For Quick Alerts
ALLOW NOTIFICATIONS  
For Daily Alerts

ಹಾಗಲಕಾಯಿ ಮಧುಮೇಹಕ್ಕೆ ಒಳ್ಳೆಯದೇ, ಆದರೆ ಅತಿಯಾಗಬಾರದು ಅಷ್ಟೇ!

By Hemanth
|

ಅತಿಯಾದರೆ ಅಮೃತವು ವಿಷ ಎನ್ನುವ ಮಾತಿದೆ. ಆರೋಗ್ಯಕ್ಕೆ ಒಳ್ಳೆಯದು ಎಂದು ನಾವು ಯಾವುದೇ ಆಹಾರವನ್ನೂ ಅತಿಯಾಗಿ ಸೇವನೆ ಮಾಡಿದರೆ ಅದರಿಂದ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಹಲವಾರು ವರ್ಷಗಳಿಂದ ಹಾಗಲಕಾಯಿ ಜ್ಯೂಸ್ ಬಗ್ಗೆ ಭಾರೀ ಪ್ರಚಾರ ನಡೆಸಲಾಗುತ್ತಾ ಇದೆ. ಹಾಗಲಕಾಯಿಯ ಜ್ಯೂಸ್ ಮಧುಮೇಹಿಗಳಿಗೆ ತುಂಬಾ ಒಳ್ಳೆಯದು ಮತ್ತು ಇದು ತೂಕ ಕಳೆದುಕೊಳ್ಳಲು ನೆರವಾಗುವುದು ಎಂದು ನಂಬಲಾಗಿದೆ.

ಹಾಗಲಕಾಯಿ ಸುಕ್ಕಾ ರೆಸಿಪಿ

ಹಾಗಲಕಾಯಿಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವುದಾದರೂ ಇದನ್ನು ಅತಿಯಾಗಿ ಸೇವನೆ ಮಾಡಬಾರದು. ಹಿಂದಿನಿಂದಲೂ ಹಾಗಲಕಾಯಿಯಲ್ಲಿರುವ ಆರೋಗ್ಯ ಗುಣಗಳ ಬಗ್ಗೆ ಹಿರಿಯರು ನಮಗೆ ಹೇಳುತ್ತಾ ಬಂದಿದ್ದಾರೆ. ಆದರೆ ಹಾಗಲಕಾಯಿಯಲ್ಲೂ ಹಲವಾರು ರೀತಿಯ ದುರ್ಗುಣಗಳು ಇವೆ ಎಂದು ಪತ್ತೆಯಾಗಿದೆ. ಹಾಗಲಕಾಯಿಯಿಂದ ಆಗುವ ಐದು ತೊಂದರೆಗಳು ಯಾವುದು ಎಂದು ಬೋಲ್ಡ್ ಸ್ಕೈ ಹೇಳಿಕೊಡಲಿದೆ....

ಮಧುಮೇಹದ ಔಷಧಿಗೆ ತೊಂದರೆ

ಮಧುಮೇಹದ ಔಷಧಿಗೆ ತೊಂದರೆ

ನೀವು ಮಧುಮೇಹದ ಔಷಧಿ ತೆಗೆದುಕೊಳ್ಳುತ್ತಾ ಇದ್ದರೆ ಹಾಗಲಕಾಯಿ ಸೇವಿಸಬೇಡಿ. ಹಾಗಲಕಾಯಿಯಲ್ಲಿ ಮಧುಮೇಹಿ ವಿರೋಧಿ ಗುಣಗಳು ಇರುವ ಕಾರಣದಿಂದ ನೀವು ಹಾಗಲಕಾಯಿಯೊಂದಿಗೆ ಮಧುಮೇಹ ಔಷಧಿ ಸೇವಿಸಿದರೆ ತುಂಬಾ ಅಪಾಯಕಾರಿ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ತುಂಬಾ ಕುಸಿಯಬಹುದು.

ಅತಿಯಾದ ಸೇವನೆಯಿಂದ ಹೈಪೋಗ್ಲೈಸೆಮಿಕ್ ಕೋಮಾ ಉಂಟಾಗಬಹುದು!

