ಮನೆಔಷಧಿ: ಮಧುಮೇಹ ನಿಯಂತ್ರಿಸುವ ಅಡುಗೆಮನೆಯ 'ಲವಂಗ'

By Arshad
Subscribe to Boldsky

ಕೊಲಂಬಸ್ ಭಾರತವನ್ನು ಹುಡುಕಲು ಹೊರಟ ಮುಖ್ಯ ಕಾರಣ ಭಾರತದ ಮಸಾಲೆಗಳು. ಇದೇ ಕಾರಣಕ್ಕೆ ಭಾರತವನ್ನು 'ಮಸಾಲೆ ಪದಾರ್ಥಗಳ ನಾಡು' ಎಂದು ಕರೆಯಲಾಗುತ್ತದೆ. ನಮ್ಮ ಮಸಾಲೆಗಳು ಕೇವಲ ಸುಗಂಧ ಅಥವಾ ಆಹಾರದಲ್ಲಿ ರುಚಿ ಹೆಚ್ಚಿಸುವ ಕೆಲಸವನ್ನು ಮಾತ್ರ ನಿರ್ವಹಿಸುವುದಲ್ಲ, ಬದಲಿಗೆ ಇವುಗಳನ್ನು ಸಾವಿರಾರು ವರ್ಷಗಳಿಂದ ಔಷಧೀಯ ರೂಪದಲ್ಲಿಯೂ ಸೇವಿಸಲಾಗುತ್ತಾ ಬರಲಾಗಿದೆ. ಇವುಗಳಲ್ಲಿ ಸಾಮಾನ್ಯವಾದುದೆಂದರೆ ಲವಂಗ, ದಾಲ್ಚಿನ್ನಿ, ಏಲಕ್ಕಿ ಇತ್ಯಾದಿಗಳು. ಇವುಗಳನ್ನು ಔಷಧೀಯ, ರುಚಿಕಾಕರ, ಸುಗಂಧದ್ರವ್ಯ ಹಾಗೂ ಅವಶ್ಯಕ ತೈಲ ಮೊದಲಾದ ರೂಪದಲ್ಲಿ ಬಳಸಲಾಗುತ್ತಿದೆ.

ಸಾವಿರಾರು ವರ್ಷಗಳ ಹಿಂದೆಯೇ ಭಾರತದಲ್ಲಿ ಮಸಾಲೆ ವಸ್ತುಗಳನ್ನು ವಿವಿಧ ಕಾಯಿಲೆಗಳಿಗೆ ಔಷಧಿಯಾಗಿ ಬಳಸಲಾಗುತ್ತಿತ್ತು ಹಾಗೂ ಈ ವಿಧಾನಗಳನ್ನು ಆಯುರ್ವೇದ ಇಂದಿಗೂ ಮುಂದುವರೆಸಿಕೊಂಡು ಬರುತ್ತಿದೆ. ಈ ಭೂಮಿಯ ಮೇಲೆ ಇರುವ ಪ್ರತಿ ಮನುಷ್ಯನಿಗೂ ಒಂದಲ್ಲಾ ಒಂದು ಆರೋಗ್ಯ ಸಂಬಂಧಿತ ತೊಂದರೆ ಇದ್ದೇ ಇರುತ್ತದೆ ಹಾಗೂ ಜೀವಮಾನದಲ್ಲಿ ಒಂದು ಬಾರಿಯಾದರೂ ಔಷಧಿ ಸೇವಿಸಬೇಕಾದ ಪ್ರಮೇಯ ಬಂದೇ ಬರುತ್ತದೆ.

