For Quick Alerts
ALLOW NOTIFICATIONS  
For Daily Alerts

ಪ್ರತಿದಿನ ಮಧುಮೇಹಿಗಳು ಎಷ್ಟು ಮತ್ತು ಯಾವ ಹಣ್ಣು ಸೇವಿಸಬಹುದು?

By Sushma Charhra
|

ದೇಹದ ಕಾರ್ಯಚಟುವಟಿಕೆಗಳು ಸರಾಗವಾಗಿ ನಡೆಯಬೇಕು ಎಂದರೆ ಪ್ರತಿಯೊಬ್ಬರೂ ಕೂಡ ಹಣ್ಣುಗಳು ಮತ್ತು ತರಕಾರಿಗಳನ್ನು ನಿಯಮಿತವಾಗಿ ಸೇವಿಸಬೇಕು. ಹಣ್ಣುಗಳು ಮತ್ತು ತರಕಾರಿಗಳು ವಿಟಮಿನ್ ಗಳು, ಫೈಬರ್ ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿರುತ್ತದೆ. ಆದರೆ ಆಶ್ಚರ್ಯವೆಂದರೆ ಕೆಲವು ಹಣ್ಣುಗಳಲ್ಲಿ ಅತಿಯಾದ ಸಕ್ಕರೆ ಅಂಶವಿದ್ದು, ಅದನ್ನು ಸೇವಿಸುವುದನ್ನು ನಿರ್ಭಂಧಿಸಿಕೊಳ್ಳುವಂತೆ ಮಧುಮೇಹ ರೋಗಿಗಳಿಗೆ ಸೂಚಿಸಲಾಗುತ್ತೆ.

ಈ ಲೇಖನದಲ್ಲಿ ನಾವು ಈ ಬಗ್ಗೆಯೇ ಚರ್ಚಿಸಲಿದ್ದೇವೆ ಮತ್ತು ಯಾವುದು ಮಧುಮೇಹ ರೋಗಿಗಳಿಗೆ ಉತ್ತಮ ಹಣ್ಣು ಮತ್ತು ಯಾವುದು ಅಲ್ಲ ಎಂಬ ಬಗ್ಗೆ ಮಾಹಿತಿ ನೀಡಲಿದ್ದೇವೆ. ಹಣ್ಣುಗಳಲ್ಲಿ ಕಾರ್ಬೋಹೈಡ್ರೇಟ್ ಅಂಶಗಳಿರುತ್ತೆ ಮತ್ತು ಅದು ನಿಮ್ಮ ಡಯಟ್ ನ ಭಾಗವಾಗಿರಬೇಕು. ಆದರೆ, ಮಧುಮೇಹ ರೋಗಿಗಳಲ್ಲಿ ಹೆಚ್ಚಿನವರು ನಂಬಿಕೊಂಡಿರುವಂತೆ ಎಲ್ಲಾ ಹಣ್ಣುಗಳಲ್ಲೂ ಸಕ್ಕರೆ ಅಂಶವಿರುತ್ತದೆ ಅದು ಹಣ್ಣುಗಳನ್ನು ಮಧುಮೇಹಿಗಳು ಸೇವಿಸಬಾರದು ಎಂಬುದು ಒಂದು ಸುಳ್ಳು ಕಲ್ಪನೆ.

