ಮಧುಮೇಹಿಗಳು, ಇಂತಹ ಹಣ್ಣು- ಆಹಾರ ಪದಾರ್ಥಗಳಿಂದ ದೂರವಿರಬೇಕು

By: manu
Subscribe to Boldsky

ಜೀವನದಲ್ಲಿ ಪ್ರಮುಖ ಬದಲಾವಣೆಯನ್ನು ತರುವಂಥದ್ದು ನಮ್ಮ ಕಾಯಿಲೆಗಳಾಗಿವೆ. ಪ್ರತಿಯೊಂದು ಕಾಯಿಲೆಯನ್ನು ಅದರದ್ದೇ ಆದ ರೀತಿಯಲ್ಲಿ ಆರೈಕೆ ಮಾಡುವ ರೀತಿ ನಮಗೆ ತಿಳಿದಿದ್ದರೆ ಕಾಯಿಲೆಯು ನಮ್ಮ ದೇಹಕ್ಕೆ ಹಾನಿ ಮಾಡದ ರೀತಿಯಲ್ಲಿ ಅದನ್ನು ನಾವು ನಿರ್ವಹಿಸಬಹುದು. ಶ್ರೀಮಂತ ಕಾಯಿಲೆ ಎಂದೇ ಹೆಸರುವಾಸಿಯಾಗಿರುವ ಸಕ್ಕರೆ ಕಾಯಿಲೆ ಅಥವಾ ಮಧುಮೇಹ ಈಗ ಸಣ್ಣವರಿಂದ ಹಿಡಿದು ದೊಡ್ಡವರವರೆಗೂ ಉಪದ್ರವಕಾರಿ ಎಂದೆನಿಸಿದೆ. ನಿಮ್ಮ ಎದುರಲ್ಲಿ ಸಿಹಿ ಇದ್ದರೂ ತಿನ್ನಲಾಗದ ಪರಿಸ್ಥಿತಿ, ಹೀಗೆ ಜೀವನದಲ್ಲಿ ಕಹಿಯನ್ನೇ ಉಣ್ಣಬೇಕಾದ ಅವಸ್ಥೆಯನ್ನು ಈ ರೋಗ ಉಂಟುಮಾಡುತ್ತದೆ.

ಆದರೆ ಇದನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ನಮ್ಮ ದೇಹಕ್ಕೆ ಇದು ಹೆಚ್ಚಿನ ಉಪದ್ರವಕಾರಿ ಎಂದೆನಿಸುವುದಿಲ್ಲ. ಮಧುಮೇಹ ಇರುವವರು ಹಣ್ಣುಗಳನ್ನು ಹಾಗೂ ಜ್ಯೂಸ್ ಅನ್ನು ಬಳಸುವಾಗ ಸ್ವಲ್ಪ ಎಚ್ಚರದಿಂದಿರಬೇಕಾಗುತ್ತದೆ. ಹಣ್ಣುಗಳು ಆರೋಗ್ಯವನ್ನು ಸರಿಯಾಗಿರಿಸುತ್ತದೆ ಯಾದರೂ ಸಕ್ಕರೆ ಕಾಯಿಲೆ ಇರುವವರಿಗೆ ಎಲ್ಲಾ ಹಣ್ಣುಗಳು ಅರೋಗ್ಯ ಸುಧಾರಿಸುವುದಿಲ್ಲ. ಆದ್ದರಿಂದ ಮಧುಮೇಹಿಗಳು ಆಯ್ದ ಕೆಲವೇ ಹಣ್ಣುಗಳನ್ನು ಹಾಗೂ ಆಹಾರವನ್ನು ಹೆಚ್ಚು ಬಳಸಬಹುದು. 

ಮಧುಮೇಹವನ್ನು ನಿಯಂತ್ರಿಸುವ ಪವರ್ 'ನುಗ್ಗೆ ಸೊಪ್ಪಿನಲ್ಲಿದೆ'