Cloves

ಕೆಲವು ಕಾಯಿಲೆಗಳು ಅನಿವಾರ್ಯವಾಗಿ ಎದುರಾಗುತ್ತವೆ. ಆದರೆ ಆರೋಗ್ಯಕರ ಜೀವನಕ್ರಮ ಹಾಗೂ ಆಹಾರಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಈ ಕಾಯಿಲೆಗಳನ್ನು ದೂರವಿರಿಸಬಹುದು. ಇಂತಹ ಒಂದು ಅನಿವಾರ್ಯ ಕಾಯಿಲೆ ಎಂದರೆ ಮಧುಮೇಹ. ಮಧುಮೇಹ ಬಂದ ಬಳಿಕ ಇದನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಬದಲಿಗೆ ನಿಯಂತ್ರಣದಲ್ಲಿಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಮಧುಮೇಹದ ಸೂಚನೆ ಹಾಗೂ ಲಕ್ಷಣಗಳನ್ನು ಸರಿಯಾಗಿ ಅರಿತುಕೊಳ್ಳುವ ಮೂಲಕ ಇದನ್ನು ನಿಯಂತ್ರಿಸುವುದು ಹೇಗೆ ಎಂಬುದನ್ನೂ ಕಂಡುಕೊಳ್ಳಬಹುದು. ಮಧುಮೇಹದ ಪರಿಣಾಮವಾಗಿ ಇತರ ಹಲವಾರು ತೊಂದರೆಗಳೂ ಎದುರಾಗುವ ಕಾರಣ ಇದನ್ನು ನಿತ್ಯವೂ ಒಂದೇ ಪ್ರಕಾರವಾಗಿರುವಂತೆ ನಿಯಂತ್ರಿಸುವುದು ಅಷ್ಟು ಸುಲಭವಲ್ಲ.

ಮಧುಮೇಹಿಗಳ ದೇಹದಲ್ಲಿ ರಕ್ತದಲ್ಲಿರುವ ಸಕ್ಕರೆಯನ್ನು ಬಳಸಿಕೊಳ್ಳಲು ಅಗತ್ಯವಾಗಿರುವ ಇನ್ಸುಲಿನ್ ಉತ್ಪಾದನೆಯಾಗದೇ ಇರಬಹುದು (ಟೈಪ್ 1) ಅಥವಾ ಇನ್ಸುಲಿನ್ ಉತ್ಪತ್ತಿಯಾದರೂ ಇದನ್ನು ಬಳಸಿಕೊಳ್ಳಲು ಅಸಮರ್ಥವಾಗಬಹುದು (ಟೈಪ್ 2) ಇದರಲ್ಲಿ ಟೈಪ್ 2 ನಿಯಂತ್ರಿಸಲು ಕೊಂಚ ಹೆಚ್ಚೇ ಕಷ್ಟವಾದ ಬಗೆಯಾಗಿದೆ.

Cloves oil

ಏಕೆಂದರೆ ಇನ್ಸುಲಿನ್ ಬಳಕೆಯಾಗದೇ ಹೋದರೆ ಇದು ಕೆಲವಾರು ತೊಂದರೆಗಳನ್ನು ತಂದೊಡ್ಡಬಲ್ಲುದು. ಇದರ ಪರಿಣಾಮವಾಗಿ ರಕ್ತದಲ್ಲಿ ಹೆಚ್ಚಿನ ಸಕ್ಕರೆಯ ಮಟ್ಟ, ತೂಕದಲ್ಲಿ ಇಳಿಕೆ, ಪದೇ ಪದೇ ಮೂತ್ರಕ್ಕೆ ಅವಸರವಾಗುವುದು, ಕುಂಠಿತವಾದ ರೋಗ ನಿರೋಧಕ ಶಕ್ತಿ, ಮಂದವಾದ ದೃಷ್ಟಿ, ಸತತ ಹಸಿವು, ಪಾದಗಳು ಮರಗಟ್ಟಿದಂತಾಗುವುದು ಮೊದಲಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಒಂದು ವೇಳೆ ಈ ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸದೇ ಇದ್ದರೆ ಇದರ ಪರಿಣಾಮ ಭೀಕರವಾಗಬಹುದು. ಆದ್ದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿರಿಸಲು ವೈದ್ಯರು ನೀಡುವ ಸಲಹೆಗಳನ್ನು ತಪ್ಪದೇ ಪಾಲಿಸಬೇಕು. ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ನಿಸರ್ಗ ಲವಂಗದ ನೆರವನ್ನು ನೀಡಿದ್ದು ಇದನ್ನು ಹೇಗೆ ಬಳಸಬೇಕು ಎಂಬುದನ್ನು ನೋಡೋಣ....