fruits good for diabetics in kannada

ನಿಜ ಹೇಳಬೇಕು ಎಂದರೆ, ಹಣ್ಣುಗಳಲ್ಲಿ ಅಡಕವಾಗಿರುವ ಸಕ್ಕರೆ ಅಂಶವು ನೈಸರ್ಗಿಕವಾಗಿರುತ್ತದೆ ಮತ್ತು ಇದು ಮಧುಮೇಹ ರೋಗಿಗಳಿಗೆ ಯಾವುದೇ ರೀತಿಯ ಕೆಟ್ಟ ಪರಿಣಾಮವನ್ನೂ ಮಾಡುವುದಿಲ್ಲ. ಈ ಸಕ್ಕರೆಯ ಅಂಶವು ನೀವು ಮೇಲಿಂದ ನಿಮ್ಮ ಆಹಾರ ಪದಾರ್ಥಗಳಿಗೆ ಸೇರಿಸುವ ಸಕ್ಕರೆ ಅಂಶಕ್ಕಿಂತ ತುಂಬಾ ಭಿನ್ನವಾಗಿರುತ್ತದೆ ಉದಾಹರಣೆಗೆ ನಿಮ್ಮ ಪಾನೀಯ, ಬಿಸ್ಕೇಟ್, ಕೇಕ್, ಫ್ರೂಟ್ ಜ್ಯೂಸ್ ಮತ್ತು ಚಾಕಲೇಟ್ ಗಳಲ್ಲಿರುವ ಸಕ್ಕರೆ ಇದಾಗಿರುವುದಿಲ್ಲ. ನೈಸರ್ಗಿಕ ಸಕ್ಕರೆಗೂ, ನೀವು ಸೇರಿಸುವ ಸಕ್ಕರೆಗೂ ಬಹಳ ವ್ಯತ್ಯಾಸವಿದೆ.

ಯಾವ ವ್ಯಕ್ತಿಗಳು ಟೈಪ್ -2 ಡಯಾಬಿಟೀಸ್ ನಿಂದ ಬಳಲುತ್ತಿರುತ್ತಾರೋ, ಅವರು ಪ್ರಮುಖವಾಗಿ ಪ್ರೋಟೀನ್, ಕಾರ್ಬೋ ಹೈಡ್ರೇಟ್ ಮತ್ತು ಫ್ಯಾಟ್ ಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಆದರೆ ಕಾರ್ಬೋಹೈಡ್ರೇಟ್ ಗಳನ್ನು ಸೀಮಿತ ಪ್ರಮಾಣದಲ್ಲಿ ಸೇವನೆ ಮಾಡಬೇಕು ಯಾಕೆಂದರೆ ಇವುಗಳು ನೇರವಾಗಿ ರಕ್ತದ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರುತ್ತವೆ.

ನ್ಯೂಟ್ರಿಷನ್ ಮತ್ತು ಮಧುಮೇಹ ಅಕಾಡೆಮಿಯ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನವೊಂದರ ಪ್ರಕಾರ, ಮಧುಮೇಹ ರೋಗಿಗಳು ಸರಿಯಾದ ಪ್ರಮಾಣದಲ್ಲಿ ಹಣ್ಣುಗಳನ್ನು ಸೇವಿಸುವುದರಿಂದ ಅವರು ತಮಗೆ ಉಂಟಾಗುವ ಹೃದ್ರೋಗ ಸಮಸ್ಯೆ ಬರುವ ಸಾಧ್ಯತೆಯನ್ನು ಕಡಿಮೆ ಮಾಡಿಕೊಳ್ಳಬಹುದಂತೆ.

ಹಣ್ಣುಗಳು ಮತ್ತು ಡಯಾಬಿಟೀಸ್

ಹಣ್ಣುಗಳಲ್ಲಿ ಫೈಬರ್ ಅಂಶವಿರುತ್ತದೆ ಅದರಲ್ಲೂ ಪ್ರಮುಖವಾಗಿ ಹಣ್ಣಿನ ಚರ್ಮದಲ್ಲಿ ಈ ಅಂಶವಿರುತ್ತದೆ ಮತ್ತು ಹಣ್ಣಿನ ಪಲ್ಪ್ ಗಳು ಡಯಾಬಿಟೀಸ್ ನ್ನು ಮ್ಯಾನೇಜ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ಆಹಾರದಲ್ಲಿ ಕರಗಬಲ್ಲ ಫೈಬರ್ ಅಂಶವು ದೇಹದಲ್ಲಿ ಸಕ್ಕರೆಯ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತದ ಸಕ್ಕರೆ ಮಟ್ಟವನ್ನು ಕಂಟ್ರೋಲ್ ನಲ್ಲಿ ಇಡಲು ನೆರವಾಗುತ್ತದೆ. ಅಷ್ಟೇ ಅಲ್ಲ, ಕೆಲವು ಹಣ್ಣುಗಳು ಫೈಬರ್ ಮತ್ತು ನೀರಿನ ಅಂಶದ ಕಾರಣದಿಂದ ಹೊಟ್ಟೆ ತುಂಬಿದ ಭಾವನೆ ನೀಡುತ್ತದೆ.

