧಿಗಳನ್ನು ಕೊಳ್ಳಲು ಎಲ್ಲರಿಗೂ ಸಾಧ್ಯವಾಗದು.

ಈ ಔಷಧಿಗಳು ನೀಡುವಷ್ಟೇ ಪರಿಣಾಮಕಾರಿ ಫಲಿತಾಂಶವನ್ನು ನಮ್ಮ ಮನೆಯಲ್ಲಿರುವ ಸುಲಭ ಸಾಮಾಗ್ರಿಗಳೂ ನೀಡುತ್ತವೆ. ಆಯುರ್ವೇದದಿಂದ ಪ್ರಮಾಣಿತವಾದ ಈ ಮನೆಮದ್ದುಗಳು ನಿಜವಾಗಿಯೂ ಫಲಪ್ರದವಾಗಿವೆ. ಆದರೆ ಸೇವನೆಗೆ ಮೊದಲು ಆಯುರ್ವೇದ ವೈದ್ಯರಿಂದ ಸಲಹೆ ಪಡೆದುಕೊಂಡು ಅವರು ಸೂಚಿಸಿದ ಪ್ರಮಾಣ ಮತ್ತು ಅವಧಿಯಲ್ಲಿ ಸೇವಿಸುವುದು ಸೂಕ್ತವಾಗಿದೆ...

ಮೆಂತೆ ಸೊಪ್ಪು ಹೆಚ್ಚಾಗಿ ಸೇವಿಸಿ

ಮೆಂತೆ ಸೊಪ್ಪು ಹೆಚ್ಚಾಗಿ ಸೇವಿಸಿ

ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಆರೋಗ್ಯಕರ ಮಟ್ಟದಲ್ಲಿ ಇರಿಸಲು ಮೆಂತೆ ಅತ್ಯುತ್ತಮ ಆಯ್ಕೆಯಾಗಿದೆ. ವಿಶೇಷವಾಗಿ ಟೈಪ್ 2 ಮಧುಮೇಹಿಗಳಿಗೆ ಇದು ಉತ್ತಮ ಪರಿಹಾರವಾಗಿದ್ದು ದೇಹದಲ್ಲಿ ಉತ್ಪತ್ತಿಯಾದ ಇನ್ಸುಲಿನ್ ಪ್ರಮಾಣವನ್ನು ಜೀವಕೋಶಗಳು ಹೀರಿಕೊಳ್ಳಲು ನೆರವಾಗುತ್ತದೆ. ಮೆಂತೆಸೊಪ್ಪಿನ ದೋಸೆ, ಸಾರು ಹಾಗೂ ಮೆಂತೆಕಾಳುಗಳನ್ನು ನೆನೆಸಿ ಅರೆದು ಸೇರಿಸಿ ಮಾಡಿದ ಖಾದ್ಯಗಳನ್ನು ನಿಯಮಿತವಾಗಿ ಸೇವಿಸುವ ಮೂಲಕ ಉತ್ತಮ ಪರಿಣಾಮ ಕಂಡುಕೊಳ್ಳಬಹುದು.

ಸೀಬೆ ಎಲೆ

ಸೀಬೆ ಎಲೆ

ಭಾರತದಲ್ಲಿ ಹೆಚ್ಚು ಸುಲಭವಾಗಿ ದೊರೆಯುವ ಮತ್ತು ಜನಪ್ರಿಯ ಎಂದೇ ಪ್ರಸಿದ್ಧವಾಗಿರುವ ಸೀಬೆ ರೋಗನಿರೋಧಕ ಶಕ್ತಿಯನ್ನು ಒಳಗೊಂಡಿದೆ ಮತ್ತು ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಂಡಿದೆ. ಇನ್ನು ಸೀಬೆ ಎಲೆಗಳೂ ಕೂಡ ಔಷಧೀಯ ಅಂಶಗಳನ್ನು ಹೊಂದಿರುವುದು ನಮ್ಮಲ್ಲಿ

ಹಲವರಿಗೆ ಗೊತ್ತಿಲ್ಲ. ಸೀಬೆ ಎಲೆಗಳನ್ನು ಜ್ವರಕ್ಕಾಗಿ ಹಿಂದಿನ ಕಾಲದಲ್ಲಿ ಬಳಸುತ್ತಿದ್ದು ಇದು ಉರಿಯೂತವನ್ನು ನಿವಾರಿಸುವುದರ ಜೊತೆಗೆ

ಮಧುಮೇಹವನ್ನು ನಿಯಂತ್ರಿಸುತ್ತದೆ ಮತ್ತು ರಕ್ತದೊತ್ತಡವನ್ನು ಹತೋಟಿಗೆ ತರುತ್ತದೆ.

