For Quick Alerts
ALLOW NOTIFICATIONS  
For Daily Alerts

ಸಕ್ಕರೆ ಕಾಯಿಲೆ ಇರುವವರಿಗಾಗಿ 11 ಆರೋಗ್ಯಕಾರಿ ಸ್ನ್ಯಾಕ್ಸ್ ಗಳು

By Sushma Charhra
|

ದಿನಕ್ಕೆ ಒಂದು ಬಾರಿಯಾದರೂ ಯಾವುದಾದರೂ ಸ್ನ್ಯಾಕ್ಸ್ ತಿನ್ನಬೇಕು ಎಂದು ಪ್ರತಿಯೊಬ್ಬರಿಗೂ ಅನ್ನಿಸಿಯೇ ಅನ್ನಿಸುತ್ತೆ. ಹಾಗೆ ಅನ್ನಿಸದೇ ಇರುವ ವ್ಯಕ್ತಿಗಳು ಬಹುಶ್ಯಃ ಯಾರೂ ಇಲ್ಲ. ಏನೋ ತುಂಬಾ ಕೆಲಸ ಮಾಡೋದಿದೆ, ಅಥವಾ ನಿಮಗೆ ತುಂಬಾ ಹಸಿವೆಯಾಗಿದೆ ಅಥವಾ ನಿಮಗೆ ಏನಾದರೂ ರುಚಿರುಚಿಯಾಗಿ ತಿನ್ನಬೇಕು ಅನ್ನಿಸುತ್ತದೆ. ಆದರೆ ಹೀಗೆ ಅನ್ನಿಸುವುದು ಸಕ್ಕರೆ ಕಾಯಿಲೆ ಇರುವವರ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.

ಸಕ್ಕರೆ ಕಾಯಿಲೆ ಇರುವವರಿಗೆ ತಮ್ಮ ಸ್ನ್ಯಾಕ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳುವುದು ಒಂದು ಸವಾಲಿನ ಕೆಲಸ. ಆದರೆ ನಿಜಕ್ಕೂ ಹೇಳಬೇಕೆಂದರೆ ಇದು ಸವಾಲೇನಲ್ಲ. ನೀವು ಪ್ರತಿನಿತ್ಯ ಬಳಸುವ ಕೆಲವು ಆರೋಗ್ಯಕಾರಿ ವಸ್ತುಗಳಿಂದಲೇ ಉತ್ತಮ ಸ್ನ್ಯಾಕ್ಸ್ ತಯಾರಿಸಿಕೊಳ್ಳಬಹುದು ಮತ್ತು ಅದು ಸರಿಯಾದ ದಾರಿಯೂ ಆಗಿರುತ್ತದೆ. ಸರಿಯಾದ ಪ್ರಮಾಣದಲ್ಲಿ ಸರಿಯಾದ ಆಹಾರ ಸೇವನೆಯು ಪ್ರತಿಯೊಬ್ಬರಿಗೂ ಹಿತವಾದದ್ದು. ಇಲ್ಲಿ ಡಯಾಬಿಟೀಸ್ ರೋಗಿಗಳಿಗೆ ಉತ್ತಮವಾಗಿರುವ 11 ಸ್ನ್ಯಾಕ್ ಗಳ ಪಟ್ಟಿಯನ್ನು ನೀಡಲಾಗಿದೆ.. ಟ್ರೈ ಮಾಡಿ ನೋಡಿ,,, ಬಾಯಿಗೂ ರುಚಿ, ದೇಹತಕ್ಕೂ ಹಿತ...