ಹಣ್ಣುಗಳಲ್ಲಿ ಕಾರ್ಬೋಹೈಡ್ರೇಟ್ಸ್ ಗಳು

ಆರೋಗ್ಯಕಾರಿ ಡಯಟ್ ಗಾಗಿ ಪ್ರತಿಯೊಬ್ಬ ವ್ಯಕ್ತಿಗೂ ಹಣ್ಣುಗಳ ಸೇವನೆ ಅಗತ್ಯವಾಗಿರುತ್ತದೆ. ಆದರೆ ಟೈಪ್- 2 ಡಯಾಬಿಟೀಸ್ ಇರುವವರು ಕಾರ್ಬೋಹೈಡ್ರೇಟ್ಸ್ ಪ್ರಮಾಣದ ಬಗ್ಗೆ ಸ್ವಲ್ಪ ಜಾಗೃತರಾಗಿರುವುದು ಒಳ್ಳೆಯದು.

ಬಾಳೆಹಣ್ಣು ಡಯಾಬಿಟೀಸ್ ಇರುವವರಿಗೆ ಒಳ್ಳೆಯದಾ?

ಒಟ್ಟಾರೆ ಹೇಳುವುದಾದರೆ, ಬಾಳೆಹಣ್ಣುಗಳಲ್ಲಿ ಸ್ಯಾಚುರೇಟೆಡ್ ಕೊಬ್ಬಿನಂಶ , ಕೊಲೆಸ್ಟ್ರಾಲ್, ಸೋಡಿಯಂ ಮತ್ತು ಇತರೆ ನ್ಯೂಟ್ರಿಯಂಟ್ಸ್ ಗಳಾದ ವಿಟಮಿನ್ ಬಿ6, ಮ್ಯಾಂಗನೀಸ್ ಮತ್ತು ಪೊಟಾಷಿಯಂ ಅಂಶವು ಇದರಲ್ಲಿ ಪ್ರಮುಖವಾಗಿ ಕಡಿಮೆ ಇರುತ್ತದೆ.ಆದರೆ 93 ಶೇಕಡಾ ಕ್ಯಾಲೋರಿಯು ಬಾಳೆಹಣ್ಣಿನಲ್ಲಿ ಬರುವುದು ಅದರಲ್ಲಿರುವ ಕಾರ್ಬೋಹೈಡ್ರೇಟ್ಸ್ ಗಳಿಂದ ಮತ್ತು ಇದು ಫೈಬರ್ , ಶುಗರ್ ಮತ್ತು ಸ್ಟ್ರಾಚ್ ನ ರೂಪದಲ್ಲಿ ಇರುತ್ತದೆ. ಒಂದು ಮಧ್ಯಮ ಗಾತ್ರದ ಬಾಳೆಹಣ್ಣಿನಲ್ಲಿ 14 ಗ್ರಾಮ್ ನಷ್ಟು ಸಕ್ಕರೆ ಮತ್ತು 6 ಗ್ರಾಮ್ ನಷ್ಟು ಸ್ಟ್ರಾಚ್ ಇರುತ್ತದೆ. ಬಾಳೆಹಣ್ಣು ನಿಧಾವಾಗಿ ಜೀರ್ಣವಾಗುತ್ತದೆ ಮತ್ತು ದೇಹದಿಂದ ಹೀರಲ್ಪಡುತ್ತದೆ.