ಸೀಬೆ ಎಲೆಯ ಸಾರವನ್ನು ತಯಾರಿಸುವುದು ಹೇಗೆ?

*ನೀರಿನಲ್ಲಿ ಚೆನ್ನಾಗಿ ಸೀಬೆ ಎಲೆಯನ್ನು ತೊಳೆದುಕೊಳ್ಳಿ ಮತ್ತು ಅದರಲ್ಲಿರುವ ಕೊಳೆ ಧೂಳನ್ನು ನಿವಾರಿಸಿಕೊಂಡು, ಒಂದು ಲೀಟರಿನಲ್ಲಿ ಎಂಟು ಪೇರಳೆ ಎಲೆಗಳನ್ನು ಜಜ್ಜಿ ಬೇಯಿಸಬೇಕು.

*ಸುಮಾರು ಐದು ನಿಮಿಷ ಕುದಿದ ಬಳಿಕ ತಣಿಯಲು ಬಿಟ್ಟು ಈ ನೀರನ್ನು ದಿನಕ್ಕೆ ಮೂರು ಬಾರಿ ಕುಡಿಯಬೇಕು. ಖಾಲಿಹೊಟ್ಟೆಯಲ್ಲಿ ಕುಡಿದರೆ ಒಳ್ಳೆಯದು.

ಹಸಿರು ಟೀ

ಹಸಿರು ಟೀ

ಹಸಿರು ಟೀ ರುಚಿಯಲ್ಲಿ ಮತ್ತು ಪೋಷಕಾಂಶಗಳಲ್ಲಿ ಸಾಮಾನ್ಯ ಟೀ ಗಿಂತ ಭಿನ್ನವಾಗಿದೆ. ಇದರ ಮುಖ್ಯ ಅಂಶವೆಂದರೆ ಪಾಲಿಫಿನಾಲ್ (polyphenol) ಎಂಬ ಪೋಷಕಾಂಶವಾಗಿದೆ. ಇದೊಂದು ಪ್ರಬಲವಾದ ಆಂಟಿ ಆಕ್ಸಿಡೆಂಟು ಮತ್ತು hypo-glycaemic compound ಆಗಿದ್ದು ರಕ್ತದಲ್ಲಿನ ಸಕ್ಕರೆ ಅಂಶವನ್ನು ದೇಹ ಬಳಸಿಕೊಳ್ಳಲು ಸಹಕರಿಸುತ್ತದೆ. ಇದು ಟೈಪ್ -2 ಮಧುಮೇಹಕ್ಕೆ ಸೂಕ್ತವಾಗಿದೆ.

ಉಪಯೋಗಿಸುವ ವಿಧಾನ

ಹಸಿರು ಟೀ ಪುಡಿ ಇರುವ ಪೊಟ್ಟಣವನ್ನು ಸುಮಾರು ಎರಡರಿಂದ ಮೂರು ನಿಮಿಷಗಳವರೆಗೆ ಬಿಸಿನೀರಿನಲ್ಲಿರಿಸಿ (ಕುದಿಸಬಾರದು). ಈ ನೀರನ್ನು ಬೆಚ್ಚಗಿರುವಂತೆಯೇ ಹಾಲು ಅಥವಾ ಸಕ್ಕರೆ ಬೆರೆಸದೇ ಹಾಗೇ ಕುಡಿಯಿರಿ. ಈ ಟೀ ಬೆಳಗ್ಗಿನ ಉಪಾಹಾರಕ್ಕೂ ಅರ್ಧ ಗಂಟೆ ಮೊದಲು ಕುಡಿಯಬೇಕು.