ಇಂದಿನ ಲೇಖನದಲ್ಲಿ ಮಧುಮೇಹಿಗಳು ಸೇವಿಸಲೇಬಾರದ ಕೆಲವೊಂದು ಪದಾರ್ಥಗಳ ತಿಂಡಿ ತಿನಿಸುಗಳ ಹಾಗೂ ಹಣ್ಣುಗಳ ಪಟ್ಟಿಯನ್ನು ನೀಡಿದ್ದು ಪಥ್ಯಾಹಾರಿಗಳಿಗೆ ಇದೊಂದು ಉಪಯುಕ್ತ ಸಲಹೆಯಾಗಿದೆ. ಅಷ್ಟೇ ಅಲ್ಲದೇ ಕೆಲವೊಂದು ಆಯುರ್ವೇದ ಮನೆಮದ್ದುಗಳನ್ನು ಬಳಸುವ ಮೂಲ ಮಧುಮೇಹವನ್ನು ನಿಯಂತ್ರಿಸಬಹುದು. ಬರಿಯ ಸಿಹಿಯನ್ನು ದೂರವಿಟ್ಟು ಕಹಿಯನ್ನು ಸೇವಿಸಿದರೆ ಮಾತ್ರ ಸಕ್ಕರೆ ಕಾಯಿಲೆಗೆ ಔಷಧವಾಗುತ್ತದೆ ಎಂದು ನೀವು ನಂಬಿದ್ದರೆ ಇದು ಸುಳ್ಳಾಗುತ್ತದೆ.

ರಕ್ತದಲ್ಲಿ ಕೊಬ್ಬಿನ ಪ್ರಮಾಣ ಏರಿದಾಗ ಕೂಡ ಮಧುಮೇಹ ಖಂಡಿತ ನಿಮ್ಮನ್ನು ತಲುಪುತ್ತದೆ. ಹಿತಮಿತವಾದ ಆಹಾರ, ನಿಯಮಬದ್ಧವಾದ ವ್ಯಾಯಾಮಪೂರಿತ ಜೀವನಕ್ರಮ, ಮಿತವಾಗಿ ಸೇವಿಸುವುದು ಇವೇ ಮೊದಲಾದ ಕೆಲವೊಂದು ಅಂಶಗಳನ್ನು ನಾವು ಪಾಲಿಸಿಕೊಂಡು ಬಂದಲ್ಲಿ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು ಮತ್ತು ನಮ್ಮ ದೇಹ ತೂಕವನ್ನು ಕೂಡ... ಮುಂದೆ ಓದಿ 

ಬಾಳೆಹಣ್ಣು ಸೇವಿಸಬೇಡಿ

ಬಾಳೆಹಣ್ಣು ಸೇವಿಸಬೇಡಿ

ಅರ್ಧ ಕಪ್ ಬಾಳೆಹಣ್ಣಿನಲ್ಲಿ 15 ಗ್ರಾಂನಷ್ಟು ಕಾರ್ಬೋಹೈಡ್ರೇಟ್ ಇರುತ್ತದೆ.ಬಾಳೆಹಣ್ಣು 40 ರಿಂದ 70 ರಷ್ಟು ಜಿ ಐ (ಗ್ಲೈಸಮಿಕ್ ಇಂಡೆಕ್ಸ್) ಮೌಲ್ಯ ಒಳಗೊಂಡಿರುತ್ತದೆ. ಆದ್ದರಿಂದ ಕಳಿತ ಬಾಳೆಹಣ್ಣು ಮಧುಮೇಹ ಕಾಯಿಲೆ ಇರುವವರಿಗೆ ಸೂಕ್ತವಲ್ಲ.

ದ್ರಾಕ್ಷಿ

ದ್ರಾಕ್ಷಿ

ದ್ರಾಕ್ಷಿ ಹಣ್ಣಿನಲ್ಲಿ ಅಧಿಕ ಪ್ರಮಾಣದ ಪೌಷ್ಟಿಕಾಂಶ, ನಾರಿನಂಶ, ವಿಟಮಿನ್ ಗಳಿರುತ್ತವೆ, ಜೊತೆಗೆ ದ್ರಾಕ್ಷಿ ಹಣ್ಣಿನಲ್ಲಿ ಅಧಿಕ ಪ್ರಮಾಣದ ಸಕ್ಕರೆ ಅಂಶವಿರುತ್ತದೆ.3 ಔನ್ಸ್ ದ್ರಾಕ್ಷಿಯಲ್ಲಿ 15 ಗ್ರಾಂ ನಷ್ಟು ಕಾರ್ಬೋಹೈಡ್ರೇಟ್ ಗಳಿರುವುದರಿಂದ ಮಧುಮೇಹ ಕಾಯಿಲೆ ಇರುವವರು ಇದನ್ನು ಬಳಸುವುದರಿಂದ ಅರೋಗ್ಯ ಹದಗೆಡಬಹುದು.

