For Quick Alerts
ALLOW NOTIFICATIONS  
For Daily Alerts

ತಾಮ್ರದ ಪಾತ್ರೆಯಲ್ಲಿ ನೀರು ಕುಡಿದರೆ- ಮಧುಮೇಹ ನಿಯಂತ್ರಣಕ್ಕೆ!

By Hemanth
|
ತಾಮ್ರದ ಪಾತ್ರೆಯಲ್ಲಿ ನೀರನ್ನ ಕುಡಿದರೆ ಹಲವಾರು ಲಾಭಗಳಿವೆ | Oneindia Kannada

ಮಧುಮೇಹ ಅಥವಾ ಡಯಾಬಿಟೀಸ್ ಮೆಲ್ಲಿಟಸ್ ಎಂಬುದು ಒಂದು ರೋಗಗಳ ಸಮೂಹವಾಗಿದ್ದು ರಕ್ತದಲ್ಲಿ ಅಧಿಕ ಪ್ರಮಾಣದ ಸಕ್ಕರೆ ಇರುವಂತೆ ಹಾಗೂ ಮೂತ್ರದಲ್ಲಿ ಈ ಸಕ್ಕರೆ ಬಳಕೆಯಾಗದೇ ವ್ಯರ್ಥವಾಗಿ ಹೊರಹೋಗುವಂತೆ ಮಾಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 1980ರಲ್ಲಿ ಹದಿನೆಂಟು ವರ್ಷ ದಾಟಿದ ವ್ಯಕ್ತಿಗಳಲ್ಲಿ ಮಧುಮೇಹ 4.7% ಇದ್ದಿದ್ದು 2014ರಲ್ಲಿ 8.5%ಕ್ಕೇರಿದೆ. ಅಲ್ಲದೇ ಅಂಕಿ ಅಂಶಗಳನ್ನು ಆಧರಿಸಿ ವಿಶ್ವದಲ್ಲಿ 2030ರಲ್ಲಿ ಎದುರಾಗುವ ಒಟ್ಟಾರೆ ಸಾವುಗಳಿಗೆ ಮಧುಮೇಹ ಏಳನೆಯ ಸ್ಥಾನ ಪಡೆಯಲಿದೆ ಎಂದು ವರದಿ ಮಾಡಿದೆ.

ಮಧುಮೇಹ ಇರುವುದನ್ನು ತಡವಾಗಿ ಪತ್ತೆಹಚ್ಚುವುದು, ಈ ಬಗ್ಗೆ ಅರಿವಿನ ಕೊರತೆ ಮೊದಲಾದವು ಮಧುಮೇಹದ ಪ್ರಕರಣಗಳು ಹೆಚ್ಚುವಂತೆ ಮಾಡಿವೆ. ಇವುಗಳ ಬಗ್ಗೆ ವ್ಯಾಪಕವಾಗಿರುವ ಮಿಥ್ಯೆಗಳು ಈ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಲು ಕಾರಣವಾಗಿವೆ.

Copper Vessel Help control diabetes

ತಾಮ್ರದ ಪಾತ್ರೆಯಲ್ಲಿ ನೀರನ್ನಿರಿಸಿ ಕುಡಿಯುವುದು ಭಾರತದ ಪುರಾತನ ಸಂಪ್ರದಾಯವಾಗಿದೆ. ವಾಸ್ತವವಾಗಿ ನೀರನ್ನು ಶುದ್ಧೀಕರಿಸುವ ಪುರಾತನ ವಿಧಾನಗಳಲ್ಲಿ ಈ ವಿಧಾನವೂ ಒಂದಾಗಿದೆ. ತಾಮ್ರದ ಪಾತ್ರೆಯಲ್ಲಿ ನೀರನ್ನು ಸಂಗ್ರಹಿಸುವುದರಿಂದ ನೀರಿನಲ್ಲಿ ಕಲ್ಮಶಗಳು ಇಲ್ಲವಾಗಿ ನೈಸರ್ಗಿಕವಾಗಿ ನೀರು ಶುದ್ದೀಕರಣಗೊಳ್ಳುತ್ತದೆ.

ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿಟ್ಟ ನೀರನ್ನು ಕುಡಿಯುವ ಮೂಲಕ ಆರೋಗ್ಯಕ್ಕೆ ಕೆಲವಾರು ಪ್ರಯೋಜನಗಳಿವೆ. ವಿಶೇಷವಾಗಿ ಈ ನೀರಿನಲ್ಲಿ ಕರಗಿರುವ ಕಣಗಳು ಸೂಕ್ಷ್ಮ ಜೀವಿಗಳು, ಶಿಲೀಂಧ್ರ, ಪಾಚಿ ಹಾಗೂ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಶಕ್ತಿ ಪಡೆದಿವೆ. ಅಷ್ಟೇ ಅಲ್ಲ, ನೀರನ್ನು ತಾಮ್ರದ ಪಾತ್ರೆಯಲ್ಲಿ ಇಡಿಯ ರಾತ್ರಿ ಅಥವಾ ಕನಿಷ್ಟಪಕ್ಷ ನಾಲ್ಕು ಗಂಟೆಗಳ ಕಾಲ ಸಂಗ್ರಹಿಸಿಡುವುದರಿಂದ ನೀರನ್ನು ಶುದ್ಧೀಕರಿಸುವ ಗುಣವನ್ನು ಪಡೆದುಕೊಳ್ಳುತ್ತದೆ.