Healthy Snacks For Those With Diabetes

1. ಸೇಬು ಹಣ್ಣು

ದಿನಕ್ಕೊಂದು ಸೇಬುಹಣ್ಣು ಡಾಕ್ಟರ್ ರಿಂದ ದೂರವಿರಿಸುತ್ತೆ ಎಂಬ ಇಂಗ್ಲೀಷಿನ ಗಾದೆಮಾತೇ ಇದೆ. ಆದರೆ ಕೇವಲ ಒಂದು ಅಷ್ಟೇ... ಎರಡು, ಮೂರು, ನಾಲ್ಕು ಅಲ್ಲವೇ ಅಲ್ಲ. ಡೈಯಟರಿ ಫೈಬರ್ ನಿಂದ ಸೇಬುಹಣ್ಣು ಶ್ರೀಮಂತವಾಗಿರುತ್ತದೆ. ಈ ಫೈಬರ್ ಗಳು ಒಂದು ವೇಳೆ ಊಟಕ್ಕಿಂತ ಮುನ್ನ ಸೇವಿಸಿದರೆ ನಿಮ್ಮ ಹೊಟ್ಟೆಯನ್ನು ಬಹಳಷ್ಟು ಸಮಯದ ವರೆಗೆ ಫುಲ್ ಆಗಿ ಇರಿಸುತ್ತದೆ. ಅತೀ ಹೆಚ್ಚು ಕ್ಯಾಲೋರಿ ಸೇವನೆಯನ್ನು ಕೂಡ ಇದು ಕಡಿಮೆ ಮಾಡುತ್ತದೆ.. ಆದರೆ ನೆನಪಿರಲಿ ಇದರಲ್ಲಿ ಕಾರ್ಬೋಹೈಡ್ರೇಟ್ಸ್ ಅಂಶಗಳೂ ಕೂಡ ಇರುತ್ತವೆ. ಸ್ವಲ್ಪ ಪೀನಟ್ ಬಟರ್ ನ್ನು ಸೇರಿಸಿ ಸೇವಿಸುವುದರಿಂದಾಗಿ ಎರಡೂ ಒಟ್ಟಾಗಿ ಸೇರಿ ನಿಮಗೆ ಬ್ಲಡ್ ಶುಗರ್ ಲೆವೆಲ್ ನ್ನು ಹತೋಟಿಯಲ್ಲಿ ಇಟ್ಟಿರುತ್ತದೆ.

2. ಚೀಸ್ ಸ್ಟಿಕ್ಸ್ ಮತ್ತು ಚೀಸ್ ರೌಂಡ್ಸ್

ಡಯಾಬಿಟೀಸ್ ಪೇಶೆಂಟ್ ಗಳ ಸ್ನ್ಯಾಕ್ಸ್ ಪಟ್ಟಿಯಲ್ಲಿ ಇದು ಇರುವುದು ನೋಡಿ ನಿಮಗೆ ಆಶ್ಚರ್ಯವಾಗುತ್ತಿದೆಯಾ? ನಿಜ ಹೇಳಬೇಕು ಅಂದರೆ, ಇದು ಅನಾರೋಗ್ಯಕಾರಿ ಆಗುವುದು ಯಾವಾಗ ನೀವು ಇದನ್ನು ತುಂಬಾ ಪ್ರಮಾಣದಲ್ಲಿ ಸೇವಿಸುತ್ತೀರೋ ಆಗ...ಚೀಸ್ ನಲ್ಲಿ ಆರೋಗ್ಯಕರವಾದ ಪ್ರೋಟೀನ್, ಕ್ಯಾಲ್ಸಿಯಂ ಅಂಶವಿದೆ.ನಿಮಗೆ ಇದರ ಬಗ್ಗೆ ಇನ್ನೂ ನಂಬಿಕೆ ಇಲ್ಲ ಅಂದರೆ ಲೋ ಫ್ಯಾಟ್ ಇರುವ ಚೀಝ್ ಗಳನ್ನು ಆಯ್ಕೆ ಮಾಡಬಹುದು.ಸ್ಟಿಕ್ಸ್ ಮತ್ತು ರೌಂಡ್ಸ್ ಗಳು ಉತ್ತಮ ಆಯ್ಕೆ ಇವುಗಳು ಲೋ ಫ್ಯಾಟ್ ಅಂಶಗಳಲ್ಲಿ ಅತ್ಯಂತ ಹೇರಳವಾಗಿ ಲಭ್ಯವಿರುತ್ತದೆ... ಕ್ರ್ಯಾಕರ್ಸ್ ಮತ್ತು ಹಣ್ಣುಗಳ ಜೊತೆಗೆ ಸೇವಿಸಲು ಬಹಳ ಹಿತವಾಗಿರುತ್ತದೆ.