ನುಗ್ಗೇಕಾಯಿ ಮರದ ಎಲೆಗಳು (moringa leaf)

ನುಗ್ಗೇಕಾಯಿ ಮರದ ಎಲೆಗಳು (moringa leaf)

ನುಗ್ಗೆ ಮರದ ಎಲೆಗಳು ಚಿಕ್ಕದಾಗಿದ್ದರೂ ಪೋಷಕಾಂಶಗಳ ಪಟ್ಟಿ ಜೋರಾಗಿದೆ. ಈ ಎಲೆಗಳು ಆಹಾರವನ್ನು ಜೀರ್ಣೀಸಿಕೊಳ್ಳುವ ಗತಿಯನ್ನು ಕೊಂಚ ನಿಧಾನಗೊಳಿಸಿ ಸಕ್ಕರೆಯ ಬಳಕೆಯನ್ನು ಹೆಚ್ಚು ಸಮರ್ಥಗೊಳಿಸಲು ಸಹಕರಿಸುತ್ತದೆ

ಉಪಯೋಗಿಸುವ ವಿಧಾನ

ಸುಮಾರು ಒಂದು ಹಿಡಿಯಷ್ಟು ನುಗ್ಗೇ ಮರದ ಹಸಿ ಎಲೆಗಳನ್ನು ಚೆನ್ನಾಗಿ ಅರೆದು ಹಿಂಡಿ ರಸ ತೆಗೆಯಿರಿ. ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸುಮಾರು ಕಾಲು ಕಪ್ ಪ್ರಮಾಣದಲ್ಲಿ ಈ ನೀರನ್ನು ಕುಡಿಯಿರಿ. ಇದು ಟೈಪ್ -1 ಮಧುಮೇಹಕ್ಕೆ ಹೆಚ್ಚು ಸೂಕ್ತವಾಗಿದೆ.

ಒಣ ಹಣ್ಣುಗಳು

ಒಣ ಹಣ್ಣುಗಳು

ಒಣ ಹಣ್ಣುಗಳು "ನಿಧಾನವಾಗಿ ಜೀರ್ಣವಾಗುವ" ಆಹಾರವಾಗಿದೆ. ಇವು ತಮ್ಮಲ್ಲಿರುವ ಹೆಚ್ಚಿನ ಪ್ರಮಾಣದ ನಾರು ಮತ್ತು ಪ್ರೊಟೀನ್‍ಗಳಿಂದಾಗಿ ರಕ್ತದಲ್ಲಿರುವ ಸಕ್ಕರೆ ಅಂಶದ ಸ್ನೇಹಿಯಾಗಿ ಕೆಲಸ ಮಾಡುತ್ತವೆ. ಅಧ್ಯಯನಗಳ ಪ್ರಕಾರ ನಿಯಮಿತವಾಗಿ ಪ್ರತಿದಿನ ಒಣ ಹಣ್ಣುಗಳನ್ನು ಸೇವಿಸುವುದರಿಂದಾಗಿ ಹೃದಯದ ಬೇನೆಯನ್ನು ತಡೆಯಬಹುದಂತೆ. ಒಣ ಹಣ್ಣುಗಳಲ್ಲಿರುವ ಟೊಕೊಟ್ರೈಯೆನೊಲ್‍ಗಳು ನಮಗೆ ಉತ್ತಮ ಆರೋಗ್ಯವನ್ನು ನೀಡುತ್ತವೆ. ಆದರೆ ಒಣ ಹಣ್ಣುಗಳನ್ನು ನಿಯಮಿತವಾಗಿ ಸೇವಿಸಬೇಕೆಂಬುದನ್ನು ಮರೆಯಬೇಡಿ