ಮೂಲೆ ಸೇರಿದ ತಾಮ್ರದ ಪಾತ್ರೆಯ ಆರೋಗ್ಯದ ಮಹಾತ್ಮೆ

Copper Vessel Help control diabetes

ನಮ್ಮ ಆರೋಗ್ಯಕ್ಕೆ ಅಗತ್ಯವಿರುವ ಹಲವಾರು ಖನಿಜಗಳ ಪೈಕಿ ತಾಮ್ರವೂ ಒಂದು. ಆದರೆ ನಮ್ಮ ದೇಹ ತಾಮ್ರ, ಕಬ್ಬಿಣ ಮೊದಲಾದ ಹೆಚ್ಚಿನ ಭಾರದ ಲೋಹಗಳನ್ನು ಅಪ್ಪಟರೂಪದಲ್ಲಿ ಹೀರಿಕೊಳ್ಳಲಾರವು, ಹಾಗಾಗಿ ನಾವು ಈ ಅಂಶಗಳು ಹೆಚ್ಚಿರುವ ಆಹಾರವನ್ನು ಸೇವಿಸಬೇಕಾಗುತ್ತದೆ. ತಾಮ್ರದ ಅಂಶವಿರುವ ಆಹಾರದಲ್ಲಿ ಆಂಟಿ ಆಕ್ಸಿಡೆಂಟ್ ಗುಣ ಹಾಗೂ ಉರಿಯೂತ ನಿವಾರಕ ಗುಣಗಳು ಪ್ರಬಲವಾಗಿದ್ದು ಗಾಯಗಳನ್ನು ಶೀಘ್ರವಾಗಿ ಮಾಗಿಸಲು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು, ರಕ್ತದಲ್ಲಿ ಕೆಂಪುರಕ್ತಕಣಗಳ ಸಂಖ್ಯೆಯನ್ನು ಹೆಚ್ಚಿಸಲು, ತ್ವಚೆಯ ಜೀವಕೋಶಗಳನ್ನು ಹೆಚ್ಚಿಸಲು ನೆರವಾಗುತ್ತವೆ. ತಾಮ್ರದೊಂದಿಗೆ ಮೆಗ್ನೀಶಿಯಂ ಹಾಗೂ ಮ್ಯಾಂಗನೀಸ್ ಸಹಾ ಹೆಚ್ಚಿರುವಂತೆ ನೋಡಿಕೊಳ್ಳುವ ಮೂಲಕ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚದಂತೆ ತಡೆಗಟ್ಟಬಹುದು.

ಆಯುರ್ವೇದದ ಪ್ರಕಾರ, ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿದ ನೀರು ಅಥವಾ "ತಾಮ್ರಜಲ"ವನ್ನು ಸೇವಿಸುವುದರಿಂದ ಕೆಲವಾರು ಪ್ರಯೋಜನಗಳಿವೆ. ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವುದು, ತ್ವಚೆಯ ಆರೋಗ್ಯ ವೃದ್ದಿಸುವುದು, ಬ್ಯಾಕ್ಟೀರಿಯಾಗಳ ವಿರುದ್ಧ ರಕ್ಷಣೆ ಹಾಗೂ ಉರಿಯೂತವಾಗುವುದರಿಂದ ರಕ್ಷಣೆ ಪಡೆಯಬಹುದು. ಈ ನೀರಿನ ಇನ್ನೊಂದು ಗುಣವೆಂದರೆ ಮಧುಮೇಹವನ್ನು ನಿಯಂತ್ರಿಸುವುದು. ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿದ ನೀರಿನ ಸೇವನೆಯಿಂದ ದೇಹದಲ್ಲಿ ಕಫ ಎಂಬ ಅಂಶವನ್ನು ನಿಯಂತ್ರಿಸಲು ಹಾಗೂ ಜಠರದಲ್ಲಿ ಉರಿ ಎಂಬ ಅಗ್ನಿಯನ್ನು ಶಮನಗೊಳಿಸಲು ನೆರವಾಗುತ್ತದೆ, ತನ್ಮೂಲಕ ರಕ್ತದಲ್ಲಿ ಅಧಿಕ ಸಕ್ಕರೆ ಲಭಿಸದಂತೆ ತಡೆಯುತ್ತದೆ. ಈ ನೀರನ್ನು ಕುಡಿಯುವ ವಿಧಾನವನ್ನು ವಿವರಿಸುತ್ತಾ ಡಾ. ಲಾಡ್ "ಒಂದು ತಾಮ್ರದ ಪಾತ್ರೆಯಲ್ಲಿ ಒಂದು ಲೋಟ ನೀರನ್ನು ರಾತ್ರಿ ಹಾಕಿಡಿ ಹಾಗೂ ಮರುದಿನ ಬೆಳಿಗ್ಗೆ ಕುಡಿಯಿರಿ" ಎಂದು ತಿಳಿಸುತ್ತಾರೆ.