3. ಬಾದಾಮಿ/ಕಡಲೆಕಾಯಿ

ಕ್ರೀಮಿಯಾಗಿರುವ ತುಪ್ಪ, ಬೆಣ್ಣೆ ಯಾವಾಗಲೂ ನಾಲಗೆಗೆ ರುಚಿಯೇ, ಆದರೆ ಹೃದಯಕ್ಕೆ ಅಷ್ಟು ಹಿತವಲ್ಲ. ಎಣ್ಣೆ ಇಲ್ಲದ ಮತ್ತು ಉಪ್ಪು ಇಲ್ಲದ ಬೀಜಗಳ ಬ್ರಾಂಡ್ ಹುಡುಕಿ ಆಯ್ದುಕೊಳ್ಳುವುದು ಮುಖ್ಯ ವಿಚಾರವಾಗಿರುತ್ತದೆ..ಆರೋಗ್ಯಕರವಾಗಿರುವ ಸಣ್ಣ ಪ್ರಮಾಣದ ಸ್ಯಾಚೆಟ್ ಗಳು ಈಗ ಸುಲಭದಲ್ಲಿ ಲಭ್ಯವಾಗುತ್ತದೆ.ಇದು ನಿಮ್ಮನ್ನ ಲಿಮಿಟ್ ಕೂಡ ಮಾಡುತ್ತೆ ಮತ್ತು ಆರೋಗ್ಯವಾಗಿರಲೂ ಸಹಕರಿಸುತ್ತದೆ. ನೀವಿದನ್ನು ಹಣ್ಣು ಮತ್ತು ಮೊಸರಿನ ಜೊತೆ ಮಿಕ್ಸ್ ಮಾಡಿ ಕೂಡ ಸೇವಿಸಬಹುದು . ಆ ಮೂಲಕ ನಿಮಗೆ ಪ್ರೊಟೀನ್ ಕಿಕ್ ಕೂಡ ಸಿಗಲಿದೆ.

4. ಉಪ್ಪಿನಾಂಶದಿಂದ ಕೂಡಿದ ಬೀಜಗಳು

ಬೀಜಗಳು ಅಂದರೆ ಅದರಲ್ಲಿ, ವಾಲ್ ನಟ್, ಕಡಲೆಬೀಜಗಳು, ಪಿಸ್ತಾ, ಬಾದಾಮಿಗಳನ್ನು ಸೇವಿಸಿ. ಹುರಿದ ಬೀಜಗಳಿಗಿಂತ ಇದು ಅತ್ಯುತ್ತಮ ಆಯ್ಕೆ ಕೂಡ ಹೌದು, ಮತ್ತು ಹೆಚ್ಚು ಉಪ್ಪನ್ನು ಸೇರಿಸಿಕೊಳ್ಳಬೇಡಿ.ಆರೋಗ್ಯಕಾರಿ ಕೊಬ್ಬಿನಾಂಶ, ಫೈಬರ್ ಗಳು, ಪ್ರೊಟೀನ್, ಓಮೆಗಾ 3 ಫ್ಯಾಟಿ ಆಸಿಡ್ ಗಳು, ಓಮೆಗಾ 6 ಫ್ಯಾಟಿ ಆಸಿಡ್ ಗಳು ಇತ್ಯಾದಿಗಳನ್ನು ಇದು ಒಳಗೊಂಡಿರುತ್ತದೆ. ಆದರೆ ಅತಿಯಾಗಿ ಸೇವಿಸಬೇಡಿ. ಒಂದು ಮುಷ್ಟಿಯಷ್ಟು ಬೀಜಗಳನ್ನು ಸೇವಿಸಿದ್ರೆ ಸಾಕೇ ಸಾಕು,ಅಷ್ಟು ಅಗತ್ಯವಿರೋದಿಲ್ಲ, ಯಾಕೆಂದರೆ ಇದರ ಒಂದು ಬೀಜದಲ್ಲೇ ಸಾಕಷ್ಟು ಲಾಭಗಳಿರುತ್ತದೆ.

5. ಗ್ರೀಕ್ ಯೋಗರ್ಟ್:

ಗ್ರೀಕ್ ಯೋಗರ್ಟ್‍ನಲ್ಲಿ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಅಂಶ ಅಧಿಕವಾಗಿರುತ್ತದೆ. ಕಡಿಮೆ ಪ್ರಮಾಣದ ಸೋಡಿಯಂ ಅಂಶವಿದ್ದು, ಹೆಚ್ಚು ಪ್ರಮಾಣದ ಪೊಟಾಷಿಯಂ ಅಂಶಗಳಿಂದ ಇದು ದೇಹದ ಸಮತೋಲನಕ್ಕೆ ನೆರವಾಗುತ್ತದೆ.ಇದರ ಮೇಲೆ ಬೆರ್ರಿಗಳು, ಬೀಜಗಳು ಮತ್ತು ಹಣ್ಣುಗಳನ್ನು ಉದುರಿಸಿಕೊಂಡು ಸೇವಿಸುವುದರಿಂದಾಗಿ ನಿಮ್ಮ ಹೆಲ್ದಿ ಸ್ನ್ಯಾಕ್ ಸೇವಿಸಬಹುದು. ಕರುಳಿಗೆ ಸಂಬಂಧಿಸಿದ ಬ್ಯಾಕ್ಟೀರಿಯಾಗಳು ಇದರಿಂದ ಖುಷಿಗೊಳ್ಳುತ್ತವೆ ಮತ್ತು ಉತ್ತಮ ಕೆಲಸವನ್ನು ನಿರ್ವಹಿಸುತ್ತವೆ. ಇದರಲ್ಲಿ ವಿಟಮಿನ್ ಬಿ 12 ಅಂಶವೂ ಇದ್ದು, ರಕ್ತದ ಫಾರ್ಮೇಷನ್ ಗೆ ಇದು ಸಹಾಯ ಮಾಡುತ್ತದೆ. ಆ ಮೂಲಕ ರಕ್ತದ ಸಕ್ಕರೆಯ ಮಟ್ಟವನ್ನು ಯಾವಾಗಲೂ ಸಮತೋಲನದಲ್ಲಿ ಇಡುತ್ತದೆ..

6. ಹುರಿದ ಬೀಜಗಳು

ಹುರಿದ ಬೀಜಗಳಲ್ಲಿ ಫೈಬರ್, ಜಿಂಕ್, ವಿಟಮಿನ್ ಇ ಮತ್ತು ಫೋಲೇಟ್ ಅಂಶಗಳು ಅಧಿಕವಾಗಿ ಇರುತ್ತದೆ.,ಇವುಗಳು ಹೃದಯದ ಆರೋಗ್ಯಕ್ಕೆ ಬಹಳ ಹಿತವಾದದ್ದು. ಯಾವಾಗಲೂ ಉಪ್ಪು ಹರಿತವಾಗಿರುವ ಹುರಿದ ಬೀಜಗಳನ್ನು ಆಯ್ಕೆ ಮಾಡಿಕೊಂಡು ಸೇವಿಸುವುದು ಉತ್ತಮ. ಅವುಗಳು ರೆಡಿಯಾಗಿ ಕೂಡ ಸೂಪರ್ ಮಾರ್ಕೆಟ್ ಗಳಲ್ಲಿ ಸಿಗುತ್ತವೆ. ಮನೆಯಲ್ಲೇ ತಯಾರಿಸುವುದಾದರೂ ಅದೇನು ಕಷ್ಟದ ವಿಚಾರವಲ್ಲ, ಸುಲಭದಲ್ಲೇ ತಯಾರಿಸಿಕೊಳ್ಳಬಹುದು.. ಬಾಣಲೆಯಲ್ಲೇ ಹುರಿದುಕೊಳ್ಳಬಹುದು, ಇಲ್ಲವೇ ಓವನ್ ಆಯ್ಕೆ ಮಾಡಿಕೊಳ್ಳುತ್ತಿರಾದರೆ ಹಾಗೂ ಮಾಡಬಹುದು. ಇನ್ನು ಕಾಲಕ್ಕೆ ಸರಿಹೊಂದುವಂತೆ ಬೇಕಿದ್ದರೆ ಕಾಳುಮೆಣಸಿನ ಪುಡಿ, ಕೊತ್ತುಂಬರಿ ಪುಡಿ, ಜೀರಿಗೆ ಪುಡಿಯನ್ನು ಅದಕ್ಕೆ ಸೇರಿಸಿ, ಇಷ್ಟವಾದರೆ ಹಾಗೂ ಸೇವಿಸಬಹುದು. ಆದರೆ ಚೆನ್ನಾಗಿ ಸ್ಪ್ರೆಡ್ ಮಾಡಿಕೊಂಡು ಸರಿಯಾಗಿ ಹುರಿದು ಸೇವಿಸಿ,

7. ಟ್ಯೂನಾ/ ಸಾಲ್ಮನ್:

ಮೀನಿನ ಆಹಾರ ಯಾವಾಗಲೂ ಕೂಡ ಒಳ್ಳೆಯದೇ ! ಎರಡರಲ್ಲೂ ಟ್ಯೂನಾ ಮತ್ತು ಸಾಲ್ಮನ್ ನಲ್ಲಿ ಒಮೆಗಾ 3 ಫ್ಯಾಟ ಆಸಿಡ್ ಇದ್ದು ಇದು ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಬಹಳವಾಗಿ ಹೆಚ್ಚಿಸುವ ತಾಕತ್ತು ಇದಕ್ಕಿದೆ. ಮತ್ತು ಇದರಲ್ಲಿ ವಿಟಮಿನ್ ಮತ್ತು ಮಿನರಲ್ ಗಳು ಇದರಲ್ಲಿ ಅತ್ಯಂತ ಹೆಚ್ಚಾಗಿರುತ್ತದೆ.ಸಾಲ್ಮನ್ ನಲ್ಲಿ ಆಂಟಿ ಆಕ್ಸಿಡೆಂಟ್ ಗಳಿದ್ದು, ಇದು ಮೆದುಳಿನಲ್ಲಿ ಉರಿಯೂತ ಸಮಸ್ಯೆ, ನರವ್ಯೂಹದ ಸರಿಯಾದ ಕಾರ್ಯಚಟುವಟಿಕೆಗೆ ಸಹಕಾರಿಯಾಗಿದೆ. ಈ ಮೀನುಗಳು ನಿಮ್ಮ ಬ್ಲಡ್ ಶುಗರ್ ಮಟ್ಟವನ್ನು ಸರಿಯಾದ ರೀತಿಯಲ್ಲಿ ಇಡಲು ನೆರವಾಗುತ್ತೆ.. ಹಾಗಾಗಿ ಇದನ್ನು ಸೇವಿಸುವುದು ನಿಮ್ಮ ಆರೋಗ್ಯಕ್ಕೆ ಹಿತವಾದದ್ದು.

8. ಪಾಪ್ ಕಾರ್ನ್ ಜೊತೆಗೆ ಹುರಿದ ಬಾದಾಮಿ :

ಫೈಬರ್ ಅಂಶಗಳಿಂದ ಸಮೃದ್ಧವಿರುವ ಮತ್ತು ಹೃದಯ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಇಡಬಹುದಾದ ಬೆಸ್ಟ್ ಆಹಾರ ಎಂದರೆ ಅದು ಪಾಪ್ ಕಾರ್ನ್...ನಿಮ್ಮ ಬ್ಲಡ್ ಶುಗರ್ ಮಟ್ಟವು ಏರುಪೇರಾಗದಂತೆ ನೋಡಿಕೊಳ್ಳುವ ತಾಕತ್ತು ಇದಕ್ಕಿದೆ.ಆಲೂಗಡ್ಡೆಯ ಚಿಪ್ಸ್ ಸೇವನೆಗಿಂತ ಇದು ಉತ್ತಮವಾದದ್ದು ಎಂದು ಅಧ್ಯಯನವೊಂದು ತಿಳಿಸುತ್ತದೆ. ಆದರೆ, ನೀವು ಬೆಣ್ಣೆ ಹಾಕಿದ್ದನ್ನೋ ಅಥವಾ ಉಪ್ಪು, ಚೀಝ್ ಇತ್ಯಾದಿ ಮಿಶ್ರಣದ್ದನ್ನು ಸೇವಿಸಕೂಡದು ಕೇವಲ ತಾಜಾವಾಗಿರುವ ಖಾಲಿ ಪಾಪ್ ಕಾರ್ನ್ ಗಳನ್ನು ಸೇವಿಸಬೇಕು, ಯಾವುದೇ ಬೆಣ್ಣೆ, ಚೀಝ್, ಯಾವುದನ್ನೂ ಸೇರಿಸಿಕೊಳ್ಳಬಾರದು. ಪಾಪ್ ಕಾರ್ನ್ ಗಳಿಗೆ ಸ್ವಲ್ಪ ಆರೋಗ್ಯಕರವಾದ ಹುರಿದ ಬಾದಾಮಿಗಳನ್ನು ಸೇರಿಸಿ ತಿನ್ನಿ. ಸ್ನ್ಯಾಕ್ಸ್ ಇನ್ನೂ ಅಧ್ಬುತವಾಗಲಿದೆ ಮತ್ತು ಉತ್ತಮ ರುಚಿಯೂ ಲಭ್ಯವಾಗಲಿದೆ.