ಅತಿಯಾದ ಸೇವನೆಯಿಂದ ಹೈಪೋಗ್ಲೈಸೆಮಿಕ್ ಕೋಮಾ ಉಂಟಾಗಬಹುದು!

ರಕ್ತದಲ್ಲಿನ ಸಕ್ಕರೆ ಮಟ್ಟವು ತುಂಬಾ ಕಡಿಮೆಯಾದಾಗ ವ್ಯಕ್ತಿಯು ಹೈಪೋಗ್ಲೈಸೆಮಿಕ್ ಕೋಮಾ ಪರಿಸ್ಥಿತಿಗೆ ಸಿಲುಕಬಹುದು. ಇದು ಜೀವಕ್ಕೆ ಅಪಾಯ ಉಂಟುಮಾಡಬಹುದು. ಹಾಗಲಕಾಯಿಯು ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡುವಲ್ಲಿ ತುಂಬಾ ಪರಿಣಾಮಕಾರಿ. ಆದರೆ ಸಕ್ಕರೆ ಮಟ್ಟವನ್ನು ಸರಿಯಾಗಿ ಪರೀಕ್ಷಿಸದೆ ಇದ್ದರೆ ಆಗ ಸಕ್ಕರೆ ಮಟ್ಟವು ತೀರ ಕಡಿಮೆಯಾಗಿ ಪ್ರಜ್ಞೆ ಕಳೆದುಕೊಳ್ಳುವ ಸ್ಥಿತಿ ಬರಬಹುದು. ಹಾಗಲಕಾಯಿ ಚಾ ಕುಡಿದ ಮಕ್ಕಳು ಹೈಪೋಗ್ಲೈಸೆಮಿಕ್ ಕೋಮಾಕ್ಕೆ ಒಳಗಾದ ಸಾಕ್ಷ್ಯಗಳು ಇವೆ.

ಅನಿಯಮಿತ ಹೃದಯಬಡಿತ

ಅನಿಯಮಿತ ಹೃದಯಬಡಿತ

ಹೃದಯವು ಅಸಾಮಾನ್ಯವಾಗಿ ಬಡಿಯಲು ಆರಂಭಿಸಿದಾಗ ಉಂಟಾಗುವ ಪರಿಸ್ಥಿತಿಯನ್ನು ಹೃತ್ಕರ್ಣದ ಕಂಪನ ಎಂದು ಕರೆಯಲಾಗುತ್ತದೆ. ಇದರಿಂದ ಅಪಾಯವಿಲ್ಲವೆಂದು ನಾವು ಭಾವಿಸುತ್ತೇವೆ. ಆದರೆ ಪದೇ ಪದೇ ಹೀಗೆ ಆಗುವುದರಿಂದ ಹೃದಯ ವೈಫಲ್ಯ, ಬುದ್ಧಿಮಾಂದ್ಯತೆ ಮತ್ತು ಪಾರ್ಶ್ವವಾಯು ಉಂಟಾಗಬಹುದು. ಹಾಗಲಕಾಯಿ ಜ್ಯೂಸ್ ನ್ನು ಪ್ರತಿನಿತ್ಯ ಸೇವಿಸಿದ 22ರ ಹರೆಯದ ವ್ಯಕ್ತಿಯೊಬ್ಬನಿಗೆ ನಾಡಿಮಿಡಿತದಲ್ಲಿ ಸಮಸ್ಯೆಯಾದ ಕಾರಣ ಆತ ಆಸ್ಪತ್ರೆಗೆ ದಾಖಲಾದ ಬಗ್ಗೆ ವರದಿಯಾಗಿದೆ. ಆತನಿಗೆ ಬೇರೆ ಯಾವುದೇ ಸಮಸ್ಯೆಯಿಲ್ಲದ ಕಾರಣ ಆತ ಹಾಗಲಕಾಯಿ ಜ್ಯೂಸ್ ಕುಡಿದ ಕಾರಣದಿಂದ ಹೀಗೆ ಆಗಿದೆ ಎಂದು ವೈದ್ಯರು ಕಂಡುಕೊಂಡಿದ್ದಾರೆ.