Copper Vessel Help control diabetes

ಮಧುಮೇಹ ತಜ್ಞೆಯಾಗಿರುವ್, ಗಾಡೆ ಡಯಬಿಟೀಸ್ ಸೆಂಟರ್ ನ ವೈದ್ಯೆ ಡಾ. ರೋಶನಿ ಗಾಡ್ಗೆಯವರು ಈ ಬಗ್ಗೆ ಹೀಗೆ ತಿಳಿಸುತ್ತಾರೆ: 'ತಾಮ್ರದ ಪ್ರಮಾಣಕ್ಕೂ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣಕ್ಕೂ ನೇರವಾದ ಯಾವುದೇ ಸಂಬಂಧವಿಲ್ಲ, ಆದರೆ ತಾಮ್ರದ ಕೊರತೆ ಇದ್ದರೆ ಮಧುಮೇಹದ ಲಕ್ಷಣಗಳಾದ ಸಕ್ಕರೆಯ ಮಟ್ಟದಲ್ಲಿ ಏರಿಕೆ, ಉರಿಯೂತ, ಸುಸ್ತು ಹಾಗೂ ನಿಧಾನವಾಗಿ ಗಾಯಗಳು ಮಾಗುವುದು ಮೊದಲಾದವು ಎದುರಾಗುತ್ತವೆ. ಆದ್ದರಿಂದ ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿದ ನೀರನ್ನು ಕುಡಿಯುವ ಮೂಲಕ ಹಲವಾರು ಪ್ರಯೋಜನಗಳನ್ನು ಪಡೆಯಬಹುದು.

ಆದರೆ ತಾಮ್ರಕ್ಕೂ ಹಾಗೂ ಸಕ್ಕರೆಯ ಜೀವರಾಸಾಯನಿಕ ಕ್ರಿಯೆಗೂ ಯಾವ ಬಗೆ ನಂಟು ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಇನ್ನೂ ಹಲವಾರು ಅಧ್ಯಯನಗಳು ನಡೆಯಬೇಕಾಗುತ್ತದೆ. ಹಾಗೂ, ಈ ನೀರನ್ನು ಹೆಚ್ಚುವರಿ ಆಹಾರದ ರೂಪದಲ್ಲಿ ಸೇವಿಸಬೇಕೇ ಹೊರತು ವೈದ್ಯರ ಅನುಮತಿಯ ಹೊರತು ನಿಮ್ಮ ಈಗಿನ ಆಹಾರಕ್ರಮದಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಕೊಳ್ಳಬಾರದು ಎಂದು ಅವರು ವಿವರಿಸುತ್ತಾರೆ.

Copper Vessel Help control diabetes

ಮಧುಮೇಹವನ್ನು ನಿಯಂತ್ರಿಸುವುದು ಅಷ್ಟು ಸುಲಭವಾದ ಕೆಲಸವಲ್ಲ, ಆದರೆ ಅಸಾಧ್ಯವೂ ಅಲ್ಲ. ಆರೋಗ್ಯಕರ ಹಾಗೂ ಸರಿಯಾದ ಕ್ರಮದ ಆಹಾರ ಸೇವನೆ ಮತ್ತು ಸಾಕಷ್ಟು ದೈಹಿಕ ವ್ಯಾಯಾಮ ಇರುವ ಜೀವನಕ್ರಮವನ್ನು ಅಳವಡಿಸಿಕೊಳ್ಳುವ ಮೂಲಕ ಮಧುಮೇಹವನ್ನು ನಿಯಂತ್ರಿಸಬಹುದು. ನೆನಪಿರಲಿ, ನಿಮ್ಮ ಆಹಾರದಲ್ಲಿ ಸಾಕಷ್ಟು ಸಂಯುಕ್ತ ಕಾರ್ಬೋಹೈಡ್ರೇಟುಗಳು, ಕರಗದ ನಾರು ಹಾಗೂ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಇರುವ ಆಹಾರಗಳನ್ನೇ ಸೇವಿಸಬೇಕು.

ಮಧುಮೇಹ ರೋಗವನ್ನು ನಿಯಂತ್ರಿಸುವ ಪವರ್ ಫುಲ್ ನೈಸರ್ಗಿಕ ಪಾನೀಯ

English summary

Drinking Water From Copper Vessel Help control diabetes!

Drinking water stored in a copper vessel has been an ancient practice in India. In fact, it is one of the oldest forms of water purification known to the country. It is said that storing water in a copper vessel creates a natural purification process. There are many benefits of drinking copper water. It possesses the capacity to kill microorganisms, molds, fungi, algae and bacteria that are present in the water. Not just that, storing water in a copper vessel overnight or at least for four hours helps your water leach onto some beneficial properties of copper.
Story first published: Wednesday, August 1, 2018, 8:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more