ಪಪ್ಪಾಯಿ ಹಣ್ಣು

ಪಪ್ಪಾಯಿ ಹಣ್ಣು

ಸರಾಸರಿ 59 ರಷ್ಟು ಜಿ ಐ(ಗ್ಲೈಸಮಿಕ್ ಇಂಡೆಕ್ಸ್)ಮೌಲ್ಯ ಹೊಂದಿರುವ ಪಪ್ಪಾಯಿ ಹಣ್ಣು ಕಾರ್ಬೋಹೈಡ್ರೇಟ್ ಮತ್ತು ಕ್ಯಾಲೋರಿಯನ್ನು ಅಧಿಕವಾಗಿ ಹೊಂದಿದೆ. ಮಧುಮೇಹ ಕಾಯಿಲೆ ಇರುವವರು ಇದನ್ನು ತಿನ್ನುವುದಾದರೆ ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆ ಮಾಡಿಕೊಳ್ಳಲು ಕಡಿಮೆ ಪ್ರಮಾಣದಲ್ಲಿ ಬಳಸಬೇಕು.

ಕಲ್ಲಂಗಡಿ ಹಣ್ಣು

ಕಲ್ಲಂಗಡಿ ಹಣ್ಣು

ನಾರಿನಂಶ ಮತ್ತು ಕ್ಯಾಲೋರಿ ಕಡಿಮೆ ಇರುವ ಕಲ್ಲಂಗಡಿ ಹಣ್ಣು 72 ರಷ್ಟು ಜಿ ಐ(ಗ್ಲೈಸಮಿಕ್ ಇಂಡೆಕ್ಸ್) ಮೌಲ್ಯವನ್ನು ಹೊಂದಿರುತ್ತದೆ. ಜೊತೆಗೆ ಇದರಲ್ಲಿ ವಿಟಮಿನ್ ಎ ಮತ್ತು ಸಿ ಇರುತ್ತದೆ. ಆದಾಗ್ಯೂ ಅರ್ಧ ಕಪ್ ನಷ್ಟು ಕಲ್ಲಂಗಡಿ ಹಣ್ಣು 5 ಗ್ರಾಂನಷ್ಟು ಕಾರ್ಬೋಹೈಡ್ರೇಟ್ ಹೊಂದಿರುತ್ತದೆ.

ಮೈದಾ

ಮೈದಾ

ಮೈದಾ ಕೂಡ ದೇಹದಲ್ಲಿ ತೂಕವನ್ನು ಹೆಚ್ಚಿಸುತ್ತದೆ. ಇಂತಹ ಆಹಾರವನ್ನು ಮಧುಮೇಹಿಗಳು ತಿನ್ನದೇ ಇರುವುದು ಒಳಿತಾಗಿದೆ. ಮೈದಾದಲ್ಲಿ ಕಡಿಮೆ ಪ್ರಮಾಣದ ಫೈಬರ್ ಕಾರ್ಬ್ಸ್ ಇರುವುದರಿಂದ ಇದು ಅಧಿಕ ರಕ್ತದೊತ್ತಡ ಇರುವ ರೋಗಿಗಳಿಗೆ ಹೇಳಿ ಮಾಡಿಸಿದ್ದಲ್ಲ.

ಅನಾನಸ್ ಹಣ್ಣು

ಅನಾನಸ್ ಹಣ್ಣು

ಈ ಹಣ್ಣನ್ನು ಮಧುಮೇಹ ಇರುವವರು ಖಂಡಿತವಾಗಿ ತಿನ್ನಬಾರದು.ಇದರಲ್ಲಿ ಸಕ್ಕರೆ ಅಂಶ ಅಧಿಕ ಪ್ರಮಾಣದಲ್ಲಿರುತ್ತದೆ.ಒಂದು ಸಣ್ಣ ಕಪ್ ಅನಾನಸ್ ಹಣ್ಣಿನಲ್ಲಿ ಕಾರ್ಬೋಹೈಡ್ರೇಟ್ ಪ್ರಮಾಣ 20 ಗ್ರಾಂ ಅಥವಾ ಅದಕ್ಕಿಂತ ಹೆಚ್ಚು ಇರುತ್ತದೆ.