ಅಗತ್ಯವಾದ ಸಾಮಾಗ್ರಿಗಳು:

ಲವಂಗ: ಆರರಿಂದ ಎಂಟು ಮೊಗ್ಗು

ಬಿಸಿನೀರು: ಒಂದು ಲೋಟ

Diabetes

ಈ ನೈಸರ್ಗಿಕ ವಿಧಾನವನ್ನು ನಿತ್ಯವೂ ಅನುಸರಿಸುತ್ತಾ ಬಂದರೆ ರಕ್ತದಲ್ಲಿನ ಸಕ್ಕರೆಯ ಮಟ್ಟ ಆರೋಗ್ಯಕರ ಮಟ್ಟಕ್ಕಿಳಿಯಲು ನೆರವಾಗುತ್ತದೆ. ಆದರೆ ಇದಕ್ಕೂ ಮುನ್ನ ನಿಮ್ಮ ವೈದ್ಯರ ಸಲಹೆ ಪಡೆದು ಅನುಮತಿ ಪಡೆದುಕೊಳ್ಳುವುದು ಅಗತ್ಯ. ಅಲ್ಲದೇ ವೈದ್ಯರು ನಿಮಗೆ ನೀಡಿರುವ ಇತರ ಔಷಧಿಗಳನ್ನು ಅವರ ಸಲಹೆಯ ಪ್ರಕಾರವೇ ಮುಂದುವರೆಸಬೇಕು.

ಇದರೊಂದಿಗೆ ಸಾಕಷ್ಟು ವ್ಯಾಯಾಮ ಹಾಗೂ ವೈದ್ಯರು ಸೂಚಿಸಿರುವ ಆರೋಗ್ಯಕರ ಆಹಾರಕ್ರಮಗಳನ್ನೂ ಅನುಸರಿಸಬೇಕು. ನೆನಪಿಡಿ, ಮಧುಮೇಹದ ನಿಯಂತ್ರಣಕ್ಕೆ ಆರೋಗ್ಯಕರ ಜೀವನಕ್ರಮವೇ ಜೀವಾಳವಾಗಿದೆ. ಲವಂಗದಲ್ಲಿ ನೈಜಿರೆಸಿನ್ (nigericin) ಎಂಬ ಪೋಷಕಾಂಶವಿದೆ. ಇದು ಮಧುಮೇಹಿಗಳ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ನೆರವಾಗುತ್ತದೆ. ಇದು ಜೀವಕೋಶಗಳು ರಕ್ತದಲ್ಲಿರುವ ಸಕ್ಕರೆಯನ್ನು ಹೀರಿಕೊಳ್ಳಲು ನೆರವಾಗುತ್ತದೆ ಹಾಗೂ ದೇಹ ಇನ್ಸುಲಿನ್ ಉತ್ಪಾದಿಸುವ ಕ್ಷಮತೆಯನ್ನೂ ಹೆಚ್ಚಿಸುತ್ತದೆ. ಪರಿಣಾಮವಾಗಿ ಎರಡೂ ಬಗೆಯ ಮಧುಮೇಹಿಗಳಿಗೆ ಇದು ಸೂಕ್ತವಾದ ವಿಧಾನವಾಗಿದೆ.

Hot water

ತಯಾರಿಕಾ ವಿಧಾನ:

*ಬಿಸಿನೀರಿನಲ್ಲಿ ಲವಂಗವನ್ನು ಹಾಕಿ ಸುಮಾರು ಹದಿನೈದು ನಿಮಿಷ ಹಾಗೇ ಬಿಡಿ.

*ಬಳಿಕ ಈ ನೀರನ್ನು ಸೋಸಿ ಲವಂಗಗಳನ್ನು ನಿವಾರಿಸಿ

*ಈ ನೀರನ್ನು ಒಂದು ಲೋಟದಲ್ಲಿ ಸಂಗ್ರಹಿಸಿ

*ಈ ನೀರನ್ನು ನಿತ್ಯವೂ ಮುಂಜಾನೆಯ ಉಪಾಹಾರದ ಬಳಿಕ ಸೇವಿಸಿ. ಉತ್ತಮ ಪರಿಣಾಮ ಪಡೆಯಲು ಕನಿಷ್ಠ ಮೂರು ತಿಂಗಳಾದರೂ ಸತತವಾಗಿ ಸೇವಿಸಿ.

For Quick Alerts
ALLOW NOTIFICATIONS
For Daily Alerts

    English summary

    Homemade Clove Recipe For Diabetics To Regulate Blood Sugar

    The ancient medicinal system of ayurveda realised that some of the spices have great health benefits, so they are being used to prepare ayurvedic medicines even to this day! None of us are strangers to diseases, as every human is affected by one or many diseases in the course of his or her lifetime. Although many diseases are inevitable, by incorporating a healthy lifestyle one can prevent or control a number of diseases. Now, we may be aware that diabetes is a disease which has no cure and only its symptoms can be controlled.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more