ಇದು ಬಾಳೆಹಣ್ಣುಗಳು ನಿಧಾನವಾಗಿ ಜೀರ್ಣವಾಗುತ್ತೆ ಮತ್ತು ಹೀರಿಹೋಗುತ್ತೆ ಹಾಗಾಗಿ ಇದು ರಕ್ತದಲ್ಲಿನ ಸಕ್ಕರೆಯ ಸ್ಪೈಕ್ ಮಟ್ಟವನ್ನು ತಡೆಯಬಹುದು. ಬಾಳೆಹಣ್ಣಿನಲ್ಲಿರುವ ಕಾರ್ಬೋಹೈಡ್ರೇಟ್ ಗಳ ವಿಧಗಳು ಬಲಿತ ಮತ್ತು ಬಲಿಯದ ಬಾಳೆಹಣ್ಣುಗಳ ಮೇಲೆ ಅವಲಂಬಿತವಾಗಿರುತ್ತವೆ, ಇದು ಕಡಿಮೆ ಸಕ್ಕರೆ ಮತ್ತು ಹೆಚ್ಚು ನಿರೋಧಕ ಪಿಷ್ಟವನ್ನು ಹೊಂದಿರುತ್ತದೆ, ಅಂದರೆ ಅದು ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಹೆಚ್ಚಿಸುವುದಿಲ್ಲ.

ಹಳದಿ ಅಥವಾ ಬಲಿತ ಬಾಳೆಹಣ್ಣಿನನ್ನು, ಬಲಿಯದ ಬಾಳೆಹಣ್ಣಿಗೆ ಹೋಲಿಸಿದರೆ ಕಡಿಮೆ ನಿರೋಧಕ ಪಿಷ್ಟ ಮತ್ತು ಹೆಚ್ಚು ಸಕ್ಕರೆ ಹೊಂದಿರುತ್ತದೆ. ಈ ಪಿಷ್ಟವು ವೇಗವಾಗಿ ಹೀರಿಕೊಳ್ಳಲ್ಪಡುತ್ತದೆ. ಅಂದರೆ ಬಲಿತ ಬಾಳೆಹಣ್ಣಿನಲ್ಲಿ ಹೆಚ್ಚು ಗ್ಲಿಸಮಿಕ್ ಇಂಡೆಕ್ಸ್ ಇದೆ ಮತ್ತು ಇದು ರಕ್ತದ ಸಕ್ಕರೆ ಪ್ರಮಾಣವನ್ನು ಪಕ್ವವಾಗದ ಬಾಳೆಹಣ್ಣುಗಳಿಗಿಂತ ವೇಗವಾಗಿ ಹೆಚ್ಚಿಸುತ್ತದೆ.

ಕಲ್ಲಂಗಡಿ ಹಣ್ಣನ್ನು ಡಯಾಬಿಟೀಸ್ ಇರುವವರು ಸೇವಿಸಬಹುದಾ?

ಕಲ್ಲಂಗಡಿ ಹಣ್ಣುಗಳು ಸಕ್ಕರೆ ಅಂಶದಿಂದ ಸಮೃದ್ಧವಾಗಿದೆ ಮತ್ತು ಇದು ನಿಮ್ಮ ಡಯಟ್ ಗೆ ಅನುಸಾರವಾಗಿ ರಕ್ತದ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಗ್ಲಿಸಮಿಕ್ ಇಂಡೆಕ್ಸ್ 55 ಅಥವಾ ಅದಕ್ಕಿಂತ ಕಡಿಮೆ ಇದ್ದರೆ .
ಗ್ಲಿಸಮಿಕ್ ಸೂಚ್ಯಂಕ ಪ್ರಮಾಣವನ್ನು ಹೀಗೆ ಹೇಳಬಹುದು
• 55 ಮತ್ತು ಅದಕ್ಕಿಂತ ಕಡಿಮೆ ಇದ್ದರೆ - ಕಡಿಮೆ
• 55 ರಿಂದ 69 ಇದ್ದರೆ - ಮಧ್ಯಮ
• 70 ಮತ್ತು ಅದಕ್ಕಿಂತ ಹೆಚ್ಚಿದ್ದರೆ - ಹೆಚ್ಚು
ಕಲ್ಲಂಗಡಿ ಹಣ್ಣಿನ ಗ್ಲಿಸಮಿಕ್ ಇಂಡೆಕ್ಸ್ 72.ಕಲ್ಲಂಗಡಿ ಹಣ್ಣನ್ನು ಇತರೆ ಹಣ್ಣುಗಳ ಜೊತೆ ಸೇರಿಸಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಸ್ಪೈಕ್ ಗಳ ಸಂಭವನೀಯತೆಯನ್ನು ಇದು ಕಡಿಮೆಗೊಳಿಸುತ್ತದೆ.
ಡಯಾಬಿಟೀಸ್ ಇರುವವರಿಗೆ ಅತ್ಯುತ್ತಮ ಹಣ್ಣುಗಳು
ಉತ್ತಮ ಡಯಾಬಿಟೀಸ್ ಡಯಟ್ ಗಾಗಿ ಈ ಕೆಳಗಿನ ಹಣ್ಣುಗಳು ಅತ್ಯುತ್ತಮಕಾರಿಯಾಗಿದೆ ಮತ್ತು ಇವುಗಳಲ್ಲಿ ಹೈ ಆಂಟಿ ಆಕ್ಸಿಡೆಂಟ್ ಗಳೂ ಕೂಡ ಇದೆ.
• ದ್ರಾಕ್ಷಿ
• ಸೇಬು ಹಣ್ಣುಗಳು
• ಬೆರ್ರೀ
• ಪಪ್ಪಾಯ
• ಏಪ್ರಿಕಾಟ್ಸ್
• ಕ್ಯಾಂಟಲೋಪ್
• ಮಾವಿನ ಹಣ್ಣು
• ಅನಾನಸ್ ಅಥವಾ ಪರಂಗಿ
• ಸಿಟ್ರಸ್ ಹಣ್ಣುಗಳು

