ಮಧುಮೇಹ, ಅಧಿಕ ರಕ್ತದೊತ್ತಡಗಳು ಬುದ್ಧಿಮಾಂದ್ಯತೆಯನ್ನು ಹೆಚ್ಚಿಸುತ್ತವೆ!

By: Arshad
Subscribe to Boldsky

ಮಧುಮೇಹ ಹಾಗೂ ಅಧಿಕರಕ್ತದೊತ್ತಡ ಇವೆರಡನ್ನೂ ಮೌನ ಕೊಲೆಗಾರರು ಎಂದು ಕರೆಯಲಾಗುತ್ತದೆ. ಏಕೆಂದರೆ ಇವೆರಡೂ ವ್ಯಾಧಿಗಳು ಹಲವು ಅಂಗಗಳ ವೈಫಲ್ಯಕ್ಕೆ ಕಾರಣವಾಗುವ ಮೂಲಕ ಆರೋಗ್ಯಕ್ಕೆ ಮಾರಕವಾಗುತ್ತವೆ ಎಂಬ ಕಾರಣಕ್ಕೆ ಈ ಅನ್ವರ್ಥನಾಮ ಪಡೆದಿವೆ.

ವಿಶೇಷವಾಗಿ ಇವೆರಡೂ ತೊಂದರೆಗಳು ಹೆಚ್ಚು ಬಾಧಿಸುವುದು ಹೃದಯವನ್ನು! ಆದರೆ ಇತ್ತೀಚಿನ ಸಂಶೋಧನೆಯೊಂದರ ಪ್ರಕಾರ ಒಂದು ವೇಳೆ ನಡುವಯಸ್ಸಿನಲ್ಲಿ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ಬಾಧಿಸಿದ್ದರೆ ಇಳಿವಯಸ್ಸಿನಲ್ಲಿ ಬುದ್ಧಿಮಾಂದ್ಯತೆ ಅಥವಾ ಮರೆಗುಳಿತನವನ್ನು ಹೆಚ್ಚಿಸುತ್ತದೆ ಎಂದು ಕಂಡುಕೊಳ್ಳಲಾಗಿದೆ.

ಇಂತಹ ಹಣ್ಣುಗಳನ್ನು ತಿನ್ನದಿರಿ... ಇವು ಮಧುಮೇಹಕ್ಕೆ ಮಾರಿ...

JAMA Neurology ಎಂಬ ನಿಯತಕಾಲಿಕೆಯಲ್ಲಿ ಪ್ರಕಟಿಸಿರುವ ವರದಿಯಲ್ಲಿ ಈ ಭಯಾನಕ ವಾಸ್ತವವನ್ನು ಸ್ಪಷ್ಟಪಡಿಸಲಾಗಿದೆ. ಈ ಸಂಶೋಧನೆಯಲ್ಲಿ 45-64 ವರ್ಷ ವಯಸ್ಸಿನ ಸುಮಾರು 15,744 ಜನರ ಆರೋಗ್ಯದ ಅಂಕಿ ಅಂಶವನ್ನು ಕಲೆಹಾಕಿ 1987-1989ರಿಂದ ಪ್ರಾರಂಭಗೊಂಡಂತೆ ಹಲವು ಮಾಹಿತಿಗಳನ್ನು ವಿಶ್ಲೇಷಣೆಗಾಗಿ ಬಳಸಿಕೊಳ್ಳಲಾಗಿದೆ. 

head ache

ಈ ಅಂಕಿ ಅಂಶಗಳ ಪ್ರಕಾರ ಇಪ್ಪತ್ತೈದು ವರ್ಷಗಳ ಬಳಿಕ ಇವರಲ್ಲಿ 1,516 ವ್ಯಕ್ತಿಗಳಲ್ಲಿ ಬುದ್ಧಿಮಾಂದ್ಯತೆ ಕಂಡುಬಂದಿದೆ. ಈ ಮಾಹಿತಿಯನ್ನು ಹಿಂಬಾಲಿಸಿದ ಸಂಶೋಧನಕರಿಗೆ ಬುದ್ಧಿಮಾಂದ್ಯತೆಗೂ ಅಧಿಕ ರಕ್ತದೊತ್ತಡದ ಹಿಂದಿನ ಸ್ಥಿತಿಗೂ ನಿಕಟ ಸಂಬಂಧವಿರುವುದು ಪತ್ತೆಯಾಗಿದೆ. 

ರಕ್ತದೊತ್ತಡ ನಿಯಂತ್ರಿಸುತ್ತೆ, ಅಡುಗೆಮನೆಯ ಸಣ್ಣ ತುಂಡು 'ಶುಂಠಿ'!

ಅಂದರೆ ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಅಧಿಕ ರಕ್ತದೊತ್ತಡಕ್ಕೂ ಮುನ್ನ ಸ್ಥಿತಿಗಳು ಮುಂದಿನ ದಿನಗಳಲ್ಲಿ ಬುದ್ಧಿಮಾಂದ್ಯತೆಯ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ಅಲ್ಲದೇ ಈ ಸಾಧ್ಯತೆಯನ್ನು ಧೂಮಪಾನ ಹಾಗೂ ಮದ್ಯಪಾನಗಳು ಅಧಿಕವಾಗಿಸುತ್ತವೆ.

ಇನ್ನೊಂದು ಸಂಶೋಧನೆಯಲ್ಲಿ ನಡುವಯಸ್ಸಿನಲ್ಲಿ ದೇಹದಲ್ಲಿ ಬೀಟಾ ಅಮೋಲೈಡ್ ಎಂಬ ಪ್ರೋಟೀನ್ ಮೆದುಳಿನಲ್ಲಿ ಕಂಡುಬಂದರೆ ಇದು ಮುಂದಿನ ದಿನಗಳಲ್ಲಿ ಮರೆಗುಳಿತನವನ್ನು ಹಾಗೂ ಹೃದಯದ ತೊಂದರೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ

English summary

Diabetes, High Blood Pressure Increases Risk Of Dementia

Diabetes and high blood pressure are the two major lifestyle diseases and have been rightfully termed as silent killers. You might have heard of diabetes and high blood pressure increasing the risk of heart problem or renal failure, but a recent research have found that those suffering from diabetes and high blood pressure in the middle age are at a higher risk of developing dementia at a later stage.
Subscribe Newsletter