ಫ್ರೆಂಚ್ ಫ್ರೈ

ಫ್ರೆಂಚ್ ಫ್ರೈ

ಫ್ರೆಂಚ್ ಫ್ರೈ ಎಣ್ಣೆಯಲ್ಲಿ ಮುಳುಗಿರುವ ಕುರುಕಲಾಗಿದ್ದು ಇದನ್ನು ಆಲೂಗಡ್ಡೆಯೊಂದಿಗೆ ತಯಾರಿಸಲಾಗುತ್ತದೆ. ಇದು ನಿಮ್ಮ ತೂಕವನ್ನು ಹೆಚ್ಚಿಸುವುದಲ್ಲದೆ ನಿಮ್ಮ ರಕ್ತದಲ್ಲಿ ಕೊಬ್ಬಿನ ಪ್ರಮಾಣವನ್ನು ಹೆಚ್ಚು ಮಾಡುತ್ತದೆ.

ಹುರಿದ ಮೀನು ಅಥವಾ ಮಾಂಸ

ಹುರಿದ ಮೀನು ಅಥವಾ ಮಾಂಸ

ಹುರಿದ ಪದಾರ್ಥಗಳಲ್ಲಿ ಹೆಚ್ಚವರಿ ಎಣ್ಣೆ ಅಂಶವನ್ನು ನೀವು ಕಾಣಬಹುದು. ಇದನ್ನು ಮೈದಾ ಅಥವಾ ಕಾರ್ನ್ ಫ್ಲೋರ್‌ನಲ್ಲಿ ಅದ್ದಿ ತಯಾರಿಸಲಾಗುತ್ತದೆ. ಇದನ್ನು ಚೆನ್ನಾಗಿ ಹುರಿಯುವುದರಿಂದ ನಿಮ್ಮ ರಕ್ತದಲ್ಲಿನ ಕೊಬ್ಬನ್ನು ಅಧಿಕಗೊಳಿಸುವಲ್ಲಿ ಇದು ಮಹತ್ವದ ಪಾತ್ರವನ್ನು ವಹಿಸುವುದು ಖಂಡಿತ.

ಉಪ್ಪಿನಂಶ ಹೆಚ್ಚಿರುವ ಆಹಾರ ಪದಾರ್ಥಗಳಿಂದ ದೂರವಿರಿ

ಉಪ್ಪಿನಂಶ ಹೆಚ್ಚಿರುವ ಆಹಾರ ಪದಾರ್ಥಗಳಿಂದ ದೂರವಿರಿ

ಸಾಮಾನ್ಯವಾಗಿ ಹೋಟೆಲುಗಳಲ್ಲಿ ಮಾಡಿದ ಅಡುಗೆಯಲ್ಲಿ ಉಪ್ಪಿನ ಪ್ರಮಾಣ ಕೊಂಚ ಹೆಚ್ಚೇ ಇರುತ್ತದೆ. ಆದ್ದರಿಂದ ಉಪ್ಪು ಹಾಕಿದ ಪದಾರ್ಥಗಳನ್ನು ಆದಷ್ಟು ಕಡಿಮೆ ಮಾಡಿ ಹಸಿ ತರಕಾರಿ, ನಿಮಗೆ ಸಲಹೆ ಮಾಡಲಾದ ಹಣ್ಣುಗಳು ಮತ್ತು ಇಡಿಯ ಗೋಧಿಯ ಹಿಟ್ಟಿನಿಂದ ತಯಾರಿಸಲಾದ ಚಪಾತಿ, ರೋಟಿ ಮೊದಲಾದವುಗಳನ್ನೇ ಆಯ್ದುಕೊಳ್ಳಿ. ಅಲ್ಲದೆ ನಿತ್ಯದ ಅಡುಗೆಗಳಲ್ಲಿ ಕೇವಲ ಕಾರ್ಬೋಹೈಡ್ರೇಟುಗಳನ್ನು ಮಾತ್ರ ಸೇವಿಸುವ ಬದಲು ಕಾರ್ಬೋಹೈಡ್ರೇಟು ಮತ್ತು ಪ್ರೋಟೀನುಗಳ ಸಂಯೋಜನೆಯನ್ನು ಸೇವಿಸಿ. ಏಕೆಂದರೆ ಈ ಸಂಯೋಜನೆಯಿಂದ ಜೀರ್ಣಶಕ್ತಿ ನಿಧಾನವಾಗುವುದರ ಜೊತೆಗೇ ಸಕ್ಕರೆಯೂ ನಿಧಾನವಾಗಿ ರಕ್ತಕ್ಕೆ ಸೇರುತ್ತದೆ. ಹಸಿವನ್ನೂ ತೃಪ್ತಿಪಡಿಸಿದಂತಾಗುತ್ತದೆ.