ಬಣ್ಣಗಳಿಂದ ಕೂಡಿರುವ ಹಣ್ಣುಗಳು ಡಯಾಬಿಟೀಸ್ ಡಯಟ್ ನಲ್ಲಿ ಪ್ರಮುಖವಾಗಿ ಇರಬೇಕು. ಸರಿಯಾದ ಪ್ರಮಾಣದಲ್ಲಿ ಹಣ್ಣುಗಳನ್ನು ಸೇವಿಸುವುದನ್ನು ಮರೆಯಬೇಡಿ.

ಯಾವೆಲ್ಲ ಹಣ್ಣುಗಳನ್ನು ಡಯಾಬಿಟೀಸ್ ರೋಗಿಗಳು ಸೇವಿಸಬಾರದು ಎಂಬ ಪಟ್ಟಿ

ಅಮೇರಿಕಾದ ಡಯಾಬಿಟೀಸ್ ಅಸೋಸಿಯೇಷನ್ ತಿಳಿಸಿರುವಂತೆ, ಯಾವುದೇ ಹಣ್ಣುಗಳೂ ಕೂಡ ಸೇವನೆಗೆ ಯೋಗ್ಯ. ಆದರೆ ಕೆಲವು ಹಣ್ಣುಗಳ ಸೇವನೆ ಹೇಗಿರಬೇಕು ಎಂಬುದು ಮಧುಮೇಹಿಗಳಿಗೆ ಬಹಳ ಮುಖ್ಯ, ಪೂರ್ವಸಿದ್ಧ ಹಣ್ಣುಗಳು, ಒಣಗಿದ ಹಣ್ಣುಗಳು, ಮತ್ತು ಹಣ್ಣಿನ ರಸಗಳು ಮದುಮೇಹಿಗಳು ಸೇವನೆ ಮಾಡುವುದು ಒಳ್ಳೆಯದಲ್ಲ. ಇವುಗಳು ದೇಹದಲ್ಲಿ ಬೇಗನೆ ಹೀರಿಹೋಗುತ್ತವೆ ಮತ್ತು ರಕ್ತದ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ.