9. ಹಮ್ಮುಸ್:

ಬೇಯಿಸಿದ ಗಜ್ಜರಿಗಳಿಂದ ಹಮ್ಮುಸ್ ನ್ನು ತಯಾರಿಸಲಾಗುತ್ತೆ. ತಾಹಿನಿ, ಆಲಿವ್ ಎಣ್ಣೆ, ಉಪ್ಪು, ಬೆಳ್ಳುಳ್ಳಿ, ಮತ್ತು ಇತರೆ ಮಸಾಲೆಗಳನ್ನು ಬ್ಲೆಂಡ್ ಮಾಡಿ, ಗಟ್ಟಿ ಪೇಸ್ಟ್ ತಯಾರಿಸಿ ಮಾಡುವ ಒಂದು ರೀತಿಯ ಖಾಧ್ಯವಾಗಿದೆ. ಇದರಲ್ಲಿ ಫ್ಯಾಟ್ ಅಂಶವು ಸಮತೋಲನದಲ್ಲಿ ಇರುತ್ತದೆ ಮತ್ತು ಪ್ರೋಟೀನ್, ಫೈಬರ್ ಅಂಶವೂ ಕೂಡ ಇದ್ದು, ಉತ್ತಮ ಸ್ನ್ಯಾಕ್ ಆಗಿರಲಿದೆ. ಇದೀಗ ಕ್ರ್ಯಾಕರ್ಸ್ ಮತ್ತು ಪ್ರೆಟ್ಜೆಲ್ ಗಳ ರೂಪದಲ್ಲಿ ಇದು ಲಭ್ಯವಾಗಲಿದೆ.

10. ಬೆರ್ರಿಗಳು

ಬೆರ್ರಿಗಳಲ್ಲಿ 0.3 ಶೇಕಡಾ ಫ್ಯಾಟ್ ಮತ್ತು 12 ಶೇಕಡಾ ದಷ್ಟು ಆರೋಗ್ಯಕಾರಿ ಕಾರ್ಬೋಹೈಡ್ರೇಟ್ಸ್ ಗಳು ಕೇವಲ 100 ಗ್ರಾಮ್ ಸೇವನೆಯಿಂದ ಲಭ್ಯವಾಗುತ್ತದೆ. ಇವುಗಳಲ್ಲಿ ಸಾಕಷ್ಟು ಪ್ರಮಾಣದ ಆಂಟಿ ಆಕ್ಸಿಡೆಂಟ್ ಗಳಿದ್ದು ಅವುಗಳು ದೇಹದಿಂದ ಫ್ರೀ ರ್ಯಾಡಿಕಲ್ ಗಳನ್ನು ತೆಗೆಯಲು ನೆರವು ನೀಡುತ್ತದೆ., ಆಕ್ಸಿಡೇಟಿಟ್ ಸ್ಟ್ರೆಸ್ ನ್ನು ನಿವಾರಿಸಲು ಕೂಡ ಇದು ನೆರವಾಗುತ್ತದೆ.ಅಷ್ಟೇ ಅಲ್ಲ ಇವುಗಳಲ್ಲಿ ವಿಟಮಿನ್ ಗಳು ಮತ್ತು ಫ್ಲೆವನಾಯ್ಡ್ ಗಳೂ ಕೂಡ ಇದೆ. ಇವುಗಳನ್ನು ದೊಡ್ಡ ಸಂಖ್ಯೆಯಲ್ಲೂ ಕೂಡ ನೀವು ಸೇವಿಸಬಹುದು ಮತ್ತು ನಿಮ್ಮ ಬ್ಲಡ್ ಶುಗರ್ ಬಗ್ಗೆ ಯಾವುದೇ ತಲೆಕೆಡಿಸಿಕೊಳ್ಳುವ ಅಗತ್ಯವೂ ಇರುವುದಿಲ್ಲ. ಯಾವ ವ್ಯಕ್ತಿಗಳು ಯಾವಾಗಲೂ ಬೆರ್ರೀ ಹಣ್ಣುಗಳನ್ನು ಸೇವಿಸುತ್ತಲೇ ಇರುತ್ತಾರೋ ಅವರು ಹಾರ್ಟ್ ಅಟ್ಯಾಕ್ ಮತ್ತು ಡಯಾಬಿಟೀಸ್ ಗೆ ತುತ್ತಾಗುವ ಭಯದಿಂದ ದೂರವೇ ಇರುತ್ತಾರೆ.ಹಾಗಾಗಿ ಪ್ರತಿದಿನ ಸೇವಿಸಿ, ಕೇವಲ ಹಣ್ಣುಗಳಾದರೂ ಆದೀತು ಇಲ್ಲವೇ ಓಟ್ಸ್ ಜೊತೆ ಇಲ್ಲವೇ ಮೊಸರಿನ ಜೊತೆ ಸೇವಿಸಿದರೂ ಕೂಡ ಹಿತವೇ... ಇವು ಇನ್ಸುಲಿನ್ ಪ್ರತಿಕ್ರಿಯೆಯ ಪ್ರಮಾಣವನ್ನು ಅಧಿಕಗೊಳಿಸಲು ನೆರವಾಗುತ್ತೆ ಮತ್ತು ಇದರಲ್ಲೂ ಫೈಬರ್ ಅಂಶ ಅಧಿಕವಾಗಿರುತ್ತದೆ.