ಆಹಾರಕ್ರಮದಲ್ಲಿ ಬೆಂಡೆಕಾಯಿನ್ನು ಬಳಸಿ

ಆಹಾರಕ್ರಮದಲ್ಲಿ ಬೆಂಡೆಕಾಯಿನ್ನು ಬಳಸಿ

ಬೆಂಡೆಯಲ್ಲಿರುವ ಹೆಚ್ಚಿನ ಪ್ರಮಾಣದ ಕರಗದ ನಾರು ಜೀರ್ಣಕ್ರಿಯೆಯನ್ನು ಕೊಂಚ ನಿಧಾನಗೊಳಿಸಿ ರಕ್ತಕ್ಕೆ ಸಕ್ಕರೆ ಸೇರುವ ಅವಧಿಯನ್ನು ದೀರ್ಘಗೊಳಿಸುತ್ತದೆ. ಅಲ್ಲದೆ ಇದರಲ್ಲಿರುವ ದ್ರವ ಮಧುಮೇಹವನ್ನು ನಿಯಂತ್ರಣ ಮಾಡುವಲ್ಲಿ ತುಂಬಾ ಸಹಕಾರಿಯಾಗಿದೆ. ಬೆಂಡೆಕಾಯಿಯ ತುದಿ ಮುರಿದು ಅದರ ದ್ರವವನ್ನು ಒಂದು ಲೋಟ ನೀರಿನಲ್ಲಿ ಹಾಕಿ ಬೆಳಗ್ಗೆ ಎದ್ದು ಆ ನೀರನ್ನು ಕುಡಿಯಬೇಕು. ಈ ರೀತಿ ಮಾಡಿದರೆ ಮಧುಮೇಹ ನಿಯಂತ್ರಣದಲ್ಲಿರುತ್ತದೆ. ಅಲ್ಲದೆ ಯಾವುದೇ ಇನ್ಸುಲಿನ್ ಚುಚ್ಚು ಮದ್ದಿನ ಅಗತ್ಯ ಕೂಡ ಕಂಡು ಬರುವುದಿಲ್ಲ.

ಹಾಗಲಕಾಯಿ ರಸ

ಹಾಗಲಕಾಯಿ ರಸ

ಪ್ರತಿದಿನ ಬೆಳಿಗ್ಗೆ ಒಂದು ಲೋಟ ಹಾಗಲಕಾಯಿಯ ರಸವನ್ನು ಖಾಲಿಹೊಟ್ಟೆಯಲ್ಲಿ ಕುಡಿದರೆ ರಕ್ತದಲ್ಲಿ ಹೆಚ್ಚಾಗಿರುವ ಸಕ್ಕರೆಯ ಅಂಶ ಮೂರೇ ದಿನದಲ್ಲಿ ತಹಬಂದಿಗೆ ಬರುತ್ತದೆ. ಇದಕ್ಕೆ ಕಾರಣ ಹಾಗಲಕಾಯಿಯಲ್ಲಿರುವ momorcidin ಮತ್ತು charatin ಎಂಬ ವಿಶೇಷ ನಿವಾರಕಗಳು (anti-hyperglycemic compounds) ಕಾರಣವಾಗಿವೆ. ವಾಸ್ತವಾಗಿ ರಕ್ತದಲ್ಲಿನ ಸಕ್ಕರೆ ಉಪಯೋಗಿಸಲ್ಪಡದೇ ವಿಸರ್ಜಿಸಲಾಗಲು ಇನ್ಸುಲಿನ್ ಪ್ರಮಾಣ ಮಹತ್ವದ ಪಾತ್ರ ವಹಿಸುತ್ತದೆ. ಈ ಪೋಷಕಾಂಶಗಳು ಇನ್ಸುಲಿನ್ ಕೊರತೆಯಾಗದಂತೆ ನೋಡಿಕೊಳ್ಳುವುದೇ ಹಾಗಲಕಾಯಿಯ ಈ ಸಾಮರ್ಥ್ಯಕ್ಕೆ ಕಾರಣವಾಗಿದೆ.