ಒಣಗಿದ ಹಣ್ಣುಗಳು ಸಕ್ಕರೆಯಿಂದ ಹೆಚ್ಚು ಕೇಂದ್ರೀಕೃತವಾಗಿರುತ್ತದೆ ಮತ್ತು ತಾಜಾ ಹಣ್ಣುಗಳಿಗೆ ಹೋಲಿಸಿದರೆ ಒಂದರಲ್ಲಿ ಮೂರನೇ ಭಾಗದಷ್ಟು ಹೆಚ್ಚು ಕಾರ್ಬೋಹೈಡ್ರೇಟ್ ಗಳನ್ನು ಹೊಂದಿರುತ್ತದೆ. ಪ್ಯಾಕ್ ಆಗಿರುವ ಹಣ್ಣುಗಳಲ್ಲಿ ಸಕ್ಕರೆಯನ್ನು ಸೇರಿಸಿರಲಾಗುತ್ತದೆ. ಇದರಲ್ಲಿ ಹೆಚ್ಚು ಫ್ರಕ್ಟೋಸ್ ಅಂಶಗಳಿದ್ದು, ಇದು ನಿಮ್ಮ ಇನ್ಸುಲಿನ್ ಪ್ರತಿರೋಧದ ಮೇಲೆ ಕೆಟ್ಟ ಪರಿಣಾಮ ಮಾಡುತ್ತದೆ ಮತ್ತು ಹೃದಯ ಕಾಯಿಲೆಯ ರಿಸ್ಕ್ ಅನ್ನು ಹೆಚ್ಚಿಸುತ್ತದೆ ಜೊತೆಗೆ ತೂಕ ಹೆಚ್ಚಳವಾಗುವಿಕೆಗೂ ಕಾರಣವಾಗುತ್ತದೆ.

ಒಂದು ದಿನಕ್ಕೆ ಎಷ್ಟು ಪ್ರಮಾಣದಲ್ಲಿ ಹಣ್ಣುಗಳನ್ನು ಡಯಾಬಿಟೀಸ್ ರೋಗಿಗಳು ಸೇವಿಸಬಹುದು?

ಹದಿಹರೆಯದವರು ಮತ್ತು ಮಕ್ಕಳು ದಿನಕ್ಕೆ ಐದು ಬಗೆಯ ಹಣ್ಣುಗಳನ್ನು ಮತ್ತು ತರಕಾರಿಗಳನ್ನು ಸೇವಿಸುವುದಕ್ಕೆ ಸೂಚನೆ ನೀಡಲಾಗುತ್ತದೆ. ಇವರು ಅವರ ಆಹಾರದ ತಟ್ಟೆಯ ಅರ್ಧದಷ್ಟನ್ನು ಹಣ್ಣು ಮತ್ತು ತರಕಾರಿಗಳಿಂದ ಉಳಿದ ಅರ್ಧವನ್ನು ಪ್ರೋಟೀನ್ ಯುಕ್ತ ಆಹಾರ ಸೇವನೆಯಿಂದ ಮಾಡಬೇಕು.

ಕಡಿಮೆ ಗ್ಲಿಸಮಿಕ್ ಇಂಡೆಕ್ಸ್ ಗಳಿರುವ ಹಣ್ಣುಗಳಾದ ಸೇಬು, ಬಾಳೆಹಣ್ಣು,ಸ್ಟ್ರಾಬೆರಿ, ದ್ರಾಕ್ಷಿ, ಬೆಣ್ಣೆಹಣ್ಣು, ಚೆರ್ರೀ, ಬೆರ್ರೀ, ಕಿತ್ತಳೆ, ಮೂಸಂಬಿ, ಪ್ಲಮ್ ಗಳು, ಪಿಯರ್ಸ್, ಪೀಚ್ ಹಣ್ಣುಗಳು, ಕಿವಿ ಫ್ರೂಟ್ ಇತ್ಯಾದಿಗಳನ್ನು ಸೇವಿಸಬಹುದು. ಮಧ್ಯಮ ಗ್ಲಿಸಮಿಕ್ ಇಂಡೆಕ್ಸ ಇರುವ ಹಣ್ಣುಗಳೆಂದರೆ ಅಂಜೂರದ ಹಣ್ಣುಗಳು, ಪಪ್ಪಾಯ, ಜೇನುಗೂಡು ಕಲ್ಲಂಗಡಿ ಮತ್ತು ಪರಂಗಿ. ಹೆಚ್ಚು ಗ್ಲಿಸಮಿಕ್ ಇಂಡೆಕ್ಸ್ ಇರುವ ಹಣ್ಣುಗಳೆಂದರೆ ಕಲ್ಲಂಗಡಿ ಮತ್ತು ಖರ್ಜೂರ. ಡಯಾಬಿಟೀಸ್ ಡಯಟ್ ನ ಮೆನು ಹೇಗಿರಬೇಕು ?