ಸಿಟ್ರಸ್ ಹಣ್ಣುಗಳು

ಸಿಟ್ರಸ್ ಹಣ್ಣುಗಳು

ಕಡಿಮೆ ಕೊಬ್ಬು ,ಸಮೃದ್ಧ ನಾರಿನಂಶದಿಂದ ಕೂಡಿರುವ ಸಿಟ್ರಸ್ ಹಣ್ಣುಗಳು ತಮ್ಮಲ್ಲಿರುವ ಉತ್ತಮ ಪೋಷಕಾಂಶಗಳಿಂದಾಗಿ ಆರೋಗ್ಯಕ್ಕೆ ಉತ್ತಮ ಕೊಡುಗೆಯನ್ನು ನೀಡುತ್ತವೆ. ಉದಾಹರಣೆಗೆ ; ಕಿತ್ತಳೆ ಹಣ್ಣಿನಲ್ಲಿ ಫ್ಲವೊನೊಯ್ಡ್ಸ್, ಕ್ಯಾರೊಟೆನೊಯ್ಡ್ಸ್, ಟರ್ಪೈನ್ಸ್, ಪೆಕ್ಟಿನ್ಸ್ ಮತ್ತು ಗ್ಲುಟತಿಯೊನ್ ಮತ್ತು ಫೋಟೊನ್ಯೂಟ್ರಿಯೆಂಟ್‍ಗಳ ಸಮೃದ್ಧ ಆಗರವಿದೆ. ಇವುಗಳೆಲ್ಲವು ಸೇರಿ ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಹಕರಿಸುತ್ತವೆ. ಪ್ರಪಂಚದ ನಾನಾ ಮೂಲೆಗಳಲ್ಲಿ ನಡೆದ ಅಧ್ಯಯನಗಳಲ್ಲಿ ತಿಳಿದು ಬಂದ ವಿಚಾರದ ಪ್ರಕಾರ ಮಧುಮೇಹಿಗಳಲ್ಲಿ ವಿಟಮಿನ್ ಸಿಯ ಪ್ರಮಾಣ ಕಡಿಮೆ ಇರುತ್ತದೆ. ಹಾಗಾಗಿ ನಿಮ್ಮ ತಿಂಡಿಯಲ್ಲಿ ಅಂಟಿ ಆಕ್ಸಿಡೆಂಟ್ ಹೆಚ್ಚಾಗಿರುವ ಸಿಟ್ರಸ್ ಹಣ್ಣುಗಳನ್ನು ಸೇರಿಸುವುದನ್ನು ಮರೆಯಬೇಡಿ.

ಬೆಂಡೆಕಾಯಿ

ಬೆಂಡೆಕಾಯಿ

ಇದರಲ್ಲಿರುವ ದ್ರವ ಮಧುಮೇಹವನ್ನು ನಿಯಂತ್ರಣ ಮಾಡುವಲ್ಲಿ ತುಂಬಾ ಸಹಕಾರಿಯಾಗಿದೆ. ಬೆಂಡೆಕಾಯಿಯ ತುದಿ ಮುರಿದು ಅದರ ದ್ರವವನ್ನು ಒಂದು ಲೋಟ ನೀರಿನಲ್ಲಿ ಹಾಕಿ ಬೆಳಗ್ಗೆ ಎದ್ದು ಆ ನೀರನ್ನು ಕುಡಿಯಬೇಕು. ಈ ರೀತಿ ಮಾಡಿದರೆ ಮಧುಮೇಹ ನಿಯಂತ್ರಣದಲ್ಲಿರುತ್ತದೆ. ಅಲ್ಲದೆ ಯಾವುದೇ ಇನ್ಸುಲಿನ್ ಚುಚ್ಚು ಮದ್ದಿನ ಅಗತ್ಯ ಕೂಡ ಕಂಡು ಬರುವುದಿಲ್ಲ.

ಬೇವಿನ ಎಲೆಗಳು

ಬೇವಿನ ಎಲೆಗಳು

ಇದನ್ನು ಜ್ಯೂಸ್ ರೂಪದಲ್ಲಿ ಅಥವಾ ಹಾಗೆಯೇ ಜಗಿದು ಕೂಡ ಸೇವಿಸಬಹುದಾಗಿದೆ. ರಕ್ತದ ಸಕ್ಕರೆಯನ್ನು ನಿಯಂತ್ರಿಸಲು ಇದೊಂದು ಉತ್ತಮ ಆಯುರ್ವೇದಿಕ್ ಪರಿಹಾರ ಎಂದೆನಿಸಿದ್ದು ಇದರಲ್ಲಿರುವ ನಿಂಬಿಡಿನ್ ಅಂಶವು ಹೈಪರ್ ಗ್ಲಾಸಮಿಕ್ ವಿರೋಧಿ ಅಂಶವನ್ನು ಹೊಂದಿದೆ.