11. ಗ್ವಾಕಮೋಲ್:

ಗ್ವಾಕಮೋಲ್ ಕೂಡ ಹಮೂಸ್ ತರಹವೇ... ಇದನ್ನು ಬೆಣ್ಣೆ ಹಣ್ಣು, ನಿಂಬೆ ರಸ, ಟೋಮೆಟೋಗಳು, ಮೆಣಸು, ಈರುಳ್ಳಿ, ಬೆಳ್ಳುಳ್ಳಿ ಜೊತೆಗೆ ಒಂದಷ್ಟು ಕ್ರೀಮ್ ಬಳಸಿ ತಯಾರಿಸಲಾಗುತ್ತ..ಈಗೆಲ್ಲ ಇದು ಸಣ್ಣ ಸಣ್ಣ ಪ್ಯಾಕೆಟ್ ಗಳಲ್ಲೂ ಲಭ್ಯವಾಗುತ್ತಿದ್ದು ನೀವು ಪ್ರವಾಸದಲ್ಲೋ, ಕೆಲಸದಲ್ಲೋ ಇದ್ದಾಗಲೂ ಕೈಯಲ್ಲಿ ಹಿಡಿದು ಆರಾಮಾಗಿ ಸೇವಿಸಬಹುದಾದ ಸ್ನ್ಯಾಕ್ ಆಗಿದೆ. ಇವುಗಳೆಲ್ಲವೂ, ಮಾರ್ಕೆಟ್ ನಲ್ಲಿ ಅಥವಾ ಹೊರಗಡೆ ಸೂಪರ್ ಮಾರ್ಕೆಟ್ ನಲ್ಲಿ ಸಿಗದಿರುವಷ್ಟು ಕಷ್ಟವಾಗಿರುವ ಪದಾರ್ಥ ಗಳೇನಲ್ಲ. ನೀವು ಯಾವುದರ ಕಾಂಬಿನೇಷನ್ ಮಾಡಿಕೊಳ್ಳಬೇಕು ಎಂಬುದನ್ನು ಅರ್ಥೈಸಿಕೊಂಡರೆ ಸಾಕು, ನಿಮ್ಮ ರಕ್ತದೊತ್ತಡವನ್ನು ಸರಿಯಾದ ಮಟ್ಟದಲ್ಲಿ ಇಟ್ಟುಕೊಳ್ಳಬಹುದು...ಉತ್ತಮ ಸ್ನ್ಯಾಕ್ಸ್ ಸೇವಿಸಿ ಆರೋಗ್ಯವಾಗಿರಿ..

English summary

ಸಕ್ಕರೆ ಕಾಯಿಲೆ ಇರುವವರಿಗಾಗಿ 11 ಆರೋಗ್ಯಕಾರಿ ಸ್ನ್ಯಾಕ್ಸ್ ಗಳು /11-healthy-snacks-for-those-with-diabetes

There's not one person who doesn't crave a snack at some point in the day. Either there's a lot to do, you are really hungry or you're just craving something delicious. But this isn't a very nice thing, especially for those suffering from Diabetes. For those with Diabetes, choosing a snack is hyped to be a very difficult task. But it really isn't. The everyday items that you consume and come across could make healthy snacks if they are eaten the right way, paired with the right food, and consumed in the right quantity. Here's a list on 11 snacks that are Diabetes-friendly-
Story first published: Tuesday, June 19, 2018, 8:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more