1. ಉಪಹಾರ

ಉಪಹಾರ ಬಹಳ ಮುಖ್ಯವಾಗಿ ಬೇಕಾಗುತ್ತದೆ ನಿಮ್ಮ ರಾತ್ರಿ ಉಪವಾಸವನ್ನು ನಿಲ್ಲಿಸುವುದು ಮತ್ತು ನಿಮ್ಮ ಯಕೃತ್ತು ಗ್ಲುಕೋಸ್ ಉತ್ಪಾದನೆಯನ್ನು ನಿಲ್ಲಿಸಲು ಇದು ಬಹಳ ಮುಖ್ಯ. ಡಯಾಬಿಟೀಸ್ ರೋಗಿಗಳ ಉಪಹಾರದ ಮೆನುವಿನಲ್ಲಿ ಧಾನ್ಯಗಳನ್ನು ರೋಸ್ಟ್ ಮಾಡಿ ಸೇವಸಬಹುದು, ಪೀನಟ್ ಬಟರ್ ಮತ್ತು ಒಂದು ಬಾಳೆಹಣ್ಣು ಸೇವಿಸಿ. ಓಟ್ ಮೀನ್, ದ್ವಿದಳ ಧಾನ್ಯಗಳು, ಹಾಲು, ಒಂದು ಮೊಟ್ಟೆ, ಮಶ್ರೂಮ್ಗಳು , ಮೂಸುಂಬಿ ಹಣ್ಣಿನ ಸೇವನೆ ಒಳ್ಳೇದು.

2. ಮಧ್ಯಾಹ್ನದ ಊಟ

ಮಾಂಸ ಮತ್ತು ಚೀಸ್ ಸ್ಯಾಂಡ್ ವಿಚ್ ಗಳನ್ನು ಸಂಪೂರ್ಣ ಧಾನ್ಯದ ಬ್ರೆಡ್, ಒಂದು ಸಣ್ಣ ಆಪಲ್ ಮತ್ತು ಕ್ಯಾರೆಟ್ ಗಳಿಂದ ತಯಾರಿಸಿಕೊಂಡರೆ ಒಳ್ಳೆಯದು. ಬೇಯಿಸಿದ ಅಥವಾ ಸುಟ್ಟ ಕೋಳಿಯನ್ನು ಬಳಸಬಹುದು, ಸಣ್ಣ ಹಣ್ಣಿನ ತುಂಡನ್ನು ಸೇವಿಸಿರಿ.

3. ರಾತ್ರಿಯ ಆಹಾರ

ರಾತ್ರಿಯ ಆಹಾರಗಳು ಕಡಿಮೆ ಪ್ರಮಾಮದಲ್ಲಿ ಇರಬೇಕು. ಬೇಯಿಸಿದ ಚಿಕನ್ ಜೊತೆಗೆ ಒಂದು ಸಣ್ಣ ಬೇಯಿಸಿದ ಆಲೂಗಡ್ಡೆ, ಶತಾವರಿಯ ಅರ್ಧ ಪ್ಲೇಟ್, ಒಂದೆರಡು ತುಂಡು ಹಣ್ಣುಗಳು ಮತ್ತು ಒಂದು ಅರ್ಧ ಗ್ಲಾಸ್ ಹಾಲು ಸೇವಿಸುವುದು ಒಳ್ಳೆಯದು.

English summary

How Much Fruits Should Diabetics Eat Daily:Best Fruits For Diabetics

Everyone should be eating fruits and vegetables regularly as it helps the body function properly. Fruits and vegetables are packed with vitamins, fibre, and minerals. But, surprisingly some fruits have natural sugars which are told to be avoided by diabetics. Here, in this article, we will be discussing the best and worst fruits for diabetes.
X
Desktop Bottom Promotion