ನೆಲ್ಲಿಕಾಯಿ

ನೆಲ್ಲಿಕಾಯಿ

ಆಮ್ಲ ಎಂದೇ ಕರೆಯಿಲ್ಪಡುವ ನೆಲ್ಲಿಕಾಯಿ, ಅಜ್ಜಿ ಔಷಧಿ ಎಂದೇ ಕರೆಯಲಾಗಿದೆ. ಇದು 2 ನೇ ವಿಧದ ಮಧುಮೇಹವನ್ನು ನಿಯಂತ್ರಿಸಲು ಉತ್ತಮವಾದುದು. ವಿಟಮಿನ್ ಸಿ ಅಂಶಗಳು ಇದರಲ್ಲಿದ್ದು, ಇನ್ಸುಲಿನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಇದನ್ನು ಜ್ಯೂಸ್ ಅಥವಾ ಹುಡಿಯನ್ನು ತಣ್ಣೀರಿನಲ್ಲಿ ಕರಗಿಸಿಕೊಂಡು ಬೆಳಗ್ಗಿನ ಹೊತ್ತು ಸೇವಿಸಬೇಕು.

ಹಾಗಲ ಕಾಯಿ ಜ್ಯೂಸ್

ಹಾಗಲ ಕಾಯಿ ಜ್ಯೂಸ್

ಇದು ಫೈಟೊನ್ಯೂಟ್ರಿಯಂಟ್ ಅಂಶಗಳನ್ನು ಒಳಗೊಂಡಿದ್ದು ರಕ್ತದಲ್ಲಿರುವ ಗ್ಲುಕೋಸ್ ಅನ್ನು ದೇಹದ ಇತರ ಭಾಗಗಳಿಗೆ ಅಂದರೆ ಪಿತ್ತಜನಕಾಂಗ ಮತ್ತು ಸ್ನಾಯುಗಳಿಗೆ ವರ್ಗಾಯಿಸುತ್ತದೆ ಇದು ರಕ್ತದ ಗ್ಲುಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಆಲ್ಫಾ - ಗ್ಲುಕೋಸಿಡೈಸ್ ಎಂಜಿಮ್ ಅನ್ನು ಕಡಿಮೆ ಮಾಡುತ್ತದೆ ಇದು ಹೈಪರ್ ಗ್ಲಾಸಮಿಕ್ ಮಟ್ಟವನ್ನು ಕಡಿಮೆ ಮಾಡಿ ದೇಹದ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಣಕ್ಕೆ ತರುತ್ತದೆ.

ದಾಲ್ಚಿನ್ನಿ

ದಾಲ್ಚಿನ್ನಿ

ದಾಲ್ಚಿನ್ನಿ ಸೇವನೆಯಿಂದ ಕಡಿಮೆ ಇರುವ ರಕ್ತದೊತ್ತಡ ಮತ್ತು ಇನ್ಸುಲಿನ್ ಪ್ರಮಾಣದಲ್ಲಿ ಸುಧಾರಣೆ ಕಂಡುಬರುತ್ತದೆ. ಜೊತೆಗೇ ತೂಕ ಏರುವುದನ್ನು ನಿಯಂತ್ರಿಸಿ ಹೃದಯಾಘಾತದ ಸಂಭವಗಳಿಂದ ಕಾಪಾಡುತ್ತದೆ. ಪ್ರತಿದಿನಕ್ಕೆ ಅರ್ಧ ಚಿಕ್ಕ ಚಮಚದಷ್ಟು ಪ್ರಮಾಣ ಅಧ್ಬುತಗಳನ್ನೇ ಸಾಧಿಸಬಲ್ಲುದು.

ಉಪಯೋಗಿಸುವ ವಿಧಾನ

ನಿಮ್ಮ ನಿತ್ಯದ ಊಟದಲ್ಲಿ ಒಂದು ಗ್ರಾಮ್ ದಾಲ್ಚಿನ್ನಿಯ ಪುಡಿಯನ್ನು ಸೇರಿಸಿ ಸೇವಿಸಿ. ಒಂದು ತಿಂಗಳ ಸತತ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಅಂಶ ಶೀಘ್ರ ಹತೋಟಿಗೆ ಬರುತ್ತದೆ. ಇದು ಟೈಪ್ 1 ಮಧುಮೇಹಕ್ಕೆ ಹೆಚ್ಚು ಸೂಕ್ತವಾಗಿದೆ.

English summary

Kill Diabetes Forever In Just one weeks Easy And Faster Home Remedy...

Diabetes is one of the fast growing lifestyle disorder that can be effectively managed with few lifestyle modifications and eating a healthy diet. Here are top effective home remedies to maintain your blood sugar levels and lead a healthy life with diabetes.
Story first published: Saturday, March 24, 2018, 23:31 [IST]