ಗರ್ಭಪಾತವಾಗಬಹುದು

ಗರ್ಭಪಾತವಾಗಬಹುದು

ಹಾಗಲಕಾಯಿಯನ್ನು ಗರ್ಭಿಣಿ ಮಹಿಳೆಯರು ಅತಿಯಾಗಿ ಸೇವಿಸಲೇ ಬಾರದು. ಯಾಕೆಂದರೆ ಇದರಲ್ಲಿ ಗರ್ಭಪಾತವಾಗುವಂತಹ ಅಂಶಗಳು ಇವೆ. 2010ರಲ್ಲಿ ನಡೆಸಿದ ಅಧ್ಯಯನವೊಂದರ ಪ್ರಕಾರ ಹಾಗಲಕಾಯಿಯ ನೀರನ್ನು ಪ್ರಯೋಗಾಲಯದಲ್ಲಿ ಗರ್ಭಿಣಿ ಇಲಿಗಳಿಗೆ ನೀಡಲಾಯಿತು. ಈ ಇಲಿಗಳಲ್ಲಿ

ಗರ್ಭಪಾತವಾಗಿದೆ ಎಂದು ಅಧ್ಯಯನಗಳು ಕಂಡುಕೊಂಡಿದೆ.ಹಾಗಲಕಾಯಿ ಸೇವಿಸುವ ವೇಳೆ ಗರ್ಭಿಣಿ ಮಹಿಳೆಯರು ಎಚ್ಚರಿಕೆ ವಹಿಸಬೇಕು ಎಂದು ಅಧ್ಯಯನಗಳು ಹೇಳಿವೆ.

ಗರ್ಭಿಣಿಯರೇ ಎಚ್ಚರ..! ಅಪ್ಪಿತಪ್ಪಿಯೂ ಹಾಗಲಕಾಯಿ ಸೇವಿಸಬೇಡಿ

ಹೊಟ್ಟೆಗೆ ಸಮಸ್ಯೆ

ಹೊಟ್ಟೆಗೆ ಸಮಸ್ಯೆ

ಹಾಗಲಕಾಯಿಯನ್ನು ಅತಿಯಾಗಿ ಸೇವಿಸುವುದರಿಂದ ಅದು ಹೊಟ್ಟೆಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಅಧ್ಯಯನಗಳು ಹೇಳಿವೆ. ಸಣ್ಣ ಮಟ್ಟದ ಭೇದಿ ಮತ್ತು ಹೊಟ್ಟೆನೋವು ಇದರ ಅಡ್ಡಪರಿಣಾಮಗಳು ಆಗಿರಬಹುದು. ಹಾಗಲಕಾಯಿಯ ಸೇವನೆ ನಿಲ್ಲಿಸಿದರೆ ಈ ಎರಡು ಸಮಸ್ಯೆಗಳು ಕಡಿಮೆಯಾಗಬಹುದು.

ವೈದ್ಯರ ಸಲಹೆ......

ವೈದ್ಯರ ಸಲಹೆ......

ಹಾಗಲಕಾಯಿ ಜ್ಯೂಸ್ ಸೇವಿಸುತ್ತಿದ್ದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಗಮನಿಸುತ್ತಾ ಇರಬೇಕು. ಜ್ಯೂಸ್ ಕುಡಿಯುವುದನ್ನು ಮುಂದುವರಿಸುವ ಬಗ್ಗೆ ವೈದ್ಯರಿಂದ ಸಲಹೆ ಪಡೆದರೆ ತುಂಬಾ ಒಳ್ಳೆಯದು.

English summary

Side Effects Of Bitter Gourd

Karela juice has attained an elixir-like status in the recent years, with people prescribing it for everything, from diabetes to weight loss. Scores of diabetics, reluctantly down litres of bitter gourd juice every morning in a bid to control their blood sugar levels. While it is true that karela does help lower blood sugar levels, one should know that excess of anything good can be bad.
X
Desktop Bottom Promotion