ತುಳಸಿ ಎಲೆಗಳ ರಸ

ತುಳಸಿ ಎಲೆಗಳ ರಸ

ಬೆಳಿಗ್ಗೆ ಎದ್ದ ಬಳಿಕ ಖಾಲಿಹೊಟ್ಟೆಯಲ್ಲಿ ಮೂರರಿಂದ ನಾಲ್ಕು ಚೆನ್ನಾಗಿ ಬಲಿತ (ಕಾಂಡದ ಕೆಳಭಾಗದ) ಎಲೆಗಳನ್ನು ಅಥವಾ ಐದರಿಂದ ಆರು ಮೇಲ್ಭಾಗದ ಎಲೆಗಳನ್ನು ನೀರು ನೀರಾಗುವವರೆಗೆ ಜಗಿದು ನುಂಗಬೇಕು. ಬಳಿಕ ಮುಕ್ಕಾಲು ಗಂಟೆ ಏನನ್ನೂ ಸೇವಿಸಬಾರದು. ಬದಲಿಗೆ ಒಂದು ದೊಡ್ಡಚಮಚ ತುಳಸಿ ಎಲೆಗಳನ್ನು ಅರೆದು ಹಿಂಡಿ ತೆಗೆದ ರಸವನ್ನೂ ಕುಡಿಯಬಹುದು.

ಸಕ್ಕರೆ ಪದಾರ್ಥಗಳನ್ನು ಸೇವಿಸದಿರಿ

ಸಕ್ಕರೆ ಪದಾರ್ಥಗಳನ್ನು ಸೇವಿಸದಿರಿ

ಹಬ್ಬ ಹರಿದಿನಗಳು ಸಮೀಪವಾದಂತೆ ಸಿಹಿತಿನಿಸುಗಳಿಗೆ ಆದ್ಯತೆ ಹೆಚ್ಚು. ಸಿಹಿ ತಿನ್ನದೇ ಅದನ್ನು ನಿಯಂತ್ರಣದಲ್ಲಿರಿಸುವುದು ತುಸು ಕಷ್ಟದ ಕೆಲಸವೇ. ಮಧುಮೇಹವನ್ನು ದೂರವಿರಿಸಲು, ಸಕ್ಕರೆ ತಿನಿಸುಗಳ ಸೇವೆನೆಯನ್ನು ಆದಷ್ಟು ಕಡಿಮೆ ಮಾಡಿ ಅಂತೆಯೇ ಕೃತಕ ಸಕ್ಕರೆಯ ಆಹಾರ ಪದಾರ್ಥಗಳನ್ನು ತ್ಯಜಿಸಿ.

ಸಲಹೆ

ಸಲಹೆ

*ನಿಮ್ಮ ದೈನಂದಿನ ಚಟುವಟಿಕೆಗಳಲ್ಲಿ ಸಾಧ್ಯವಾದಷ್ಟು ವ್ಯಾಯಾಮ ಇರಲಿ. ನಿತ್ಯವೂ ಒಂದು ಗಂಟೆ ವ್ಯಾಯಾಮಕ್ಕಾಗಿ ಮುಡಿಪಾಗಿರಿಸುವುದರಿಂದ ಮಧುಮೇಹವನ್ನು ಸಾಕಷ್ಟು ಅಂತರದಲ್ಲಿರಿಸಿಕೊಳ್ಳಬಹುದು

*ಹೆಚ್ಚಿನ ಪ್ರಮಾಣದ ನಾರು ಮತ್ತು ಪ್ರೊಟೀನ್‍ಗಳಿಂದಾಗಿ ರಕ್ತದಲ್ಲಿರುವ ಸಕ್ಕರೆ ಅಂಶದ ಸ್ನೇಹಿಯಾಗಿ ಕೆಲಸ ಮಾಡುವ ಒಣ ಹಣ್ಣುಗಳನ್ನು ಸೇವಿಸಿ

* ಬೆಳಗ್ಗಿನ ಜಾವ ವಾಕಿಂಗ್‌ಗೆ ಹೋಗುವ ಮುನ್ನ ಕ್ಯಾರೆಟ್ ತಿನ್ನಿ.

*ಪ್ರತೀ ದಿನ ಓಟ್ ಮೀಲ್ ಉಪಹಾರ ಸೇವಿಸಿ.

English summary

Foods to Avoid When You Have Diabetes

Diabetes is one of the most deadly diseases. It is a chronic disease that cannot be cured; it can only be contained. Here are some of the foods that diabetics should steer clear from in order to stay healthy.
Story first published: Tuesday, November 14, 2017, 23:43 [IST]
Subscribe Newsletter